ETV Bharat / entertainment

'ಆಪಲ್ ಕಟ್' ಟೀಸರ್‌ ಔಟ್: ಚಿತ್ರತಂಡಕ್ಕೆ ಅಶ್ವಿನಿ ಪುನೀತ್ ರಾಜ್‍ಕುಮಾರ್, ಯೋಗರಾಜ್‌ ಭಟ್‌ ಸಾಥ್‌

ಈಗಾಗಲೇ ಶೂಟಿಂಗ್​ ಮುಗಿಸಿರುವ 'ಆಪಲ್ ಕಟ್' ಸಿನಿಮಾ ಕೆಲವೇ ದಿನಗಳಲ್ಲಿ ಬೆಳ್ಳಿ ಪರದೆ ಮೇಲೆ ಮೂಡಿಬರಲು ಸಜ್ಜಾಗುತ್ತಿದೆ.

ಆಪಲ್ ಕಟ್ ಚಿತ್ರ ತಂಡ
ಆಪಲ್ ಕಟ್ ಚಿತ್ರ ತಂಡ
author img

By ETV Bharat Karnataka Team

Published : Jan 19, 2024, 10:13 AM IST

ಆಪಲ್ ಕಟ್ ಚಿತ್ರಕ್ಕೆ ಕನ್ನಡದ ಖ್ಯಾತ ನಿರ್ದೇಶಕ ರಾಜಕಿಶೋರ್ ಅವರ ಪುತ್ರಿ ಸಿಂಧು ಗೌಡ ನಿರ್ದೇಶನ ಮಾಡಿರುವುದು ಗೊತ್ತಿರುವ ವಿಚಾರ. ಇದೀಗ ಚಿತ್ರೀಕರಣ ಮುಗಿಸಿರುವ ತಂಡ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ನಿರ್ದೇಶಕ ಯೋಗರಾಜ್ ಭಟ್, ಅಶ್ವಿನಿ ಪುನೀತ್ ರಾಜ್‍ಕುಮಾರ್ ಹಾಗು ನಟಿ ರಾಗಿಣಿ ದ್ವಿವೇದಿ ಟೀಸರ್ ಬಿಡುಗಡೆ ಮಾಡುವ ಮೂಲಕ ತಂಡಕ್ಕೆ ಸಾಥ್​ ನೀಡಿದ್ದಾರೆ.

ಗುರುವಾರ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ನಟಿ, ನಿರ್ದೇಶಕಿ, ನಿರ್ಮಾಪಕಿ ಪ್ರಿಯಾ ಹಾಸನ್ ಹಾಗೂ ರೂಪ ಅಯ್ಯರ್, ನಿರ್ದೇಶಕ ಗಡ್ಡ ವಿಜಿ ಉಪಸ್ಥಿತರಿದ್ದರು. ಹೊಸ ಪ್ರತಿಭೆಗಳಾದ ಕಾಮಿಡಿ ಕಿಲಾಡಿ ಅಪ್ಪಣ್ಣ, ಯುವ ನಟ ಸೂರ್ಯ ಹಾಗು ನಾಯಕಿ ನಟಿಯರಾದ ಅಮೃತ, ಮೀನಾಕ್ಷಿ ಇದ್ದರು. ಬಾಲ ರಾಜವಾಡಿ ಕೂಡ ವಿಭಿನ್ನ‌ ಪಾತ್ರದಲ್ಲಿ ಅಭಿನಯಿಸಿದ್ದಾರೆ.

  • " class="align-text-top noRightClick twitterSection" data="">

ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕಿ ಸಿಂಧು ಗೌಡ, "ನಾನು ಯಾರ ಬಳಿಯೂ ಸಹ ನಿರ್ದೇಶಕಿಯಾಗಿ ಕೆಲಸ ಮಾಡಿಲ್ಲ. ನಮ್ಮ ಅಪ್ಪನ ಕಾರ್ಯವೈಖರಿ ನೋಡಿ ನನಗೆ ನಿರ್ದೇಶನದ ಆಸೆ ಹುಟ್ಟಿತ್ತು. ಕಿರುತೆರೆಯಲ್ಲಿ ಹತ್ತಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಅಭಿನಯಿಸಿದ್ದೇನೆ. ನಾನೇ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿರುವ ಮೊದಲ ಚಿತ್ರವಿದು. ಆಪಲ್ ಕಟ್ ಐದು ಜನ ಗೆಳೆಯರ ಸುತ್ತ ನಡೆಯುವ ಕಥೆ. ನಾನು ಮಾನವಶಾಸ್ತ್ರ ಓದಿರುವುದರಿಂದ ಮಾನವಶಾಸ್ತ್ರದ ಒಂದು ಅಂಶವನ್ನೂ ಸೇರಿಸಲಾಗಿದೆ. ನಿಜವಾದ ಶವವೊಂದನ್ನೂ ಸಹ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಅದು ಕೂಡ ಪ್ರಮುಖ ಪಾತ್ರವಹಿಸಿದೆ" ಎಂದರು.

"ನಾನು ಚಿತ್ರದಲ್ಲಿ ಸತ್ಯ ಹೆಸರಿನ ಮಾನವಶಾಸ್ತ್ರ ಪ್ರೊಫೆಸರ್ ಪಾತ್ರ ಮಾಡಿದ್ದೇನೆ. ಪಾತ್ರ ಬಹಳ ಚೆನ್ನಾಗಿದೆ" ಎಂದು ಯುವ ನಟ ಸೂರ್ಯ ಗೌಡ ಸಂತಸ ವ್ಯಕ್ತಪಡಿಸಿದರು. ಅಶ್ವಿ‌ನಿ ಪೋಲೆಪಲ್ಲಿ ಮಾತನಾಡಿ, "ನಾನು ಮೂಲತಃ ಬಾಗೆಪಲ್ಲಿ ಹುಡುಗಿ. ಒಳ್ಳೆ ಕಂಟೆಂಟ್ ಇರುವ ಮರ್ಡರ್ ಮಿಸ್ಟರಿ ಸಿನಿಮಾದಲ್ಲಿ ಸೈಕಾಲಜಿ ಸ್ಟೂಡೆಂಟ್ ಆಗಿ ನಟಿಸಿದ್ದೇನೆ. ಜನರಿಗೆ ನನ್ನ ಪಾತ್ರ ಇಷ್ಟ ಆಗುತ್ತೆ" ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ನಿರ್ಮಾಪಕಿ ಶಿಲ್ಪ ಪ್ರಸನ್ನ ಮಾತನಾಡಿ, "ಚಿತ್ರವನ್ನು ಸಾನ್ವಿ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಮೊದಲ ಬಾರಿಗೆ ನಿರ್ಮಾಣ ಮಾಡಿದ್ದೇವೆ. ಟೀಸರ್ ಬಿಡುಗಡೆ ಮಾಡಿಕೊಟ್ಟ ಎಲ್ಲರಿಗೂ ಧನ್ಯವಾದ" ಎಂದರು. ಚಿತ್ರಕ್ಕೆ ವೀರ ಸಮರ್ಥ್ ಸಂಗೀತ ನೀಡಿದ್ದಾರೆ. ಆಪಲ್ ಕಟ್ ಚಿತ್ರವನ್ನು ಮಾರ್ಚ್ ತಿಂಗಳಲ್ಲಿ ಬಿಡುಗಡೆ ಮಾಡುವ ಯೋಚನೆಯಲ್ಲಿದೆ ಚಿತ್ರತಂಡ.

ಇದನ್ನೂ ಓದಿ: 'ಕೇಸ್ ಆಫ್ ಕೊಂಡಾಣ': ಖಾಕಿ ಖದರ್‌ನಲ್ಲಿ ಅಬ್ಬರಿಸಲು ಸಜ್ಜಾದ ವಿಜಯ ರಾಘವೇಂದ್ರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.