ETV Bharat / entertainment

'ಭೀಮ'ನಿಗೆ ಜೋಡಿಯಾದ ಅಶ್ವಿನಿ: ಒಂದು ವರ್ಷದ ಬಳಿಕ ವಿಷಯ ಬಹಿರಂಗ - actress ashwini

ರಂಗಭೂಮಿ ಕಲಾವಿದೆ ಅಶ್ವಿನಿ ಎ ಅವರು ಭೀಮ ಸಿನಿಮಾಗೆ ನಾಯಕಿಯಾಗಿ ಆಯ್ಕೆ ಆಗಿದ್ದಾರೆ.

Ashwini entry to Bheema movie
ಭೀಮ ಸಿನಿಮಾ ನಾಯಕಿ ಅಶ್ವಿನಿ
author img

By

Published : Feb 14, 2023, 3:33 PM IST

Updated : Feb 14, 2023, 3:48 PM IST

ಕನ್ನಡ ಚಿತ್ರರಂಗದಲ್ಲಿ ಪೋಸ್ಟರ್ ಹಾಗೂ ಯುವ ನಟ, ನಟಿಯರ ವಿಚಾರಕ್ಕೆ ಸೌಂಡ್ ಮಾಡುತ್ತಿರುವ ಚಿತ್ರ 'ಭೀಮ'. ಸಲಗ ಚಿತ್ರದ ಸಕ್ಸಸ್ ಬಳಿಕ ದುನಿಯಾ ವಿಜಯ್ ಮತ್ತೆ ಆ್ಯಕ್ಷನ್ ಕಟ್ ಹೇಳುತ್ತಿರುವ ಮಾಸ್ ಸಿನಿಮಾ ಇದು. ಈಗಾಗಲೇ ಬೆಂಗಳೂರಿನ ಹೊರವಲಯದಲ್ಲಿ ಅರ್ಧದಷ್ಟು ಭೀಮ ಚಿತ್ರೀಕರಣ ನಡೆಸಿರೋ ನಟ - ನಿರ್ದೇಶಕ ವಿಜಯ್ ಹೊಸ ಪ್ರತಿಭೆಗಳಿಗೆ ತಮ್ಮ ಚಿತ್ರದಲ್ಲಿ ಅವಕಾಶ ಕೊಟ್ಟಿದ್ದಾರೆ. ಈ ಚಿತ್ರದಲ್ಲಿ ಡ್ರಾಗನ್ ಪಾತ್ರ ಮಾಡುತ್ತಿರುವ ಮಣಿ, ಸುಧೀ, ಮಾಡೆಲ್ ಆಶಾ ಸೇರಿದಂತೆ ರಂಗಭೂಮಿ ಕಲಾವಿದರನ್ನು ಗುರುತಿಸಿ ತಮ್ಮ ಚಿತ್ರದಲ್ಲಿ ಅಭಿನಯ ಮಾಡಿಸುತ್ತಿದ್ದಾರೆ.

Ashwini entry to Bheema movie
ಭೀಮ ಸಿನಿಮಾ ನಾಯಕಿ ಅಶ್ವಿನಿ

ಭೀಮ ಸಿನಿಮಾಗೆ ಅಶ್ವಿನಿ ಆಯ್ಕೆ: ಭೀಮ ಸಿನಿಮಾ ಸೆಟ್ಟೇರಿ ಬಹುದಿನಗಳಾದರೂ ಕೂಡ ವಿಜಯ್ ಜೋಡಿ ಯಾರಾಗ್ತಾರೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿರಲಿಲ್ಲ. ಈ ಬಗ್ಗೆ ಅಭಿಮಾನಿಗಳು ಕುತೂಹಲಕಾರರಾಗಿದ್ದರು. ಪ್ರೇಮಿಗಳ ದಿನದಂದು ದುನಿಯಾ ವಿಜಯ್ ತಮ್ಮ ನಟಿಯನ್ನು ಪರಿಚಯಿಸಿದ್ದಾರೆ. ರಂಗಭೂಮಿ ಹಿನ್ನೆಲೆ ಇರುವ ಅಶ್ವಿನಿ ಎ ಅವರು ವಿಜಯ್‌ಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಅಶ್ವಿನಿ ಅವರು ಭೀಮ ಶೂಟಿಂಗ್​ನಲ್ಲಿ ಭಾಗವಹಿಸಿರೋ‌‌ ಕೆಲ ಚಿತ್ರಗಳನ್ನು ಚಿತ್ರತಂಡ ರಿವೀಲ್ ಮಾಡಿದೆ. ಪ್ರತಿಭೆಗೆ ಹೆಚ್ಚು ಸ್ಕೋಪ್ ಕೊಡುವ ಮೂಲಕ ಆಡಿಷನ್​ನಲ್ಲಿ ಅಶ್ವಿನಿ ಅವರನ್ನು ಆಯ್ಕೆ ಮಾಡಲಾಗಿದೆ.

ಈ ಬಗ್ಗೆ ಮಾತನಾಡಿರೋ ಅಶ್ವಿನಿ, ಈಗಾಗಲೇ ನಾನು ಶೂಟಿಂಗ್​ನಲ್ಲಿ ಭಾಗಿ ಆಗಿದ್ದೇನೆ. ಒಂದು ವರ್ಷದ ಹಿಂದೆಯೇ ಭೀಮ ಸಿನಿಮಾಗೆ ನನ್ನನ್ನು ಆಯ್ಕೆ ಮಾಡಿದ್ದರು. ಆದರೆ, ಯಾರಿಗೂ ಹೇಳಿರಲಿಲ್ಲ. ಪ್ರೇಮಿಗಳ ದಿನದಂದು ಅನೌನ್ಸ್​ ಮಾಡಿರುವ ಬಗ್ಗೆ ನನಗೆ ಖುಷಿ ಇದೆ. ವಿಜಯ್ ಸರ್ ಅವರ ನಿರ್ದೇಶನದಲ್ಲಿ ನನ್ನ ಸಿನಿಮಾ ವೃತ್ತಿಜೀವನವನ್ನು ಪ್ರಾರಂಭಿಸಲು ಮತ್ತು ಅವರೊಂದಿಗೆ ಸ್ಕ್ರೀನ್ ಹಂಚಿಕೊಳ್ಳುವ ವಿಚಾರದಲ್ಲಿ ಬಹಳ ಉತ್ಸುಕಳಾಗಿದ್ದೇನೆ.

Ashwini entry to Bheema movie
ಭೀಮ ಸಿನಿಮಾ ನಾಯಕಿ ಅಶ್ವಿನಿ

ನಾನು ಎಂಬಿಎ ಓದುತ್ತಿದ್ದೇನೆ, ಕಳೆದ‌ ಮೂರೂವರೆ ವರ್ಷಗಳಿಂದ ರಂಗಭೂಮಿ ತತ್ಕಾಲ್ ಗುಂಪು ಮತ್ತು ಅಭಿನಯ ತರಂಗದ ಅಡಿಯಲ್ಲಿ ನಾಟಕಗಳಲ್ಲಿ ಅಭಿನಯಿಸುತ್ತಿದ್ದೇನೆ ಅಂತಾ ಹೇಳಿದರು. ನಾನು ಸಿನಿಮಾ ರಂಗದಲ್ಲಿ ಗುರುತಿಸಿಕೊಳ್ಳಲು ಬಯಸುತ್ತಿದ್ದೆ, ಹೀಗಾಗಿ ನಾನು ಇಲ್ಲಿದ್ದೇನೆ. ಭೀಮ ಸಿನಿಮಾದಲ್ಲಿ ನನಗೆ ಅವಕಾಶ ಸಿಕ್ಕಿರೋದು ನಿಜವಾಗಿಯೂ ದೊಡ್ಡ ವಿಷಯ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡರು.

ಇನ್ನೂ ಭೀಮ ಸಿನಿಮಾದ ಪಾತ್ರಕ್ಕಾಗಿ ನಾನು ಎರಡು ತಿಂಗಳಿಂದ ಸಿದ್ಧತೆಗಳನ್ನು ಮಾಡಿಕೊಂಡಿದ್ದೇನೆ. ಅಗತ್ಯ ಸಿದ್ಧತೆ ಬಳಿಕವೇ ನಾನು ಕ್ಯಾಮರಾ ಫೇಸ್ ಮಾಡಿದೆ. ಅಭಿನಯ ಹಾಗೂ ರಂಗಭೂಮಿಯಲ್ಲಿ ಹೆಚ್ಚಾಗಿ ಗುರುತಿಸಿಕೊಳ್ಳಬೇಕು ಎಂಬುದು ನನ್ನ ಗುರಿ ಎಂದು ಅಶ್ವಿನಿ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡರು.

ಇದನ್ನೂ ಓದಿ: ಪ್ರೇಮಿಗಳ ದಿನಕ್ಕೆ ಗಿಫ್ಟ್​​ ಕೊಟ್ಟ ತುಪ್ಪದ ಬೆಡಗಿ; ರಿಲೀಸ್​ ಆಯ್ತು ರಾಗಿಣಿಯ ಫಸ್ಟ್​ ಬಾಲಿವುಡ್​ ಆಲ್ಬಂ ಸಾಂಗ್​

'ಭೀಮ‌' ಒಂದು ನೈಜ ಘಟನೆ ಆಧಾರಿತ ಸಿನಿಮಾ. ದುನಿಯಾ ವಿಜಯ್ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ವಿಜಯ್​ ನಟನೆಯ 28ನೇ ಸಿನಿಮಾ. ಕೃಷ್ಣ ಸಾರ್ಥಕ್​ ಹಾಗೂ ಜಗದೀಶ್​ ಗೌಡ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚರಣ್ ರಾಜ್ ಈ ಸಿನಿಮಾಗೆ ಸಂಗೀತ ನೀಡಿದ್ದಾರೆ. ಶೂಟಿಂಗ್ ಹಂತದಲ್ಲೇ ಸಖತ್ ಸೌಂಡ್​ ಮಾಡುತ್ತಿರುವ ಭೀಮ ಸಿನಿಮಾ ವಿಜಯ್​, ಚಿತ್ರತಂಡ ಅಲ್ಲದೇ ಸ್ಯಾಂಡಲ್​ವುಡ್​​ಗೆ ದೊಡ್ಡ ಮಟ್ಟಡ ಹೆಸರು ತಂದುಕೊಡುವ ಲಕ್ಷಣಗಳು ಕಾಣುತ್ತಿದೆ.

ಇದನ್ನೂ ಓದಿ: ಏರಿಳಿತಗಳ ನಡುವೆ ಪತಿಗೆ ಪತ್ನಿ ಸಾಥ್: ನವಜೋಡಿಗಳಿಗೆ ಸ್ಫೂರ್ತಿ ರಿಷಬ್​​ ಶೆಟ್ಟಿ ಪ್ರೇಮಕಥೆ

Last Updated : Feb 14, 2023, 3:48 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.