ಟಾಲಿವುಡ್ ಪ್ರಸಿದ್ಧ ನಟ ನಂದಮೂರಿ ಬಾಲಕೃಷ್ಣ ಅವರ ಬಹುನಿರೀಕ್ಷಿತ ಚಿತ್ರ 'ಭಗವಂತ ಕೇಸರಿ' ಇಂದು ತೆರೆಗಪ್ಪಳಿಸಿದೆ. ಅನಿಲ್ ರವಿಪುಡಿ ಆ್ಯಕ್ಷನ್ ಕಟ್ ಹೇಳಿರುವ 'ಭಗವಂತ ಕೇಸರಿ' ಗುರುವಾರ (ಅಕ್ಟೋಬರ್ 19) ಬಿಡುಗಡೆ ಆಗಿದ್ದು, ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಖ್ಯಾತನಾಮರ ಮೂರು ಸಿನಿಮಾಗಳು ಬಿಡುಗಡೆ: ಬಾಲಯ್ಯ ಅಭಿನಯದ 'ಭಗವಂತ ಕೇಸರಿ' 2023ರ ಬಹುನಿರೀಕ್ಷಿತ ಚಿತ್ರಗಳಲ್ಲೊಂದು. ಸಿನಿಮಾ ಬಿಡುಗಡೆಗೂ ಮುನ್ನವೇ ಕಾಸ್ಟ್, ಟೈಟಲ್, ಟೀಸರ್, ಟ್ರೇಲರ್, ಪೋಸ್ಟರ್ ಸಲುವಾಗಿ ಸದ್ದು ಮಾಡಿತ್ತು. ಇಂದು ಕರುನಾಡ ಚಕ್ರವರ್ತಿ ಶಿವ ರಾಜ್ಕುಮಾರ್ ಅಭಿನಯದ 'ಘೋಸ್ಟ್' ಹಾಗೂ ದಳಪತಿ ವಿಜಯ್ ಮುಖ್ಯಭೂಮಿಕೆಯ 'ಲಿಯೋ' ಸಿನಿಮಾ ಕೂಡ ತೆರೆಕಂಡಿದೆ. ಸಖತ್ ಸದ್ದು ಮಾಡುತ್ತಿರುವ ಈ ಸಿನಿಮಾಗಳ ಜೊತೆಗೆ ನಂದಮೂರಿ ಬಾಲಕೃಷ್ಣ ಮುಖ್ಯಭೂಮಿಕೆಯ 'ಭಗವಂತ ಕೇಸರಿ' ಸಹ ಉತ್ತಮ ಪ್ರದರ್ಶನ ಕಾಣುತ್ತಿದೆ. ಒಂದೇ ದಿನ ದಕ್ಷಿಣ ಚಿತ್ರರಂಗದ ಖ್ಯಾತನಾಮರ ಮೂರು ಸಿನಿಮಾಗಳು ತೆರೆಕಂಡು ಉತ್ತಮ ಪ್ರದರ್ಶನ ಕಾಣುತ್ತಿರೋದು ವಿಶೇಷ.
-
#BhagavanthKesari 4AM shows Mass celebration's 💥🔥
— manabalayya.com (@manabalayya) October 19, 2023 " class="align-text-top noRightClick twitterSection" data="
Hatrick BlockBusters 🥁🥁#JaiBalayya 🤙🤙#NandamuriBalakrishna #BlockBusterBhagavanthKesari pic.twitter.com/Jfmcga0hx9
">#BhagavanthKesari 4AM shows Mass celebration's 💥🔥
— manabalayya.com (@manabalayya) October 19, 2023
Hatrick BlockBusters 🥁🥁#JaiBalayya 🤙🤙#NandamuriBalakrishna #BlockBusterBhagavanthKesari pic.twitter.com/Jfmcga0hx9#BhagavanthKesari 4AM shows Mass celebration's 💥🔥
— manabalayya.com (@manabalayya) October 19, 2023
Hatrick BlockBusters 🥁🥁#JaiBalayya 🤙🤙#NandamuriBalakrishna #BlockBusterBhagavanthKesari pic.twitter.com/Jfmcga0hx9
ಮಿಶ್ರ ಪ್ರತಿಕ್ರಿಯೆ: ಚಿತ್ರಮಂದಿರಗಳಿಗೆ ಇಂದು ಲಗ್ಗೆ ಇಟ್ಟಿರುವ 'ಭಗವಂತ ಕೇಸರಿ' ಸಿನಿಮಾಗೆ ಅನಿಲ್ ರವಿಪುಡಿ ಆ್ಯಕ್ಷನ್ ಕಟ್ ಹೇಳಿದ್ದು, ಬಣ್ಣದ ಲೋಕದ ಬ್ಯೂಟಿ ಕಾಜಲ್ ಅಗರ್ವಾಲ್, ಗ್ಲ್ಯಾಮರ್ ಕ್ವೀನ್ ಶ್ರೀಲೀಲಾ ಜೊತೆಗೆ ಬಾಲಿವುಡ್ ನಟ ಅರ್ಜುನ್ ರಾಂಪಾಲ್ ಸಹ ಇತರೆ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಸಿನಿಮಾವನ್ನು ಶೈನ್ ಸ್ಕ್ರೀನ್ಸ್ ಬ್ಯಾನರ್ ಅಡಿಯಲ್ಲಿ ಸಾಹು ಗರಪಾಟಿ ಮತ್ತು ಹರೀಶ್ ಪೆದ್ದಿ ನಿರ್ಮಾಣ ಮಾಡಿದ್ದಾರೆ. ಬಹುಬೇಡಿಕೆ ತಾರೆಯರು ಕಾಣಿಸಿಕೊಂಡಿರುವ ಈ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿ, ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
ಸಿನಿಮಾದಲ್ಲೊಂದು ಸಂದೇಶ: ನಂದಮೂರಿ ಬಾಲಕೃಷ್ಣ ಸೇರಿದಂತೆ ಚಿತ್ರದಲ್ಲಿನ ಪ್ರಮುಖ ನಟರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರಮಂದಿರಗಳಿಗೆ ತಲುಪಿದ್ದಾರೆ. ಬಾಲಯ್ಯ ಅವರ ಡೈಲಾಗ್ಸ್, ಆ್ಯಕ್ಷನ್ ಸೀನ್ಸ್, ಎಮೋಷನಲ್ ದೃಶ್ಯಗಳು ಸಿನಿಪ್ರಿಯರ ಮನ ಗೆದ್ದಿವೆ. ಬಾಲಯ್ಯ ಅಭಿನಯದ ಸಿನಿಮಾ ಗೆಲ್ಲೋದು ಪಕ್ಕಾ ಅಂತಿದ್ದಾರೆ ಅಭಿಮಾನಿಗಳು. ಚಿಕ್ಕವಯಸ್ಸಿನಲ್ಲೇ ಗುಡ್ ಟಚ್ ಮತ್ತು ಬ್ಯಾಡ್ ಟಚ್ ಕಲಿಸಿಕೊಡುವ ಸಂದೇಶವನ್ನು ಈ ಸಿನಿಮಾ ಹೊಂದಿದ್ದು, ಫ್ಯಾಮಿಲಿ ಆಡಿಯನ್ಸ್ ಸಿನಿಮಾಗೆ ಕನೆಕ್ಟ್ ಆಗಲಿದ್ದಾರೆ ಎಂಬುದು ಚಿತ್ರತಂಡದ ವಿಶ್ವಾಸ.
-
Balakrishna & Sreeleela Look Like
— Akhanda Forever (@Akhandaforever) October 19, 2023 " class="align-text-top noRightClick twitterSection" data="
Real Father Daughter Not Only On Screen
But Also Off Screen Best Combination
Very Deep And Direct Emotional Heart Touching Family Pure Movie
🤗🤗🤗🤗🤗🤗🤗🤗🥰🥰🥰🥰🥰🥰🥰🥰#BhagavanthKesari #Sreeleela https://t.co/Mo3ZEkDuJH pic.twitter.com/oxZNKdcGua
">Balakrishna & Sreeleela Look Like
— Akhanda Forever (@Akhandaforever) October 19, 2023
Real Father Daughter Not Only On Screen
But Also Off Screen Best Combination
Very Deep And Direct Emotional Heart Touching Family Pure Movie
🤗🤗🤗🤗🤗🤗🤗🤗🥰🥰🥰🥰🥰🥰🥰🥰#BhagavanthKesari #Sreeleela https://t.co/Mo3ZEkDuJH pic.twitter.com/oxZNKdcGuaBalakrishna & Sreeleela Look Like
— Akhanda Forever (@Akhandaforever) October 19, 2023
Real Father Daughter Not Only On Screen
But Also Off Screen Best Combination
Very Deep And Direct Emotional Heart Touching Family Pure Movie
🤗🤗🤗🤗🤗🤗🤗🤗🥰🥰🥰🥰🥰🥰🥰🥰#BhagavanthKesari #Sreeleela https://t.co/Mo3ZEkDuJH pic.twitter.com/oxZNKdcGua
ಸಿನಿಮಾದ ಮೊದಲಾರ್ಧ ಸರಾಗವಾಗಿ ಸಾಗುತ್ತದೆ. ಸಾಹಸ ದೃಶ್ಯಗಳು ಮುಂದಿನ ಹಂತದಲ್ಲಿವೆ. ಸೆಕೆಂಡ್ ಆಫ್ ಎಮೋಷನ್ಸ್ ಜೊತೆ ಮಾಸ್ ಎಂಟರ್ಟೈನ್ಮೆಂಟ್ನಿಂದ ಕೂಡಿದೆ. ಬಾಲಯ್ಯ ಹಾಗೂ ಶ್ರೀಲೀಲಾ ಅವರ ನಟನೆ ಚಿತ್ರದ ಹೈಲೈಟ್ ಅಂತಾರೆ ಅಭಿಮಾನಿಗಳು. ಪಾಸಿಟಿವ್ ರೆಸ್ಪಾನ್ಸ್ ಜೊತೆಗೆ ಸಿನಿಮಾ ಕೆಲ ನೆಗೆಟಿವ್ ವಿಮರ್ಷೆಗಳನ್ನೂ ಸ್ವೀಕರಿಸಿದೆ. ಒಟ್ಟಾರೆ ಈ ಸಿನಿಮಾ ಬಾಲಯ್ಯ ಅಭಿಮಾನಿಗಳಿಗೆ ಹಬ್ಬ ಅಂತಾರೆ ಸಿನಿಮಾ ವೀಕ್ಷಿಸಿದವರು. ಪ್ರತೀ ಹುಡುಗಿಯೂ ತಮ್ಮ ತಂದೆ ತಾಯಿಯೊಂದಿಗೆ ಈ ಸಿನಿಮಾವನ್ನು ನೋಡಲೇಬೇಕು ಎಂದು ಹಲವರು ತಮ್ಮ ಸಲಹೆ ಕೊಟ್ಟಿದ್ದಾರೆ.
-
Well carved out movie. It feels like a perfect dish made by a chef who took care of every single particle that goes into the making. There's a surprise every 15 min or so. That scene where balayya tries to heat tea is hilarious and the tunnel scene stands out #BhagavanthKesari
— ctalluri (@cstalluri) October 18, 2023 " class="align-text-top noRightClick twitterSection" data="
">Well carved out movie. It feels like a perfect dish made by a chef who took care of every single particle that goes into the making. There's a surprise every 15 min or so. That scene where balayya tries to heat tea is hilarious and the tunnel scene stands out #BhagavanthKesari
— ctalluri (@cstalluri) October 18, 2023Well carved out movie. It feels like a perfect dish made by a chef who took care of every single particle that goes into the making. There's a surprise every 15 min or so. That scene where balayya tries to heat tea is hilarious and the tunnel scene stands out #BhagavanthKesari
— ctalluri (@cstalluri) October 18, 2023
ಇದನ್ನೂ ಓದಿ: 'ಘೋಸ್ಟ್' ಅಬ್ಬರ ಶುರು: ಚಿತ್ರಮಂದಿರಗಳತ್ತ ಮುಗಿಬಿದ್ದ ಸಿನಿಪ್ರಿಯರು-ಫ್ಯಾನ್ಸ್ ಸೆಲೆಬ್ರೇಶನ್ ವಿಡಿಯೋ ನೋಡಿ
ಬಾಲಯ್ಯ - ಶ್ರೀಲೀಲಾ ನಟನೆಗೆ ಫ್ಯಾನ್ಸ್ ಮೆಚ್ಚುಗೆ ಸೂಚಿಸುತ್ತಿದ್ದಾರೆ. ತೆರೆ ಮೇಲೆ ಅಪ್ಪ-ಮಗಳ ಪಾತ್ರಕ್ಕೆ ಜೀವ ತುಂಬಿದ್ದಾರೆ. ಆಫ್ ಸ್ಕ್ರೀನ್ನಲ್ಲಿಯೂ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಚಿತ್ರದಲ್ಲಿ ಸಾಕಷ್ಟು ಭಾವನಾತ್ಮಕ ಅಂಶಗಳಿವೆ. ಇದೊಂದು ಹೃದಯಸ್ಪರ್ಶಿ ಚಿತ್ರ ಎಂದು ಟ್ವಿಟರ್ ಬಳಕೆದಾರರು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ತೆರೆಗಪ್ಪಳಿಸಿದ 'ಲಿಯೋ': ಮಿಶ್ರ ಪ್ರತಿಕ್ರಿಯೆ ವ್ಯಕ್ತ - ಆರಂಭಿಕ ಟ್ವಿಟರ್ ವಿಮರ್ಶೆ ಇಲ್ಲಿದೆ
ಒಟಿಟಿಯಲ್ಲಿ ಯಾವಾಗ? ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿರುವ 'ಭಗವಂತ ಕೇಸರಿ' ಸಿನಿಮಾ ಓಟಿಟಿ ದೈತ್ಯ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಡಿಸೆಂಬರ್ ಎರಡನೇ ವಾರದಿಂದ ಲಭ್ಯ ಆಗಲಿದೆ ಎಂಬ ಮಾಹಿತಿ ಇದೆ.