ETV Bharat / entertainment

ಬಾಕ್ಸ್​ ಆಫೀಸ್​ನಲ್ಲಿ ಓಟ ಮುಂದುವರಿಸಿದ 'ಭೋಲಾ'.. ಯಶಸ್ಸಿನಲೆಯಲ್ಲಿ ಅಜಯ್ ದೇವ್​​ಗನ್ ತಂಡ - ಭೋಲಾ ಬಾಕ್ಸ್ ಆಫೀಸ್ ಕಲೆಕ್ಷನ್​

ಅಜಯ್ ದೇವ್​​ಗನ್ ಅವರ ಭೋಲಾ ಚಿತ್ರ 59.68 ಕೋಟಿ ರೂ. ಕಲೆಕ್ಷನ್​ ಮಾಡಿದೆ. ​

bholaa box office collection
ಭೋಲಾ ಕಲೆಕ್ಷನ್​
author img

By

Published : Apr 9, 2023, 1:26 PM IST

ಅಜಯ್ ದೇವ್​ಗನ್​​ ಅಭಿನಯದ ಭೋಲಾ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ತಮ್ಮ ಓಟ ಮುಂದುವರಿಸಿದೆ. ಮೊದಲ ವಾರದಲ್ಲೇ 59.68 ಕೋಟಿ ಗಳಿಸಿದ್ದ ಭೋಲಾ ಚಿತ್ರ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ವರದಿಗಳ ಪ್ರಕಾರ, ಚಿತ್ರವು ಶುಕ್ರವಾರ 3.60 ಕೋಟಿ ರೂ. ಮತ್ತು ಶನಿವಾರ 4.25 ಕೋಟಿ ರೂ. ಗಳಿಸಿದೆ. ಈ ಮೂಲಕ ಮೊದಲ ಹತ್ತು ದಿನಗಳಲ್ಲಿ ಒಟ್ಟು 67.53 ಕೋಟಿ ರೂ ಕಲೆಕ್ಷನ್​​ ಮಾಡಿದೆ. ಲೋಕೇಶ್ ಕನಗರಾಜ್ ನಿರ್ದೇಶನದ ತಮಿಳಿನ ಹಿಟ್ ಕೈತಿ ಚಿತ್ರದ ರಿಮೇಕ್ ಆಗಿರುವ ಭೋಲಾ ಮಾರ್ಚ್​ 30ರಂದು 3D ಮತ್ತು 2Dನಲ್ಲಿ ತೆರೆಕಂಡು ಉತ್ತಮ ಪ್ರದರ್ಶನ ಮುಂದುವರಿಸಿದೆ.

ಭೋಲಾ ಸಿನಿಮಾ 2023ರಲ್ಲಿ ಭರ್ಜರಿ ಓಪನಿಂಗ್ ಪಡೆದಿರುವ ಮೂರನೇ ಬಾಲಿವುಡ್​​ ಸಿನಿಮಾ. ಮೊದಲ ದಿನದಲ್ಲಿ 57 ಕೋಟಿ ರೂ. ಗಳಿಸಿದ್ದ ಪಠಾಣ್​​, 15.73 ಕೋಟಿ ರೂ. ಗಳಿಸಿದ ತು ಜೂಟಿ ಮೈ ಮಕ್ಕರ್ ಬಳಿಕ ಭೋಲಾ ಉತ್ತಮ ಕಲೆಕ್ಷನ್​ ಮಾಡುತ್ತಿದೆ.

ಗುರುವಾರ (ಮಾರ್ಚ್ 30) ಚಿತ್ರವು 11.2 ಕೋಟಿ ರೂ. ಗಳಿಸಿತು. ಯು ಮಿ ಔರ್ ಹಮ್ (2008), ಶಿವಾಯ್ (2016) ಮತ್ತು ರನ್​ ವೇ 34 (2022)ರ ನಂತರ 'ಭೋಲಾ' ಅಜಯ್ ದೇವ್​ಗನ್​​ ನಿರ್ದೇಶನದ ನಾಲ್ಕನೇ ಚಿತ್ರ. ಆ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ನೀಡಲಿಲ್ಲ. 'ಭೋಲಾ' ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದರೂ ಸಹ, ಅಜಯ್ ಅವರ ಹಿಂದಿನ ಚಿತ್ರಕ್ಕೆ ಹೋಲಿಸಿದರೆ ಕೊಂಚ ಕಡಿಮೆ ಎನ್ನಬಹುದು. ಅವರ ಕೊನೆಯ ದೃಶ್ಯಂ 2 ಚಿತ್ರ ವಿಶ್ವದಾದ್ಯಂತ 340 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್​ ಮಾಡುವ ಮೂಲಕ ಯಶಸ್ಸು ಕಂಡಿತ್ತು. ಆದಾಗ್ಯೂ, ಏಪ್ರಿಲ್ 21 ರಂದು ಸಲ್ಮಾನ್ ಖಾನ್ ಅವರ ಬಹು ನಿರೀಕ್ಷಿತ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಬಿಡುಗಡೆಯಾಗುವವರೆಗೂ ಭೋಲಾ ಕಲೆಕ್ಷನ್​ಗೆ ಯಾವುದೇ ಅಡ್ಡಿಯಿಲ್ಲ.

ಇದನ್ನೂ ಓದಿ: ಭಾರಿ ಮಳೆಯಲ್ಲೇ ನಿರ್ಗತಿಕರಿಗೆ ಅಗತ್ಯ ವಸ್ತುಗಳನ್ನು ವಿತರಿಸಿದ ನಯನತಾರಾ, ವಿಘ್ನೇಶ್ ಶಿವನ್..

ದೃಶ್ಯಂ 2 ಕಳೆದ ಸಾಲಿನ ಕೆಲ ಬಾಲಿವುಡ್ ಹಿಟ್‌ಗಳಲ್ಲಿ ಒಂದು. ಈ ಚಿತ್ರ ಅಜಯ್​ ದೇವ್​ಗನ್​ ಅವರ ಜನಪ್ರಿಯತೆ ಹೆಚ್ಚಿಸಿದೆ. ಜಗತ್ತಿನಾದ್ಯಂತ ಸುಮಾರು 340 ಕೋಟಿ ರೂ. ಸಂಪಾದಿಸುವಲ್ಲಿ ಯಶಸ್ವಿಯಾಗಿದೆ. ರುದ್ರ: ದಿ ಎಡ್ಜ್ ಆಫ್ ಡಾರ್ಕ್‌ನೆಸ್‌ ಎಂಬ ಚೊಚ್ಚಲ ಸೀರಿಸ್​​ನಲ್ಲಿ ಹೆಸರು ಮಾಡಿದ್ದಾರೆ. ಆಸ್ಕರ್ ವಿಜೇತ ಹಾಡಿನ ಸಿನಿಮಾ ಆರ್​ಆರ್​ಆರ್​ನಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದಾರೆ. ಸಿಂಘಮ್‌ನ ಮುಂದಿನ ಅಧ್ಯಾಯಕ್ಕೂ ಸಿದ್ಧತೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ವೀಕೆಂಡ್​ ವಿತ್​ ರಮೇಶ್..​​ ಸಾಧಕರ ಸೀಟ್​ಗೆ ಮತ್ತಷ್ಟು ಮೆರುಗು ತಂದುಕೊಟ್ಟ ಡಾ. ಮಂಜುನಾಥ್​

ಅಜಯ್​ ದೇವ್​ಗನ್​​ ಬಾಲಿವುಡ್​ ಬಹು ಬೇಡಿಕೆ ನಟರಲ್ಲಿ ಒಬ್ಬರು. ನಟನೆ ಮಾತ್ರವಲ್ಲದೇ ನಿರ್ದೇಶನದಲ್ಲೂ ಸೈ ಎನಿಸಿಕೊಂಡಿದ್ದಾರೆ. ಸದ್ಯ ಸದ್ದು ಮಾಡುತ್ತಿರುವ ಭೋಲಾ ಚಿತ್ರವನ್ನು ಅಜಯ್ ದೇವ್​ಗನ್ ಸ್ವತಃ ನಿರ್ದೇಶಿಸಿ, ನಟಿಸಿದ್ದಾರೆ. ಸುಮಾರು 200 ಕೋಟಿ ಬಜೆಟ್​ನಲ್ಲಿ ನಿರ್ಮಾಣ ಆಗಿರುವ ಈ ಚಿತ್ರದಲ್ಲಿ ಅಜಯ್ ದೇವ್​​ಗನ್ ಜೊತೆ ಟಬು ಸೇರಿದಂತೆ ದಕ್ಷಿಣ ನಟಿ ಅಮಲಾ ಪೌಲ್, ಲಕ್ಷ್ಮಿ ಮತ್ತು ಮಾರ್ಕಂಡಾ ದೇಶಾಪಾಂಡೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.