ಪ್ರತಿಷ್ಠಿತ ಆಸ್ಕರ್ ಅವಾರ್ಡ್ ವಿಜೇತ 'ದಿ ಎಲಿಫೆಂಟ್ ವಿಸ್ಪರರ್ಸ್' ಡಾಕ್ಯುಮೆಂಟರಿ ಸಿನಿಮಾದ ನಿರ್ದೇಶಕಿ ಕಾರ್ತಿಕಿ ಗೊನ್ಸಾಲ್ವಿಸ್ ವಿರುದ್ಧ ಬೆಲ್ಲಿ ಹಾಗೂ ಬೊಮ್ಮನ್ ಗಂಭೀರ ಆರೋಪ ಮಾಡಿದ್ದಾರೆ. ಸಾಕ್ಷ್ಯಚಿತ್ರವನ್ನು ಚಿತ್ರೀಕರಣ ಮಾಡುವ ವೇಲೆ ನಿರ್ದೇಶಕಿ ಕಾರ್ತಿಕಿ ಗೊನ್ಸಾಲ್ವಿಸ್ ತಮ್ಮೊಂದಿಗೆ ಬಹಳ ಆತ್ಮೀಯವಾಗಿದ್ದರು. ಆದರೆ, ಸಾಕ್ಷ್ಯಚಿತ್ರ ಆಸ್ಕರ್ ಪ್ರಶಸ್ತಿ ಗೆದ್ದ ನಂತರ ಅವರು ಬದಲಾಗಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಫೋನ್ ಮಾಡಿದರೆ ಕರೆ ಸ್ವೀಕರಿಸುತ್ತಿಲ್ಲ ಹಾಗೂ ತಮಗೆ ಇದುವರೆಗೆ ಹಣ ನೀಡಿಲ್ಲ ಎಂದು ಆರೋಪಿಸಿದ್ದಾರೆ.
ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಮಾತನಾಡಿದ ಬೆಳ್ಳಿ ಹಾಗೂ ಬೊಮ್ಮನ್ ಅವರು ಆಸ್ಕರ್ ವಿಜೇತ ನಿರ್ದೇಶಕಿ ಕಾರ್ತಿಕಿ ಗೊನ್ಸಾಲ್ವಿಸ್ ಮೇಲೆ ಹಣ ಹಿಂತಿರುಗಿಸದೇ ಇರುವ ಗಂಭೀರ ಆರೋಪ ಮಾಡಿದ್ದಾರೆ.
"ಸಾಕ್ಷ್ಯಚಿತ್ರ ಶೂಟಿಂಗ್ ಸಮಯದಲ್ಲಿ ನಿರ್ದೇಶಕಿ ಕಾರ್ತಿನಿ ಗೊನ್ಸಾಲ್ವಿಸ್ ಅವರು ನಮ್ಮೊಂದಿಗೆ ತುಂಬಾ ಚೆನ್ನಾಗಿದ್ದರು. ಶೂಟಿಂಗ್ ಸಮಯದಲ್ಲಿ ಒಂದು ದಿನ ನಮ್ಮ ಬಳಿ ಬಂದು, ಒಂದು ಮದುವೆಯ ದೃಶ್ಯ ಶೂಟ್ ಮಾಡಲು ಬಯಸುವುದಾಗಿ ಹೇಳಿದ್ದರು. ಅವರ ಬಳಿ ಹಣವಿಲ್ಲದ ಕಾರಣ ನಮ್ಮ ಬಳಿ ಅದರ ವ್ಯವಸ್ಥೆ ಮಾಡಲು ಕೇಳಿದರು. ಮೊಮ್ಮಗಳ ವಿದ್ಯಾಭ್ಯಾಸ್ಕಾಗಿ ಬೆಲ್ಲಿ ಕೂಡಿಟ್ಟಿದ್ದ ಹಣವನ್ನು ನಾವೇ ತೆಗೆದು ಅವರಿಗೆ ಕೊಟ್ಟೆವು. ಮದುವೆ ಸಮಾರಂಭದ ದೃಶ್ಯದ ಚಿತ್ರೀಕರಣಕ್ಕಾಗಿ ನಾವು ಸುಮಾರು 1 ಲಕ್ಷ ರೂಪಾಯಿ ಖರ್ಚು ಮಾಡಿದೆವು. ನಾವು ಕರೆ ಮಾಡಿ ಕೇಳಿದಾಗ ಅದನ್ನು ಹಿಂದಿರುಗಿಸುವುದಾಗಿ ಹೇಳಿದ್ದರು. ಆದರೆ, ಇದುವರೆಗೆ ಮಾಡಿಲ್ಲ. ಆದರೆ ನಾವು ಕರೆ ಮಾಡಿದಾಗ ಬ್ಯುಸಿ ಇದ್ದೇನೆ ಎಂದು ಹೇಳಿ ಕಾಲ್ ಕಟ್ ಮಾಡುತ್ತಿದ್ದಾರೆ" ಎಂದು ದುಃಖ ತೋಡಿಕೊಂಡಿದ್ದಾರೆ.
"ಅವರು ನಮ್ಮಿಂದಾಗಿ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಗೆದ್ರು. ಆದರೆ, ಅಭಿನಂದನಾ ಸಮಾರಂಭದಲ್ಲಿ ಆಸ್ಕರ್ ಪ್ರಶಸ್ತಿಯನ್ನು ಹಿಡಿಯಲು ಕೂಡ ಅವರು ಬಿಡಲಿಲ್ಲ. ಈ ಸಾಕ್ಷ್ಯಚಿತ್ರದ ನಂತರ ನಾವು ನಮ್ಮ ಸ್ಥೈರ್ಯವನ್ನು ಕಳೆದುಕೊಂಡಿದ್ದೇವೆ." ಎಂದು ಸಂದರ್ಶನದಲ್ಲಿ ಆರೋಪಿಸಿದರು. ಸಾಕ್ಷ್ಯಚಿತ್ರ ನಿರ್ಮಾಣ ಸಂಸ್ಥೆ ಈ ದಂಪತಿಯ ಆರೋಪವನ್ನು ತಳ್ಳಿ ಹಾಕಿದ್ದು, ಅವರ ಮಾತುಗಳಲ್ಲಿ ಯಾವುದೇ ಸತ್ಯಾಂಶವಿಲ್ಲ. ನಾವು ಅರಣ್ಯ ಇಲಾಖೆ ಮತ್ತು ವನ್ಯಜೀವಿ ಸಂರಕ್ಷಣೆಯ ಕಾರ್ಯವನ್ನು ಹೊಗಳುವ ಉದ್ದೇಶದಿಂದ ಈ ಸಾಕ್ಷ್ಯಚಿತ್ರವನ್ನು ಪರಾರಂಭಿಸಿದೆವು ಎಂದು ಹೇಳಿದೆ.
ತಮಿಳುನಾಡಿದ ಮುದುಮಲೈ ಮೀಸಲು ಅರಣ್ಯದಲ್ಲಿ ಆನೆ ಪಾಲಕರಾಗಿ ಕೆಲಸ ಮಾಡುವ ಬೆಲ್ಲಿ ಹಾಗೂ ಬೊಮ್ಮನ್ ದಂಪತಿಯ ನಿಜ ಜೀವನವನ್ನುಆಧರಿಸಿ, 'ದಿ ಎಲಿಫೆಂಟ್ ವಿಸ್ಪರರ್ಸ್' ಎಂಬ ಸಾಕ್ಷ್ಯವಿತ್ರವನ್ನು ನಿರ್ಮಿಸಲಾಗಿದೆ. ರಘು ಮತ್ತು ಅಮ್ಮು ಎಂಬ ಎರಡು ಆನೆ ಮರಿಗಳು ಹಾಗೂ ಅವುಗಳನ್ನು ಪಾಲನೆ ಮಾಡುವಂಥ ದಂಪತಿಯ ಸುತ್ತ ಕಥೆ ಸುತ್ತುತ್ತದೆ. ನಿರ್ಮಾಪಕಿ ಗುನೀತ್ ಮೊಂಗಾ ಅವರು ಮಾರ್ಗದರ್ಶನದಲ್ಲಿ ನಿರ್ದೇಶಕಿ ಕಾರ್ತಿನಿ ಗೊನ್ಸಾಲ್ವಿಸ್ ಈ ಸಾಕ್ಷ್ಯಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. 42 ನಿಮಿಷಗಳ ಅವಧಿಯ ಈ ಸಾಕ್ಷ್ಯಚಿತ್ರವು 2023ರ ಅತ್ಯುತ್ತಮ ಸಾಕ್ಷ್ಯಚಿತ್ರಕ್ಕಾಗಿ ಆಸ್ಕರ್ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ.
ಇದನ್ನೂ ಓದಿ: Keerthy Suresh: 'ಭೋಲಾ ಶಂಕರ್' ಸಿನಿಮಾ ಬಗ್ಗೆ ಮನಬಿಚ್ಚಿ ಮಾತನಾಡಿದ ನಟಿ ಕೀರ್ತಿ ಸುರೇಶ್