ETV Bharat / entertainment

ಬನಾರಸ್: ಅಭಿಮಾನಿಗಳಿಗೆ ಝೈದ್ ಖಾನ್ ಧನ್ಯವಾದ

author img

By

Published : Nov 18, 2022, 4:57 PM IST

ಐದು ಭಾಷೆಗಳಲ್ಲಿ ನವೆಂಬರ್​ 4ರಂದು ತೆರೆಕಂಡ ಬನಾರಸ್ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು ನಟ ಝೈದ್ ಖಾನ್ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

Banaras movie successful show
ಬನಾರಸ್ ಸಿನಿಮಾ ಯಶಸ್ವಿ ಪ್ರದರ್ಶನ

ಶಾಸಕ ಜಮೀರ್ ಖಾನ್ ಪುತ್ರ ಝೈದ್ ಖಾನ್ ಅಭಿನಯಿಸಿರುವ ಬನಾರಸ್ ಸಿನಿಮಾ ಬಿಡುಗಡೆ ಆಗಿ ಮೂರನೇ ವಾರದತ್ತ ದಾಪುಗಾಲಿಟ್ಟಿದೆ. ಇದರೊಂದಿಗೆ ಮೊದಲ ಹೆಜ್ಜೆಯಲ್ಲಿಯೇ ನಾಯಕ ಝೈದ್ ಖಾನ್ ಭರವಸೆಯ ನಟನಾಗಿ ಹೊರ ಹೊಮ್ಮಿದ್ದಾರೆ.

ನಿರ್ದೇಶಕ ಜಯತೀರ್ಥ ನಿರ್ದೇಶನದಲ್ಲಿ ಮೂಡಿ ಬಂದ ಸಿನಿಮಾ ಮುಕ್ಕಾಲು ಭಾಗ ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ ಚಿತ್ರೀಕರಣ ಆಗಿದೆ. ಲವ್ ಸ್ಟೋರಿ ಜೊತೆಗೆ ಟೈಂ ಟ್ರಾವೆಲಿಂಗ್ ಕಥೆ ಆಧರಿಸಿರುವ ಚಿತ್ರಕ್ಕೆ ಪ್ರೇಕ್ಷಕರು ಮನಸೋತಿದ್ದು, ನಾಯಕ ನಟ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ನಾವು ನಿಜವಾಗಿಯೂ ಧನ್ಯರು. ನಮಗಿದು ಸಂಭ್ರಮದ ಕ್ಷಣ. ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಸಿನಿಮಾ ಸಾಗುತ್ತಿದೆ. ದೇಶಾದ್ಯಂತ ಎಲ್ಲರಿಗೂ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: 50 ದಿನಗಳನ್ನು ಪೂರೈಸಿದ ಕಾಂತಾರ.. ಯಶಸ್ಸಿನ ಮಾರ್ಗದಲ್ಲಿ ಹೊಂಬಾಳೆ ಫಿಲಂಸ್

ಮೊದಲ ಸಿನಿಮಾವಾದರೂ ಝೈದ್ ಖಾನ್ ಆ್ಯಕ್ಟಿಂಗ್ ಹಾಗು ಆ್ಯಕ್ಷನ್​​ ಕಲಿಕೆಯನ್ನು ಬಹಳ ಶ್ರಮ ವಹಿಸಿ ಅಭ್ಯಾಸ ಮಾಡಿ ಅಭಿನಯಿಸಿದಂತೆ ಕಾಣುತ್ತದೆ. ಜೊತೆಗೆ ಝೈದ್ ಖಾನ್ ಹಾಗು ಸೋನಲ್‌ ಮೊಂಥೆರೋ ಜೋಡಿಯ ಕೆಮಿಸ್ಟ್ರಿ ಈ ಸಿನಿಮಾದಲ್ಲಿ ವರ್ಕ್ ಔಟ್ ಆಗಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗು ಹಿಂದಿಯಲ್ಲಿ ಏಕಕಾಲಕ್ಕೆ ನವೆಂಬರ್​ 4ರಂದು ತೆರೆಕಂಡಿರುವ ಬನಾರಸ್ ಎಲ್ಲೆಡೆ ಪ್ರದರ್ಶನ ಕಾಣುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.