ಬಾಲಿವುಡ್ ರೊಮ್ಯಾಂಟಿಕ್ ಹೀರೋ ಶಾರುಖ್ ಖಾನ್ ಅವರಿಗೆ ವಿಶ್ವಾದ್ಯಂತ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಎಸ್‌ಆರ್‌ಕೆ ಸೂಪರ್ಸ್ಟಾರ್ ಜೊತೆ ಜೊತಗೆ ಫ್ಯಾಮಿಲಿ ಮ್ಯಾನ್ ಕೂಡ ಹೌದು. ತಮ್ಮ ಹೆಚ್ಚಿನ ಸಮಯವನ್ನು ಹೆಂಡತಿ ಮಕ್ಕಳಿಗಾಗಿ ಮೀಸಲಿಡುತ್ತಾರೆ. ಇದೀಗ ಮಕ್ಕಳು ತಮ್ಮ ಉದ್ಯಮ ಕ್ಷೇತ್ರಕ್ಕೆ ಎಂಟ್ರಿ ಕೊಡುತ್ತಿದ್ದು, ಎಸ್‌ಆರ್‌ಕೆ ಸಂಪೂರ್ಣ ಸಹಕಾರ ಕೊಡುತ್ತಿದ್ದಾರೆ.
- " class="align-text-top noRightClick twitterSection" data="
">
ಸೀಮಿತ ಬಿಡುಗಡೆಯ ಐಷಾರಾಮಿ ಸ್ಟ್ರೀಟ್‌ವೇರ್ ಎಂದು ಹೆಸರಿಸಲಾಗಿರುವ ಬಟ್ಟೆ ಬ್ಯಾಂಡ್ ಅನ್ನು D'yavol X ಅನ್ನು ಶಾರುಖ್ ಪುತ್ರ ಆರ್ಯನ್ ಖಾನ್ ಪರಿಚಯಿಸಿದ್ದಾರೆ. ಇದರ ಜಾಹೀರಾತಿಗಾಗಿ ಆರ್ಯನ್ ಕ್ಯಾಮರಾ ಹಿಂದೆ ಇದ್ದರೆ, ತಂದೆ ಶಾರುಖ್ ಕ್ಯಾಮರಾ ಮುಂದೆ ಬಂದಿದ್ದಾರೆ. ಸೋಮವಾರ ಆರ್ಯನ್ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ, ಜಾಹೀರಾತಿನ ಟೀಸರ್ ಅನ್ನು ಹಂಚಿಕೊಂಡಿದ್ದಾರೆ. ಇಂದು ಸಂಪೂರ್ಣ ಜಾಹೀರಾತು ರಿಲೀಸ್ ಅಗಲಿದೆ. ಈ ಸಣ್ಣ ವಿಡಿಯೋ ತುಣುಕಲ್ಲಿ ಕಿಂಗ್ ಖಾನ್ ಹೊರತುಪಡಿಸಿ ಬೇರೆ ಯಾರೂ ಇಲ್ಲ. ಆರ್ಯನ್ ತಮ್ಮ ತಂದೆಯ ಸೀನ್ಗಳನ್ನು ನಿರ್ದೇಶಿಸಿದ್ದು, ಅಭಿಮಾನಿಗಳು ತಮ್ಮ ಖುಷಿ ವ್ಯಕ್ತಪಡಿಸಿದ್ದಾರೆ.
ಟೀಸರ್, ನೆಲದ ಮೇಲೆ ಪೇಂಟ್ ಬ್ರಷ್ನಿಂದ ಆರಂಭಗೊಂಡಿದೆ. ಯಾರೋ ಅದನ್ನು ಎತ್ತಿಕೊಂಡಿದ್ದು, ಶಾರುಖ್ ಅವರಂತೆ ಕಂಡಿದ್ದಾರೆ. ಆದರೂ ಅವರ ಮುಖವನ್ನು ಬಹಿರಂಗಪಡಿಸುವ ಮೊದಲು ಕ್ಯಾಮರಾದ ದೃಷ್ಟಿ ಬದಲಾಗುತ್ತದೆ. ಕೊನೆಯಲ್ಲಿ ಎಸ್‌ಆರ್‌ಕೆ ಅವರ ಮುಖವು ಒಂದು ಸೆಕೆಂಡಿಗೆ ಕಾಣಿಸಿಕೊಳ್ಳುತ್ತದೆ.
- " class="align-text-top noRightClick twitterSection" data="
">
ಇದು ಜಾಹೀರಾತಿನ ಸಣ್ಣ ತುಣುಕಷ್ಟೇ. ಇದನ್ನು ಹಂಚಿಕೊಂಡ ಆರ್ಯನ್ ಕಾಪ್ಷನ್ನಲ್ಲಿ A ಇಂದ Zವರೆಗಿನ ಅಕ್ಷರಗಳನ್ನು ಬರೆದಿದ್ದು, X ಜಾಗದಲ್ಲಿ ಸ್ಥಳ ಖಾಲಿ ಬಿಟ್ಟಿದ್ದಾರೆ. ''X 24 ಗಂಟೆಗಳಲ್ಲಿ ಬರಲಿದೆ. ವಿಶೇಷ ವಿಷಯಕ್ಕಾಗಿ @dyavol.x ಅನ್ನು ಅನುಸರಿಸಿ" ಎಂದು ಬರೆದುಕೊಂಡಿದ್ದಾರೆ. ಇಂದು ಶಾರುಖ್ ಖಾನ್ ಅವರ ಜಾಹೀರಾತು ಬಿಡುಗಡೆ ಆಗಲಿದೆ.
ಇದನ್ನೂ ಓದಿ: ಆಸ್ಕರ್ 2024 ಪ್ರಶಸ್ತಿ ಸಮಾರಂಭಕ್ಕೆ ಮುಹೂರ್ತ ನಿಗದಿ: ಪ್ರಮುಖ ದಿನಾಂಕಗಳ ಪಟ್ಟಿ ಹೀಗಿದೆ..
ಆರ್ಯನ್ ಖಾನ್ ಈ ವಿಡಿಯೋ ತುಣುಕು ಹಂಚಿಕೊಂಡ ಕೂಡಲೇ ಖಾನ್ ಫ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಹರ್ಷ ವ್ಯಕ್ತಪಡಿಸಿದ್ದಾರೆ. ಫೈಯರ್, ರೆಡ್ ಹಾರ್ಟ್ ಎಮೋಜಿಗಳು ಕಾಮೆಂಟ್ ವಿಭಾಗ ತುಂಬಿದೆ. ಆರ್ಯನ್ ಸಹೋದರಿ ಸುಹಾನಾ ಖಾನ್ ಕಾಮೆಂಟ್ ವಿಭಾಗದಲ್ಲಿ ಕೆಂಪು ಹೃದಯದ ಎಮೋಜಿಗಳೊಂದಿಗೆ ತಮ್ಮ ಪ್ರೀತಿಯ ಮಳೆಯನ್ನೇ ಸುರಿಸಿದ್ದಾರೆ. ವಿಡಿಯೋಗೆ ಪ್ರತಿಕ್ರಿಯಿಸಿದ ಅಭಿಮಾನಿಯೊಬ್ಬರು, "ವರ್ಷಗಳಿಂದ ಈ ದಿನಕ್ಕಾಗಿ ಕಾಯುತ್ತಿದ್ದೇನೆ" ಎಂದು ಬರೆದರೆ, ಮತ್ತೊಬ್ಬರು "ತಂದೆಯಂತೆ ಮಗ. ಸುಂದರ ಜೋಡಿ" ಎಂದು ಹೇಳಿದರು. ಕಿಂಗ್ ಖಾನ್ ಅವರ ಅಭಿಮಾನಿಯೊಬ್ಬರು ''ಆಶೀರ್ವದಿಸಲ್ಪಟ್ಟ ಕುಟುಂಬ" ಎಂದು ಹೇಳಿದರು.
- " class="align-text-top noRightClick twitterSection" data="
">
ಇದನ್ನೂ ಓದಿ: ಹೊಸ ಫಿಟ್ನೆಸ್ ವಿಡಿಯೋ ಹಂಚಿಕೊಂಡ ನಟಿ ಸಾರಾ: ಜಿಮ್ನಲ್ಲೂ ಮೇಕಪ್ ಬಿಡಲ್ವಾ ಎಂದ ನೆಟ್ಟಿಗರು
ಸ್ಟಾರ್ ಕಿಡ್ಸ್ ಚಿತ್ರರಂಗಕ್ಕೆ ಬರುವುದು ಸಾಮಾನ್ಯ. ಅದರಂತೆ ಆರ್ಯನ್ ಖಾನ್ ಮೇಲೆ ಭಾರಿ ನಿರೀಕ್ಷೆ ಇಡಲಾಗಿದೆ. ಆರ್ಯನ್ ಚಿತ್ರರಂಗಕ್ಕೆ ಪ್ರವೇಶಿಸಲು ಕಾಯುತ್ತಿರುವವರು ಹೆಚ್ಚು ಕಾಯಬೇಕಾಗಿಲ್ಲ. ಈಗಾಗಲೇ ತಮ್ಮ ಮೊದಲ ಪ್ರಾಜೆಕ್ಟ್‌ನ ಬರವಣಿಗೆಯನ್ನು ಪೂರ್ಣಗೊಳಿಸಿದ್ದಾರೆ, ಅದನ್ನು ಅವರೇ ನಿರ್ದೇಶಿಸಲಿದ್ದಾರೆ. ಆರ್ಯನ್ ಎಂದಿಗೂ ನಟನಾಗುವ ಆಸೆ ವ್ಯಕ್ತಪಡಿಸಿಲ್ಲ. 2019ರಲ್ಲಿ ಟಾಕ್ ಶೋ ಒಂದರಲ್ಲಿ ಎಸ್‌ಆರ್‌ಕೆ ಈ ಬಗ್ಗೆ ಮಾತನಾಡಿ, ಮಗನ ಒಲವು ಬರವಣಿಗೆ ಮತ್ತು ನಿರ್ದೇಶನದತ್ತ ಇದೆ ಎಂದು ಸ್ಪಷ್ಟಪಡಿಸಿದ್ದರು.