ಕನ್ನಡ ಚಿತ್ರರಂಗದಲ್ಲಿ ಕಂಟೆಂಟ್ ಓರಿಯಂಟೆಡ್ ಚಿತ್ರಗಳು ಬರ್ತಾ ಇದ್ದು ಸಿನಿಮಾ ಪ್ರೇಮಿಗಳು ಮೆಚ್ಚಿಕೊಳ್ಳುತ್ತಿದ್ದಾರೆ. ಐಪಿಎಲ್ ಹಾಗೂ ಎಲೆಕ್ಷನ್ ಅಬ್ಬರದಲ್ಲಿ ಮುಳುಗಿದ್ದ ಜನರಿಗೆ ಕಂಪ್ಲೀಟ್ ಮನರಂಜನೆ ನೀಡುವ ಚಿತ್ರಗಳು ಈಗ ಬಿಡುಗಡೆಗೆ ಸಜ್ಜಾಗಿವೆ. ಈ ಸಾಲಿನಲ್ಲಿ ಬೆಂಗಳೂರು ಬಾಯ್ಸ್ ಎಂಬ ಸಿನಿಮಾ ಕೂಡ ಒಂದು. ಕಾಲೇಜಿನಲ್ಲಿ ಕೊನೆಯ ಬೆಂಚಿನ ಹುಡುಗರು ವೇಸ್ಟ್ ಎಂದು ಎಲ್ಲರೂ ಹೇಳುತ್ತಾರೆ. ಆದರೆ ಅದೇ ಹುಡುಗರು ಬದುಕಿನಲ್ಲಿ ದೊಡ್ಡ ಮಟ್ಟದ ಯಶಸ್ಸು ಕಂಡಿರುವ ಉದಾಹರಣೆಗಳು ಸಾಕಷ್ಟಿವೆ. ಇಂತಹದ್ದೇ ಕಥೆಯನ್ನ ಹೊಂದಿರುವ ಸಿನಿಮಾವೇ ಬೆಂಗಳೂರು ಬಾಯ್ಸ್.
ಇದನ್ನೂ ಓದಿ: ಸೈಲೆಂಟ್ ಆಗಿ ಮುಹೂರ್ತ ಮುಗಿಸಿದ ರಾಧಿಕಾ ಕುಮಾರಸ್ವಾಮಿ ಅಭಿನಯದ 'ಅಜಾಗ್ರತ'
90ರ ದಶಕದ ನಾಲ್ಕು ಐಕಾನಿಕ್ ಕ್ಯಾರೆಕ್ಟರ್‌ಗಳಾದ ಓಂ ಚಿತ್ರದ ಶಿವಣ್ಣ, ಎ ಚಿತ್ರದ ಉಪೇಂದ್ರ, ರಣಧೀರ ಸಿನಿಮಾದ ರವಿಚಂದ್ರನ್, ಅಂತ ಸಿನಿಮಾದ ಅಂಬರೀಷ್ ರೀತಿಯಲ್ಲಿ ನಮ್ಮ ನಾಯಕರ ಲುಕ್‌ಗಳಿಂದ ಕೂಡಿರುವ ಫಸ್ಟ್ ಲುಕ್ ಅನಾವರಣಗೊಂಡಿದೆ. ಆಲ್ ಮೋಸ್ಟ್ ಶೂಟಿಂಗ್ ಮುಗಿಸಿ ಬಿಡುಗಡೆ ರೆಡಿಯಾಗಿರೋ ಬೆಂಗಳೂರು ಬಾಯ್ಸ್ ಸಿನಿಮಾವನ್ನ, ಅಂಬಿ ನಿಂಗೆ ವಯಸ್ಸಾಯ್ತೋ ಸಿನಿಮಾ ಖ್ಯಾತಿಯ ಗುರುದತ್ ಗಾಣಿಗ ಕ್ರಿಯೇಟಿವ್ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ.
ಬೆಂಗಳೂರು ಬಾಯ್ಸ್ ರೋಮ್ಯಾಂಟಿಕ್ ಕಾಮಿಡಿ ಎಂಟರ್ ಟೈನರ್ ಚಿತ್ರವಾಗಿದ್ದು, ಕಾಲೇಜು ಕಥೆ, ಲವ್ ಸ್ಟೋರಿ, ಎಮೋಷನ್ ಸೆಂಟಿಮೆಂಟ್ನಿಂದ ಕೂಡಿದೆಯಂತೆ. ರವಿ ಶ್ರೀರಾಮ್ ಈ ಸಿನಿಮಾಗೆ ಕೋ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದು, ರಿಜೋ ಪಿ ಜಾನ್ ಈ ಸಿನಿಮಾಗೆ ಕ್ಯಾಮರಾ ವರ್ಕ್ ಇದೆ. ಶಾನೆ ಟಾಪ್ ಗೌಳೆ ನಂತಹ ಹಿಟ್ ಹಾಡುಗಳ ಸಂಗೀತ ನಿರ್ದೇಶಕ ಧರ್ಮ ವಿಶ್ ಈ ಸಿನಿಮಾಗೆ ಸಂಗೀತ ನೀಡಿದ್ದಾರೆ. ಸಿನಿಮಾ ಆಸಕ್ತಿ ಹೊಂದಿರುವ ತೆಲುಗು ಮೂಲದ ವಿಕ್ರಮ್ ಕೆ.ವೈ. ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ಪ್ರಶಾಂತ್ ರಾವ್ ಪುರಂ ಸಹ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಆಲ್ ಮೋಸ್ಟ್ ಶೂಟಿಂಗ್ ಮುಗಿಸಿ ಟೀಸರ್ ಹಾಗು ಪೋಸ್ಟರ್ ನಿಂದ ಸದ್ದು ಮಾಡುತ್ತಿರುವ ಬೆಂಗಳೂರು ಬಾಯ್ಸ್ ಚಿತ್ರ ಸಿನಿ ಪ್ರೇಮಿಗಳ ಮನಸ್ಸು ಕದಿಯುವ ಸೂಚನೆ ಸಿಗ್ತಾ ಇದೆ.
ಇದನ್ನೂ ಓದಿ: ಎಂಜಾಯ್ ಮೂಡ್ನಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ-ಕಿಯಾರಾ ಅಡ್ವಾಣಿ: ಕ್ಯೂಟ್ ಕಪಲ್ ಫೋಟೋಗೆ ಫ್ಯಾನ್ಸ್ ಮೆಚ್ಚುಗೆ