90ರ ದಶಕದಲ್ಲಿ ಕನ್ನಡದ ಬಹು ಬೇಡಿಕೆ ನಟಿಯಾಗಿ ಬೆಳ್ಳಿತೆರೆ ಮೇಲೆ ಮಿಂಚಿದ ನಟಿ ಭವ್ಯ. ತಮ್ಮ ಗ್ಲ್ಯಾಮರ್ ಜೊತೆಗೆ ಉತ್ತಮ ಪಾತ್ರಗಳಿಂದ ಕನ್ನಡಿಗರ ಮನ ಗೆದ್ದಿರುವ ಭವ್ಯ ಇಂದಿಗೂ ಕನ್ನಡ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಇದೀಗ ಯುವ ನಿರ್ದೇಶಕ ಎಂ. ಶಂಕರ್ ನಿರ್ದೇಶನ 'ಮುದುಡಿದ ಎಲೆಗಳು' ಎಂಬ ಚಿತ್ರದಲ್ಲಿ ಹಿರಿಯ ನಟಿ ಭವ್ಯ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.
'ಮುದುಡಿದ ಎಲೆಗಳು' ಮುಹೂರ್ತ ಸಮಾರಂಭ: ಈ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಕಂಠೀರವ ಸ್ಟುಡಿಯೋದಲ್ಲಿ ನಡೆಯಿತು. ಹಿರಿಯ ಸಿನಿಮಾ ಪ್ರಚಾರಕರ್ತ ಸುಧೀಂದ್ರ ವೆಂಕಟೇಶ್ ಚಿತ್ರದ ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರು. ಚಿತ್ರತಂಡದವರು ಹಾಗೂ ಅನೇಕ ಗಣ್ಯರು ಮುಹೂರ್ತ ಸಮಾರಂಭದಲ್ಲಿ ಭಾಗಿ ಆಗಿದ್ದರು.
ಬೆಂಗಳೂರಿನಲ್ಲಿ ಒಂದೇ ಹಂತದ ಚಿತ್ರೀಕರಣ: ಈ ಚಿತ್ರದ ಕುರಿತು ಮೊದಲು ಮಾತನಾಡಿದ ನಿರ್ಮಾಪಕ ಹಾಗೂ ನಿರ್ದೇಶಕ ಎಂ. ಶಂಕರ್, ನಮ್ಮ ರಿಯೊ ಪ್ರೊಡಕ್ಷನ್ ಮೂಲಕ ನಿರ್ಮಾಣವಾಗುತ್ತಿರುವ ಮೊದಲ ಚಿತ್ರವಿದು. ನನ್ನ ಪತ್ನಿ ರಂಜನಿ ಈ ಚಿತ್ರದ ಸಹ ನಿರ್ಮಾಪಕಿ. ಮನುಷ್ಯ ದಿನನಿತ್ಯ ಎದುರಿಸುವ ಸಮಸ್ಯೆಗಳನ್ನು ಕೇಂದ್ರವಾಗಿಟ್ಟುಕೊಂಡು ಕಥೆ ಬರೆದಿದ್ದೇನೆ. "ಮುದುಡಿದ ಎಲೆಗಳು" ಹೇಗೆ ಚದರಿ ಹೋಗುತ್ತವೆ, ಮತ್ತೆ ಹೇಗೆ ಒಂದಾಗುತ್ತವೆ? ಎಂಬ ಅಂಶವನ್ನು ನಮ್ಮ ಈ ಕಥೆ ಆಧರಿಸಿದೆ. 30 ದಿನಗಳ ಒಂದೇ ಹಂತದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯಲಿದೆ. ಹಾಡುಗಳನ್ನು ಕರ್ನಾಟಕದ ಸುಂದರ ತಾಣಗಳಲ್ಲಿ ಚಿತ್ರೀಕರಣ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ.
ಇದನ್ನೂ ಓದಿ: ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಬರಗೂರು ರಾಮಚಂದ್ರಪ್ಪರ 'ಚಿಣ್ಣರ ಚಂದ್ರ' ಸಿನಿಮಾ ಸದ್ದು
'ಮುದುಡಿದ ಎಲೆಗಳು' ಚಿತ್ರತಂಡ ಕುರಿತು; ಈ ಚಿತ್ರದಲ್ಲಿ ಹಿರಿಯ ನಟಿ ಭವ್ಯ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ರಂಜಿತ್ ಕುಮಾರ್, ಪಂಕಜ್ ಎಸ್ ನಾರಾಯಣ್ ಹಾಗೂ ದರ್ಶನ್ ಸೂರ್ಯ ಸೇರಿ ಮೂವರು ನಾಯಕರು ಕಾಣಿಸಿಕೊಳ್ಳಲಿದ್ದಾರೆ. ಊರ್ವಶಿ ರಾಯ್, ಸೀಮಾ ವಸಂತ್ ಹಾಗೂ ಸುಶ್ಮಿತ ನಾಯಕಿಯರು. ಶೋಭ್ ರಾಜ್, ಶಂಕರ್ ಅಶ್ವಥ್, ಹರ್ಷಿಕಾ ಪೂಣಚ್ಚ, ಸಂತೋಷ್ ರೆಡ್ಡಿ, ಅಮಿತ್ ರಾಜ್ ಸೇರಿದಂತೆ ಮುಂತಾದವರು ತಾರಾಬಳಗದಲ್ಲಿದ್ದಾರೆ. ಈ ಚಿತ್ರಕ್ಕೆ ಶ್ಯಾಮ್ ಸಿಂಧನೂರು ಹಾಗೂ ವಿಕಾಸ್ ವಸಿಷ್ಠ ಅವರ ಛಾಯಾಗ್ರಹಣ ಇರಲಿದೆ. ರಮೇಶ್ ಕೋಟೆ ಅಹ ಸಹ ನಿರ್ದೇಶವಿರಲಿದೆ. ಶೀಘ್ರದಲ್ಲೇ ಈ ಮುದುಡಿದ ಎಲೆಗಳು ಚಿತ್ರದ ಚಿತ್ರೀಕರಣ ಶುರುವಾಗಲಿದೆ.
ಇದನ್ನೂ ಓದಿ: ಭಾರತದ ಸೌಂದರ್ಯ ಪಸರಿಸಿದ ಶ್ವೇತಾ ಶಾರ್ದಾ: ಆಕರ್ಷಕ ವೇಷಭೂಷಣದಲ್ಲಿ ಭುವನ ಸುಂದರಿ ಸ್ಪರ್ಧಿಗಳು