ETV Bharat / entertainment

ಬಿಗ್​ ಬಾಸ್: 'ಅಂದು ಕಾರ್ತಿಕ್​​, ಇಂದು ವಿನಯ್'​​; ಸಂಗೀತಾಗೆ ಕಿಚ್ಚನಿಂದ ಗೆಳೆತನದ ಪಾಠ?! - karthik

'ಒಂದೇ ರಾತ್ರಿಯಲ್ಲಿ ಬದಲಾಗಿದ್ದೇನು?, ಅನುಬಂಧವೋ, ಆಟವೋ?'' ಎಂಬ ಶೀರ್ಷಿಕೆಯಲ್ಲಿ ಅನಾವರಣಗೊಂಡಿರುವ ಬಿಗ್​ ಬಾಸ್ ಪ್ರೋಮೋ ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ.

kannada Bigg Boss
ಕನ್ನಡ ಬಿಗ್​ ಬಾಸ್
author img

By ETV Bharat Karnataka Team

Published : Nov 25, 2023, 5:38 PM IST

ವೀಕೆಂಡ್​ ಬಂತೆಂದರೆ ಬಿಗ್​ ಬಾಸ್​ ವೀಕ್ಷಕರ ಸಂಖ್ಯೆ ಮತ್ತಷ್ಟು ಏರುತ್ತದೆ. ಏಕೆಂದರೆ, ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮಕ್ಕೆ ಸಪರೇಟ್​ ಫ್ಯಾನ್ಸ್​​​ ಬೇಸ್​ ಇದೆ. ಶನಿವಾರ ಮತ್ತು ಭಾನುವಾರ ನಿರೂಪಕ ಸುದೀಪ್​​​ ಕಾರ್ಯಕ್ರಮ ನಡೆಸಿಕೊಟ್ಟು, ಒಬ್ಬರನ್ನು ಎಲಿಮಿನೇಟ್​ ಮಾಡುತ್ತಾರೆ. ಅತಿ ಹೆಚ್ಚು ಮತಗಳನ್ನು ಪಡೆದವರು ಮುಂದಿನ ವಾರಕ್ಕೆ ಪ್ರವೇಶ ಪಡೆದು, ಕಡಿಮೆ ಮತ ಗಳಿಸಿದವರು ಮನೆಯಿಂದ ಹೊರಬರುತ್ತಾರೆ. ಇಂದು ಕಿಚ್ಚನ ಪಂಚಾಯಿತಿ ನಡೆಯಲಿದ್ದು, ಕಲರ್ಸ್ ಕನ್ನಡ ಸೋಷಿಯಲ್​ ಮೀಡಿಯಾದಲ್ಲಿ ಪ್ರೋಮೋ ಅನಾವರಣಗೊಳಿಸಿದೆ. ಪ್ರೋಮೋ ವೀಕ್ಷಿಸಿದವರು ಸಂಪೂರ್ಣ ಸಂಚಿಕೆ ವೀಕ್ಷಿಸುವ ಕಾತರ ವ್ಯಕ್ತಪಡಿಸಿದ್ದಾರೆ.

ವಾರದ ಕಥೆ ಕಿಚ್ಚನ ಜೊತೆ: ಬಿಗ್​ ಬಾಸ್​ ಕನ್ನಡ ಸೀಸ್​ 10 ಆರಂಭವಾದಾಗಿನಿಂದಲೂ ಸಂಗೀತಾ, ಕಾರ್ತಿಕ್​​, ತನಿಷಾ ಆತ್ಮೀಯ ಸ್ನೇಹಿತರಾಗಿ ಗುರುತಿಸಿಕೊಂಡಿದ್ದರು. ಪ್ರತೀ ಹಂತದಲ್ಲೂ ಹೆಗಲಿಗೆ ಹೆಗಲು ಕೊಟ್ಟು ಗೆಳೆತನ ಅಂದ್ರೆ ಹೀಗಿರಬೇಕು ಎಂದು ತೋರಿಸಿಕೊಟ್ಟಿದ್ದರು. ಆದರೆ ಕಳೆದ ಎರಡು ವಾರಗಳಲ್ಲಿ ಎಲ್ಲವೂ ಬದಲಾದಂತಿದೆ. ಸ್ನೇಹದಲ್ಲಿ ಬಿರುಕು ಮೂಡಿದಂತೆ ತೋರುತ್ತಿದೆ. ಸಂಗೀತಾ ತಂಡದಿಂದ ಹೊರಬಂದಿದ್ದು, ಸದ್ಯ ಕಾರ್ತಿಕ್​ ಮತ್ತು ತನಿಷಾ ಮಾತ್ರ ಸ್ನೇಹಿತರಾಗಿ ಗುರುತಿಸಿಕೊಂಡಿದ್ದಾರೆ. ಈ ವಿಚಾರವೇ ಇಂದಿನ ಸಂಚಿಕೆಯ ಚರ್ಚೆಯ ವಿಷಯ. ''ಒಂದೇ ರಾತ್ರಿಯಲ್ಲಿ ಬದಲಾಗಿದ್ದೇನು?, ಅನುಬಂಧವೋ, ಆಟವೋ?'' ಎಂಬ ಶೀರ್ಷಿಕೆಯಲ್ಲಿ ವಾರದ ಕಥೆ ಕಿಚ್ಚನ ಜೊತೆ ಎಪಿಸೋಡ್​ನ ಪ್ರೋಮೋ ಅನಾವರಣಗೊಂಡಿದ್ದು, ಪ್ರೇಕ್ಷಕರ ಕುತೂಹಲ ಹೆಚ್ಚಿದೆ.

ನಾಮಿನೇಷನ್​ನಲ್ಲಿ ಸೇಫ್​ ಮಾಡೋ ಅವಕಾಶ ಇದ್ರೂ ಸೇಫ್​​ ಮಾಡಲಿಲ್ಲ ಎಂಬ ಕಾರಣಕ್ಕೆ ತನಿಷಾ, ಕಾರ್ತಿಕ್​ ಅವರಿಂದ ಸಂಗೀತಾ ಕೊಂಚ ದೂರವಾಗಿದ್ದರು. ಈ ವಾರ ವಿನಯ್​ ತಂಡದಲ್ಲಿ ಸಂಗೀತಾ ಆಟವಾಡಿದ್ದಾರೆ. ಈವರೆಗೂ ವಿನಯ್​ ಅಂದ್ರೆ ಆಗಲ್ಲ ಅನ್ನೋ ರೀತಿಯೇ ಸಂಗೀತಾ ವರ್ತಿಸಿದ್ದರು. ಆದ್ರೀಗ ವಿನಯ್​​ ಕಡೆ ವಾಲಿದ್ದಾರೆ. ಬೆಸ್ಟ್ ಫ್ರೆಂಡ್​ ಎಂದು ಹೇಳಿದ್ದ ಕಾರ್ತಿಕ್​ ಅವರಿಂದ ಕೊಂಚ ದೂರ ಸರಿದಿದ್ದಾರೆ.

ಇದನ್ನೂ ಓದಿ: ವಿಜಯ್ ರಾಘವೇಂದ್ರ ನಟನೆಯ 'ಮರೀಚಿ' ಬಿಡುಗಡೆಗೆ ದಿನ ನಿಗದಿ: ಟ್ರೇಲರ್ ಅನಾವರಣ

ಈ ವಿಚಾರವನ್ನೆತ್ತಿರುವ ನಟ ಸುದೀಪ್​, ಆರು ವಾರ ಕಾರ್ತಿಕ್ ಅವರೊಟ್ಟಿಗೆ, ಈಗ ವಿನಯ್​​ ಜೊತೆ. ವ್ಯತ್ಯಾಸ ಏನು? ಎಂದು ಸಂಗೀತಾ ಬಳಿ ಪ್ರಶ್ನಿಸಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ಸಂಗೀತಾ, ಕೇರಿಂಗ್​ ಅಂಡ್​​ ಕಾಮ್​ ವಿನಯ್​ ನನಗೆ ಕಾಣಿಸಿದ್ರು. ಆದ್ರೆ ಕಾರ್ತಿಕ್ ಬಳಿ ಏನೇ ಮಾತನಾಡಿದ್ರೂ ಜಗಳಕ್ಕೇನೆ ಹೋಗ್ತಿನಿ ಅಂತಾ ಹೇಳ್ತಾರೆ ಎಂದು ತಿಳಿಸಿದರು. ವಿನಯ್​ ಬಳಿ ಪ್ರಬುದ್ಧತೆ ಕಾಣುತ್ತೆ, ಅಲ್ಲಿ ಕಾಣ್ಸಲ್ಲ ಅಂತಾನೂ ತಿಳಿಸಿದ್ರು. ಅದಕ್ಕೆ, ಆರು ವಾರ ಇದ್ದ ಒಪಿನಿಯನ್​ ಒಂದು ನೈಟ್​ ಅಲ್ಲಿ ಬದಲಾಗುತ್ತಾ? ಎಂದು ಸುದೀಪ್​ ಮರುಪ್ರಶ್ನಿಸಿದ್ದಾರೆ. ಸ್ನೇಹಿತೆಯಾಗಿ ಅಂದು ನನ್ನನ್ನು ಸೇವ್ ಮಾಡ್ಲಿಲ್ಲ ಅಂತಾ ಅಷ್ಟೆಲ್ಲಾ ಫೈಟ್​ ಮಾಡೋ ಸಂಗೀತಾ, ಓರ್ವ ಫ್ರೆಂಡ್​ ಆಗಿ ಕಾರ್ತಿಕ್​ ಹೆಡ್​ ಶೇವ್​ ಮಾಡೋವಾಗ ಏಕೆ ಒಂದು ಬಾರಿಯೂ ಬೇಡ ಅಂತ ಹೇಳ್​ಲಿಲ್ಲ ಎಂದು ಸುದೀಪ್​ ಪ್ರಶ್ನಿಸಿದ್ದು, ಸಂಗೀತಾ ಅವರ ಬಳಿ ಉತ್ತರವಿರಲಿಲ್ಲ. ​

ಇದನ್ನೂ ಓದಿ: ಮೊದಲ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಕೋಮಲ್: 'ಕೋಣ' ಪೋಸ್ಟರ್ ರಿಲೀಸ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.