ETV Bharat / entertainment

ಸಂತು-ಪಂತು ದೂರವಾಗುವ ಸಮಯ: ಕಣ್ಣೀರು ಸುರಿಸಿದ ಬಿಗ್​ ಬಾಸ್​ ಆಪ್ತ ಸ್ನೇಹಿತರು - Bigg Boss kannada

Bigg Boss Kannada: 'ಸಂತು-ಪಂತು ದೂರವಾಗುವ ಸಮಯ ಬಂದೇಬಿಟ್ಟಿದೆ!' ಎಂಬ ಶೀರ್ಷಿಕೆಯಡಿ ಕನ್ನಡ ಬಿಗ್​ ಬಾಸ್ ರಿಯಾಲಿಟಿ ಶೋದ​ ಹೊಸ ಪ್ರೋಮೋ ಬಿಡುಗಡೆಯಾಗಿದ್ದು, ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ.

Bigg Boss kannada
ಬಿಗ್ ಬಾಸ್ ಕನ್ನಡ
author img

By ETV Bharat Karnataka Team

Published : Jan 14, 2024, 1:23 PM IST

ಕನ್ನಡದ ಜನಪ್ರಿಯ ರಿಯಾಲಿಟಿ ಶೋ 'ಬಿಗ್​ ಬಾಸ್​​ ಸೀಸನ್​ 10' ಫಿನಾಲೆ ಹೊಸ್ತಿಲಿನಲ್ಲಿದೆ. ಸದ್ಯ ಉಳಿದುಕೊಂಡಿರುವ ಬೆರಳೆಣಿಕೆ ಸಂಖ್ಯೆಯ ಸ್ಪರ್ಧಿಗಳೆಲ್ಲರೂ ಪ್ರಬಲರೇ. ಯಾರೇ ಹೊರಹೋದರೂ ಅದು ಅನೇಕರ ಅಚ್ಚರಿಗೆ ಕಾರಣವಾಗುತ್ತದೆ ಅನ್ನೋದ್ರಲ್ಲಿ ಸಂದೇಹವಿಲ್ಲ. ವಾರಾಂತ್ಯ ಬಂತೆಂದರೆ ಸಾಕು ಅಪಾರ ಸಂಖ್ಯೆಯ ಪ್ರೇಕ್ಷಕರಿಗೆ 'ವಾರದ ಕಥೆ ಕಿಚ್ಚನ ಜೊತೆ' ನೋಡುವ ಕುತೂಹಲ ಒಂದೆಡೆಯಾದರೆ, ಎಲ್ಲಿ ತಮ್ಮ ಅಚ್ಚುಮೆಚ್ಚಿನ ಸ್ಪರ್ಧಿಗಳು ಹೊರ ನಡೆಯುತ್ತಾರೋ ಎಂಬ ಭಯ ಹಲವರದ್ದು. ಬಿಗ್​ ಬಾಸ್​ ಮನೆಯಲ್ಲಿ ಆಪ್ತ ಸ್ನೇಹಿತರಂತೆ ಗುರುತಿಸಿಕೊಂಡಿರುವ ವರ್ತೂರ್ ಸಂತೋಷ್​ ಮತ್ತು ತುಕಾಲಿ ಸಂತೋಷ್​​​ ಇಬ್ಬರಲ್ಲಿ ಓರ್ವರು ಮನೆಯಿಂದ ಎಲಿಮಿನೇಷನ್​ ಮಾರ್ಗದ ಮೂಲಕ ಹೊರನಡೆಯುವ ಸಂದರ್ಭ ಬಂದಿದೆ!.

ಬಿಗ್ ಬಾಸ್ ಹೊಸ ಪ್ರೋಮೋ: ಶುಕ್ರವಾರ ರಾತ್ರಿ ಬೀನ್‌ ಬ್ಯಾಗ್‌ ಮೇಲೆ ಕೂತಿದ್ದ ತುಕಾಲಿ ಸಂತೋಷ್ ಮತ್ತು ವರ್ತೂರು ಸಂತೋಷ್ ಇಬ್ಬರೂ ತಮ್ಮ ಬಿಗ್​ ಬಾಸ್​ ಪ್ರಯಾಣವನ್ನು ನೆನೆದು ಭಾವುಕರಾದರು. ''ಇಬ್ಬರಲ್ಲಿ ಯಾರಾದರೋರ್ವರು ಹೊರಗೆ ಹೋದರೆ'' ಎಂದು ಸಂಭಾವ್ಯ ಸನ್ನಿವೇಶವನ್ನು ನೆನೆದು ಪರಸ್ಪರ ಸಂತೈಸಿಕೊಂಡರು. ಅವರ ಮಾತು ನಿಜವಾಗುವ ಗಳಿಗೆ ಸಮೀಪ ಬಂದಂತಿದೆ. ಇದರ ಸುಳಿವು ಜಿಯೋಸಿನಿಮಾ ಬಿಡುಗಡೆ ಮಾಡಿರುವ ಇಂದಿನ ಸಂಚಿಕೆಯ ಪ್ರೋಮೋದಲ್ಲಿ ಸಿಕ್ಕಿದೆ. ಕಲರ್ಸ್ ಕನ್ನಡ ಸೋಷಿಯಲ್​ ಮೀಡಿಯಾಗಳಲ್ಲಿ, 'ಸಂತು-ಪಂತು ದೂರವಾಗುವ ಸಮಯ ಬಂದೇಬಿಟ್ಟಿದೆ!' ಎಂಬ ಶೀರ್ಷಿಕೆಯಡಿ ಪ್ರೋಮೋ ಅನಾವರಣಗೊಂಡಿದ್ದು, ಪ್ರೇಕ್ಷಕರ ಮನಕರಗಿಸುವ ದೃಶ್ಯವಿದೆ.

'ಸೂಪರ್ ಸಂಡೆ ವಿತ್ ಸುದೀಪ್‌' ಎಪಿಸೋಡ್‌ನಲ್ಲಿ ನಿರೂಪಕ ಸುದೀಪ್ ಸೇಫ್‌ ಆದ ಎಲ್ಲರ ಹೆಸರು ಹೇಳಿ, ಕೊನೆಯಲ್ಲಿ ವರ್ತೂರು ಸಂತೋಷ್ ಹಾಗೂ ತುಕಾಲಿ ಸಂತೋಷ್ ಅವರೇ ನಿಮ್ಮಿಬ್ಬರಲ್ಲಿ ಒಬ್ಬರನ್ನು ಇಂದು ಹೊರಗಡೆ ಕಳುಹಿಸಬೇಕಾಗಿದೆ ಎಂದು ಹೇಳಿದ್ದಾರೆ. ಕಿಚ್ಚನ ಮಾತು ಕೇಳಿ ಈ ಇಬ್ಬರ ಕಣ್ಣಲ್ಲಿ ನೀರು ತುಂಬಿಕೊಂಡಿತು. ಅಳುತ್ತಲೇ, ತುಕಾಲಿ ಸಂತೋಷ್, "ನಾನು ಹೊರಡಬೇಕಿದ್ದರೆ, ವರ್ತೂರು ಅವರಿಗೆ ಚೆನ್ನಾಗಿ ಆಡಿ ಗೆದ್ಕೊಂಡು ಬಾ ಎಂದು ಹೇಳೋಕೆ ಇಷ್ಟಪಡ್ತೀನಿ" ಎಂದು ಹೇಳಿದರು. ವರ್ತೂರು ಸಂತೋಷ್, "ಅವರು ಗೆಲ್ಲುವುದನ್ನು (ತುಕಾಲಿ) ನಾನು ನೋಡಬೇಕು" ಎಂದರು.

ಇದನ್ನೂ ಓದಿ: ಅಮೀರ್​ ಪುತ್ರಿಯ ಆರತಕ್ಷತೆಯಲ್ಲಿ ಬಾಲಿವುಡ್ ತಾರೆಯರ ಸಮಾಗಮ​-ವಿಡಿಯೋ

ಯಾವಾಗಲೂ ತುಕಾಲಿ ಅವರನ್ನು ವಿರೋಧಿಸುವ ನಮ್ರತಾ ಕೂಡ, "ಈ ಇಬ್ಬರೂ ದೂರ ಆಗಬೇಕೆಂದು ನನಗೆ ಅನಿಸುತ್ತಿತ್ತು. ಆದ್ರೆ ಇವತ್ತು…" ಎಂದು ಹೇಳಿ ಹಾಗಾಗಬಾರದೆಂದು ತಲೆಯಾಡಿಸಿದರು. "ಇಬ್ಬರ ಸ್ನೇಹದ ಬಗ್ಗೆ ಕಿಚ್ಚ ಸುದೀಪ್ ಅವರೇ ಹೊಗಳಿದ್ದಾರೆ. ಯಾರಲ್ಲೂ ನೋಡದ ಒಂದು ಬಾಂಧವ್ಯವನ್ನು ನಿಮ್ಮಿಬ್ಬರಲ್ಲಿ ಈ ಸೀಸನ್‌ನಲ್ಲಿ ನಾನು ನೋಡಿದ್ದೀನಿ. ನಿಮ್ಮದು ನಿಷ್ಕಳಂಕ ಫ್ರೆಂಡ್‌ಷಿಪ್" ಎಂದಿದ್ದಾರೆ.

ಇದನ್ನೂ ಓದಿ: ಬಿಗ್‌ಬಾಸ್‌ ಮೇಲೆ ಮೊದಲ ಬಾರಿ ಇಂಥ ಆರೋಪ: ಕಾರ್ತಿಕ್​ಗೂ ಕ್ಲಾಸ್ ಕೊಟ್ಟ ಕಿಚ್ಚ

ಹಾಗಾದರೆ, ಸಂತು-ಪಂತು ಇಬ್ಬರಲ್ಲಿ ಯಾರಿಗೆ ಈ ವಾರ ಮನೆಯಿಂದ ಗೇಟ್‌ಪಾಸ್ ಸಿಗುತ್ತೆ?, ಯಾರು ಬಿಗ್‌ ಬಾಸ್‌ ಮನೆಯಲ್ಲಿ ಉಳಿದುಕೊಳ್ಳುತ್ತಾರೆ? ಆಪ್ತಸ್ನೇಹಿತನಿಲ್ಲದೇ ಮನೆಯೊಳಗೆ ಹೇಗಿರುತ್ತಾರೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸೂಪರ್ ಸಂಡೆ ವಿತ್ ಸುದೀಪ್ ಎಪಿಸೋಡ್‌ನಲ್ಲಿ ಸಿಗಲಿದೆ. ಬಿಗ್‌ ಬಾಸ್ ಕನ್ನಡ 24 ಗಂಟೆಯ ನೇರಪ್ರಸಾರವನ್ನು ಜಿಯೋಸಿನಿಮಾದಲ್ಲಿ ಉಚಿತವಾಗಿ ನೋಡಬಹುದು. ಪ್ರತಿದಿನದ ಸಂಚಿಕೆ ರಾತ್ರಿ 9ಕ್ಕೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.