ETV Bharat / entertainment

ರಕ್ಷ್ ಬರ್ತ್‌ಡೇಗೆ ಬರ್ಮ ಪೋಸ್ಟರ್ ರಿಲೀಸ್: ರಕ್ತಸಿಕ್ತ ಅವತಾರದಲ್ಲಿ ನಟ - ರಕ್ಷ್ ಬರ್ತ್ ಡೇ

ನಟ ರಕ್ಷ್ ರಾಮ್ ಅವರ ಹುಟ್ಟುಹಬ್ಬದ ವಿಶೇಷವಾಗಿ ಬರ್ಮ ಚಿತ್ರತಂಡ ಹೊಸ ಪೋಸ್ಟರ್ ಬಿಡುಗಡೆ ಮಾಡಿದೆ. ಬರ್ಮ ಪಕ್ಕಾ ಆ್ಯಕ್ಷನ್ ಎಂಟರ್‌ಟೈನರ್ ಸಿನಿಮಾ.

barma-movie-team-released-new-poster-on-raksh-ram-birthday
ರಕ್ಷ್ ಬರ್ತ್‌ಡೇಗೆ ಬರ್ಮ ಪೋಸ್ಟರ್ ರಿಲೀಸ್: ರಕ್ತಸಿಕ್ತ ಅವತಾರದಲ್ಲಿ ನಟ
author img

By ETV Bharat Karnataka Team

Published : Jan 8, 2024, 9:04 PM IST

ಗಟ್ಟಿಮೇಳ ಸೀರಿಯಲ್ ಮೂಲಕ ಕರುನಾಡ ಮನ-ಮನೆ ಗೆದ್ದಿರುವ ನಟ ರಕ್ಷ್ ರಾಮ್ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅವರ ಹುಟ್ಟುಹಬ್ಬಕ್ಕೆ ಬರ್ಮ ಚಿತ್ರತಂಡ ಹೊಸ ಪೋಸ್ಟರ್ ಉಡುಗೊರೆಯಾಗಿ ನೀಡಿದೆ. ಕಿರುತೆರೆ ನಟ ರಕ್ಷ್ ಬರ್ತ್ ಡೇ ಅಂಗವಾಗಿ, ಈ ನಟ ಅಭಿನಯಿಸುತ್ತಿರುವ ಬಹು ನಿರೀಕ್ಷಿತ ಚಿತ್ರ ಬರ್ಮದ ಪೋಸ್ಟ್​ರ್​ ಅನಾವರಣಗೊಂಡಿದ್ದು, ಸಿನಿ ಪ್ರಿಯರಲ್ಲಿ ಕುತೂಹಲ ಹೆಚ್ಚಿಸಿದೆ. ಕೈಯಲ್ಲಿ ಕೊಡಲಿ ಹಿಡಿದು, ರಕ್ತಸಿಕ್ತ ಅವತಾರದಲ್ಲಿ ರಕ್ಷ್ ರಾಮ್ ಕಾಣಿಸಿಕೊಂಡಿದ್ದಾರೆ.

ಅಂದ ಹಾಗೇ ಬರ್ಮ ಪಕ್ಕಾ ಆಕ್ಷನ್ ಎಂಟರ್‌ಟೈನರ್ ಸಿನಿಮಾ. ಈ ಸಿನಿಮಾ ಮೂಲಕ ಕಿರುತೆರೆ ನಟ ರಕ್ಷ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಎಮರ್ಜ್ ಆಗಿದ್ದಾರೆ. ಈ ಚಿತ್ರದಲ್ಲಿ ನಾಯಕನಾಗಿ ಬಣ್ಣ ಹೆಚ್ಚಿರುವ ರಕ್ಷ್ ರಾಮ್, ನಿರ್ಮಾಣದ ಜವಾಬ್ದಾರಿಯನ್ನೂ ಕೂಡ ಹೊತ್ತುಕೊಂಡಿದ್ದಾರೆ. ತಮ್ಮದೇ ನಿರ್ಮಾಣ ಸಂಸ್ಥೆ ಶ್ರೀ ಸಾಯಿ ಆಂಜನೇಯ ಕಂಪನಿಯಡಿ ಬರ್ಮ ಸಿನಿಮಾಗೆ ಹೂಡಿಕೆ ಮಾಡಿದ್ದಾರೆ. ಭರಾಟೆ, ಜೇಮ್ಸ್ ಚಿತ್ರಗಳ ನಿರ್ದೇಶಕ ಚೇತನ್ ಕುಮಾರ್ ಬರ್ಮ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾಗೆ ವಿ ಹರಿಕೃಷ್ಣ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಬಹದ್ದೂರ್ ಹಾಗೂ ಭರ್ಜರಿ ಸಿನಿಮಾದಲ್ಲಿ ಚೇತನ್ ಕುಮಾರ್ ಹಾಗೂ ಹರಿಕೃಷ್ಣ ಒಟ್ಟಿಗೆ ಕೆಲಸ ಮಾಡಿದ್ದರು. ಈಗ ಬರ್ಮ ಮೂಲಕ ಮೂರನೇ ಬಾರಿ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ.

ಜೇಮ್ಸ್ ಹೊರತುಪಡಿಸಿ ಚೇತನ್ ಕುಮಾರ್ ನಿರ್ದೇಶಿಸಿದ ಅಷ್ಟೂ ಸಿನಿಮಾಗಳೂ 'ಬ' ಇಲ್ಲವೇ 'ಭ'ದಿಂದಲೇ ಆರಂಭ ಆಗಿರುವುದು ವಿಶೇಷ. ಇವರು ನಿರ್ದೇಶಿಸಿರುವ ಜೇಮ್ಸ್ ಸೇರಿದಂತೆ ಬಹದ್ದೂರ್, ಭರ್ಜರಿ ಹಾಗೂ ಭರಾಟೆ ಸಿನಿಮಾ ಬಾಕ್ಸ್​ಆಫೀಸ್‌ನಲ್ಲಿ ಹಿಟ್ ಲಿಸ್ಟ್ ಸೇರಿವೆ. ಈಗ ಹೊಸ ಸಿನಿಮಾ 'ಬರ್ಮ' ಅಂತ ಟೈಟಲ್‌ ಇಟ್ಟಿದ್ದಾರೆ. ಈ ಮೂಲಕ ಮತ್ತೆ ಯಶಸ್ಸನ್ನು ಹುಡುಕಿ ಹೊರಟಿದ್ದಾರೆ ಚೇತನ್. ಶೂಟಿಂಗ್ ಅಖಾಡದಲ್ಲಿರುವ ಬರ್ಮ ಸಿನಿಮಾದಲ್ಲಿ ಶಾವರ್ ಅಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ದೊಡ್ಡ ತಾರಾ ಬಳಗವೇ ಈ ಸಿನಿಮಾದಲ್ಲಿ ಇದೆ. ಬರ್ಮ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತದೆ.

ಇದನ್ನೂ ಓದಿ: ಓಂ 2 ಬರುತ್ತೆ ಅಂದ್ರೆ ನಾನು ಎಷ್ಟು ವರ್ಷ ಬೇಕಾದರೂ ಕಾಯುತ್ತಿನಿ: ಶಿವರಾಜ್ ಕುಮಾರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.