ದಕ್ಷಿಣ ಚಿತ್ರರಂಗದ ಪ್ರತಿಭಾನ್ವಿತ ನಟ ನಂದಮೂರಿ ಬಾಲಕೃಷ್ಣ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 64ನೇ ಜನ್ಮದಿನ ಆಚರಿಸಿಕೊಳ್ಳುತ್ತಿರುವ ಬಹುಬೇಡಿಕೆ ನಟನಿಗೆ ಎಲ್ಲೆಡೆಯಿಂದ ಶುಭಾಶಯಗಳ ಸಂದೇಶ ಹರಿದು ಬರುತ್ತಿದೆ. ಕುಟುಂಬಸ್ಥರು, ಆಪ್ತರು, ಸ್ನೇಹಿತರು, ಚಿತ್ರರಂಗದವರೂ ಸೇರಿದಂತೆ ಅಭಿಮಾನಿಗಳು ವಿಶೇಷವಾಗಿ ಶುಭ ಕೋರುತ್ತಿದ್ದಾರೆ. ಟೀಸರ್ ಬಿಡುಗಡೆ ಮಾಡುವ ಮೂಲಕ 'ಭಗವಂತ ಕೇಸರಿ' ಚಿತ್ರತಂಡ ನಟನಿಗೆ ವಿಶೇಷವಾಗಿ ಶುಭ ಕೋರಿದೆ.
- " class="align-text-top noRightClick twitterSection" data="">
ಯಾವುದೇ ಪಾತ್ರ ಅಥವಾ ಯಾವುದೇ ಕಥೆ ಇರಲಿ ನೂರಕ್ಕೆ ನೂರರಷ್ಟು ಬದ್ಧತೆಯನ್ನು ತೋರಿಸುವ ಕೆಲವೇ ಕೆಲ ನಟರ ಪೈಕಿ ನಂದಮೂರಿ ಬಾಲಕೃಷ್ಣ ಕೂಡ ಒಬ್ಬರು. ತಂದೆ ನಂದಮೂರಿ ತಾರಕ ರಾಮರಾವ್ ಅವರ ಪರಂಪರೆ ಮುಂದುವರಿಸಿ, ತೆಲುಗು ಇಂಡಸ್ಟ್ರಿಯಲ್ಲಿ ಟಾಪ್ ಹೀರೋ ಎನಿಸಿಕೊಂಡವರು. ಯುವ ನಾಯಕ ನಟರಿಗೆ ಸ್ಫೂರ್ತಿ ಇವರು. ನಟನೆ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಎಲ್ಲೆಡೆ ಇವರ ಹುಟ್ಟುಹಬ್ಬವನ್ನು ಅಭಿಮಾನಿಗಳು ವಿಶೇಷವಾಗಿ ಆಚರಿಸುತ್ತಿದ್ದಾರೆ.
ಟಾಲಿವುಡ್ನ ಸೂಪರ್ ಸ್ಟಾರ್ ಎನಿಸಿಕೊಂಡಿರುವ ನಂದಮೂರಿ ಬಾಲಕೃಷ್ಣ ನಟನೆಯ ಮುಂದಿನ ಚಿತ್ರ 'ಭಗವಂತ ಕೇಸರಿ'. ಎರಡು ದಿನಗಳ ಹಿಂದಷ್ಟೇ ಚಿತ್ರತಂಡ ಟೈಟಲ್ ಪೋಸ್ಟರ್ ಅನ್ನು ಅನಾವರಣಗೊಳಿಸಿತ್ತು. NBK108ರ ಟೈಟಲ್ ಜೊತೆ ನಟನ ಫಸ್ಟ್ ಲುಕ್ ಪೋಸ್ಟರ್ ಕೂಡ ಅನಾವರಣಗೊಂಡಿತ್ತು. ಇಂದು ಬಾಲಕೃಷ್ಣ ಹುಟ್ಟುಹಬ್ಬ ಹಿನ್ನೆಲೆ, 'ಭಗವಂತ ಕೇಸರಿ' ಟೀಸರ್ ರಿಲೀಸ್ ಆಗಿದೆ.
ಅನಿಲ್ ರವಿಪುಡಿ ನಿರ್ದೇಶನದಲ್ಲಿ 'ಭಗವಂತ ಕೇಸರಿ' ಚಿತ್ರೀಕರಣ ಶರವೇಗದಲ್ಲಿ ನಡೆಯುತ್ತಿದೆ. ವಿಜಯದಶಮಿಯ ಉಡುಗೊರೆಯಾಗಿ ಈ ಚಿತ್ರ ಥಿಯೇಟರ್‌ಗಳಲ್ಲಿ ಬಿಡುಗಡೆ ಆಗಲಿದೆ. ಎರಡು ದಿನಗಳ ಹಿಂದೆ ಟೈಟಲ್ ಅನೌನ್ಸ್ ಮಾಡಿ ಅಭಿಮಾನಿಗಳಲ್ಲಿ ಉತ್ಸಾಹ ಮೂಡಿಸಿದ್ದ ಚಿತ್ರತಂಡ ಇದೀಗ ಟೀಸರ್ ಮೂಲಕ ಸರ್ಪ್ರೈಸ್ ನೀಡಿದೆ. ಟೀಸರ್ ಆಕರ್ಷಕವಾಗಿದ್ದು, ಫುಲ್ ರಗಡ್ ಅವತಾರದಲ್ಲಿ ಬಾಲಯ್ಯ ಕಾಣಿಸಿಕೊಂಡಿದ್ದಾರೆ. ತೆಲಂಗಾಣ ಆಡುಭಾಷೆಯಲ್ಲಿರುವ ಬಾಲಯ್ಯ ಅವರ ಡೈಲಾಗ್‌ಗಳು ಪ್ರೇಕ್ಷಕರನ್ನು ಸೆಳೆದಿವೆ. ಮಾಸ್ ಅವತಾರದಲ್ಲಿರುವ ಬಾಲಯ್ಯ ಚಿತ್ರದಲ್ಲಿ ಕಾಮಿಡಿ ಮಾಡುವ ಮೂಲಕ ಮನರಂಜನೆ ಕೂಡ ಕೊಡಲಿದ್ದಾರೆ.
ಇದನ್ನೂ ಓದಿ: NBK108: 'ಭಗವಂತ ಕೇಸರಿ'ಯಾಗಿ ಟಾಲಿವುಡ್ ನಟಸಿಂಹ ನಂದಮೂರಿ ಬಾಲಕೃಷ್ಣ; ರಗಡ್ ಲುಕ್ನಲ್ಲಿ ಬಾಲಯ್ಯ
ಅದ್ಧೂರಿ ಆ್ಯಕ್ಷನ್ ಎಂಟರ್‌ಟೈನ್‌ಮೆಂಟ್ ಆಗಿ ತಯಾರಾಗುತ್ತಿರುವ ಈ ಸಿನಿಮಾದಲ್ಲಿ ಬಾಲಯ್ಯ ಹಿರಿ ವ್ಯಕ್ತಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ನಿರ್ದೇಶಕ ಅನಿಲ್ ರವಿಪುಡಿ ಅವರು ಬಾಲಯ್ಯ ಅವರಿಗೆ ತಕ್ಕಂತೆ ಮಾಸ್ ಎಲಿಮೆಂಟ್ಸ್ ಸೇರಿಸಿ, ಮನರಂಜನೆಯನ್ನು ಮಿಸ್ ಮಾಡದೇ ಚಿತ್ರವನ್ನು ರೂಪಿಸುತ್ತಿದ್ದಾರೆ. ಬಾಲಯ್ಯ ಜೊತೆ ನಟಿ ಕಾಜಲ್ ಅಗರ್ವಾಲ್ ನಟಿಸುತ್ತಿದ್ದಾರೆ.
ಇವರಿಬ್ಬರ ಕಾಂಬಿನೇಷನ್ನ ಮೊದಲ ಚಿತ್ರವಿದು. ಶ್ರೀಲೀಲಾ ಮತ್ತು ತಮಿಳಿನ ಸ್ಟಾರ್ ನಟ ಶರತ್ ಕುಮಾರ್ ತಂದೆ ಮಗಳಾಗಿ ಕಾಣಿಸಿಕೊಳ್ಳಲಿದ್ದಾರೆ. ಖ್ಯಾತ ಬಾಲಿವುಡ್ ನಟ ಅರ್ಜುನ್ ರಾಂಪಾಲ್ ಬಾಲಯ್ಯ ಎದುರು ವಿಲನ್ ಅಗಿ ಕಾಣಿಸಿಕೊಳ್ಳಲಿದ್ದಾರೆ. ಶೈನ್ ಸ್ಕ್ರೀನ್ ಬ್ಯಾನರ್ ಅಡಿ ಹರೀಶ್ ಪೆದ್ದಿ ಮತ್ತು ಸಾಹು ಗರಪಾಟಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.
ಇದನ್ನೂ ಓದಿ: ಸಾಮಾಜಿಕ ಜಾಲತಾಣದಿಂದ ಬ್ರೇಕ್: 'ಯಾರಿಗೂ ಸ್ಪಂದಿಸದೇ ಕಾರು ಹತ್ತಿದ ಕಾಜೋಲ್' - ವಿಡಿಯೋ!