ETV Bharat / entertainment

'ಅವತಾರ ಪುರುಷ'ನಿಗೆ ಸಾಥ್ ನೀಡಿದ ಆ್ಯಕ್ಷನ್‌ ಪ್ರಿನ್ಸ್ ಧ್ರುವ ಸರ್ಜಾ.. - Ashika Ranganath Starrer Avathara Purusha Movie

ಬೆಂಗಳೂರಿನ ಖಾಸಗಿ ಹೋಟೆಲ್​​ನಲ್ಲಿ ಆ್ಯಕ್ಷನ್‌ ಪ್ರಿನ್ಸ್ ಧ್ರುವ ಸರ್ಜಾ 'ಅವತಾರ ಪುರುಷ' ಸಿನಿಮಾದ ಅಧಿಕೃತ ಟ್ರೈಲರ್ ಬಿಡುಗಡೆ ಮಾಡಿದರು..

Avathara Purusha Movie Trailer Release
ಅವತಾರ ಪುರುಷ ಸಿನಿಮಾದ ಅಧಿಕೃತ ಟ್ರೈಲರ್ ಬಿಡುಗಡೆ
author img

By

Published : May 3, 2022, 11:34 AM IST

ಕನ್ನಡ ಚಿತ್ರರಂಗದಲ್ಲಿ ಅಧ್ಯಕ್ಷನಾಗಿ ಬೆಳ್ಳಿ ಪರದೆ ಮೇಲೆ ರಾರಾಜಿಸಿದವರು ನಟ ಶರಣ್. ಕಾಮಿಡಿ ಪಾತ್ರಗಳನ್ನು ಮಾಡುತ್ತಿದ್ದ ಇವರು, ಈಗ ಬೇಡಿಕೆಯ ನಾಯಕ ನಟ. ನಿನ್ನೆ (ಸೋಮವಾರ) ಶರಣ್​​ ಅಭಿನಯದ ಬಹುನಿರೀಕ್ಷಿತ 'ಅವತಾರ ಪುರುಷ' ಸಿನಿಮಾದ ಆಫಿಷಿಯಲ್ ಟ್ರೈಲರ್ ಬಿಡುಗಡೆಯಾಗಿದೆ. ನಗರದ ಖಾಸಗಿ ಹೋಟೆಲ್​​ನಲ್ಲಿ 'ಆ್ಯಕ್ಷನ್‌ ಪ್ರಿನ್ಸ್' ಧ್ರುವ ಸರ್ಜಾ ಟ್ರೈಲರ್ ಅನಾವರಣ ಮಾಡಿದರು.

'ಅವತಾರ ಪುರುಷ' ಸಿನಿಮಾದ ಅಧಿಕೃತ ಟ್ರೈಲರ್ ಬಿಡುಗಡೆ..

ಬಳಿಕ ಮಾತನಾಡಿದ ಧ್ರುವ ಸರ್ಜಾ, ಟ್ರೈಲರ್ ನೋಡಿದಾಕ್ಷಣ ಪಾಸಿಟಿವ್ ವೈಬ್ಸ್ ಇದೆ. ನಿರ್ದೇಶಕ ಸಿಂಪಲ್ ಸುನಿ, ಈ ಸಿನಿಮಾ ರಿಲೀಸ್ ಆದ ಬಳಿಕ‌ ಅವತಾರ ಸುನಿ ಅಂತಾ ಕರೆಯುತ್ತಾರೆ. ಈ ಚಿತ್ರದಲ್ಲಿ ಶರಣ್, ಸಾಯಿಕುಮಾರ್, ಆಶಿಕಾ ರಂಗನಾಥ್, ಶ್ರೀನಗರ ಕಿಟ್ಟಿ ಅವರ ಪಾತ್ರಗಳು ಇಂಪ್ರೆಸ್ ಆಗಿದೆ. ನಾನು ಫಸ್ಟ್ ಡೇ ಫಸ್ಟ್ ಶೋ ನೋಡುತ್ತೇನೆ ಎಂದರು.

ನಟಿ ಆಶಿಕಾ ರಂಗನಾಥ್ ಮಾತನಾಡಿ, ಕನ್ನಡ ಸಿನಿಮಾಗಳನ್ನ ನಮ್ಮ‌ ಕನ್ನಡಿಗರು ಹೆಚ್ಚಾಗಿ ಪ್ರೀತಿಸಿ ಅಪ್ಪಿಕೊಳ್ಳುತ್ತಿದ್ದಾರೆ. ಇದು ಹೆಮ್ಮೆಯ ವಿಚಾರ ಎಂದರು. ಹಿರಿಯ ನಟಿ ಭವ್ಯ ಮಾತನಾಡಿ, ಸಂಬಂಧಗಳಿಗೆ ತುಂಬಾ ಮೌಲ್ಯ ಇರುವ ಸಿನಿಮಾ ಇದು. ನಾನು ಮೊದಲ ಬಾರಿ ಸಾಯಿಕುಮಾರ್ ಜತೆ ಸ್ಕ್ರೀನ್ ಹಂಚಿಕೊಂಡಿದ್ದೇನೆ ಎಂದರು.

ನಿರ್ದೇಶಕ ಸಿಂಪಲ್ ಸುನಿ ಮಾತನಾಡಿ, ಈ ಸಿನಿಮಾದ ಸ್ಕ್ರಿಪ್ಟ್ ಶರಣ್ ಸರ್​​ಗೆ ಕೊಡಲು ಭಯ ಇತ್ತು. ಸಾಂಗ್ ಮಾಡಬೇಕಾದರೆ, ಮಂಡಿ ನೋವು ಬರಿಸಿಕೊಂಡು ಕೆಲಸ ಮಾಡಿದರು. ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರಿಗೋಸ್ಕರ ಸಿನಿಮಾ ಗೆಲ್ಲಬೇಕು. ಬಹುಪರಾಕ್ ಸಿನಿಮಾಗಿಂತ, ಶ್ರೀನಗರ ಕಿಟ್ಟಿ ಪಾತ್ರ ಈ ಸಿನಿಮಾದಲ್ಲಿ ಬಹಳ ಚೆನ್ನಾಗಿದೆ ಎಂದರು.

ನಟ ಸಾಯಿಕುಮಾರ್ ಮಾತನಾಡಿ, ಶರಣ್ ಅವರು ಬಹುಮುಖ ಪ್ರತಿಭೆಯ ನಟ. ನಾನು ಎಲ್ಲಾ ನಾಯಕಿರ ಜತೆ ಅಭಿನಯಿಸಿದ್ದೆ. ಆದರೆ, ಭವ್ಯ ಅವರ ಜತೆ ನಟಿಸುವ ಅವಕಾಶ ಸಿಕ್ಕಿರಲಿಲ್ಲ. ಅವತಾರ ಪುರುಷ ಸಿನಿಮಾ ಮೂಲಕ ಅದು ಈಡೇರಿದೆ ಎಂದರು. ನಟ ಶರಣ್ ಮಾತನಾಡುತ್ತಾ, ಸಾಯಿಕುಮಾರ್ ಹಾಗೂ ಭವ್ಯ ಮೇಡಂ ಜತೆ ನಟಿಸಲು ಅವಕಾಶ ಸಿಕ್ಕಿರುವುದು ತುಂಬಾ ಖುಷಿಕೊಟ್ಟಿದೆ. ಅವತಾರ ಪುರುಷ ಮಲ್ಟಿಸ್ಟಾರ್ ಸಿನಿಮಾ ಇದು.

ತೆರೆ ಹಿಂದಿನ ಹೀರೋ ಕ್ಯಾಮೆರಾಮ್ಯಾನ್ ವಿಲಿಯಂ ಡೇವಿಡ್ ಹಾಗೂ ನಿರ್ಮಾಪಕ ಪುಷ್ಕರ್. ಈ ಸಿನಿಮಾಗೆ ಆಂಜನೇಯ ಭಕ್ತ ಧ್ರುವ ಅವರ ಸಾಥ್ ಸಿಕ್ಕಿದೆ. ಈ ಸಿನಿಮಾ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದೇ ವೇಳೆ ನಿರ್ಮಾಪಕ ಪುಷ್ಕರ್ ತಂದೆ ಮಲ್ಲಿಕಾರ್ಜುನಯ್ಯ ಅನುವಾದ ಮಾಡಿರುವ ಗದ್ಯ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.

ಸಿಂಪಲ್ ಸುನಿ ನಿರ್ದೇಶನ‌ದ 'ಅವತಾರ ಪುರುಷ' ಚಿತ್ರದಲ್ಲಿ ಶರಣ್ ಜ್ಯೂನಿಯರ್‌ ಕಲಾವಿದನಾಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾಗಳ ಹೊರತಾಗಿ ಒಮ್ಮೆ ನಿಜ ಜೀವನದಲ್ಲಿ ನಟಿಸಬೇಕಾದ ಸಂದರ್ಭ ಎದುರಾದರೆ ಏನಾಗುತ್ತದೆ ಎಂಬುದು ಈ ಚಿತ್ರದ ಒನ್‌ಲೈನ್‌ ಕಥೆ. ಶರಣ್, ಆಶಿಕಾ ರಂಗನಾಥ್, ಸಾಯಿಕುಮಾರ್, ಸುಧಾರಾಣಿ, ಶ್ರೀನಗರ ಕಿಟ್ಟಿ, ಭವ್ಯ ಈ ಚಿತ್ರದಲ್ಲಿದ್ದಾರೆ‌. ಅರ್ಜುನ್ ಜನ್ಯ ಸಂಗೀತ ನೀಡಿದ್ದು, ಪುಷ್ಕರ್‌ ಮಲ್ಲಿಕಾರ್ಜುನಯ್ಯ ಬಂಡವಾಳ ಹೂಡಿದ್ದಾರೆ. ಮೇ 6ಕ್ಕೆ ಈ ಸಿನಿಮಾ ಬಿಡುಗಡೆಯಾಗುತ್ತಿದೆ.

ಇದನ್ನೂ ಓದಿ: 'ಅವತಾರ ಪುರುಷ'ನಾಗಿ ಪ್ರೇಕ್ಷಕರಿಗೆ ಕಿಕ್ ಕೊಡಲು ರೆಡಿಯಾದ ವಿಕ್ಟರಿ ಹೀರೋ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.