ತಮಿಳು ಚಿತ್ರರಂಗದ ಖ್ಯಾತ ಕಲಾ ನಿರ್ದೇಶಕ ಮಿಲನ್ ಫರ್ನಾಂಡಿಸ್ ಭಾನುವಾರ ಹೃದಯಾಘಾತದಿಂದ ನಿಧನರಾದರು. ಅವರಿಗೆ 54 ವರ್ಷ ವಯಸ್ಸಾಗಿತ್ತು. ಮಾಗಿಜ್ ತಿರುಮೇನಿ ನಿರ್ದೇಶನದ, ಕಾಲಿವುಡ್ ಸ್ಟಾರ್ ನಟ ಅಜಿತ್ ಕುಮಾರ್ ಮುಖ್ಯಭೂಮಿಕೆಯ 'ವಿದಾ ಮುಯಾರ್ಚಿ' ಚಿತ್ರದ ಶೂಟಿಂಗ್ ಅಜರ್ಬೈಜಾನ್ನಲ್ಲಿ ನಡೆಯುತ್ತಿತ್ತು. ಇಲ್ಲಿಗೆ ಚಿತ್ರೀಕರಣಕ್ಕೆಂದು ತೆರಳುತ್ತಿದ್ದಾಗ ಮಾರ್ಗಮಧ್ಯೆ ಹೃದಯಾಘಾತವಾಗಿದೆ.
-
Omg shocking Art director #Milan sir no more . Very calm person I knew him in #Thunivu . Too soon to go... my heartfelt condolences to his family and friends 🙏 it happened in #Azerbaijan #VidaaaMuyarchi #ripmilan 🙏🙏🙏 pic.twitter.com/A01zlFI1KM
— Prem Kumar (@premkumaractor) October 15, 2023 " class="align-text-top noRightClick twitterSection" data="
">Omg shocking Art director #Milan sir no more . Very calm person I knew him in #Thunivu . Too soon to go... my heartfelt condolences to his family and friends 🙏 it happened in #Azerbaijan #VidaaaMuyarchi #ripmilan 🙏🙏🙏 pic.twitter.com/A01zlFI1KM
— Prem Kumar (@premkumaractor) October 15, 2023Omg shocking Art director #Milan sir no more . Very calm person I knew him in #Thunivu . Too soon to go... my heartfelt condolences to his family and friends 🙏 it happened in #Azerbaijan #VidaaaMuyarchi #ripmilan 🙏🙏🙏 pic.twitter.com/A01zlFI1KM
— Prem Kumar (@premkumaractor) October 15, 2023
ಜನಪ್ರಿಯ ಮಲಯಾಳಂ ನಟ ಪ್ರೇಮ್ ಕುಮಾರ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಮಿಲನ್ ಫರ್ನಾಂಡಿಸ್ ನಿಧನವನ್ನು ಖಚಿತಪಡಿಸಿದ್ದಾರೆ. "ನಿಜಕ್ಕೂ ಶಾಕಿಂಗ್ ವಿಚಾರ. ಕಲಾ ನಿರ್ದೇಶಕ ಮಿಲನ್ ಫರ್ನಾಂಡಿಸ್ ಸರ್ ಇನ್ನಿಲ್ಲ. ತುಂಬಾ ಶಾಂತ ಸ್ವಭಾವದ ವ್ಯಕ್ತಿ. ನನಗಿವರು 'ತುನಿವು' ಸಿನಿಮಾ ಸೆಟ್‌ನಿಂದ ಪರಿಚಯ. ನೀವು ತುಂಬಾ ಬೇಗ ಹೋದಿರಿ. ಅವರ ಕುಟುಂಬ ಮತ್ತು ಸ್ನೇಹಿತರಿಗೆ ನನ್ನ ಸಂತಾಪಗಳು. ಈ ಘಟನೆಯು ಅಜರ್ಬೈಜಾನ್ನಲ್ಲಿ ನಡೆಯುತ್ತಿರುವ 'ವಿದಾ ಮುಯಾರ್ಚಿ' ಚಿತ್ರದ ಶೂಟಿಂಗ್ ಸಮಯದಲ್ಲಿ ಸಂಭವಿಸಿದೆ" ಎಂದು ತಿಳಿಸಿದ್ದಾರೆ.
-
Shocked to hear about the passing away of Art Director #Milan. My heartfelt condolences to his family during this difficult time.
— Jayam Ravi (@actor_jayamravi) October 15, 2023 " class="align-text-top noRightClick twitterSection" data="
">Shocked to hear about the passing away of Art Director #Milan. My heartfelt condolences to his family during this difficult time.
— Jayam Ravi (@actor_jayamravi) October 15, 2023Shocked to hear about the passing away of Art Director #Milan. My heartfelt condolences to his family during this difficult time.
— Jayam Ravi (@actor_jayamravi) October 15, 2023
ಗಣ್ಯರಿಂದ ಸಂತಾಪ: ಮಿಲನ್ ಫರ್ನಾಂಡಿಸ್ ನಿಧನಕ್ಕೆ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ. ತಮಿಳು ನಟ ಜಯರಾಮ್ ಎಕ್ಸ್ನಲ್ಲಿ "ಕಲಾ ನಿರ್ದೇಶಕ ಮಿಲನ್ ಫರ್ನಾಂಡಿಸ್ ನಿಧನಕ್ಕೆ ಬಗ್ಗೆ ಕೇಳಿ ಆಘಾತವಾಯಿತು. ಈ ನೋವಿನ ಸಮಯದಲ್ಲಿ ಅವರ ಕುಟುಂಬಕ್ಕೆ ನನ್ನ ಹೃತ್ಪೂರ್ವಕ ಸಂತಾಪಗಳು" ಎಂದು ಬರೆದುಕೊಂಡಿದ್ದಾರೆ. ಖ್ಯಾತ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್, ನಟ ಶಾಂತನು ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ: ಮಲಯಾಳಂ ಚಿತ್ರರಂಗದ ಖ್ಯಾತ ನಿರ್ಮಾಪಕ ಗಂಗಾಧರನ್ ನಿಧನ!
ಮಿಲನ್ ಫರ್ನಾಂಡಿಸ್ ಬಗ್ಗೆ..: ಮಿಲನ್ ಫರ್ನಾಂಡಿಸ್ ಚೆನ್ನೈನಲ್ಲಿ ಜನಿಸಿದರು. 1999ರಲ್ಲಿ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಆರಂಭದಲ್ಲಿ ಪ್ರಸಿದ್ಧ ಕಲಾ ನಿರ್ದೇಶಕ ಸಾಬು ಸಿರಿಲ್ ಅವರೊಂದಿಗೆ ಕೆಲಸ ಮಾಡಿದರು. ಅಜಿತ್ ಕುಮಾರ್ ಅವರ ಸಿಟಿಜನ್ (2001), ದಳಪತಿ ವಿಜಯ್ ನಟನೆಯ ತಮಿಳಿಯನ್ (2002), ಅಜಿತ್ ಅವರ ರೆಡ್ (2002), ವಿಲನ್ (2002), ಚಿಯಾನ್ ವಿಕ್ರಮ್ ಅವರ ಅನ್ನಿಯನ್ (2005) ಈ ಚಿತ್ರಗಳಲ್ಲಿ ಸಹಾಯಕ ಕಲಾ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದರು.
ಇದಾದ ನಂತರ, 'ಕಲಬ ಕಾದಲನ್' ಚಿತ್ರದ ಮೂಲಕ ಸ್ವತಂತ್ರ ಕಲಾ ನಿರ್ದೇಶಕರಾಗಿ ಬಡ್ತಿ ಪಡೆದರು. ಈ ಸಿನಿಮಾವು 2006ರಲ್ಲಿ ಬಿಡುಗಡೆಯಾಯಿತು. ಬಳಿಕ 2007ರಲ್ಲಿ ತೆರೆ ಕಂಡ 'ಓರಂ ಪೊ' ಚಿತ್ರದಲ್ಲಿ ಕೆಲಸ ಮಾಡಿದರು. ಮಿಲನ್ ಫರ್ನಾಂಡಿಸ್ ಈವರೆಗೆ ಒಟ್ಟು 30ಕ್ಕೂ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಅಜಿತ್ ಕುಮಾರ್ ಅಭಿನಯದ ಹಲವಾರು ಚಿತ್ರಗಳಿಗೆ ಕಲಾ ನಿರ್ದೇಶಕರಾಗಿದ್ದಾರೆ. ಇವರು ಅಜಿತ್ ಅವರ ನೆಚ್ಚಿನ ಆರ್ಟ್ ಡೈರೆಕ್ಟರ್ ಅನ್ನುವುದು ಗಮನಾರ್ಹ.
ಇದಲ್ಲದೇ, ಕೆಲವು ಜಾಹೀರಾತುಗಳಿಗೂ ಕಲಾ ನಿರ್ದೇಶಕರಾಗಿದ್ದಾರೆ. ಶಕ್ತಿ ಮಸಾಲಾ, ಆಚಿ ಮಸಾಲಾ, ಆರ್ಎಂಕೆವಿ ಸಿಲ್ಕ್ಸ್, ಸರವಣ ಸ್ಟೋರ್ಸ್ ಮತ್ತು ಪೋಥಿಸ್ನಂತಹ ಕಂಪನಿಗಳ ಜಾಹೀರಾತುಗಳಲ್ಲಿ ಕೆಲಸ ಮಾಡಿದ್ದಾರೆ. ಮಿಲನ್ ಫರ್ನಾಂಡಿಸ್ ಅವರ ಅತ್ಯಂತ ಪ್ರಸಿದ್ಧ ಪ್ರಾಜೆಕ್ಟ್ಗಳಲ್ಲಿ ಅಜಿತ್ ಕುಮಾರ್ ಅಭಿನಯದ 'ಬಿಲ್ಲಾ' (2007) ಚಿತ್ರವೂ ಒಂದು.
ಇದನ್ನೂ ಓದಿ: Film Director Siddique: ಮಲಯಾಳಂ ಸಿನಿಮಾ ನಿರ್ದೇಶಕ ಸಿದ್ದಿಕ್ ಹೃದಯಾಘಾತದಿಂದ ನಿಧನ