ಕನ್ನಡದ ಜನಪ್ರಿಯ ಕಾರ್ಯಕ್ರಮ 'ವೀಕೆಂಡ್ ವಿತ್ ರಮೇಶ್' ಸಾಧಕರ ಸೀಟ್ನಲ್ಲಿ ನಟ ಅವಿನಾಶ್ ಕುಳಿತು ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಬಾಲ್ಯ, ಶಿಕ್ಷಣ, ಉದ್ಯೋಗ, ರಂಗಭೂಮಿ, ಸಿನಿಮಾ, ಕುಟುಂಬ ಹೀಗೆ ಹಲವು ವಿಚಾರಗಳ ಬಗ್ಗೆ ವಿವರಿಸಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರತೀ ಶನಿವಾರ ಮತ್ತು ಭಾನುವಾರ ಪ್ರಸಾರವಾಗುವ ಈ ಕಾರ್ಯಕ್ರಮದ ಆರನೇ ಅತಿಥಿಯಾಗಿ ನಟ ಅವಿನಾಶ್ ಗಮನ ಸೆಳೆದಿದ್ದಾರೆ.
ಪ್ರಮುಖ ಪೋಷಕ ಪಾತ್ರಗಳಿಗೆ ಜೀವ ತುಂಬುತ್ತಾ ಬಂದಿರುವ ಅವಿನಾಶ್ ಈಗಲೂ ಸ್ಯಾಂಡಲ್ವುಡ್ನಲ್ಲಿ ಸಕ್ರಿಯರಾಗಿದ್ದಾರೆ. ಇಂಗ್ಲಿಷ್ ಭಾಷೆ ಬಾರದವರು ಸಾಕಷ್ಟು ಶ್ರಮಿಸಿ ಕೊನೆಗೆ ಇಂಗ್ಲೀಷ್ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಇತ್ತ ಉತ್ತಮ ಕನ್ನಡವೂ ಬಾರದಿದ್ದ ಸಮಯದಲ್ಲಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ತಮ್ಮದೇ ಆದ ಚಾಪು ಮೂಡಿಸಿದ್ದಾರೆ. ಹೀಗೆ ಹಲವು ಸಾಧನೆ, ಏರಿಳಿತಗಳು ಈ ಕಾರ್ಯಕ್ರಮದ ಮೂಲಕ ಪ್ರೇಕ್ಷಕರ ಮುಂದೆ ಅನಾವರಣಗೊಂಡಿದೆ.
ನಟ ಅವಿನಾಶ್ ಯಳಂದೂರಿನವರು. ತಂದೆ ವಕೀಲ, ರೈತರಾಗಿ ಕೆಲಸ ಮಾಡಿದ್ದಾರೆ. ಬಾಲ್ಯದಲ್ಲಿಯೂ ಸಾಕಷ್ಟು ಆ್ಯಕ್ಟೀವ್ ಇದ್ದ ಅವಿನಾಶ್ ಅವರಿಗೆ ಸರಿಯಾಗಿ ಇಂಗ್ಲಿಷ್ ಬರುತ್ತಿರಲಿಲ್ಲ. ತಮ್ಮ ಸಹೋದರಿಯೊಂದಿಗೆ ಕಾರ್ಯಕ್ರಮವೊಂದಕ್ಕೆ ಹೋದಾಗ ಯಾರೋ ಅವರ ಬಳಿ ಇಂಗ್ಲಿಷ್ನಲ್ಲಿ ಮಾತನಾಡಿದ್ದು, ಪ್ರತಿಕ್ರಿಯಿಸಲು ಅವಿನಾಶ್ ಅವರಿಗೆ ಸಾಧ್ಯವಾಗಲಿಲ್ಲ. ಈ ಹಿನ್ನೆಲೆ ಆಂಗ್ಲ ಭಾಷೆ ಮೇಲೆ ಹಿಡಿತ ಸಾಧಿಸಬೇಕೆಂದು ಹಠ ತೊಟ್ಟು, ಇಂಗ್ಲಿಷ್ ಕಲಿಯುತ್ತಾರೆ. ಎಂಎ ಪದವಿಯನ್ನು ಇಂಗ್ಲೀಷ್ ಅನ್ನೇ ಆರಿಸಿಕೊಂಡು ಇಂಗ್ಲೀಷ್ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಾರೆ. ಜೊತೆಗೆ ರಂಗಭೂಮಿಯಲ್ಲಿಯೂ ಅವಿನಾಶ್ ಗುರುತಿಸಿಕೊಂಡಿದ್ದರು.
- " class="align-text-top noRightClick twitterSection" data="
">
ನಾಟಕ ವರ್ಕ್ಶಾಪ್ವೊಂದು ಈ ನಟನನ್ನು ಭಾರೀ ಸೆಳೆಯಿತು. ಬಳಿಕ ಸ್ಪಂದನ ಎಂಬ ನಾಟಕ ತಂಡ ಸೇರಿ ಅಲ್ಲಿ ಹಲವು ನಾಟಕಗಳನ್ನು ಮಾಡಿದ್ದಾರೆ. ಇದೇ ತಂಡದಲ್ಲಿ ನಟ ದೇವರಾಜ್ ಕೂಡ ಪರಿಚಯರಾದರು. ದೇವರಾಜ್ ಅವರು ಸಿನಿಮಾ ಆಡಿಶನ್ ಒಂದಕ್ಕೆ ಕರೆದುಕೊಂಡು ಹೋದರು. ಅಲ್ಲಿ ಈ ಇಬ್ಬರಿಗೂ ಅವಕಾಶ ಒದಗಿಬಂತು. ರಂಗಭೂಮಿ ಜೊತೆಗೆ ಸಿನಿಮಾಗಳಲ್ಲಿಯೂ ಅವಿನಾಶ್ ಕೆಲಸ ಮಾಡಿದರು. ಬಳಿಕ ಸಿನಿಮಾ ಕ್ಷೇತ್ರದಲ್ಲಿ ಗುರುತಿಸಿಕೊಂಡರು. ಪ್ರಮುಖ ಪೋಷಕ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ಇದನ್ನೂ ಓದಿ: ಕಟೀಲು ದುರ್ಗಾಪರಮೇಶ್ವರಿ ದೇವಿಗೆ ಹರಕೆ ಸೀರೆ ಒಪ್ಪಿಸಿದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ
ಇನ್ನೂ ಅವಿನಾಶ್ ಹಾಗೂ ಮಾಳವಿಕಾ ಅವರು ಸಾಹಸಸಿಂಹ ವಿಷ್ಣುವರ್ಧನ್ ಅವರಿಗೆ ದೇವರ ಸ್ಥಾನ ಕೊಟ್ಟಿದ್ದಾರೆ. ದೇವರ ಮನೆಯಲ್ಲಿ ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಟ ವಿಷ್ಣುವರ್ಧನ್ ಅವರ ಫೋಟೋ ಇದೆ. ಅವಿನಾಶ್ ಮಾಳವಿಕಾ ದಂಪತಿ ಮೇಲೆ ವಿಶೇಷ ಪ್ರೀತಿ ಹೊಂದಿದ್ದರು ವಿಷ್ಣುವರ್ಧನ್.
ಇದನ್ನೂ ಓದಿ: ಮೂರು ಬಾರಿ 'ಕಾಂತಾರ' ನೋಡಿದೆ, ಸಿನಿಮಾ ಕ್ಲೈಮ್ಯಾಕ್ಸ್ ಮೈ ಜುಮ್ಮೆನಿಸಿತು: ಕನ್ನಡ ಚಿತ್ರಗಳನ್ನು ಕೊಂಡಾಡಿದ ನಟ ವಿಕ್ರಮ್
2001ರಲ್ಲಿ ಮಾಳವಿಕಾ ಅವರನ್ನು ಮದುವೆಯಾದ ಅವಿನಾಶ್ ಒಂದೇ ಧಾರವಾಹಿಯಲ್ಲಿ ನಟಿಸಿ ಸ್ನೇಹಿತರಾದವರು. ಇವರಿಗೆ ಗಾಲವ್ ಎಂಬ ಪುತ್ರನಿದ್ದಾನೆ. ವಿಶೇಷ ಚೇತನರಾಗಿರುವ ಗಾಲವ್ ಬಗ್ಗೆ ಮಾತನಾಡಿ ಕಾರ್ಯಕ್ರಮದಲ್ಲಿ ಈ ದಂಪತಿ ಭಾವುಕರಾದರು. ಇನ್ನು ಭಾನುವಾರ ಪ್ರಸಾರ ಆಗುವ ಎಪಿಸೋಡ್ನಲ್ಲಿ ಮಂಡ್ಯ ರಮೇಶ್ ಸಾಧಕರ ಸೀಟು ಅಲಂಕರಿಸಿದ್ದಾರೆ. ರಂಗಭೂಮಿಯಿಂದ ಸಿನಿಮಾಗೆ ಬಂದಿರುವ ರಮೇಶ್ ಸುಮಾರು ಮೂರು ದಶಕಕ್ಕೂ ಹೆಚ್ಚು ಸಮಯದಿಂದ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.