ETV Bharat / entertainment

BBOTT2: ಎಲ್ವಿಶ್​ ಯಾದವ್​ಗೆ 'ಬಿಗ್​ ಬಾಸ್​' ಪಟ್ಟ.. ಶೋ ಗೆದ್ದ ಮೊದಲ 'ವೈಲ್ಡ್​ ಕಾರ್ಡ್'​ ಸ್ಪರ್ಧಿ

author img

By

Published : Aug 15, 2023, 5:09 PM IST

ಬಿಗ್​ ಬಾಸ್ OTT ಸೀಸನ್​ 2 ವಿಜೇತರಾಗಿ ಎಲ್ವಿಶ್​ ಯಾದವ್ ಹೊರಹೊಮ್ಮಿದ್ದಾರೆ. ಅಭಿಷೇಕ್​ ಮಲ್ಹಾನ್ ರನ್ನರ್​ ಅಪ್​ ಆಗಿದ್ದಾರೆ.

BBOTT2
ಬಿಗ್​ ಬಾಸ್

ಬಾಲಿವುಡ್​ ಸೂಪರ್​ಸ್ಟಾರ್​ ಸಲ್ಮಾನ್​ ಖಾನ್​ ನಡೆಸಿಕೊಡುವ ಹಿಂದಿ ಬಿಗ್​ ಬಾಸ್ OTT ಸೀಸನ್​ 2ಗೆ ತೆರೆ ಬಿದ್ದಿದೆ. ಈ ಬಾರಿಯೂ ದೊಡ್ಮನೆಯಲ್ಲಿ ಪ್ರಬಲ ಸ್ಪರ್ಧೆ ಎದುರಾಗಿತ್ತು. ಫಿನಾಲೆಗೆ ತಲುಪಿದ್ದ ಐವರಲ್ಲಿ ವಿಜೇತರು ಯಾರಾಗಲಿದ್ದಾರೆ? ಎಂಬ ಕುತೂಹಲ ಶೋ ವೀಕ್ಷಕರಲ್ಲಿತ್ತು. ಇದೀಗ ಎಲ್ವಿಶ್​ ಯಾದವ್ ಬಿಗ್​ ಬಾಸ್​ ಟ್ರೋಫಿಯನ್ನು ಪಡೆದುಕೊಂಡಿದ್ದಾರೆ. ವಿಶೇಷ ದಾಖಲೆಯೊಂದಿಗೆ ಗೆಲುವಿನ ನಗೆ ಬೀರಿದ್ದಾರೆ. ಬಿಗ್​ ಬಾಸ್​ ಇತಿಹಾಸದಲ್ಲೇ ಇದೇ ಮೊದಲ ಬಾರಿ ಶೋ ಗೆದ್ದ ವೈಲ್ಡ್​ ಕಾರ್ಡ್​ ಸ್ಪರ್ಧಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಎಲ್ವಿಶ್​ ಯಾದವ್​ ಅವರು ಶೋ ಪ್ರಾರಂಭವಾದ ನಂತರ ನಾಲ್ಕನೇ ವಾರ ಬಿಗ್​ ಬಾಸ್​ ಮನೆಯನ್ನು ಪ್ರವೇಶಿಸಿದರು. ಬಳಿಕ ಅಭಿಷೇಕ್​ ಮಲ್ಹಾನ್​ ಜೊತೆ ಉತ್ತಮ ಪೈಪೋಟಿ ನೀಡಿದ್ದರು. ಇವರಿಬ್ಬರ ನಡುವೆ ಸ್ಪರ್ಧೆ ಏರ್ಪಟ್ಟಿತ್ತು. ಆಗಸ್ಟ್ 14, ಸೋಮವಾರ ನಡೆದ ಬಿಗ್​ ಬಾಸ್​ ಓಟಿಟಿ ಸೀಸನ್​ 2ರ ಫಿನಾಲೆ ಹಂತಕ್ಕೆ ಒಟ್ಟು ಐವರು ಆಯ್ಕೆಯಾಗಿದ್ದರು. ಎಲ್ವಿಶ್​ ಯಾದವ್​, ಅಭಿಷೇಕ್​ ಮಲ್ಹಾನ್​, ಬೇಬಿಕಾ ಧುರ್ವೆ, ಮನಿಷಾ ರಾಣಿ ಮತ್ತು ಪೂಜಾ ಭಟ್​ ಸೆಲೆಕ್ಟ್​ ಆಗಿದ್ದರು.​

ಇವರಲ್ಲಿ ಅಭಿಷೇಕ್​ ಮಲ್ಹಾನ್​ ಮತ್ತು ಎಲ್ವಿಶ್​ ಯಾದವ್ ನಡುವೆ ಪ್ರಬಲ ಸ್ಪರ್ಧೆ ಎದುರಾಗಿತ್ತು. ಅಂತಿಮವಾಗಿ ಎಲ್ವಿಶ್​ ಅವರು ಬಿಗ್​ ಬಾಸ್​ ಪಟ್ಟವನ್ನು ಏರಿದ್ದಾರೆ. ಅಭಿಷೇಕ್​ ಮಲ್ಹಾನ್ ರನ್ನರ್​ ಅಪ್​ ಆಗಿದ್ದಾರೆ. ಬಿಗ್​​ ಬಾಸ್ OTT ಸೀಸನ್​ 2 ವಿಜೇತರಾಗಿ ಹೊರಹೊಮ್ಮಿದ ಎಲ್ವಿಶ್​ ಯಾದವ್​ 25 ಲಕ್ಷ ರೂಪಾಯಿ ಬಹುಮಾನದ ಜೊತೆಗೆ ಟ್ರೋಫಿಯನ್ನು ಪಡೆದುಕೊಂಡಿದ್ದಾರೆ. ವೈಲ್ಡ್​ ಕಾರ್ಡ್ ಮೂಲಕ ಎಂಟ್ರಿಯಾಗಿ ಶೋ ಗೆದ್ದ ಮೊದಲ ಸ್ಪರ್ಧಿ ಎಂಬ ವಿಶೇಷ ದಾಖಲೆಯನ್ನು ಸೃಷ್ಟಿಸಿದ್ದಾರೆ. ಇವರ ಗೆಲುವನ್ನು ಅಭಿಮಾನಿಗಳು ಸಂಭ್ರಮಿಸಿದ್ದಾರೆ.

ಇದನ್ನೂ ಓದಿ: ಹಿಂದಿ ಬಿಗ್​ ಬಾಸ್​ ಒಟಿಟಿ ಗ್ರ್ಯಾಂಡ್ ಫಿನಾಲೆಗೆ ಒಂದೇ ವಾರ.. ಜಡ್ ಹದಿದ್, ಅವಿನಾಶ್ ಸಚ್‌ದೇವ್ ಮನೆಯಿಂದ ಔಟ್​

ಬಿಗ್​ ಬಾಸ್​ ಕಿರೀಟವನ್ನು ಮುಡಿಗೇರಿಸಿಕೊಳ್ಳುವ ಮೊದಲು ಮಾತನಾಡಿದ ಎಲ್ವಿಶ್​ ಯಾದವ್, "ನನಗಿದು ನಿಜವೆಂದು ನಂಬಲು ಸಾಧ್ಯವಾಗುತ್ತಿಲ್ಲ. ವೈಲ್ಡ್​ ಕಾರ್ಡ್​ ಎಂಟ್ರಿಯಾದರೂ ಟಾಪ್​ 5ನಲ್ಲಿ ಇರುವುದಕ್ಕೆ ನಾನು ಕೃತಜ್ಞನಾಗಿದ್ದೇನೆ. ನಾನು ಗೆದ್ದರೆ ಒಳ್ಳೆಯದು. ಗೆಲ್ಲದೇ ಹೋದರೆ ಪರವಾಗಿಲ್ಲ. ಆದರೆ ನಾನು ಎಲ್ಲರ ಪ್ರೀತಿಯನ್ನು ಪಡೆದುಕೊಂಡಿದ್ದೇನೆ" ಎಂದು ಹೇಳಿದ್ದರು. ಗ್ರ್ಯಾಂಡ್​ ಫಿನಾಲೆಗೂ ಮುಂಚೆ ಅಭಿಷೇಕ್​ ಮಲ್ಹಾನ್ ವೈರಲ್​ ಇನ್​ಫೆಕ್ಷನ್​ನಿಂದ ಆಸ್ಪತ್ರೆಗೆ ದಾಖಲಾಗಿದ್ದರು.

ಕಾರ್ಯಕ್ರಮದ ಗ್ರ್ಯಾಂಡ್​ ಫಿನಾಲೆ ಕಾರ್ಯಕ್ರಮವನ್ನು 70 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಸಲ್ಮಾನ್​ ಖಾನ್​ ಅವರ ಹೋಸ್ಟ್​ ಮತ್ತು ಮಾಜಿ ಸ್ಪರ್ಧಿಗಳ ಸಮಾಗಮ ಜೊತೆಗೆ ಫೈನಲ್​ ಸ್ಪರ್ಧಿಗಳು ಅವರ ಕುಟುಂಬದವರು ಜೊತೆಯಾಗಿ ಸೇರಿದ್ದರಿಂದ ಹೆಚ್ಚು ಸಂಖ್ಯೆಯಲ್ಲಿ ಬಿಗ್​ ಬಾಸ್​ ಶೋ ಅಭಿಮಾನಿಗಳು ಕಾರ್ಯಕ್ರಮವನ್ನು ನೋಡಿದ್ದಾರೆ. ಬಿಗ್​ ಬಾಸ್ OTT ಸೀಸನ್​ 2 ಜಿಯೋ ಸಿನಿಮಾದಲ್ಲಿ ಸ್ಟ್ರೀಮ್​ ಆಗುತ್ತಿತ್ತು.

ಇದನ್ನೂ ಓದಿ: Bigg Boss OTT 2 day 52 highlights: ಅಂತಿಮ ಹಂತದ ಹಣಾಹಣಿಯಲ್ಲಿ ಬಿಗ್​ಬಾಸ್​ ಸ್ಪರ್ಧಿಗಳು; ಫಿನಾಲೆಗೆ ಇನ್ನೊಂದೇ ವಾರ ಬಾಕಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.