ETV Bharat / entertainment

ಬಿಗ್​ ಬಾಸ್​​: ಆಟದಲ್ಲಿ ಎಡವಿದರೇ ಗಂಧರ್ವರು? - Bigg boss kannada

Bigg Boss: ಬಿಗ್ ಬಾಸ್​ ಪ್ರೋಮೋ ಅನಾವರಣಗೊಂಡಿದ್ದು, ಗಂಧರ್ವರ ತಂಡ ಆಟ ನಿಲ್ಲಿಸುವ ಹಂತಕ್ಕೆ ತಲುಪಿದಂತೆ ತೋರುತ್ತಿದೆ.

Bigg boss
ಬಿಗ್ ಬಾಸ್ ಕನ್ನಡ
author img

By ETV Bharat Karnataka Team

Published : Dec 7, 2023, 1:32 PM IST

ಬಿಗ್‌ ಬಾಸ್‌ ಮನೆಯಲ್ಲಿ ರಕ್ಕಸರು ಮತ್ತು ಗಂಧರ್ವರ ಜಿದ್ದಾ ಜಿದ್ದಿ ಕ್ಷಣಕ್ಷಣಕ್ಕೂ ಏರುತ್ತಲೇ ಇದೆ. ಕಳೆದೆರಡು ದಿನಗಳಿಂದ ಈ ಮನೆಯಲ್ಲಿ ಬಿಗ್​ ಬಾಸ್​ ಲೋಕ ಎಂಬ ಕಾಲ್ಪನಿಕ ಜಗತ್ತು ಸೃಷ್ಟಿಯಾಗಿದೆ. ರಕ್ಕಸರು ಮತ್ತು ಗಂಧರ್ವರ ಎರಡು ಗುಂಪು ರಚನೆಯಾಗಿದೆ. ರಾಕ್ಷಸರು ಕ್ರೂರತೆ ಮೆರಯುತ್ತಿದ್ದರೆ, ಗಂಧರ್ವರು ತಮ್ಮ ಸಹನಾ ಶಕ್ತಿ ಸಾಬೀತುಪಡಿಸುತ್ತಿದ್ದಾರೆ.

ಬಿಗ್ ಬಾಸ್​ ಪ್ರೋಮೋ: ಕಳೆದ ಎರಡು ದಿನಗಳಿಂದ ಈ ಟಾಸ್ಕ್ ಗಳಿಗೆಗೊಂದು ತಿರುವು ಪಡೆದುಕೊಂಡು ಬೆಳೆಯುತ್ತಲೇ ಇದೆ. ಆದರೆ ಆ ಟಾಸ್ಕ್‌ ಈಗ ಒಂದು ಹಂತಕ್ಕೆ ಬಂದು ನಿಂತಿರುವ ಸೂಚನೆ ಜಿಯೋ ಸಿನಿಮಾ ಬಿಡುಗಡೆ ಮಾಡಿರುವ ಪ್ರೋಮೋದಲ್ಲಿ ಸಿಕ್ಕಿದೆ. 'ಎಡವಿತಾ ಗಂಧರ್ವರ ತಂಡ?' ಎಂಬ ಶೀರ್ಷಿಕೆಯಡಿ ಕಲರ್ಸ್ ಕನ್ನಡ ಸೋಷಿಯಲ್​ ಮೀಡಿಯಾಗಳಲ್ಲಿ ಪ್ರೋಮೋ ಅನಾವರಣಗೊಳಿಸಿದ್ದು, ಪ್ರೇಕ್ಷಕರು ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ.

Bigg boss
ಆಟದಲ್ಲಿ ಎಡವಿದರೇ ಗಂಧರ್ವರು?

ಆರಂಭದಲ್ಲಿ ರಕ್ಕಸರಾಗಿದ್ದ ಸಂಗೀತಾ ಅವರ ತಂಡವೀಗ ಗಂಧರ್ವರಾಗಿದ್ದಾರೆ. ಮೊದಲ ದಿನ ರಕ್ಕಸರಿಂದ ಕಿರುಕುಳ ಅನುಭವಿಸಿದ್ದ ವರ್ತೂರು ಸಂತೋಷ್ ಅವರ ತಂಡ ದುಪ್ಪಟ್ಟು ರೋಷದೊಂದಿಗೆ ರಕ್ಕಸರಾಗಿ ಗಂಧರ್ವರ ಮೇಲೆ ದಾಳಿ ಮಾಡುತ್ತಿದ್ದಾರೆ.

ಈ ನಡುವೆ ಗಂಧರ್ವರಾಗಿರುವ ಸಂಗೀತಾ ತಂಡ ಸದ್ಯ ದಣಿದಂತೆ ಕಾಣಿಸುತ್ತಿದೆ. ನಿರಂತರ ರಕ್ಕಸರ ಕಿರುಕುಳ ತಾಳರಾರದೇ ಕಾರ್ತಿಕ್, ನನ್ನ ಕೈಲಿ ಸಾಧ್ಯವಾಗುತ್ತಿಲ್ಲ ಎಂದು ನೆಲಕ್ಕೊರಗಿದ್ದಾರೆ. ನಾಯಕಿ ಸಂಗೀತಾ, ಸಿರಿ ಅವರೊಂದಿಗೆ, ಪನಿಷ್ಮೆಂಟ್ ತೆಗೆದುಕೊಳ್ಳಬೇಕು ಎಂದು ಎಲ್ಲೂ ಹೇಳಿಲ್ಲ. ನಾವು ತಗೊಳ್ಳಲ್ಲ ಎಂದು ಹೇಳೋಣ ಎನ್ನುತ್ತಿದ್ದಾರೆ. ಇತ್ತ ರಕ್ಕಸರ ಗುಂಪಿನ ನಮ್ರತಾ, ಅವಳು ಯಾವ ಸೀಮೆ ರಾಣಿ ಗುರೂ. ಇಂಡಿವಿಷುವಲ್ ಗೇಮ್ ಆಡೋಕೆ ಬಂದಿಲ್ವಾ ನೀವು? ಎಂದು ಕಿರುಚಾಡಿದ್ದಾರೆ. ಅವ್ರು ವರ್ಸ್ಟ್‌ ಆಗಿ ಮಾಡ್ತಿರೋದಕ್ಕೆ ಅವ್ರು ಹೊಣೆ ಮ್ಯಾಮ್, ನಾನದಕ್ಕೆ ಕಾರಣ ಅಲ್ಲ ಎಂದು ಸಂಗೀತಾ ತನ್ನದೇ ಗುಂಪಿನ ಸದಸ್ಯರ ಎದುರಿಗೆ ಕೈ ಮುಗಿದು ಕಣ್ಣೀರು ಹಾಕುತ್ತಿದ್ದಾರೆ.

ಇದನ್ನೂ ಓದಿ: ಬಿಗ್​​ ಬಾಸ್ ಕನ್ನಡ​​​: ಗಂಧರ್ವರು ರಾಕ್ಷಸರಾದಾಗ - ಪ್ರೋಮೋ ನೋಡಿ

ಇಡೀ ಬಿಗ್​ ಬಾಸ್ ಮನೆ ರಣರಂಗವಾಗಿದೆ. ಯಾವುದು ಸರಿ? ಯಾವುದು ತಪ್ಪು? ಎಂಬುದು ತಿಳಿಯದಷ್ಟು ಗೊಂದಲದ ಗೂಡಾಗಿದೆ. ಇದರ ಪರಿಣಾಮ ಏನಾಗುತ್ತದೆ? ಯಾವ ತಂಡ ಗೆಲುವಿನ ದಡ ಸೇರುತ್ತದೆ? ಯಾವ ತಂಡ ಸೋಲಿನಲ್ಲಿ ಕೊಚ್ಚಿಕೊಂಡು ಹೋಗುತ್ತದೆ? ಈ ಪ್ರಶ್ನೆಗಳ ಉತ್ತರಕ್ಕಾಗಿ ವೀಕೆಂಡ್‌ವರೆಗೂ ಕಾಯಲೇಬೇಕು. ಬಿಗ್‌ ಬಾಸ್ ಕನ್ನಡ 24 ಗಂಟೆಯ ನೇರಪ್ರಸಾರವನ್ನು ಜಿಯೋ ಸಿನಿಮಾದಲ್ಲಿ ಉಚಿತವಾಗಿ ವೀಕ್ಷಿಸಿ. ಪ್ರತಿದಿನದ ಎಪಿಸೋಡ್‌ಗಳು ಕಲರ್ಸ್ ಕನ್ನಡದಲ್ಲಿ ರಾತ್ರಿ 9.30ಕ್ಕೆ ಪ್ರಸಾರವಾಗುತ್ತವೆ.

ಇದನ್ನೂ ಓದಿ: 'ಕುಡಿದ ಮತ್ತಿನಲ್ಲಿ ತೂರಾಡಿದ ಸನ್ನಿ ಡಿಯೋಲ್'​​: ಇದು ನಿಜವಲ್ಲ, 'ಸಫರ್' ಸಿನಿಮಾ ಶೂಟಿಂಗ್!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.