ETV Bharat / entertainment

ಬಿಗ್​ ಬಾಸ್​: ಕಾಲಿಗೆ ಹಗ್ಗ - ಮನೆಮಂದಿ ನಡುವೆ ಜಿದ್ದಾಜಿದ್ದಿ; ಆಟಕ್ಕಿಂತ ಪೆಟ್ಟೇ ಹೆಚ್ಚು! - ಅಭಿನಯ ಚಕ್ರವರ್ತಿ ಸುದೀಪ್

ಬಿಗ್​ ಬಾಸ್​ ಕನ್ನಡದ ಮತ್ತೊಂದು ಪ್ರೋಮೋ ಅನಾವರಣಗೊಂಡಿದ್ದು, ಪ್ರೇಕ್ಷಕರ ಕುತೂಹಲ ಹೆಚ್ಚಿದೆ.

Bigg Boss Kannada
ಕನ್ನಡ ಬಿಗ್​ ಬಾಸ್
author img

By ETV Bharat Karnataka Team

Published : Nov 29, 2023, 6:02 PM IST

ಅಭಿನಯ ಚಕ್ರವರ್ತಿ ಸುದೀಪ್​ ಅವರು ನಡೆಸಿಕೊಡುವ ಕನ್ನಡದ ಖ್ಯಾತ ಜನಪ್ರಿಯ ಕಾರ್ಯಕ್ರಮ 'ಬಿಗ್​ ಬಾಸ್' ಪ್ರೇಕ್ಷಕರ ಸಂಖ್ಯೆ ಹೆಚ್ಚಿಸಿಕೊಳ್ಳುತ್ತಲೇ ಇದೆ. ಈಗಾಗಲೇ 50 ದಿನಗಳನ್ನು ಪೂರೈಸಿರುವ 'ಕನ್ನಡ ಬಿಗ್​ ಬಾಸ್​​ ಸೀಸನ್​ 10'ಕ್ಕೆ ಮಾಡೆಲಿಂಗ್​ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಪವಿ ಪೂವಪ್ಪ ಮತ್ತು ಅವಿನಾಶ್ ಶೆಟ್ಟಿ ವೈಲ್ಡ್​ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದಾರೆ. ಈಗಾಗಲೇ ಟಾಸ್ಕ್​​ಗಳಲ್ಲೂ ಭಾಗಿಯಾಗಿದ್ದಾರೆ. ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ಉಣಬಡಿಸುತ್ತಿರುವ 'ಬಿಗ್​ ಬಾಸ್​'ನ ಇಂದಿನ ಸಂಚಿಕೆಯ ಪ್ರೋಮೋಗಳು ಅನಾವರಣಗೊಂಡಿದ್ದು, ನೋಡುಗರ ಕುತೂಹಲ ಹೆಚ್ಚಿದೆ.

Bigg Boss Kannada
ಬಿಗ್​ ಬಾಸ್​ ಟಾಸ್ಕ್

ಆಟದಲ್ಲಿ ತಂಡಗಳು ಅಂಕಕ್ಕಿಂತ ಪೆಟ್ಟು ಪಡೆದಿದ್ದೇ ಹೆಚ್ಚು!' ಈಗಾಗಲೇ ಕೇಕ್ ತಿಂದು ರಸಪ್ರಶ್ನೆಯ ಆಟ ಆಡಿರುವ ಮನೆ ಮಂದಿಗೆ ಬಿಗ್‌ ಬಾಸ್‌ ನೀಡಿರುವ ಎರಡನೇ ಟಾಸ್ಕ್‌ ಸಖತ್‌ ಚಾಲೆಂಜಿಂಗ್ ಆಗಿದೆ. ಆಟದ ಪರಿಣಾಮವೂ ಜೋರಾಗೇ ಇದ್ದಂತೆ ಕಾಣುತ್ತಿದೆ. ಜಿಯೋ ಸಿನಿಮಾ ಬಿಡುಗಡೆ ಮಾಡಿರುವ ಪ್ರೋಮೋದಲ್ಲಿ ಆಟ ಗುದ್ದಾಟ ಎರಡೂ ಜಾಹೀರಾಗಿವೆ. ಹೌದು, 'ಆಟದಲ್ಲಿ ತಂಡಗಳು ಅಂಕಕ್ಕಿಂತ ಪೆಟ್ಟು ಪಡೆದಿದ್ದೇ ಹೆಚ್ಚು!' ಎಂಬ ಶೀರ್ಷಿಕೆಯಡಿ ಸೋಷಿಯಲ್​ ಮೀಡಿಯಾದಲ್ಲಿ ಪ್ರೋಮೋ ಅನಾವರಣಗೊಂಡಿದ್ದು, ಪ್ರೇಕ್ಷಕರ ಕುತೂಹಲ ಮೂಡಿಸಿದೆ.

ಟಾಸ್ಕ್ ಏನು? ಎರಡೂ ಗುಂಪಿನ ಎಲ್ಲಾ ಸದಸ್ಯರು ಕಾಲಿಗೆ ಹಗ್ಗವನ್ನು ಕಟ್ಟಿಕೊಳ್ಳಬೇಕು. ಎದುರಿಗೆ ನಂಬರ್ ಹಾಕಿರುವ ಜಾಗದಲ್ಲಿ ಒಂದಿಷ್ಟು ಬಾಲ್‌ಗಳನ್ನು ಇಡಲಾಗಿದೆ. ಬಿಗ್‌ ಬಾಸ್ ಸೂಚಿಸಿದ ನಂಬರ್ ಇರುವ ಜಾಗಕ್ಕೆ ಎರಡೂ ಗುಂಪಿನ ಸದಸ್ಯರು ಜಿಗಿಯುತ್ತಾ ಹೋಗಿ ಬಾಲ್‌ ಎತ್ತಿಕೊಂಡು ಬಂದು ತಮ್ಮ ತಂಡದ ಜಾಲರಿಯಲ್ಲಿ ಹಾಕಬೇಕು. ಯಾವ ತಂಡದವರು ಹೆಚ್ಚು ಬಾಲ್‌ಗಳನ್ನು ಎತ್ತಿಕೊಂಡು ಬಂದು ಜಾಲರಿಯಲ್ಲಿ ಹಾಕುತ್ತಾರೋ ಅವರು ಗೆದ್ದಂತೆ.

ಎರಡೂ ತಂಡದ ನಡುವೆ ಜಿದ್ದಾಜಿದ್ದಿ: ಈ ಟಾಸ್ಕ್‌ನಲ್ಲಿ ಬಾಲ್‌ ಎತ್ತುವಾಗ ಎರಡೂ ತಂಡದ ನಡುವೆ ಜಿದ್ದಾಜಿದ್ದಿಯಾಗಿದೆ. ಸ್ನೇಹಿತ್‌ ತಳ್ಳಿದ್ದರಿಂದ ಬಿದ್ದಿರುವ ಸಿರಿ, 'ಇಷ್ಟೊಂದು ಫಿಸಿಕಲ್ ಆಗುವುದು ಬೇಕಾ?' ಎಂದು ಪ್ರಶ್ನಿಸಿದ್ದಾರೆ. ಉಸ್ತುವಾರಿ ನೋಡಿಕೊಳ್ಳುತ್ತಿರುವ ಕಾರ್ತಿಕ್, ಎರಡೂ ತಂಡದ ಸದಸ್ಯರನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ.

ಇದನ್ನೂ ಓದಿ: ಹೃತಿಕ್ ರೋಷನ್​​​, ಜೂ. ಎನ್​​ಟಿಆರ್ ನಟನೆಯ 'ವಾರ್​ 2' ರಿಲೀಸ್​ ಡೇಟ್ ರಿವೀಲ್

ಈ ಜಿದ್ದಾಜಿದ್ದಿಯನ್ನು ಮೀರಿ ಟಾಸ್ಕ್‌ನಲ್ಲಿ ಗೆಲ್ಲುವುದು ಯಾರು? ಎಂಬುದನ್ನು ತಿಳಿದುಕೊಳ್ಳಲು ಜಿಯೋ ಸಿನಿಮಾದಲ್ಲಿ ಬಿಗ್‌ ಬಾಸ್ ಕನ್ನಡವನ್ನು ವೀಕ್ಷಿಸಿ. ಕನ್ನಡ ಬಿಗ್‌ ಬಾಸ್ 24 ಗಂಟೆಯ ನೇರಪ್ರಸಾರ ಜಿಯೋ ಸಿನಿಮಾದಲ್ಲಿ ಉಚಿತವಾಗಿ ಲಭ್ಯವಿದೆ. ಪ್ರತಿದಿನದ ಎಪಿಸೋಡ್‌ಗಳನ್ನು ಕಲರ್ಸ್​ ಕನ್ನಡದಲ್ಲಿ ರಾತ್ರಿ 9.30ಕ್ಕೆ ವೀಕ್ಷಿಸಿ.

ಇದನ್ನೂ ಓದಿ: ಬಿಗ್‌ ಬಾಸ್​ನಲ್ಲಿ ರಸಪ್ರಶ್ನೆ ಸ್ಪರ್ಧೆ: ಮೈಕಲ್​ ಕನ್ನಡಕ್ಕೆ ದಂಗಾದ ಮನೆಮಂದಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.