ETV Bharat / entertainment

ಬಿಗ್​ ಬಾಸ್​: ಸಂಗೀತಾ ಮೇಲೆ ಮೈಕಲ್ ಅಸಮಾಧಾನ; ಕಣ್ಣೀರಿಟ್ಟ ಕ್ಯಾಪ್ಟನ್! - ಕನ್ನಡ ಬಿಗ್​ ಬಾಸ್

Bigg Boss: 'ಸಂಗೀತಾ ನಾಯಕತ್ವಕ್ಕೆ ಅಗ್ನಿಪರೀಕ್ಷೆ ಒಡ್ಡಿದರಾ ಮೈಕಲ್?' ಶೀರ್ಷಿಕೆಯಡಿ ಅನಾವರಣಗೊಂಡಿರುವ ಪ್ರೋಮೋ ವೀಕ್ಷಿಸಿದ ವೀಕ್ಷಕರು ಸಂಪೂರ್ಣ ಸಂಚಿಕೆ ವೀಕ್ಷಿಸಲು ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ.

Bigg Boss Promo
ಬಿಗ್​ ಬಾಸ್​ ಪ್ರೋಮೋ
author img

By ETV Bharat Karnataka Team

Published : Dec 21, 2023, 1:32 PM IST

ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮ 'ಬಿಗ್​ ಬಾಸ್​' ಹೊಸ ಹೊಸ ಟಾಸ್ಕ್, ತಿರುವುಗಳೊಂದಿಗೆ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಅಭಿನಯ ಚಕ್ರವರ್ತಿ ಸುದೀಪ್​ ನಿರೂಪಣೆಯಲ್ಲಿ ಮೂಡಿಬರುವ ಈ ರಿಯಾಲಿಟಿ ಶೋನಲ್ಲಿ ಇಂದು ಸ್ನೇಹಿತರಾಗಿದ್ದವರು ನಾಳೆ ಅದೇ ಸ್ನೇಹವನ್ನು ಮುಂದುವರಿಸಿಕೊಂಡು ಹೋಗುತ್ತಾರಾ? ಸ್ಪರ್ಧಿಗಳು ಪ್ರತಿ ಹಂತದಲ್ಲೂ ಹೊಂದಾಣಿಕೆ ಮಾಡಿಕೊಳ್ಳುತ್ತಾರಾ? ಅನ್ನೋದೇ ಪ್ರೇಕ್ಷಕರ ಪ್ರಶ್ನೆ.

ಎರಡೂ ಗುಂಪುಗಳ ಸದಸ್ಯರಲ್ಲಿ ಅಸಮಾಧಾನ: ಸಂಗೀತಾ ಮತ್ತು ತನಿಷಾ ಅವರ ಎರಡು ಗುಂಪುಗಳಲ್ಲಿ ಮನೆಯ ಸದಸ್ಯರೆಲ್ಲ ವಿಂಗಡಣೆಗೊಂಡು ಕ್ಯಾಪ್ಟನ್ಸಿಗಾಗಿ ಸ್ಪರ್ಧಿಸುತ್ತಿದ್ದಾರೆ. ಈ ಬಾರಿ ಬಿಗ್ ಬಾಸ್ ನಾಯಕಿಯರಿಗೆ ತಮ್ಮ ಮನೆಯ ಸದಸ್ಯರ‌ನ್ನು ತಂಡಕ್ಕೆ ಹಣ ಕೊಟ್ಟು ಖರೀದಿಸುವ ಅವಕಾಶ ಕೊಟ್ಟಿತ್ತು. ಯಾರಿಗೆ ಎಷ್ಟು ಗಣ ಕೊಡಲಾಗಿದೆ? ಟಾಸ್ಕ್​​ಗಳಲ್ಲಿ ಗೆದ್ದಾಗ ಎಷ್ಟು ಶೇರ್ ಕೊಡಲಾಗುತ್ತಿದೆ? ಎಂಬುದರ ಕುರಿತು ಎರಡೂ ಗುಂಪುಗಳ ಸದಸ್ಯರಲ್ಲಿ ಅಸಮಾಧಾನಗಳಿವೆ.

Bigg Boss
ಬಿಗ್​ ಬಾಸ್ ಸ್ಪರ್ಧಿಗಳು......

ಬಿಗ್​​ ಬಾಸ್​ ಪ್ರೋಮೋ: ಈ ಅಸಮಾಧಾನ ಜಿಯೋ ಸಿನಿಮಾ ಬಿಡುಗಡೆ ಮಾಡಿರುವ ಪ್ರೋಮೋದಲ್ಲಿ ಸ್ಪಷ್ಟವಾಗಿ ಕಾಣಿಸಿದೆ. 'ಸಂಗೀತಾ ನಾಯಕತ್ವಕ್ಕೆ ಅಗ್ನಿಪರೀಕ್ಷೆ ಒಡ್ಡಿದರಾ ಮೈಕಲ್?' ಎಂಬ ಶೀರ್ಷಿಕೆಯಡಿ ಕಲರ್ಸ್​ ಕನ್ನಡ ಸೋಷಿಯಲ್​ ಮೀಡಿಯಾಗಳಲ್ಲಿ ಇಂದಿನ ಸಂಚಿಕೆಯ ಪ್ರೋಮೋ ಅನಾವರಣಗೊಳಿಸಿದ್ದು, ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ. ಸಂಗೀತಾ ವಿರುದ್ಧ ಮೈಕಲ್​​ ಕಿಡಿ ಕಾರಿದ್ದು, ಸಂಗೀತಾ ಕಣ್ಣೀರಿಟ್ಟಿದ್ದಾರೆ.

ಕಣ್ಣೀರಿಟ್ಟ ಸಂಗೀತಾ: ಇಂದು ಎರಡೂ ತಂಡದ ಕ್ಯಾಪ್ಟನ್​​ಗಳನ್ನು ಕೂರಿಸಿ, ತಮ್ಮ ತಂಡದ ಸದಸ್ಯರಿಂದ ಅಭಿಪ್ರಾಯ ವಿನಿಮಯ ಮಾಡಿಕೊಳ್ಳಲು ಬಿಗ್ ಬಾಸ್ ಸೂಚಿಸಿದ್ದಾರೆ. ಈ ಸಮಯದಲ್ಲಿ ಮೈಕಲ್ ನೇರವಾಗಿಯೇ 'ಸಂಗೀತಾ ಟಾಸ್ಕ್ ಗೆದ್ದಾಗ, ಬಂದ ಹಣದಲ್ಲಿ ಶೇರ್ ಸರಿಯಾಗಿ ಕೊಡುತ್ತಿಲ್ಲ' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ಸಂಗೀತಾ ಕೂಡ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಪ್ರೋಮೋ ಕೊನೆಯಲ್ಲಿ ಸಂಗೀತಾ ಕಣ್ಣೀರಿಟ್ಟಿದ್ದಾರೆ. ಈ ಪ್ರೋಮೋ ನೋಡಿದವರು ಮುಂದೇನಾಗಬಹುದು ಎಂಬ ಕುತೂಹಲವನ್ನು ಕಾಮೆಂಟ್​ಗಳ ಮೂಲಕ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ಎಸ್​ಆರ್​ಕೆ ಕ್ರೇಜ್​​​: ಚಿತ್ರಮಂದಿರಗಳೆದುರು 'ಡಂಕಿ' ಹಬ್ಬಾಚರಣೆ; ಸೆಲೆಬ್ರೇಶನ್​ ವಿಡಿಯೋ ನೋಡಿ

ತಂಡದೊಳಗೆ ಕಾಣಿಸಿಕೊಂಡಿರುವ ಈ ಬಿರುಕು ಗೆಲುವಿಗೆ ಅಡ್ಡಗಾಲಾಗಬಹುದಾ?, ಉಳಿದ ಸದಸ್ಯರೂ ತಮ್ಮ ತಂಡದ ನಾಯಕರ ವಿರುದ್ಧ ಮಾತಾಡಬಹುದಾ?, ಈ ಕುತೂಹಲ ತಣಿಯಲು ಬಿಗ್ ಬಾಸ್ ವೀಕ್ಷಿಸಿ. ಬಿಗ್‌ ಬಾಸ್ ಕನ್ನಡದ 24 ಗಂಟೆಯ ನೇರಪ್ರಸಾರವನ್ನು ಜಿಯೋ ಸಿನಿಮಾದಲ್ಲಿ ಉಚಿತವಾಗಿ ನೋಡಬಹುದಾಗಿದೆ. ನಿತ್ಯದ ಎಪಿಸೋಡ್‌ಗಳನ್ನು ಕಲರ್ಸ್ ಕನ್ನಡದಲ್ಲಿ ರಾತ್ರಿ 9.30ಕ್ಕೆ ವೀಕ್ಷಿಸಬಹುದಾಗಿದೆ.

ಇದನ್ನೂ ಓದಿ: ಅಡ್ವಾನ್ಸ್ ಟಿಕೆಟ್​ ಬುಕಿಂಗ್: 'ಡಂಕಿ'ಗಿಂತ 'ಸಲಾರ್​'​ ಒಂದು ಹೆಜ್ಜೆ ಮುಂದೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.