ETV Bharat / entertainment

ಮೊದಲ ಮಗುವಿನ ನಿರೀಕ್ಷೆಯಲ್ಲಿ ಬಾಲಿವುಡ್​ ನಟಿ ಬಿಪಾಶಾ ಬಸು!

ಕಳೆದ 6 ತಿಂಗಳ ಹಿಂದೆ ಕರಣ್ ಸಿಂಗ್ ಗ್ರೋವರ್ ಜೊತೆ ಮದುವೆಯಾದ ಬಾಲಿವುಡ್​ ನಟಿ ಬಿಪಾಶಾ ಬಸು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದೀಗ ಹೊಸ ಅತಿಥಿ ಆಗಮನದ ಖುಷಿಯಲ್ಲಿರುವ ಈ ಜೋಡಿ ಸದ್ಯ ಪ್ರವಾಸದಲ್ಲಿದ್ದಾರಂತೆ.

Bipasha Basu expecting her first child with Karan Sing Grover?

author img

By

Published : Jul 29, 2022, 4:54 PM IST

ಹೈದರಾಬಾದ್: ಬಾಲಿವುಡ್​ನ​​​ ಅತ್ಯಂತ ಪ್ರೀತಿಯ ತಾರಾ ಜೋಡಿಯಾದ ಬಿಪಾಶಾ ಬಸು ಮತ್ತು ಕರಣ್ ಸಿಂಗ್ ಗ್ರೋವರ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಆದರೆ, ಈ ಬಗ್ಗೆ ಯಾವುದೇ ಮಾಹಿತಿಯನ್ನು ಅವರು ಬಹಿರಂಗವಾಗಿ ಹೇಳಿಕೊಂಡಿಲ್ಲ. ಪೋಷಕರಾಗುವ ಖುಷಿಯಲ್ಲಿರುವ ಈ ತಾರಾ ಜೋಡಿ ಸದ್ಯದಲ್ಲೇ ಈ ಬಗ್ಗೆ ಅಧಿಕೃತ ಘೋಷಣೆ ಮಾಡಲಿದ್ದಾರಂತೆ.

ಬಿಪಾಶಾ ಬಸು ಮತ್ತು ರಣ್ ಸಿಂಗ್ ಗ್ರೋವರ್ ಮದುವೆಯಾಗಿ ಕೇವಲ ಆರು ತಿಂಗಳಾಗಿದ್ದು ಪೋಷಕರಾಗುತ್ತಿರುವ ಈ ಸುದ್ದಿ ಕೇಳಿ ಅವರ ಅಭಿಮಾನಿಗಳು ಹರ್ಷ ವ್ಯಕ್ತಪಡಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇವರ ಬಗ್ಗೆ ಇದೀಗ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಆದರೆ, ಕೆಲವರು ವದಂತಿ ಇರಬಹುದುದೆಂದು ಹೇಳುತ್ತಿದ್ದರೆ ಇನ್ನು ಕೆಲವರು ನಿಜ ಇರಬಹುದು ಎಂದು ವಾದಿಸುತ್ತಿದ್ದಾರೆ.

ಬಾಲಿವುಡ್​ನಲ್ಲಿ ಸಾಕಷ್ಟು​ ಸಿನಿಮಾಗಳಲ್ಲಿ ಸಂಚಲನ ಮೂಡಿಸಿರುವ ಬಿಪಾಶಾ ಬಸು ಮತ್ತು ಕರಣ್ ಸಿಂಗ್ ಮೊದಲು ಭೇಟಿಯಾಗಿದ್ದು 'ಅಲೋನ್' ಎಂದ ಸಿನಿಮಾದ ಚಿತ್ರೀಕರಣದಲ್ಲಿ. 2015 ರಲ್ಲಿ ಡೇಟಿಂಗ್ ಮಾಡಲು ಪ್ರಾರಂಭಿಸಿದ ಈ ತಾರಾ ಜೋಡಿ ಒಂದು ವರ್ಷದ ನಂತರ (ಏಪ್ರಿಲ್ 30, 2016) ವಿವಾಹವಾದರು. ಇನ್​ಸ್ಟಾಗ್ರಾಮ್​ನಲ್ಲಿ ತಮ್ಮ ಹೊಸ ಜೀವನದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು.

ಇದೀಗ ಹೊಸ ಅತಿಥಿ ಆಗಮನದ ಖುಷಿಯಲ್ಲಿರುವ ಈ ಜೋಡಿ ಸದ್ಯ ಖುಷಿಯಲ್ಲಿದ್ದಾರಂತೆ. ಅಲ್ಲದೇ ಜೊತೆಯಾಗಿ ಪ್ರವಾಸದಲ್ಲಿದ್ದಾರೆ ಎಂದು ಸಹ ಹೇಳಲಾಗುತ್ತಿದೆ. ಕರಣ್ ಅವರು ಕೊನೆಯದಾಗಿ ವೆಬ್ ಸೀರೀಸ್ ಕುಬೂಲ್ ಹೈ 2.0 ನಲ್ಲಿ ಸುರಭಿ ಜ್ಯೋತಿಯೊಂದಿಗೆ ಕಾಣಿಸಿಕೊಂಡಿದ್ದರೆ, ನಟಿ ಬಿಪಾಶಾ ಅವರು ಕ್ರೈಂ ಆ್ಯಂಡ್​ ಥ್ರಿಲ್ಲರ್ ಕಿರು ಸರಣಿ ಡೇಂಜರಸ್‌ನಲ್ಲಿ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ: ಬರಿಗೈಯಿಂದ ಎದೆಯ ಅರ್ಧ ಭಾಗ ಮುಚ್ಚಿ ಉರ್ಫಿ ಜಾವೇದ್ ಹೊಸ ಅವತಾರ!​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.