ETV Bharat / entertainment

ಕಬೀರ್ ಖಾನ್ ನಿರ್ದೇಶನದ ಸಿನಿಮಾದಲ್ಲಿ ಭುವನ್ ಅರೋರಾ, ಕಾರ್ತಿಕ್ ಆರ್ಯನ್ ಜೊತೆ ನಟನೆ

author img

By

Published : May 31, 2023, 5:35 PM IST

Farzi ಖ್ಯಾತಿಯ ನಟ ಭುವನ್ ಅರೋರಾ ಕಬೀರ್ ಖಾನ್ ಅವರ ಮುಂದಿನ ಸಿನಿಮಾದಲ್ಲಿ ನಟಿಸಲು ಸಿದ್ಧರಾಗಿದ್ದಾರೆ. ನಟ ಕಾರ್ತಿಕ್ ಆರ್ಯನ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ.

bhuvan arora in kabir khan next film
ಕಬೀರ್ ಖಾನ್ ನಿರ್ದೇಶನದ ಸಿನಿಮಾದಲ್ಲಿ ಭುವನ್ ಅರೋರಾ

ಮುಂಬೈ: ಹಿಟ್ ಸ್ಟ್ರೀಮಿಂಗ್ ಶೋ ಫಾರ್ಜಿ (Farzi) ಯಲ್ಲಿ ತಮ್ಮ ಕೆಲಸದಿಂದ ಪ್ರೇಕ್ಷಕರನ್ನು ಮೋಡಿ ಮಾಡಿದ ನಟ ಭುವನ್ ಅರೋರಾ (Bhuvan Arora) ಅವರು ಮುಂದೆ ಸ್ಟಾರ್ ನಿರ್ದೇಶಕ ಕಬೀರ್ ಖಾನ್ ಅವರ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ಭುವನ್ ಅರೋರಾ ಅವರು ಬಾಲಿವುಡ್ ಸ್ಟಾರ್ ಕಾರ್ತಿಕ್ ಆರ್ಯನ್ ಜೊತೆ ಕೆಲಸ ಮಾಡಲಿದ್ದಾರೆ. ಕಬೀರ್ ಖಾನ್​​ ಭಜರಂಗಿ ಭಾಯಿಜಾನ್, ಏಕ್ ಥಾ ಟೈಗರ್ ಮತ್ತು 83 ನಂತಹ ಚಿತ್ರಗಳನ್ನು ನಿರ್ದೇಶಿಸಿ ಹೆಸರುವಾಸಿ ಆಗಿದ್ದಾರೆ.

ಬಹುಬೇಡಿಕೆ ನಟ ಕಾರ್ತಿಕ್ ಆರ್ಯನ್ ಅವರೊಂದಿಗೆ ಸಹ ನಾಯಕರಾಗಿ, ಭುವನ್ ಅರೋರಾ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮುಂಬರುವ ಯೋಜನೆ, ಕಬೀರ್ ಖಾನ್ ಮತ್ತು ಕಾರ್ತಿಕ್​ ಆರ್ಯನ್​​ ಜೊತೆ ಕೆಲಸ ಮಾಡುವ ಬಗ್ಗೆ ಮಾಧ್ಯಮಗಳೊಂದಿಗೆ ನಟ ಭುವನ್ ಅರೋರಾ ತಮ್ಮ ಉತ್ಸಾಹ ವ್ಯಕ್ತಪಡಿಸಿದ್ದಾರೆ. "ಕಬೀರ್ ಸರ್ ಅವರೊಂದಿಗೆ ಕೆಲಸ ಮಾಡಲು ನಾನು ಬಹಳ ಉತ್ಸುಕನಾಗಿದ್ದೇನೆ ಮತ್ತು ಇದು ನನಗೆ ಅತ್ಯಂತ ಸಂತೋಷಕರ ವಿಷಯ. ನಾನು ಯಾವಾಗಲೂ ಅವರ ಚಲನಚಿತ್ರಗಳು ಮತ್ತು ಅವರು ಹೇಳಲು ಬಯಸುವ ಕಥೆಗಳ ಆಯ್ಕೆ ಕುರಿತು ಮೆಚ್ಚುಗೆ ವ್ಯಕ್ತಪಡಿಸುತ್ತೇನೆ" ಎಂದು ಹೇಳಿದ್ದಾರೆ.

ನಟ ಭುವನ್ ಅರೋರಾ ಅವರು ಮತ್ತಷ್ಟು ಮಾತನಾಡಿ, "ಇದು ತುಂಬಾ ಸವಾಲಿನ ಚಿತ್ರವಾಗಿದ್ದು, ಸಾಕಷ್ಟು ಪೂರ್ವಸಿದ್ಧತಾ ಕೆಲಸದ ಅಗತ್ಯ ಇರುತ್ತದೆ. ಮುಂಬರುವ ಈ ಚಿತ್ರವು ನೈಜ ಕಥೆಯನ್ನು ಆಧರಿಸಿದೆ. ನಾನು ಈವರೆಗೆ ಎಂದಿಗೂ ನಟಿಸದ ಹೊಸ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತೇನೆ" ಎಂದು ತಿಳಿಸಿದ್ದಾರೆ. ಹಾಗಾಗಿ ಸಹಜವಾಗಿ ಅಭಿಮಾನಿಗಳಲ್ಲಿ ಕುತೂಹಲ ಮೂಡಿದೆ. ಇದಕ್ಕೂ ಮೊದಲು, ಸ್ಟ್ರೀಮಿಂಗ್ ಸೀರಿಸ್​ ಫಾರ್ಜಿಯಲ್ಲಿ ( Farzi ) ತನ್ನ ನಟನೆಯಿಂದ ವೀಕ್ಷಕರನ್ನು ಆಕರ್ಷಿಸಿದ ಯುವ ನಟನಿಗೆ IMDb ಇಂದ STARmeter ಪ್ರಶಸ್ತಿಯನ್ನು ನೀಡಲಾಯಿತು.

ಇದನ್ನೂ ಓದಿ: ಉಚಿತ ಅಕ್ಕಿ ಕೊಟ್ಟರೆ ಸೋಮಾರಿಗಳಾಗ್ತಾರೆ ಎಂಬುದು ತಪ್ಪು ಹೇಳಿಕೆ: ಡಾಲಿ ಧನಂಜಯ್

ಮುಂಬರುವ ಈ ಬಿಗ್​ ಬಜೆಟ್ ಚಲನಚಿತ್ರವನ್ನು ಸಾಜಿದ್ ನಾಡಿಯಾಡ್ವಾಲಾ ನಿರ್ಮಿಸುತ್ತಿದ್ದಾರೆ. ಅವರು ಕಾರ್ತಿಕ್ ಆರ್ಯನ್​ ಅವರ ಮುಂಬರುವ ಚಿತ್ರ 'ಸತ್ಯ ಪ್ರೇಮ್ ಕಿ ಕಥಾ'ವನ್ನು ಸಹ ನಿರ್ಮಿಸಿದ್ದಾರೆ. ಇದರಲ್ಲಿ ಕಾರ್ತಿಕ್ ಆರ್ಯನ್​ ಅವರ ಭೂಲ್ ಭುಲೈಯಾ 2 ಸಹ ನಟಿ ಕಿಯಾರಾ ಅಡ್ವಾಣಿ ಅವರೊಂದಿಗೆ ಜೊತೆಗೆ ತೆರೆ ಹಂಚಿಕೊಂಡಿದ್ದಾರೆ.

'ಸತ್ಯ ಪ್ರೇಮ್ ಕಿ ಕಥಾ' ಕಾರ್ತಿಕ್​ ಕಿಯಾರಾ ಅವರ ಎರಡನೇ ಚಿತ್ರ. ಭೂಲ್ ಭುಲೈಯಾ 2 ಸಿನಿಮಾ ಯಶಸ್ವಿ ಆಗಿದ್ದು, ಈ ಜೋಡಿಯ ಮುಂದಿನ ಚಿತ್ರದ ಮೇಲೂ ಸಾಕಷ್ಟು ನಿರೀಕ್ಷೆಗಳಿವೆ. ಭುವನ್ ಅರೋರಾ, ಕಾರ್ತಿಕ್​ ಆರ್ಯನ್​​, ಕಬೀರ್ ಖಾನ್ ಕಾಂಬಿನೇಶನ್​ನ ಸಿನಿಮಾ ಕುರಿತು ಶೀಘ್ರದಲ್ಲೇ ಚಿತ್ರತಂಡ ಮಾಹಿತಿ ಹಂಚಿಕೊಳ್ಳಲಿದೆ.

ಇದನ್ನೂ ಓದಿ: ಕೆಂಗುಲಾಬಿಯಂತೆ ಕಂಗೊಳಿಸಿದ ರಾಗಿಣಿ ದ್ವಿವೇದಿ: ಚೆಲುವೆಯ ಚಿತ್ತಾರ ನೋಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.