ETV Bharat / entertainment

ಅವತಾರ್​ 2 ಬಿಡುಗಡೆಗೆ ಸಜ್ಜು.. ಬೆಂಗಳೂರಿನಲ್ಲಿ ಟಿಕೆಟ್​ ದರ ಕೇಳಿದ್ರೆ ತಲೆ ತಿರುಗುತ್ತೆ - Avatar 2 latest news

ಅವತಾರ್ ಸಿನಿಮಾದ ಮುಂದುವರಿದ ಭಾಗ ಡಿಸೆಂಬರ್​ 16ರಂದು ಬಿಡುಗಡೆ ಆಗಲಿದ್ದು, ಸಿನಿಪ್ರಿಯರು ಚಿತ್ರ ವೀಕ್ಷಿಸಲು ಕಾತರರಾಗಿದ್ದಾರೆ. ಆದರೆ ಟಿಕೆಟ್​ ದರ ಮಾತ್ರ ಪ್ರೇಕ್ಷಕರ ತಲೆ ತಿರುಗುವಂತೆ ಮಾಡಿದೆ.

Avatar 2 ticket price is very costly
ಅವತಾರ್​ 2 ಟಿಕೆಟ್ ಬೆಲೆ ದುಬಾರಿ
author img

By

Published : Nov 23, 2022, 1:49 PM IST

2009ರಲ್ಲಿ ತೆರೆಕಂಡ ಅವತಾರ್​ ಸಿನಿಮಾ ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸಿತ್ತು. ಪರದೆ ಮೇಲೆ ಬರುವ ಒಂದೊಂದು ದೃಶ್ಯಗಳು ಕೂಡ ಬಹಳ ರೋಮಾಂಚನಕಾರಿಯಾಗಿದ್ದವು. ಇದೀಗ ಅದರ ಮುಂದುವರಿದ ಭಾಗ ಅವತಾರ್​ 2 ಬಿಡುಗಡೆಗೆ ಸಜ್ಜಾಗಿದೆ. ಟಿಕೆಟ್​ ದರ ಮಾತ್ರ ಎಲ್ಲರ ಹುಬ್ಬೇರುವಂತೆ ಮಾಡಿದೆ.

ಜೇಮ್ಸ್ ಕ್ಯಾಮೆರಾನ್ ನಿರ್ದೇಶನದ ಈ ಸಿನಿಮಾದ ಪ್ರತಿ ದೃಶ್ಯ ಕೂಡ ವೀಕ್ಷಕರನ್ನು ಬೇರೆಯದ್ದೇ ಮಾಯಾಲೋಕಕ್ಕೆ ಕೊಂಡೊಯ್ಯುವ ಅನುಭವ ಕೊಟ್ಟಿದ್ದು, ಅದರ ಮುಮದುವರಿದ ಭಾಗ ಇನ್ನೂ ಅತ್ಯದ್ಭುತವಾಗಿರಲಿದೆ ಎನ್ನುವ ನಿರೀಕ್ಷೆ ಸಿನಿಪ್ರಿಯರದ್ದು. ಈ ಚಿತ್ರ ವಿಶ್ವದ ಸಿನಿಮಾ ಇತಿಹಾಸದಲ್ಲೇ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎಂಬ ಖ್ಯಾತಿ ಗಳಿಸಿದೆ. ಇನ್ನು, ಅವತಾರ್ ಸಿನಿಮಾದ ಮುಂದುವರಿದ ಕಥೆ ತಿಳಿದುಕೊಳ್ಳಲು ಪ್ರೇಕ್ಷಕರು ಕಾತರರಾಗಿದ್ದು, ಟಿಕೆಟ್​ ದರ ಮಾತ್ರ ಪ್ರೇಕ್ಷಕರ ತಲೆತಿರುಗುವಂತೆ ಮಾಡಿದೆ.

ಸದ್ಯ ಈ ಸಿನಿಮಾದ ಟಿಕೆಟ್ ಬುಕ್ಕಿಂಗ್ ದೇಶಾದ್ಯಂತ ಆರಂಭವಾಗಿದೆ. ಇಂಗ್ಲಿಷ್ ಸೇರಿದಂತೆ ಏಳು ಭಾಷೆಗಳಲ್ಲಿ 'ಅವತಾರ್ 2' ಬಿಡುಗಡೆಯಾಗುತ್ತಿರುವುದು ವಿಶೇಷ. ಪ್ರಮುಖ ಟಿಕೆಟ್ ಬುಕ್ಕಿಂಗ್ ಸೈಟ್‌ಗಳು ಮತ್ತು ಅಪ್ಲಿಕೇಶನ್‌ಗಳು ಪ್ರಮುಖ ನಗರಗಳಲ್ಲಿನ ಥಿಯೇಟರ್‌ಗಳಲ್ಲಿ ಟಿಕೆಟ್​​ ಖರೀದಿಸಲು ಅನುವು ಮಾಡಿಕೊಡುತ್ತಿದೆ. 'ಅವತಾರ್ 2' (ಅವತಾರ್: ದಿ ವೇ ಆಫ್ ವಾಟರ್) IMAX 3D ಮತ್ತು 4DX 3D ಸ್ವರೂಪಗಳಲ್ಲಿ ಬಿಡುಗಡೆಯಾಗುತ್ತಿರುವುದರಿಂದ, ಪ್ರೇಕ್ಷಕರು ಆ ಪರದೆಯ ಮೇಲೆಯೇ ಚಿತ್ರ ವೀಕ್ಷಿಸಲು ಆಸಕ್ತಿ ಹೊಂದಿದ್ದಾರೆ.

  • " class="align-text-top noRightClick twitterSection" data="">

ಅವತಾರ್​ 2 ಟಿಕೆಟ್ ಬೆಲೆ: ಆದರೆ ಈ ಸ್ವರೂಪದ ಪರದೆಗಳ ಟಿಕೆಟ್ ದರಗಳು ದುಬಾರಿಯಾಗಿದೆ. ಜನಪ್ರಿಯ ಟಿಕೆಟ್ ಬುಕ್ಕಿಂಗ್​ ಸೈಟ್ ಬೆಂಗಳೂರಿನಲ್ಲಿ IMAX 3D ಫಾರ್ಮ್ಯಾಟ್ ಥಿಯೇಟರ್‌ ಟಿಕೆಟ್​ ಬೆಲೆ ರೂ.1,450 ತೋರಿಸುತ್ತಿದೆ. ಹಾಗೆಯೇ ಪುಣೆಯಲ್ಲಿ ರೂ.1200 (4ಡಿಎಕ್ಸ್ 3ಡಿ), ದೆಹಲಿ-ಎನ್​ಸಿಆರ್​ ನಲ್ಲಿ ರೂ.1000, ಮುಂಬೈನಲ್ಲಿ ರೂ.970, ಕೋಲ್ಕತ್ತಾ ರೂ.770, ಅಹಮದಾಬಾದ್ ರೂ.750, ಇಂದೋರ್ ರೂ.700, ಹೈದರಾಬಾದ್ ರೂ.350, ವಿಶಾಖಪಟ್ಟಣಂ ರೂ.210 (3ಡಿ ಫಾರ್ಮ್ಯಾಟ್) ದರ ಇದೆ.

ಈ ಎಲ್ಲಾ ಬೆಲೆಗಳು ಕೇವಲ ಸಾಮಾನ್ಯ ಆಸನಗಳಿಗೆ. ತೆರಿಗೆಗಳು ಮತ್ತು ಇಂಟರ್ನೆಟ್ ಶುಲ್ಕ ಬೇರೆಯೇ ಇದೆ. ರಿಕ್ಲೈನರ್ ಆಸನಗಳ (recliner seating) ಬೆಲೆಗಳ ವಿವರಗಳು ಇನ್ನೂ ತಿಳಿದುಬಂದಿಲ್ಲ. ಶೀಘ್ರದಲ್ಲೇ ಸಾಮಾನ್ಯ ಚಿತ್ರ ಮಂದಿರಗಳಲ್ಲಿ ಟಿಕೆಟ್ ಲಭ್ಯವಾಗಲಿದೆ. ಇನ್ನೂ ಕೆಲವು ಥಿಯೇಟರ್‌ಗಳಲ್ಲಿ ಆಸನಗಳನ್ನು ಅವಲಂಬಿಸಿ ಮೇಲಿನ ಬೆಲೆಗಳು ಸ್ವಲ್ಪ ಬದಲಾಗಬಹುದು.

ಇದನ್ನೂ ಓದಿ: ನೋಡಿ ‘ಅವತಾರ್​: ದಿ ವೇ ಆಫ್​ ವಾಟರ್​’ ಟೀಸರ್​; ಡಿ.16ಕ್ಕೆ ಕನ್ನಡದಲ್ಲೂ ಚಿತ್ರ ತೆರೆಗೆ

'ಅವತಾರ್ 2'ನಲ್ಲಿ ಸ್ಯಾಮ್ ವರ್ಥಿಂಗ್ಟನ್, ಝೋಯಾ ಸಲ್ಡಾನಾ, ಸಿಗೌರ್ನಿ ವೀವರ್, ಕೇಟ್ ವಿನ್ಸ್ಲೆಟ್ ಮತ್ತು ಇತರರು ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. 'ಪಂಡೋರಾ' ಗ್ರಹದಿಂದ ಅಮೂಲ್ಯ ಲೋಹಗಳನ್ನು ಕದಿಯಲು ಬಂದ ಮಾನವರನ್ನು ನಾವಿ ಬುಡಕಟ್ಟು ಹೇಗೆ ತಡೆದರು? ಪುರುಷನಾಗಿ ಭೂಲೋಕಕ್ಕೆ ಬಂದ ನಾಯಕ ಅವರ ಪರವಾಗಿ ನಿಂತು ಹೋರಾಡಿದ್ದು ಹೇಗೆ? ಈ ಕ್ರಮದಲ್ಲಿ ನೌಕಾಪಡೆ ಕಳೆದುಕೊಂಡಿದ್ದೇನು? ಸೇರಿದಂತೆ ಕ್ಯಾಮೆರಾನ್ ಮೊದಲ ಭಾಗವನ್ನು ಇತರೆ ಅಂಶಗಳೊಂದಿಗೆ ವಿನ್ಯಾಸಗೊಳಿಸಿದರು.

ತಾಯ್ನಾಡನ್ನು ಕಳೆದುಕೊಂಡ ನಾವಿಕಳು ಎಲ್ಲಿ ಹೋದಳು? ಸಮುದ್ರದೊಂದಿಗಿನ ಒಡನಾಟ ಹೇಗೆ ರೂಪುಗೊಂಡಿತು? ಅಲ್ಲಿ ಆಕೆ ಎದುರಿಸಿದ ಪರಿಸ್ಥಿತಿಗಳೇನು? ಇತರ ವಿಷಯಗಳನ್ನು 'ಅವತಾರ್ 2' ನಲ್ಲಿ ತೋರಿಸಲಾಗುತ್ತದೆ. ಈ ಸಿನಿಮಾ ಹಿಟ್ ಆದಲ್ಲಿ 'ಅವತಾರ್ 3' ಮತ್ತು 'ಅವತಾರ್ 4' ಮಾಡುವುದಾಗಿ ಜೇಮ್ಸ್ ಕ್ಯಾಮೆರಾನ್ ಹೇಳಿದ್ದರು. ಆದರೆ, ಇನ್ನುಳಿದ ಎರಡು ಚಿತ್ರಗಳನ್ನು ನಿರ್ದೇಶಿಸುವುದಿಲ್ಲ ಎಂದು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಅವರೇ ಬಹಿರಂಗಪಡಿಸಿದ್ದರು. ಈ ಬಗ್ಗೆ ಸ್ಪಷ್ಟನೆ ಅವರಿಂದಲೇ ಸಿಗಬೇಕಿದೆ.

ಇದನ್ನೂ ಓದಿ: ಕನ್ನಡದಲ್ಲಿಯೂ ಬಿಡುಗಡೆ ಅಗಲಿದೆ ಅವತಾರ್​ 2

ಅವತಾರ್ ಸಿನಿಮಾದ ಗ್ರಾಫಿಕ್ಸ್​ ದೃಶ್ಯಗಳನ್ನು ನೋಡುವುದೇ ಒಂದು ಅದ್ಭುತ ಅನುಭವ. ಬರೋಬ್ಬರಿ 13 ವರ್ಷಗಳ ಹಿಂದಿನ ಈ ಸಿನಿಮಾವನ್ನು ಈ ಕಾಲದ ತಂತ್ರಜ್ಞಾನಕ್ಕೆ ಅಪ್​ಗ್ರೇಡ್​ ಮಾಡಲು ಪ್ರಯತ್ನಿಸಲಾಗಿದೆ. ಅವತಾರ್‌ ಸರಣಿಯಿಂದ ಐದು ಸಿನಿಮಾಗಳು ಹೊರಬರಲಿವೆ. ಮೊದಲ ಸಿನಿಮಾ 2009ರಲ್ಲಿ ತೆರೆಗೆ ಅಪ್ಪಳಿಸಿತ್ತು. ಇದಾದ ಬಳಿಕ ಸೀಕ್ವೆಲ್ ಬರಲು ಸುಮಾರು 13 ವರ್ಷಗಳೇ ಬೇಕಾಯಿತು.

ಇನ್ನೂ ಹಾಲಿವುಡ್ ಮಂದಿಗೆ ಡಿಸೆಂಬರ್ ತಿಂಗಳು ತುಂಬಾನೇ ವಿಶೇಷ. ಕ್ರಿಸ್​ಮಸ್ ಇರುವುದರಿಂದ ದುಬಾರಿ ವೆಚ್ಚದ ಸಿನಿಮಾಗಳು ಈ ಸಂದರ್ಭದಲ್ಲೇ ರಿಲೀಸ್ ಆಗುತ್ತವೆ. ಕ್ರಿಸ್​ಮಸ್ ಪ್ರಯುಕ್ತ 2022ರ ಡಿಸೆಂಬರ್ 16ರಂದು ಅವತಾರ್ ಎರಡನೇ ಭಾಗ ರಿಲೀಸ್ ಆಗುತ್ತಿದೆ. ಸದ್ಯ ಚಿತ್ರದ ಅದ್ಭುತ ಟ್ರೈಲರ್ ಕೂಡ ರಿಲೀಸ್ ಆಗಿದ್ದು, ನೋಡುಗರನ್ನು ಹೊಸ ಲೋಕಕ್ಕೆ ಕರೆದೊಯ್ಯುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.