ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ನಟಿ ಕೆಲವು ದಿನಗಳ ಹಿಂದೆ ಸರಳವಾಗಿ, ಸೀಮಂತ ಶಾಸ್ತ್ರವನ್ನು ಮಾಡಿಕೊಂಡಿದ್ದಾರೆ. ಈ ಸಂಭ್ರಮದ ಸುಂದರ ಕ್ಷಣಗಳನ್ನ ಸಂಜನಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದರ ಬೆನ್ನೆಲ್ಲೇ ಸಂಜನಾ ಗಲ್ರಾನಿ ಬೇಬಿ ಬಂಪ್ ಫೋಟೋ ಶೂಟ್ ಮಾಡಿಸಿ ಗಮನ ಸೆಳೆದಿದ್ದಾರೆ.
ಸದ್ಯ ಸಂಜನಾ ಗಲ್ರಾನಿ ಒಂಬತ್ತು ತಿಂಗಳ ತುಂಬು ಗರ್ಭಿಣಿಯಾಗಿದ್ದಾರೆ. ಬೇಬಿ ಬಂಪ್ ಜೊತೆಗೆ ಫೋಟೋ ಶೂಟ್ ಮಾಡಿಸಿದ್ದಾರೆ. ಗುಲಾಬಿ ಬಣ್ಣದ ಕಾಸ್ಟ್ಯೂಮ್ನಲ್ಲಿ ಸಂಜನಾ ಗಲ್ರಾನಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ತಲೆಗೆ ಹ್ಯಾಟ್ ಹಾಕಿಕೊಂಡು ಸ್ಟೈಲಿಷ್ ಕಾಸ್ಟ್ಯೂಮ್ನಲ್ಲಿ ಸಂಜನಾ ಗಲ್ರಾನಿ ಕ್ಯಾಮೆರಾ ಕಣ್ಣುಗಳಲ್ಲಿ ಕ್ಲಿಕ್ ಆಗಿದ್ದಾರೆ.
ಸಂಜನಾ ಸಿನಿಮಾ ಕ್ಷೇತ್ರಕ್ಕೆ ಬಂದಿದ್ದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ನಾನು 18ನೇ ವಯಸ್ಸಿಗೆ ಸಿನಿಮಾ ಇಂಡಸ್ಟ್ರಿಗೆ ಬಂದೆ. ಕನ್ನಡ ಹಾಗೂ ತೆಲುಗು ಸೇರಿದಂತೆ 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದೇನೆ. ನನ್ನ ಕಷ್ಟದ ಸಮಯದಲ್ಲಿ ನಾನು, ಸಂಜನಾ ಫೌಂಡೇಶನ್ ಹೆಸರಲ್ಲಿ ಸಾಕಷ್ಟು ಸಾಮಾಜಿಕ ಕೆಲಸಗಳನ್ನ ಮಾಡುವ ಮೂಲಕ, ನನ್ನ ಜೀವನದಲ್ಲಿ ನಡೆದ ಕಹಿ ಘಟನೆಗಳನ್ನ ಮರೆಯುತ್ತಿದ್ದೇನೆ. ಈಗ ನಾನು 9 ತಿಂಗಳ ಗರ್ಭಿಣಿ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಮೊದಲ ಮಗುವಿನ ನಿರೀಕ್ಷೆಯಲ್ಲಿ ಸ್ಯಾಂಡಲ್‌ವುಡ್ ನಟಿ; ಸಂಜನಾ ಗಲ್ರಾನಿ ಬೇಬಿ ಬಂಪ್ ಫೋಟೋಶೂಟ್