ಮೇ ಅಟಲ್ ಹೂನ್ ಬಯೋಪಿಕ್ (Main Atal Hoon)ನಲ್ಲಿ ನಟ ಪಂಕಜ್ ತ್ರಿಪಾಠಿ ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಅಪರೂಪದ ರಾಜಕೀಯ ಮುತ್ಸದ್ಧಿ ಎಂದೇ ಖ್ಯಾತಿ ಪಡೆದಿರುವ ದಿ.ಅಟಲ್ ಬಿಹಾರಿ ವಾಜಪೇಯಿ ಅವರ 98ನೇ ಜನ್ಮದಿನದ ಅಂಗವಾಗಿ ಚಿತ್ರ ತಯಾರಕರು ನಟ ಪಂಕಜ್ ತ್ರಿಪಾಠಿ ಅಭಿನಯದ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದಾರೆ.
ವಾಜಪೇಯಿ ಬಯೋಪಿಕ್ ಫಸ್ಟ್ ಲುಕ್: ಮೊದಲ ನೋಟದಲ್ಲಿ ಪಂಕಜ್ ತ್ರಿಪಾಠಿ ಅವರು ಭಾರತೀಯ ಉಡುಗೆಯಾದ ಕುರ್ತಾ ಮತ್ತು ಧೋತಿ ಧರಿಸಿದ್ದಾರೆ. ಈ ಫಸ್ಟ್ ಲುಕ್ ಕವಿ, ರಾಜಕಾರಣಿ, ನಾಯಕ ಮತ್ತು ಮಾನವತಾವಾದಿಯಾಗಿ ಅಟಲ್ ಬಿಹಾರಿ ವಾಜಪೇಯಿ ಅವರ ಅನೇಕ ಮುಖಗಳನ್ನು ತೋರಿಸುತ್ತದೆ. ಚಿತ್ರವನ್ನು ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ರವಿ ಜಾಧವ್ ನಿರ್ದೇಶಿಸುತ್ತಿದ್ದಾರೆ. ಸಲೀಂ ಸುಲೈಮಾನ್ ಸಂಗೀತ ಸಂಯೋಜಿಸಿದ್ದಾರೆ. ಸೋನು ನಿಗಮ್ ಮೋಷನ್ ವಿಡಿಯೋಗೆ ಧ್ವನಿ ನೀಡಿದ್ದಾರೆ.
- " class="align-text-top noRightClick twitterSection" data="
">
ಸಿನಿಮಾವನ್ನು ಭಾನುಶಾಲಿ ಸ್ಟುಡಿಯೋಸ್ ಲಿಮಿಟೆಡ್ ಮತ್ತು ಲೆಜೆಂಡ್ ಸ್ಟುಡಿಯೋಸ್ ಪ್ರಸ್ತುತಪಡಿಸಲಿದ್ದು, ವಿನೋದ್ ಭಾನುಶಾಲಿ, ಸಂದೀಪ್ ಸಿಂಗ್, ಸ್ಯಾಮ್ ಖಾನ್ ಮತ್ತು ಕಮಲೇಶ್ ಭಾನುಶಾಲಿ ನಿರ್ಮಿಸಿದ್ದಾರೆ. ಝೀಶಾನ್ ಅಹ್ಮದ್ ಮತ್ತು ಶಿವ್ ಶರ್ಮಾ ಅವರ ಸಹ ನಿರ್ಮಾಣವಿದೆ. ಈ ಚಿತ್ರ 2023ರ ಡಿಸೆಂಬರ್ನಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಪಂಕಜ್ ತ್ರಿಪಾಠಿ ಅಭಿಪ್ರಾಯ: ಚಿತ್ರದ ಬಗ್ಗೆ ಈ ಹಿಂದೆ ಮಾತನಾಡಿದ್ದ ನಟ ಪಂಕಜ್ ತ್ರಿಪಾಠಿ ಅವರು 'ಅಂತಹ ಮಾನವೀಯ ರಾಜಕಾರಣಿ ಅಟಲ್ ಅವರ ಪಾತ್ರವನ್ನು ತೆರೆಯ ಮೇಲೆ ತೋರಿಸುವುದು ಒಂದು ಗೌರವಕರ ವಿಷಯ. ಅವರು ಕೇವಲ ರಾಜಕಾರಣಿಯಾಗಿರಲಿಲ್ಲ, ಅವರು ಅತ್ಯುತ್ತಮ ಬರಹಗಾರ ಮತ್ತು ಹೆಸರಾಂತ ಕವಿಯಾಗಿದ್ದರು. ಅವರ ಪಾತ್ರಕ್ಕರ ಜೀವ ತುಂಬುವುದು ನನ್ನಂತಹ ನಟನಿಗೆ ಒಂದು ವಿಶೇಷವಲ್ಲದೇ ಮತ್ತೇನು' ಎಂದು ಹೇಳಿದ್ದರು.
ಜನನಾಯಕರ ಬಗ್ಗೆ ಮಾಹಿತಿ: ಅಟಲ್ ಬಿಹಾರಿ ವಾಜಪೇಯಿ ಅವರು ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ 1924ರ ಡಿಸೆಂಬರ್ 25ರಂದು ಜನಿಸಿದರು. ಕಾನ್ಪುರದಲ್ಲಿ ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಬಳಿಕ ಬಿಜೆಪಿ ಪಕ್ಷದ ಅತ್ಯಂತ ಪ್ರಭಾವಿ ನಾಯಕರಲ್ಲಿ ಒಬ್ಬರಾಗಿ ಗುರುತಿಸಿಕೊಂಡರು. 1996ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ವಾಜಪೇಯಿ ನಾಯಕತ್ವದ ಬಿಜೆಪಿ ಹೆಚ್ಚು ಸ್ಥಾನಗಳನ್ನು ಪಡೆದು ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಬಿಜೆಪಿಗೆ ಸರ್ಕಾರ ರಚಿಸುವಂತೆ ಅಂದಿನ ರಾಷ್ಟ್ರಪತಿ ಶಂಕರ್ ದಯಾಳ್ ಶರ್ಮಾ ಆಹ್ವಾನ ನೀಡಿದ್ದರು. ಈ ಮೂಲಕ ವಾಜಪೇಯಿ ದೇಶದ ಹತ್ತನೇ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಇದನ್ನೂ ಓದಿ: ವಾಜಪೇಯಿ 98ನೇ ಜನ್ಮದಿನ: ಸದೈವ್ ಅಟಲ್ ಸ್ಮಾರಕಕ್ಕೆ ಗಣ್ಯರಿಂದ ಪುಷ್ಪ ನಮನ
1998ರಲ್ಲಿ ಚುನಾವಣೆಗಳು ನಡೆದಾಗ ಸ್ಪಷ್ಟ ಬಹುಮತ ಪಡೆಯಲು ಸಾಧ್ಯವಾಗಲಿಲ್ಲ. ಕೂಡಲೇ ಸಮಾನಮನಸ್ಕ ಪಕ್ಷಗಳ ಜತೆಗೂಡಿ ಎನ್‌ಡಿಎ ಮೈತ್ರಿಕೂಟ ರಚಿಸಲಾಯಿತು. ಮೈತ್ರಿಕೂಟದ ಮೂಲಕ ಬಹುಮತ ಸಾಧಿಸಿದ ಕಾರಣ ಮತ್ತೆ 10 ಮಾರ್ಚ್ 1998 ರಂದು ವಾಜಪೇಯಿ ನೇತೃತ್ವದಲ್ಲಿ ಸರ್ಕಾರ ರಚನೆಯಾಗಿತ್ತು.