2009ರಲ್ಲಿ ಮೂಡಿಬಂದ ಅವತಾರ್ ಸಿನಿಮಾ ವಿಶ್ವದಾದ್ಯಂತ ಧೂಳೆಬ್ಬಿಸಿತ್ತು. ಪರದೆ ಮೇಲೆ ಬರುವ ಒಂದೊಂದು ದೃಶ್ಯಗಳು ಕೂಡ ರೋಮಾಂಚನಕಾರಿಯಾಗಿದ್ದವು. ಇದೀಗ ಮತ್ತೊಮ್ಮೆ ಈ ಚಿತ್ರ ಮರು ಬಿಡುಗಡೆ ಆಗುತ್ತಿದ್ದು, ಥಿಯೇಟರ್ಗಳಲ್ಲಿ ಕೇವಲ ಎರಡು ವಾರಗಳ ಕಾಲ ಪ್ರದರ್ಶನ ಆಗಲಿದೆ.
ಜೇಮ್ಸ್ ಕ್ಯಾಮೆರಾನ್ ನಿರ್ದೇಶನದ ಈ ಸಿನಿಮಾದ ಪ್ರತಿ ದೃಶ್ಯ ಕೂಡ ವೀಕ್ಷಕರನ್ನು ಬೇರೆ ಲೋಕಕ್ಕೆ ಕರೆದುಕೊಂಡು ಹೋಗುವ ಅನುಭವ ಕೊಡಲಿದ್ದು, ಸೆ.23ಕ್ಕೆ ಥಿಯೇಟರ್ಗಳಲ್ಲಿ ಮರು ಬಿಡುಗಡೆ ಆಗಲಿದೆ. ಈ ಚಿತ್ರ ವಿಶ್ವದ ಸಿನಿಮಾ ಇತಿಹಾಸದಲ್ಲೇ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎಂಬ ಖ್ಯಾತಿ ಗಳಿಸಿದೆ. ಇನ್ನೂ ಅವತಾರ್ ಸಿನಿಮಾದ ಮುಂದುವರಿದ ಕಥೆ ತಿಳಿದುಕೊಳ್ಳಲು ಪ್ರೇಕ್ಷಕರು ಕಾತರರಾಗಿದ್ದಾರೆ.
ನಿರ್ದೇಶಕ ಜೇಮ್ಸ್ ಕ್ಯಾಮೆರಾನ್ ಅವತಾರ್ 2 ಸಿದ್ಧಪಡಿಸುತ್ತಿದ್ದು, ಅದು ಕೂಡ ಈ ವರ್ಷವೇ ಬಿಡುಗಡೆ ಆಗಲಿದೆ. 'ಅವತಾರ್: ದಿ ವೇ ಆಫ್ ವಾಟರ್' ಶೀರ್ಷಿಕೆಯುಳ್ಳ ಎರಡನೇ ಭಾಗ ಡಿ.16ಕ್ಕೆ ಬಿಡುಗಡೆ ಆಗಲಿದೆ. ಜನರನ್ನು ಮತ್ತೆ ಅವತಾರ್ ಲೋಕಕ್ಕೆ ಕೊಂಡೊಯ್ಯುವ ಮೊದಲು ಅವತಾರ್ ಭಾಗ 1ನ್ನು ರೀ-ರಿಲೀಸ್ ಮಾಡಲಾಗುತ್ತಿದೆ.
-
On September 23 #Avatar returns to the big screen for a limited time only. Watch the new trailer now 💙 pic.twitter.com/9REw4umdGW
— Avatar (@officialavatar) August 23, 2022 " class="align-text-top noRightClick twitterSection" data="
">On September 23 #Avatar returns to the big screen for a limited time only. Watch the new trailer now 💙 pic.twitter.com/9REw4umdGW
— Avatar (@officialavatar) August 23, 2022On September 23 #Avatar returns to the big screen for a limited time only. Watch the new trailer now 💙 pic.twitter.com/9REw4umdGW
— Avatar (@officialavatar) August 23, 2022
ಅವತಾರ್ ಸಿನಿಮಾದ ಗ್ರಾಫಿಕ್ಸ್ ದೃಶ್ಯಗಳನ್ನು ನೋಡುವುದೇ ಒಂದು ಅದ್ಭುತ ಅನುಭವ. ಬರೋಬ್ಬರಿ 13 ವರ್ಷಗಳ ಹಿಂದಿನ ಈ ಸಿನಿಮಾವನ್ನು ಈ ಕಾಲದ ತಂತ್ರಜ್ಞಾನಕ್ಕೆ ಅಪ್ಗ್ರೇಡ್ ಮಾಡಲು ಪ್ರಯತ್ನಿಸಲಾಗಿದೆ. ಸೆ.23ಕ್ಕೆ ಮರು ಬಿಡುಗಡೆ ಆಗುವ ಅವತಾರ್ ಭಾಗ 1 ಕೇವಲ 2 ವಾರಗಳ ಕಾಲ ಮಾತ್ರ ಥಿಯೇಟರ್ಗಳಲ್ಲಿ ಪ್ರದರ್ಶನಗೊಳ್ಳಲಿದೆ.
ಇದನ್ನೂ ಓದಿ: ಹೃದಯಾಘಾತಕ್ಕೊಳಗಾದ ಹಾಸ್ಯನಟ ರಾಜು ಶ್ರೀವಾಸ್ತವ್ ಆರೋಗ್ಯದಲ್ಲಿ ಚೇತರಿಕೆ
ಅವತಾರ್ ಸರಣಿಯಿಂದ ಐದು ಸಿನಿಮಾಗಳು ಹೊರಬರಲಿವೆ. ಮೊದಲ ಸಿನಿಮಾ 2009ರಲ್ಲಿ ತೆರೆಗೆ ಅಪ್ಪಳಿಸಿತ್ತು. ಇದಾದ ಬಳಿಕ ಸೀಕ್ವೆಲ್ ಬರಲು ಸುಮಾರು 13 ವರ್ಷಗಳೇ ಬೇಕಾಯಿತು. ಇನ್ನೂ ಹಾಲಿವುಡ್ ಮಂದಿಗೆ ಡಿಸೆಂಬರ್ ತಿಂಗಳು ತುಂಬಾನೇ ವಿಶೇಷ. ಕ್ರಿಸ್ಮಸ್ ಇರುವುದರಿಂದ ದುಬಾರಿ ವೆಚ್ಚದ ಸಿನಿಮಾಗಳು ಈ ಸಂದರ್ಭದಲ್ಲೇ ರಿಲೀಸ್ ಆಗುತ್ತವೆ. ಕ್ರಿಸ್ಮಸ್ ಪ್ರಯುಕ್ತ 2022ರ ಡಿಸೆಂಬರ್ 16ರಂದು ಅವತಾರ್ ಎರಡನೇ ಭಾಗ ರಿಲೀಸ್ ಆಗುತ್ತಿದೆ.