ETV Bharat / entertainment

$2 ಬಿಲಿಯನ್ ಗಡಿ ದಾಟಿದ 'ಅವತಾರ್​: ದಿ ವೇ ಆಫ್​ ವಾಟರ್​': ಅತೀ ಹೆಚ್ಚು ಗಳಿಕೆಯ 6ನೇ ಸಿನಿಮಾ! - The Way of Water

ಭಾರತದಲ್ಲಿ 368.20 ಕೋಟಿ ರೂ.ಗೂ ಹೆಚ್ಚು ಬಾಕ್ಸ್​ ಆಫೀಸ್​ನಲ್ಲಿ ಗಳಿಕೆ ಕಂಡಿರುವ ಅವತಾರ್​ ಭಾಗ 2 ಸಿನಿಮಾ ಇದೀಗ ಜಾಗತಿಕವಾಗಿ ಅತೀ ಹೆಚ್ಚು ಗಳಿಸಿರುವ ಸಿನಿಮಾಗಳ ಸಾಲಿನಲ್ಲಿ ಆರನೇ ಸ್ಥಾನದಲ್ಲಿದೆ.

Avatar Collection
ಅವತಾರ್​ ಕಲೆಕ್ಷನ್​
author img

By

Published : Jan 23, 2023, 2:31 PM IST

ಬಿಡುಗಡೆಯಾಗಿ ಕೇವಲ ಆರು ವಾರಗಳನ್ನು ಪೂರೈಸಿರುವ ಪ್ರಶಸ್ತಿ ವಿಜೇತ ಹಾಲಿವುಡ್​ ಸಿನಿಮಾ ನಿರ್ದೇಶಕ ಜೇಮ್ಸ್ ಕ್ಯಾಮರಾನ್ ಅವರ ಬ್ಲಾಕ್‌ಬಸ್ಟರ್ ಸೀಕ್ವೆಲ್ ಅವತಾರ್: ದಿ ವೇ ಆಫ್ ವಾಟರ್ ಬಾಕ್ಸ್​ ಆಫೀಸ್​ನಲ್ಲಿ ದಾಖಲೆಗಳನ್ನು ನಿರ್ಮಿಸುತ್ತಿದೆ. ಇದೀಗ ಜಾಗತಿಕ ಟಿಕೆಟ್ ಮಾರಾಟದಲ್ಲಿ $2 ಬಿಲಿಯನ್ ದಾಟಿದ್ದು, ಈ ದಾಖಲೆಯನ್ನು ನಿರ್ಮಿಸಿರುವ ಚಿತ್ರಗಳ ಇತಿಹಾಸದಲ್ಲಿಯೇ ಅವತಾರ್​ 2 ಆರನೇ ಸಿನಿಮಾ ಎಂಬ ಹೆಗ್ಗಳಿಕೆ ಪಡೆದಿದೆ. ಈ ಗಡಿ ದಾಟಿರುವ ಕೋವಿಡ್​ ಸಾಂಕ್ರಾಮಿಕ ಕಾಲಘಟ್ಟದ ಮೊದಲ ಸಿನಿಮಾ ಎನ್ನುವ ಹಿರಿಮೆಯೂ ಇದರದ್ದು.

ಅವತಾರ್, ಅವೆಂಜರ್ಸ್: ಎಂಡ್‌ಗೇಮ್, ಟೈಟಾನಿಕ್, ಸ್ಟಾರ್ ವಾರ್ಸ್: ದಿ ಫೋರ್ಸ್ ಅವೇಕನ್ಸ್ ಮತ್ತು ಅವೆಂಜರ್ಸ್: ಇನ್ಫಿನಿಟಿ ವಾರ್ ಸಿನಿಮಾಗಳು ಈಗಾಗಲೇ ಸೇರಿರುವ ವಿಶೇಷ ಕ್ಲಬ್‌ಗೆ ಸೇರಿಕೊಳ್ಳುವ ಮೂಲಕ ಮೈಲಿಗಲ್ಲನ್ನು ಸೃಷ್ಟಿಸಿದೆ ಅವತಾರ್​: ದಿ ವೇ ಆಫ್​ ವಾಟರ್​. ಈ ಮೂಲಕ ಸಾರ್ವಕಾಲಿಕ ಅತೀ ಹೆಚ್ಚು ಗಳಿಕೆಯ ಆರು ಸಿನಿಮಾಗಳಲ್ಲಿ ಮೂರು ಸಿನಿಮಾಗಳ ಸರದಾರರಾಗಿ ಜೇಮ್ಸ್ ಕ್ಯಾಮರಾನ್​ ಹೊರಹೊಮ್ಮಿದ್ದಾರೆ. ಜೇಮ್ಸ್​ ಕ್ಯಾಮರಾನ್​ ಅವರು $2 ಬಿಲಿಯನ್ ದಾಟಿದ ಮೂರು ಸಿನಿಮಾಗಳ ಏಕೈಕ ನಿರ್ದೇಶಕರು ಕೂಡಾ ಹೌದು.

ಅದಲ್ಲದೇ, ಅವತಾರ್ ಸರಣಿಯಲ್ಲಿ ನೆಯ್ಟಿರಿ ಪಾತ್ರದಲ್ಲಿ ನಟಿಸಿರುವ ಜೊಯ್ ಸಲ್ಡಾನಾ ಅವರದೂ ಒಂದು ದಾಖಲೆ ಇದೆ. $2 ಬಿಲಿಯನ್ ದಾಟಿರುವ ಆರು ಚಿತ್ರಗಳ ಪೈಕಿ ನಾಲ್ಕು ಚಿತ್ರಗಳಲ್ಲಿ ಜೊಯ್​ ಸಲ್ಡಾನಾ ಅಭಿನಯಿಸಿದ್ದು, ಹೊಸ ದಾಖಲೆ ಅವರ ಹೆಸರಿಗೆ ಸೇರಿಕೊಂಡಿದೆ. ಅವರು ಅವತಾರ್​ ಸಿರೀಸ್​ ಮಾತ್ರವಲ್ಲ, ಅವೆಂಜರ್ಸ್: ಎಂಡ್‌ಗೇಮ್ ಮತ್ತು ಅವೆಂಜರ್ಸ್: ಇನ್ಫಿನಿಟಿ ವಾರ್ ಎರಡರಲ್ಲೂ ಕಾಣಿಸಿಕೊಂಡಿದ್ದಾರೆ. ಗಮೋರಾ ಅವರ ಗಾರ್ಡಿಯನ್ಸ್ ಆಫ್ ದಿ ಗ್ಯಾಲಕ್ಸಿ ಪಾತ್ರದಲ್ಲಿ ನಟಿಸಿದ್ದರು.

ಗುರಿ ದಾಟಿ ಮುನ್ನುಗ್ಗಿದ ಸಿನಿಮಾ: ಇನ್ನೊಂದು ಗಮನಾರ್ಹ ವಿಷಯವೆಂದರೆ, ಅವತಾರ್​ 2 ಸಿನಿಮಾ ಬಿಡುಗಡೆಗೂ ಮುನ್ನ ನಿರ್ದೇಶಕ ಜೇಮ್ಸ್​ ಕ್ಯಾಮರಾನ್​ ಅವರು ಗಳಿಕೆಯ ಬಗ್ಗೆ ಹೊಂದಿದ್ದ ಗುರಿ ಮೀರಿ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಗಳಿಸುತ್ತಿದೆಯಂತೆ. ಸಿನಿಮಾದ ಸೀಕ್ವೆಲ್​ ಬಿಡುಗಡೆಗೂ ಮುನ್ನ ನಿರ್ದೇಶಕ ಕ್ಯಾಮೆರಾನ್​ ಮ್ಯಾಗಜೀನ್​ ಒಂದಕ್ಕೆ ನೀಡಿದ್ದ ಸಂದರ್ಶನದಲ್ಲಿ, ಅವತಾರ್​ 2 ಸಿನಿಮಾ ಚಲನಚಿತ್ರ ಇತಿಹಾಸದಲ್ಲಿ ಕೆಟ್ಟ ವ್ಯವಹಾರ ಪ್ರಕರಣವನ್ನು ಪ್ರತಿನಿಧಿಸುತ್ತದೆ. ಯಾಕೆಂದರೆ ದಾಖಲೆ ಮುರಿಯಬೇಕಾದರೆ ಈ ಸಿನಿಮಾ ಸಾರ್ವಕಾಲಿಕ ಮೂರು ಅಥವಾ ನಾಲ್ಕು ಅತಿ ಹೆಚ್ಚು ಗಳಿಕೆಯ ಚಲನಚಿತ್ರಗಳಲ್ಲಿ ಒಂದಾಗಬೇಕು. ಆದರೆ ಮುಂಬರುವ ದಿನಗಳಲ್ಲಿ ಆ ಸಾಧನೆಯನ್ನು ಸಾಧಿಸಲು ಇದು ಅತೀ ಹೆಚ್ಚು ಗಳಿಕೆಯ ನಾಲ್ಕನೇ ಮತ್ತು ಐದನೇ ಸಿನಿಮಾಗಳಾದ ಬಾಕ್ಸ್​ ಆಫೀಸ್​ನಲ್ಲಿ $2.07 ಬಿಲಿಯನ್​ ಗಳಿಸಿರುವ ಸ್ಟಾರ್​ ವಾರ್: ದ ಫೋರ್ಸ್​ ಅವೇಕನ್ಸ್​ ಮತ್ತು $2.04 ಬಿಲಿಯನ್​ ಗಳಿಸಿರುವ ಅವೇಂಜರ್ಸ್​: ಇನ್​ಫಿನಿಟಿ ವಾರ್​ ಸಿನಿಮಾಗಳನ್ನು ಹಿಂದಿಕ್ಕುತ್ತದೆ ಎಂದು ಹೇಳಿದ್ದರು.

ವಿವಿಧ ದೇಶಗಳಲ್ಲಿ ಸಿನಿಮಾ ಗಳಿಕೆಯೆಷ್ಟು?: 13 ವರ್ಷಗಳ ಹಿಂದೆ ತೆರೆಗೆ ಬಂದ ಅವತಾರ್​ ಮೊದಲ ಭಾಗ $2.9 ಬಿಲಿಯನ್​ ಗಳಿಸುವ ಮೂಲಕ ಸಾರ್ವಕಾಲಿಕ ಅತಿಹೆಚ್ಚು ಗಳಿಕೆಯ ಸಿನಿಮಾಗಳ ಸಾಲಿನಲ್ಲಿ ಅಗ್ರಸ್ಥಾನದಲ್ಲಿದೆ. ಅವೆಂಜರ್ಸ್: ಎಂಡ್‌ಗೇಮ್ $2.79 ಬಿಲಿಯನ್​ ಗಳಿಸುವ ಮೂಲಕ ಎರಡನೇ ಸ್ಥಾನದಲ್ಲಿದೆ. ಟೈಟಾನಿಕ್ $2.19 ಬಿಲಿಯನ್​ ಗಳಿಸಿ ಮೂರನೇ ಸ್ಥಾನದಲ್ಲಿದೆ. ಇಲ್ಲಿಯವರೆಗೆ, ದಿ ವೇ ಆಫ್ ವಾಟರ್ ದೇಶೀಯ ಬಾಕ್ಸ್ ಆಫೀಸ್‌ನಲ್ಲಿ $598 ಮಿಲಿಯನ್ ಮತ್ತು ಅಂತಾರಾಷ್ಟ್ರೀಯವಾಗಿ $1.4 ಬಿಲಿಯನ್ ಗಳಿಸಿದೆ. ಸಾಗರೋತ್ತರದ ಮಾರುಕಟ್ಟೆಗಳಾದ ಚೀನಾ ($229 ಮಿಲಿಯನ್), ಫ್ರಾನ್ಸ್ ($129 ಮಿಲಿಯನ್), ಜರ್ಮನಿ ($117 ಮಿಲಿಯನ್), ಕೊರಿಯಾ ($96 ಮಿಲಿಯನ್) ಮತ್ತು ಯುನೈಟೆಡ್ ಕಿಂಗ್‌ಡಮ್​ನಲ್ಲಿ ($81 ಮಿಲಿಯನ್) ಗಳಿಸಿದೆ.

ಅವತಾರ್​ ಮೊದಲ ಭಾಗ $116 ಮಿಲಿಯನ್​ ಗಳಿಸಿದ್ದ ರಷ್ಯಾದಲ್ಲಿ ಅವತಾರ್​ 2 ಸಿನಿಮಾ ಥಿಯೇಟರ್​ಗಳಲ್ಲಿ ಪ್ರಸಾರವಾಗುತ್ತಿಲ್ಲ. ಜಪಾನ್​ನಲ್ಲಿ ಮೊದಲ ಭಾಗ $176 ಮಿಲಿಯನ್​ ಗಳಿಸಿತ್ತು. ಆದರೆ ಎರಡನೇ ಭಾಗ ಕೇವಲ $28 ಮಿಲಿಯನ್​ ಗಳಿಸಿ ಫ್ಲಾಪ್​ ಆಗಿದೆ. ಮೊದಲ ಭಾಗ 2009ರಲ್ಲಿ ಬಿಡುಗಡೆಯಾದ 13 ವರ್ಷಗಳ ನಂತರ ದೀರ್ಘ ಅವಧಿಯ ನಂತರ ಎರಡನೇ ಭಾಗ ಅವತಾರ್​: ದಿ ವೇ ಆಫ್ ವಾಟರ್​ ವಿಶ್ವದಾದ್ಯಂತ ಡಿಸೆಂಬರ್​ನಲ್ಲಿ ತೆರೆ ಕಂಡಿತ್ತು.

ಇದೀಗ ಅವತಾರ್ 2 ಸಿನಿಮಾ $2 ಬಿಲಿಯನ್ ಕ್ರಾಸ್​ ಮಾಡುವಲ್ಲಿ ಯಶಸ್ವಿಯಾಗಿರುವುದು, ಕೋವಿಡ್​ನಿಂದ ಹೊರಬರುತ್ತಿರುವ ಸಮಯದಲ್ಲಿ ಅಸಾಧ್ಯವಾದಂತಹ ಮಾನದಂಡವನ್ನು ದಾಟಿ ಸೃಷ್ಟಿಸಿರುವ ಬೆಂಚ್​ ಮಾರ್ಕ್ ಎಂದರೆ ತಪ್ಪಾಗದು.

ಇದನ್ನೂ ಓದಿ: ಭಾರತದಲ್ಲಿ ಹೊಸ ದಾಖಲೆ ಬರೆದ 'ಅವತಾರ್ 2': ಭರ್ಜರಿ ಕಲೆಕ್ಷನ್!, ಎಷ್ಟು ಗೊತ್ತಾ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.