ETV Bharat / entertainment

ಪೈಲ್ವಾನ್ ಜೊತೆ ಬಿಲ್ಲ ರಂಗ ಭಾಷ ಸಿನಿಮಾ ಮಾಡಲಿದ್ದಾರೆ ಅನೂಪ್ ಭಂಡಾರಿ - sudeep upcoming films

ನಿರ್ದೇಶಕ ಅನೂಪ್ ಭಂಡಾರಿ ಅವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಾಕಿರುವ ಪೋಸ್ಟ್ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

billa ranga bhasha movie
ಸುದೀಪ್​ ಜೊತೆ ಅನೂಪ್ ಭಂಡಾರಿ
author img

By

Published : Mar 3, 2023, 5:21 PM IST

ವಿಕ್ರಾಂತ್ ರೋಣ ಸಿನಿಮಾ ಬಳಿಕ ಅಭಿನಯ ಚಕ್ರವರ್ತಿ ಸುದೀಪ್ ಮುಂದಿನ ಸಿನಿಮಾ ಯಾವುದು? ಯಾವ ಪ್ರೊಡಕ್ಷನ್ ಸಂಸ್ಥೆ ಜೊತೆಗೆ? ಅನ್ನೋದು ಸುದೀಪ್ ಅವರ ಜೆ.ಪಿ ನಗರದ ನಿವಾಸದಿಂದ ಹಿಡಿದು ಸೌತ್ ಸಿನಿಮಾ ಇಂಡಸ್ಟ್ರಿವರೆಗೂ ಬಿಸಿ ಬಿಸಿ ಚರ್ಚೆ ಆಗುತ್ತಿದೆ. ಈ ಮಧ್ಯೆ ಕಿಚ್ಚ ಸುದೀಪ್​​ ಕೆಸಿಸಿ ಕ್ರಿಕೆಟ್ ಮ್ಯಾಚ್ ಮುಗಿಸಿ, ಇದೀಗ ಸೆಲೆಬ್ರಿಟಿ ಕ್ರಿಕೆಟ್ ಲೀಗ್​​​ನಲ್ಲಿ ಬ್ಯುಸಿಯಾಗಿದ್ದಾರೆ. ಈ ಕ್ರಿಕೆಟ್ ಮ್ಯಾಚ್ ಮುಗಿಯುತ್ತಿದ್ದಂತೆ ಸುದೀಪ್ ಮುಂದಿನ ನಡೆ ಏನು ಎಂಬ ಪ್ರಶ್ನೆ ಅವರ ಅಭಿಮಾನಿಗಳಲ್ಲಿ ಮೂಡಿದೆ. ಸದ್ಯ ಈ ಪ್ರಶ್ನೆಗೆ ನಿರ್ದೇಶಕ ಅನೂಪ್ ಸಣ್ಣ ಸುಳಿವು ನೀಡಿದ್ದಾರೆ.

  • Thanks to each one of you for the wonderful wishes!
    ಬಿ ಗಿಯಾಗ್ ಕೂತ್ಕೋಳಿ,
    ರಂ ಪಾಟ ಶುರುವಾಗಕ್ ಸ್ವಲ್ಪ ಸಮಯ ಬೇಕು
    ಬಾ ಡೂಟದ್ ಜೊತೆ ಬರ್ತೀವಿ. ಅಲ್ಲಿವರ್ಗು ಎಂದಿನ ಹಾಗೆ ತಾಳ್ಮೆ ಇರ್ಲಿ -
    Be Right Back! pic.twitter.com/M9vfJvUJeo

    — Anup Bhandari (@anupsbhandari) March 2, 2023 " class="align-text-top noRightClick twitterSection" data=" ">

ಹೌದು, ವಿಕ್ರಾಂತ್ ರೋಣ ಖ್ಯಾತಿಯ ನಿರ್ದೇಶಕ ಅನೂಪ್ ಭಂಡಾರಿ ಕಿಚ್ಚ ಸುದೀಪ್ ಅವರ ಜೊತೆ ಮತ್ತೊಂದು ಸಿನಿಮಾ ಮಾಡೋದು ಫಿಕ್ಸ್ ಅಂತಾ ಹೇಳುವ ಮೂಲಕ ಹೊಸ‌ ಅಪ್ಡೇಟ್ ಕೊಟ್ಟಿದ್ದಾರೆ. ಕಿಚ್ಚ ಸುದೀಪ್ ಅಭಿನಯದ ಹಾಗೂ ಅನೂಪ್ ಭಂಡಾರಿ ನಿರ್ದೇಶನದಲ್ಲಿ ಮೂಡಿ ಬಂದ‌ ವಿಕ್ರಾಂತ್ ರೋಣ ಸಿನಿಮಾ ಅದ್ಧೂರಿ ಮೇಕಿಂಗ್​​ನಿಂದ ಕೂಡಿತ್ತು. ಕಥೆ ಕೂಡ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಗಳಿಕೆಯಿಂದ ಚಿತ್ರ ಸದ್ದು ಮಾಡಿತ್ತು. ನಿರ್ದೇಶಕ ಅನೂಪ್ ಭಂಡಾರಿ ಮೇಕಿಂಗ್ ಸ್ಟೈಲ್ ಹಾಗೂ ಥ್ರಿಲ್ಲರ್ ಕಥೆಯನ್ನು ಸಿನಿ ಪ್ರೇಕ್ಷಕರು ಮೆಚ್ಚಿಕೊಂಡಿದ್ದರು. ಈ ಹಿನ್ನೆಲೆ, ಕಿಚ್ಚ ಸುದೀಪ್ ಅವರಿಗೆ ಮತ್ತೆ ಆ್ಯಕ್ಷನ್​ ಕಟ್​​ ಹೇಳುವುದಾಗಿ ಅನೂಪ್ ಭಂಡಾರಿ ಕೆಲ ಸಂದರ್ಶನದಲ್ಲಿ ಹೇಳಿದ್ದರು. ಈಗ ಆ ಮಾತು ನಿಜವಾಗುವಂತೆ ಕಾಣುತ್ತಿದೆ.

billa ranga bhasha movie
ಬಿಲ್ಲ ರಂಗ ಭಾಷ ಸಿನಿಮಾ

ಬಿಲ್ಲ ರಂಗ ಭಾಷ ಸಿನಿಮಾ ಪಕ್ಕಾ ಮಾಸ್‌ ಎಂಟರ್‌ಟೈನ್ಮೆಂಟ್‌ ಚಿತ್ರ. ಪ್ರಾಚೀನ ಕಾಲದ ರಾಜನೊಬ್ಬನ ಕಥೆಯಾಗಿದ್ದು, ಚಿತ್ರದಲ್ಲಿ ಸುದೀಪ್‌ ರಾಜನ ಗೆಟಪ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಅನೂಪ್‌ ಈ ಕಥೆಯನ್ನು 18 ವರ್ಷಗಳ ಹಿಂದೆಯೇ ಸಿದ್ಧ ಮಾಡಿಕೊಂಡಿದ್ದರಂತೆ. ಸುದೀಪ್‌ ಪತ್ನಿ ಪ್ರಿಯಾ ಸುದೀಪ್‌ ಅವರ ಬ್ಯಾನರ್‌ ಸುಪ್ರಿಯಾನ್ವಿ ಪ್ರೊಡಕ್ಷನ್‌ ಈ ಚಿತ್ರವನ್ನು ನಿರ್ಮಾಣ ಮಾಡಲು ಈ ಹಿಂದೆ ಮಾತುಕಥೆ ಆಗಿದೆ.

billa ranga bhasha movie
ಸುದೀಪ್​ ಜೊತೆ ಅನೂಪ್ ಭಂಡಾರಿ

ನಿರ್ದೇಶಕ ಅನೂಪ್ ಭಂಡಾರಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಮಾಡಿದ್ದು, 'ಬಿ' ಗಿಯಾಗಿ ಕೂತ್ಕೋಳಿ, 'ರಂ' ಪಾಟ ಶುರುವಾಗೋಕ್ ಸ್ವಲ್ಪ ಸಮಯ ಬೇಕು, 'ಬಾ' ಡೂಟದ ಜೊತೆ ಬರುತ್ತೇವೆ. ಅಲ್ಲಿವರೆಗೂ ಎಂದಿನ ಹಾಗೆ ತಾಳ್ಮೆ ಇರಲಿ ಎಂದು ಬರೆದುಕೊಂಡಿದ್ದಾರೆ. ಕೆಲವು ಅಕ್ಷರಗಳಿಗೆ ಗ್ಯಾಪ್ ನೀಡುವ ಮೂಲಕ ತಮ್ಮ ಮುಂದಿನ ಸಿನಿಮಾ ಯಾವುದು ಎನ್ನುವುದರ ಸುಳಿವು ಬಿಟ್ಟು ಕೊಟ್ಟಿದ್ದಾರೆ.

ಇದನ್ನೂ ಓದಿ: ಕಿಚ್ಚ ಸುದೀಪ್​ ಫಿಟ್ನೆಸ್​​ ಸೀಕ್ರೆಟ್​​: ಅವರೇ ಹೇಳಿದ್ದು ಹೀಗೆ..!

ಅಂದರೆ ಪೈಲ್ವಾನ್ ಕಿಚ್ಚನ ಜೊತೆ ಬಿಲ್ಲ ರಂಗ ಭಾಷ ಸಿನಿಮಾ ಮಾಡೋದು ಬಹುತೇಕ ಖಚಿತವಾಗಿದೆ. ಈ‌ ಕಡೆ ಕಿಚ್ಚ ಕೂಡ ಗ್ರೀನ್ ಸಿಗ್ನಲ್ ಕೊಟ್ಟಂತೆ ಕಾಣುತ್ತಿದೆ. ಹೀಗಾಗಿ ನಿರ್ದೇಶಕ ಅನೂಪ್ ಭಂಡಾರಿ ಮತ್ತು ಅಭಿನಯ ಚಕ್ರವರ್ತಿ ಜೊತೆ ಸಿನಿಮಾ ಮಾಡೋದು ಪಕ್ಕಾ ಆಗಿದ್ದು, ಬಿಲ್ಲ ರಂಗ ಭಾಷ ಸಿನಿಮಾ ಪ್ರೀ ಪ್ರೊಡಕ್ಷನ್​ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ‌ ಎನ್ನಲಾಗಿದೆ. ಆದರೆ ಕಿಚ್ವ ಸುದೀಪ್ ಈಗಾಗಲೇ ತಮಿಳು ನಿರ್ದೇಶಕ ಹಾಗೂ ಹೊಂಬಾಳೆ ಫಿಲ್ಮ್ ಸಂಸ್ಥೆ ಜೊತೆ ಸಿನಿಮಾ ಮಾಡುವ ಮಾತುಕತೆ ಆಗಿತ್ತು. ‌ಈಗ ಪೈಲ್ವಾನ್ ತಮ್ಮ ಹೋಂ ಬ್ಯಾನರ್​ನಲ್ಲಿ ಬಿಲ್ಲ ರಂಗ ಭಾಷ ಅಥವಾ ಬೇರೊಂದು ಪ್ರೊಡಕ್ಷನ್ ಹೌಸ್ ಜೊತೆ ಸಿನಿಮಾ‌‌ ಮಾಡ್ತಾರಾ ಅನ್ನೋದು ಕುತೂಹಲ ಮೂಡಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.