ಬೆಂಗಳೂರು: ಬಾಲಿವುಡ್ ನಟಿ ಭೂಮಿ ಪಡ್ನೇಕರ್ ತನ್ನ ರೂಮರ್ ಬಾಯ್ಫ್ರೆಂಡ್ ಜೊತೆ ಡಿನ್ನರ್ನಲ್ಲಿ ಕಾಣಿಸಿಕೊಂಡಿದ್ದಾರೆ. ಬಿಲ್ಡರ್ ಮತ್ತು ವಾಣಿಜ್ಯೋದ್ಯಮಿಯಾಗಿರುವ ಯಶ್ ಕತಾರಿಯಾ ಜೊತೆ ಗುರುವಾರ ಮುಂಬೈನಲ್ಲಿ ಕಾಣಿಸಿಕೊಂಡಿದ್ದಾರೆ. ಭೂಮಿಯ ಸಹೋದರಿ ಸಮೀಕ್ಷಾ ಪಡ್ನೆಕರ್ ಮತ್ತು ಆಕೆಯ ಸ್ನೇಹಿತರ ಜೊತೆಗೆ ಅವರು ಊಟಕ್ಕೆ ಹೋಗಿದ್ದಾರೆ. ಈ ವಿಡಿಯೋವನ್ನು ಪ್ಯಾಪಾರಾಜಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಭೂಮಿ ಮತ್ತು ಸಮೀಕ್ಷಾ ಪ್ಯಾಪಾರಾಜಿಗಳ ಕ್ಯಾಮೆರಾಗೆ ಫೋಸ್ ನೀಡಿದ್ದರೆ, ಯಶ್ ಮಾತ್ರ ಕ್ಯಾಮೆರಾದಿಂದ ದೂರ ಸರಿದಿದ್ದಾರೆ.
ಇನ್ನು ಈ ವೇಳೆ ಭೂಮಿ ಮತ್ತು ಯಶ್ ಇಬ್ಬರೂ ಕಪ್ಪು ಬಣ್ಣದ ಉಡುಗೆಯಲ್ಲಿ ಮಿಂಚಿದ್ದಾರೆ. ಭೂಮಿ ಮಿಡಲ್-ಲೆನ್ತ್ ಸ್ಲಿಟ್ ಡ್ರೆಸ್ನಲ್ಲಿ ಕಾಣಿಸಿಕೊಂಡಿದ್ದು, ಇದಕ್ಕೆ ಜಾಕೆಟ್ ಧರಿಸಿದ್ದಾರೆ. ಸಮೀಕ್ಷಾ ಲಟೆಕ್ಸ್ ಶರ್ಟ್ ತೊಟ್ಟು ಅದಕ್ಕೆ ಹೊಂದಿಕೆಯಾಗುವಂತೆ ಪ್ಯಾಂಟ್ ಧರಿಸಿದ್ದಾರೆ. ಯಶ್ ಕೂಡ ಕಪ್ಪು ಬಣ್ಣದ ಶರ್ಟ್, ನೀಲಿ ಬಣ್ಣದ ಜೀನ್ಸ್ ಫ್ಯಾಂಟ್ನಲ್ಲಿ ಕಂಡು ಬಂದಿದ್ದಾರೆ.
ಈ ಮೊದಲು ಯಶ್ ಮತ್ತು ಭೂಮಿ ಮುಂಬೈನ ಏರ್ಪೋರ್ಟ್ನಲ್ಲಿ ಕಾಣಿಸಿಕೊಂಡಿದ್ದರು. ಇಬ್ಬರು ಪಾರ್ಕಿಂಗ್ ಸ್ಥಳದಲ್ಲಿ ಪ್ರತ್ಯೇಕವಾಗಿ ನಡೆದು ಹೋಗುತ್ತಿದ್ದರು. ಇವರಿಬ್ಬರು ಮೊದಲ ಬಾರಿಗೆ ನಟ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅದ್ವಾನಿ ಅವರ ಮದುವೆ ಆರತಕ್ಷತೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಯಶ್ ಕತಾರಿಯಾ, ಭೂಮಿಗೆ ಮುತ್ತಿಕ್ಕುತ್ತಿರುವ ವಿಡಿಯೋಗಳು ಬಹಳ ಸುದ್ದಿಯಾಗಿದ್ದವು. ಅನೇಕ ಗಾಳಿ ಸುದ್ದಿಗಳ ನಡುವೆಯೂ ಈ ಜೋಡಿ ತಮ್ಮ ಸಂಬಂಧದ ಬಗ್ಗೆ ಯಾವುದೇ ಮಾಹಿತಿಯನ್ನು ಅಧಿಕೃತಪಡಿಸಿಲ್ಲ.
ಯಶ್ ಬಿಲ್ಡರ್ ಆಗಿದ್ದು, ಸಿನಿ ಉದ್ಯಮದಲ್ಲಿ ನಟಿ ರಾಕುಲ್ ಪ್ರೀತ್ ಸಿಂಗ್, ಜಾಕಿ ಭಗ್ನಾನಿ ಸೇರಿದಂತೆ ಇತರರ ಪರಿಚಯವನ್ನು ಹೊಂದಿದ್ದಾರೆ. ಅಲ್ಲದೇ, ಯಶ್ ಇನ್ಸ್ಟಾದಲ್ಲಿ ನಟಿ ಭೂಮಿ, ಅರ್ಜುನ್ ಕಪೂರ್ ಮತ್ತು ಅರ್ಜುನ್ ಕಪೂರ್ ಮತ್ತು ಆರ್ಯನ್ ಖಾನ್ ಸೇರಿದಂತೆ ಹಲವರನ್ನು ಹಿಂಬಾಲಿಸುತ್ತಿದ್ದಾರೆ.
ಭೂಮಿ ಪಡ್ನೇಕರ್ ಕಡೆಯದಾಗಿ ಅಫ್ವಾಹ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಸುಧೀರ್ ಮಿಶ್ರಾ ನಿರ್ದೇಶನದ ಈ ಚಿತ್ರದಲ್ಲಿ ನಟ ನಾಸಿರುದ್ಧೀನ್ ಶಾ ಸಿದ್ಧಿಕಿ, ಶಾರಿಬ್ ಹಶ್ಮಿ ಹಾಗೂ ಸುಮಿತ್ ವ್ಯಾಸ್ ಕೂಡ ಕಾಣಿಸಿಕೊಂಡಿದ್ದರು. ಭೂಮಿ ಪ್ರಸ್ತುತ ಸದ್ಯ, ದಿ ಲೇಡಿ ಕಿಲ್ಲರ್, ಮೇರಿ ಪತ್ನಿ ಕ ರಿಮೇಕ್ ಮತ್ತು ಭಕ್ಷಕ್ ನಲ್ಲಿ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ.
ಧಮ್ ಲಗಾಕೆ ಐಸಾ ಚಿತ್ರದಲ್ಲಿ ಮೊದಲ ಬಾರಿಗೆ ನಟ ಆಯುಷ್ಮಾನ್ ಖುರಾನಾ ಜೊತೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರದ ಬಳಿಕ ತಮ್ಮ ತೂಕವನ್ನು 90 ಕೆಜಿ ಇಳಿಸಿಕೊಂಡು ಎಲ್ಲರನ್ನು ಹುಬ್ಬೇರುವಂತೆ ಮಾಡಿದ್ದರು. ಅನೇಕ ವಿಧದ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಭೂಮಿ ಗುರುತಿಸಿಕೊಂಡಿದ್ದಾರೆ. ಪಾತ್ರಗಳಿಗಿಂತ ಕೆಲಸದಿಂದಾಗಿ ಉದ್ಯಮದಲ್ಲಿ ನಾನು ಗುರುತಿಸಿಕೊಳ್ಳಲು ಇಷ್ಟಪಡುತ್ತೇನೆ. ಇದೇ ಕಾರಣಕ್ಕೆ ನಾನು ವಿವಿಧ ರೀತಿಯ ಪಾತ್ರಗಳನ್ನು ಆಯ್ಕೆ ಮಾಡುತ್ತೇನೆ. ಅದೇ ನನಗೆ ಇಷ್ಟ ಎಂದು ಸಂದರ್ಶನವೊಂದರಲ್ಲಿ ತಿಳಿಸಿದ್ದರು.
ಇದನ್ನೂ ಓದಿ: 'ಶಾರುಖ್ ಖಾನ್ಗೆ ನಟನೆ ಗೊತ್ತಿಲ್ಲ, ಸುಂದರವಾಗಿಲ್ಲ': ಪಾಕಿಸ್ತಾನಿ ನಟಿ ತರಾಟೆಗೆ ತೆಗೆದುಕೊಂಡ ಫ್ಯಾನ್ಸ್