ಸ್ಯಾಂಡಲ್ವುಡ್ನಲ್ಲಿ ಹರ್ಷಿಕಾ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ ಮದುವೆ ಸಂಭ್ರಮ ಜೋರಾಗಿದೆ. ಕೆಲವು ವರ್ಷಗಳಿಂದ ಪ್ರೀತಿಯಲ್ಲಿದ್ದ ಈ ಜೋಡಿ ಮದುವೆಯಾಗುತ್ತಿರುವುದು ಸದ್ಯ ಹಾಟ್ ಟಾಪಿಕ್ ಆಗಿದೆ. ಈ ಮಧ್ಯೆ ಹರ್ಷಿಕಾ ಅವರಿಗೆ ಮದುವೆಗೂ ಮುಂಚೆ ಶುಭ ಕಾರ್ಯಗಳ ಜೊತೆ ದುಬಾರಿ ಬೆಲೆಯ ಉಡುಗೊರೆಗಳು ಕೂಡ ಸಿಕ್ತಾ ಇವೆ. ಕೆಲವು ದಿನಗಳ ಹಿಂದೆ ಹಿರಿಯ ನಟಿ ಜಯಮಾಲ ಅವರು ಹರ್ಷಿಕಾರಿಗೆ ಚಿನ್ನದ ಓಲೆಯನ್ನು ಉಡುಗೊರೆಯಾಗಿ ನೀಡುವ ಮೂಲಕ 'ಹರ್ಷಿವನ್' ಜೋಡಿಗೆ ಆಶೀರ್ವಾದ ಮಾಡಿದ್ದರು.
ಇದೀಗ ಭುವನ್ ಪೊನ್ನಣ್ಣ ಜೊತೆ ಹಸೆಮಣೆ ಏರುವುದಕ್ಕೂ ಮುನ್ನ ಹರ್ಷಿಕಾ ಹೊಸ ಮನೆಗೆ ಕಾಲಿಟ್ಟಿದ್ದಾರೆ. ಭುವನ್ ಪೊನ್ನಣ್ಣ ಕೊಡಗಿನಲ್ಲಿ ಕೋಟಿ ಬೆಲೆ ಬಾಳುವ ತೋಟದ ಮನೆಯನ್ನು ಖರೀದಿಸಿದ್ದಾರೆ. ಮದುವೆಗೆ ಎರಡು ದಿನ ಬಾಕಿ ಇರುವಾಗಲೇ ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ ಹೊಸ ಮನೆ ಗೃಹ ಪ್ರವೇಶ ಮಾಡಿದ್ದಾರೆ. ಕೊಡಗು ಸಂಪ್ರದಾಯದಂತೆ ದೀಪ ಹಿಡಿದು ಹರ್ಷಿಕಾ ಭಾವಿ ಪತಿಯ ಹೊಸ ಮನೆಗೆ ಎಂಟ್ರಿಯಾಗಿದ್ದಾರೆ. ಭುವನ್ ಕೂಡ ತಮ್ಮ ಕೊಡವ ಸಾಂಪ್ರದಾಯಿಕ ಶೈಲಿಯಲ್ಲಿ ಗನ್ ಹಿಡಿದು ಗುಂಡು ಹಾರಿಸಿ ಶುಭಕಾರ್ಯ ಶುರು ಮಾಡಿದ್ದಾರೆ. ಈ ಸಂದರ್ಭದಲ್ಲಿ ಭುವನ್ ತಂದೆ ತಾಯಿ ಹಾಗೂ ಬಂಧು ಮಿತ್ರರು ಜೊತೆಗಿದ್ದರು.
ಇದಕ್ಕೂ ಮುನ್ನ ಭುವನ್ ಹಾಗೂ ಹರ್ಷಿಕಾ ಹೊಸ ಪ್ರೊಡಕ್ಷನ್ ಹೌಸ್ ಅನೌನ್ಸ್ ಕೂಡ ಮಾಡಿದ್ದಾರೆ. ಕಳೆದ ಹತ್ತಾರು ವರ್ಷಗಳಿಂದ ಸ್ನೇಹಿತರಾಗಿದ್ದ ಹರ್ಷಿವನ್ ಮೊದಲು ಭೇಟಿ ಆಗಿದ್ದು ಒಂದು ಫ್ಯಾಷನ್ ಶೋ ಕಾರ್ಯಕ್ರಮದಲ್ಲಂತೆ. ಹರ್ಷಿಕಾ ಪೂಣಚ್ಚ ಆಗ ತಾನೇ 'ಪಿಯುಸಿ' ಎಂಬ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ರು. ಇನ್ನು ಭುವನ್ ಫ್ಯಾಷನ್ ಶೋ ಕೊರಿಯೋಗ್ರಾಫರ್ ಆಗಿ ತಮ್ಮ ಕ್ಷೇತ್ರದಲ್ಲಿ ಹೆಸರು ಮಾಡಿದ್ದರು.
ಇದನ್ನೂ ಓದಿ: ಭಾವಿ ಪತ್ನಿಯನ್ನು ಸಿನಿಮಾ ಪ್ರೊಡ್ಯೂಸರ್ ಮಾಡಿದ ಭುವನ್ ಪೊನ್ನಣ್ಣ
ಹರ್ಷಿಕಾ ಪೂಣಚ್ಚ ಹೇಳುವ ಹಾಗೇ, ಈ ಫ್ಯಾಷನ್ ಶೋನ ಮೊದಲ ಭೇಟಿಯಲ್ಲಿ ಹರ್ಷಿಕಾಗೆ ಭುವನ್ ನೋಡಿ ಹುಡುಗ ಚೆನ್ನಾಗಿ ಇದ್ದಾನೆ ಅಂತ ಅನಿಸಿತ್ತಂತೆ. ಆದರೆ ಭುವನ್ ಈ ಫ್ಯಾಷನ್ ಶೋನ ಕೊರಿಯೋಗ್ರಾಫರ್ ಆದ ಕಾರಣ ಹರ್ಷಿಕಾಗೆ 25 ಬಾರಿ ರ್ಯಾಂಪ್ ವಾಕ್ ಮಾಡಿಸಿ ಸುಸ್ತು ಮಾಡಿಸಿದ್ರಂತೆ. ಆಗ ಹರ್ಷಿಕಾಗೆ ಭುವನ್ ಮೇಲೆ ಸ್ವಲ್ಪ ಕೋಪ ಕೂಡ ಬಂದಿತ್ತಂತೆ.
ಈ ಮೊದಲ ಭೇಟಿ ನಂತರ ಭುವನ್ ಹಾಗೂ ಹರ್ಷಿಕಾ ಪೂಣಚ್ಚ ಫೋನ್ ನಂಬರ್ ಎಕ್ಸ್ ಚೇಂಜ್ ಆಗಿ ಮಾತನಾಡೋದಿಕ್ಕೆ ಶುರು ಮಾಡಿದ್ರಂತೆ. ಇಬ್ಬರು ಸಿನಿಮಾ ಕ್ಷೇತ್ರದಲ್ಲಿ ಇರೋದ್ರಿಂದ ಸಿನಿಮಾ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಭೇಟಿ ಮಾಡುತ್ತಿದ್ದರಂತೆ. ಅಷ್ಟರಲ್ಲಿ ಹರ್ಷಿಕಾ ಪೂಣಚ್ಚ ಅವರ ತಂದೆ ತಾಯಿಗೆ ಭುವನ್ ಮೇಲೆ ಒಳ್ಳೆ ಅಭಿಪ್ರಾಯ ಬಂದು ಹರ್ಷಿಕಾರನ್ನು ಅವರಿಗೆ ಮದುವೆ ಮಾಡಿಕೊಡಬಹುದು ಎಂದು ಅಂದುಕೊಂಡಿದ್ದರು.
ಅಷ್ಟರಲ್ಲೇ ಹರ್ಷಿಕಾ ಪೂಣಚ್ಚಗೆ ಭುವನ್ ಜೊತೆಗಿನ ಸ್ನೇಹ ಮತ್ತಷ್ಟು ಹತ್ತಿರವಾಗಿ ಬರೋಬ್ಬರಿ 10 ವರ್ಷಗಳ ಗೆಳತನ ಈಗ ಮದುವೆ ಆಗೋ ಹಂತಕ್ಕೆ ಬಂದಿದೆ. ಭುವನ್ ಹೇಳುವಂತೆ ಹರ್ಷಿಕಾ ಅವರು ಮೊದಲು ಲವ್ ಪ್ರಪೋಸ್ ಮಾಡಿದ್ದಂತೆ. ಅದು ಕೂಡ ಒಂದೇ ದಿನ ಬೇಗ ಹೇಳಬೇಕು ಅಂತಾ ಭುವನ್ಗೆ ಹರ್ಷಿಕಾ ಆಫರ್ ಕೊಟ್ಟಿದ್ರಂತೆ. ಇನ್ನು ಹರ್ಷಿಕಾ ಇಷ್ಟ ಆದ್ದರಿಂದ ಅವರ ಕೂಡ ಓಕೆ ಆದ್ರಂತೆ.
ಆಗಸ್ಟ್ 24ರಂದು ವಿರಾಜಪೇಟೆಯಲ್ಲಿ ಭುವನ್ ಹಾಗೂ ಹರ್ಷಿಕಾ ಮದುವೆ ಅದ್ಧೂರಿಯಾಗಿ ನಡೆಯಲಿದೆ. ವಿರಾಜಪೇಟೆಯ ಅಮ್ಮತಿ ಕೊಡವ ಸಮಾಜದಲ್ಲಿ ಎರಡು ಕುಟುಂಬಗಳು ಹಾಗು ಬಂಧು ಮಿತ್ರರ ಸಮ್ಮುಖದಲ್ಲಿ ಶುಭಕಾರ್ಯ ನೆರವೇರಲಿದೆ. ಕೊಡಗು ಸಂಪ್ರದಾಯದಂತೆಯೇ ಇಬ್ಬರೂ ಮದುವೆ ಆಗುತ್ತಿದ್ದು, ಮುಹೂರ್ತ ಕಾರ್ಯಗಳು ಬಹುತೇಕ ಕೊಡಗಿನಲ್ಲೇ ನಡೆಯಲಿವೆ. ಈ ಜೋಡಿ ಮದುವೆಗೆ ಬಹುತೇಕ ಸ್ಯಾಂಡಲ್ವುಡ್ ತಾರೆಯರು ಸಾಕ್ಷಿಯಾಗಲಿದ್ದಾರೆ.
ಇದನ್ನೂ ಓದಿ: ಒಲವಿನ ಹಾರೈಕೆಗೆ ಪ್ರೀತಿಯ ಕರೆಯೋಲೆ.. ಮದುವೆಗೆ ಗಣ್ಯರ ಆಹ್ವಾನಿಸಿದ 'ಹರ್ಷಿವನ್' ಜೋಡಿ