ETV Bharat / entertainment

ಮೊದಲ ಬಾರಿಗೆ ಮುದ್ದು ಮಗಳ ಫೋಟೋ ಹಂಚಿಕೊಂಡ ಬಿಪಾಶಾ- ಕರಣ್​ ದಂಪತಿ - ಈಟಿವಿ ಭಾರತ ಕನ್ನಡ

ಬಿಪಾಸಾ ಮತ್ತು ಕರಣ್​ ದಂಪತಿ​ ಮೊದಲ ಬಾರಿಗೆ ತಮ್ಮ ಮಗಳು ದೇವಿ ಮುಖವನ್ನು ಜಗತ್ತಿಗೆ ಪರಿಚಯಿಸಿದ್ದಾರೆ.

Bipasha Basu reveals daughter Devi's face
ಮಗಳ ಫೋಟೋ ಹಂಚಿಕೊಂಡ ಬಿಪಾಸಾ- ಕರಣ್​ ದಂಪತಿ
author img

By

Published : Apr 6, 2023, 1:49 PM IST

ಬಾಲಿವುಡ್​ನ ಸುಂದರ ಜೋಡಿ ಬಿಪಾಶಾ ಬಸು ಮತ್ತು ಕರಣ್​ ಸಿಂಗ್​ ಗ್ರೋವರ್​ ಮೊದಲ ಬಾರಿಗೆ ತಮ್ಮ ಮಗಳು ದೇವಿ ಬಸು ಸಿಂಗ್​ ಗ್ರೋವರ್​ ಮುಖವನ್ನು ಜಗತ್ತಿಗೆ ಪರಿಚಯಿಸಿದ್ದಾರೆ. ಬಪಾಸಾ ಇನ್​ಸ್ಟಾಗ್ರಾಮ್​ನಲ್ಲಿ ಮಗುವಿನ ಕೆಲವು ಮುದ್ದಾದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ದೇವಿ ಗುಲಾಬಿ ಬಣ್ಣದ ಡ್ರೆಸ್​ಗೆ ಮ್ಯಾಚಿಂಗ್​ ಹೇರ್​ಬ್ಯಾಂಡ್​ ಧರಿಸಿ ಮುದ್ದಾಗಿ ಕಾಣುತ್ತಿದ್ದಾಳೆ. ಫೋಟೋಗಳನ್ನು ಶೇರ್​ ಮಾಡಿಕೊಂಡಿರುವ ಬಿಪಾಸಾ "ಹಲೋ ವರ್ಲ್ಡ್​, ನಾನು ದೇವಿ ಬಸು ಸಿಂಗ್​ ಗ್ರೋವರ್​" ಎಂದು ಕ್ಯಾಪ್ಶನ್​ ಬರೆದಿದ್ದಾರೆ.

ತಾರಾ ದಂಪತಿಯ ಕ್ಯೂಟ್​ ಮಗಳನ್ನು ಕಂಡ ನೆಟ್ಟಿಗರು ಎಮೋಜಿಗಳು ಮತ್ತು ಬಗೆ ಬಗೆಯ ಬರಹಗಳಿಂದ ಕಮೆಂಟ್​ ವಿಭಾಗವನ್ನು ತುಂಬಿದರು. ಜೊತೆಗೆ ಸಿನಿ ತಾರೆಯರು ಕೂಡ ಪೋಸ್ಟ್​ಗೆ ಪ್ರತಿಕ್ರಿಯಿಸಿದ್ದಾರೆ. ನಟಿ ಕಾಜಲ್​ ಅಗರ್ವಾಲ್​, "ಮುದ್ದಾದ ಪುಟ್ಟ ಮಂಚ್ಕಿನ್​.. ಪುಟಾಣಿ ದೇವಿಗೆ ಪ್ರೀತಿ ಮತ್ತು ಆಶೀರ್ವಾದ " ಎಂದು ಬರೆದಿದ್ದಾರೆ. "ದೇವರು ನಿನ್ನನ್ನು ಆಶೀರ್ವದಿಸಲಿ ದೇವಿ. ಐ ಲವ್​ ಯೂ! ನಿನ್ನನ್ನು ತಬ್ಬಿಕೊಳ್ಳಲು ನಾನು ಕಾತರದಿಂದ ಕಾಯುತ್ತಿದ್ದೇನೆ " ಎಂದು ನಟಿ ದಿಯಾ ಮಿರ್ಜಾ ಪ್ರತಿಕ್ರಿಯಿಸಿದ್ದಾರೆ. "ಅವಳು ಸುಂದರವಾಗಿದ್ದಾಳೆ. ದೇವರು ನಿಮಗೆ ಹೆಚ್ಚು ಪ್ರೀತಿ ನೀಡಲಿ ಡಾರ್ಲಿಂಗ್​" ಎಂದು ಇಂಟೀರಿಯರ್​ ಡಿಸೈನರ್​ ಸುಸಾನೆ ಖಾನ್​ ಕಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ: ಸಿನಿಮಾ ಲೋಕಕ್ಕೆ ಕಾಲಿಟ್ಟ ಬರಗೂರು ರಾಮಚಂದ್ರಪ್ಪನವರ ಮೊಮ್ಮಗ ಆಕಾಂಕ್ಷ್ ಬರಗೂರು

ಇದಕ್ಕೂ ಮುಂಚೆ ನಟಿ ತನ್ನ ಮಗಳೊಂದಿಗಿನ ಫೋಟೋಗಳು ಮತ್ತು ವಿಡಿಯೋಗಳನ್ನು ಶೇರ್​ ಮಾಡುತ್ತಿದ್ದರು. ಆದರೆ ಮುಖವನ್ನು ಮಾತ್ರ ಎಂದಿಗೂ ತೋರಿಸುತ್ತಿರಲಿಲ್ಲ. ಬಿಪಾಶಾ ಮತ್ತು ಕರಣ್​ ತಮ್ಮ ಮಗಳು ದೇವಿಯ ಮುಖವನ್ನು ಮರೆಮಾಚಲು ಅವಳ ಮುಖದ ಮೇಲೆ ಹೃದಯದ ಎಮೋಜಿಗಳನ್ನು ಬಳಸುತ್ತಿದ್ದರು. ಇದೀಗ ಮಗುವಾಗಿ ನಾಲ್ಕು ತಿಂಗಳ ಬಳಿಕ ಮೊದಲ ಬಾರಿಗೆ ತಮ್ಮ ಮಗಳ ಮುಖವನ್ನು ದಂಪತಿ ಜಗತ್ತಿಗೆ ಪರಿಚಯಿಸಿದ್ದಾರೆ.

ಇದನ್ನೂ ಓದಿ: ಸ್ಯಾಂಡಲ್​ವುಡ್ ನಟ ಕಿಚ್ಚ ಸುದೀಪ್​ಗೆ ಬೆದರಿಕೆ ಪತ್ರ.. ಸಿಸಿಬಿ ಹೆಗಲಿಗೆ ಪ್ರಕರಣದ ತನಿಖಾ ಜವಾಬ್ದಾರಿ

ಪ್ರೀತಿಸಿ ಮದುವೆಯಾದ ಜೋಡಿ: ಕರಣ್​ ಸಿಂಗ್​ ಗ್ರೋವರ್​ ಮತ್ತು ಬಿಪಾಶಾ ಬಸು ಜೊತೆಯಾಗಿ 2015ರಲ್ಲಿ ತೆರೆಕಂಡ ಅಲೋನ್​ ಚಿತ್ರದಲ್ಲಿ ನಟಿಸಿದ್ದರು. ಶೂಟಿಂಗ್​ ಸಮಯದಲ್ಲಿ ಇಬ್ಬರಲ್ಲೂ ಪ್ರೀತಿ ಚಿಗುರೊಡೆದು 2016ರಲ್ಲಿ ಮದುವೆಯಾದರು. ವಿವಾಹವಾಗಿ 6 ವರ್ಷಗಳ ನಂತರ ಅಂದರೆ ಅಗಸ್ಟ್​ 16ರಂದು ದಂಪತಿ ತಮ್ಮ ಮೊದಲ ಮಗುವನ್ನು ನಿರೀಕ್ಷಿಸುತ್ತಿರುವುದಾಗಿ ಘೋಷಿಸಿದರು. ಅದರಂತೆ ಈ ಜೋಡಿ ನವೆಂಬರ್​ 12 ರಂದು ಪುಟ್ಟ ದೇವತೆಯನ್ನು ಸ್ವಾಗತಿಸಿದರು. ಬಳಿಕ ಬಪಾಶಾ ತಮ್ಮ ಮಗಳ ಹೆಸರನ್ನು ಪ್ರಕಟಿಸುವ ಪೋಸ್ಟ್​ ಅನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡು, "12.11.2022. ದೇವಿ ಬಸು ಸಿಂಗ್​ ಗ್ರೋವರ್​. ನಿಮ್ಮೆಲ್ಲರ ಆಶೀರ್ವಾದ ಮತ್ತು ಪ್ರೀತಿ ನಮ್ಮ ಮಗಳ ಮೇಲಿರಲಿ" ಎಂದು ಹೇಳಿದ್ದರು.

ಇದನ್ನೂ ಓದಿ: ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರದ ಟೈಟಲ್ ವಿವಾದದಲ್ಲಿ ಮೋಹಕ ತಾರೆಗೆ ಸಿಕ್ತು ಜಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.