ETV Bharat / entertainment

MTV EMA 2022: ಗಾಯಕ ಅರ್ಮಾನ್ ಮಲಿಕ್ ನಾಮಿನೇಟ್​

author img

By

Published : Oct 12, 2022, 7:58 PM IST

ಗಾಯಕ ಅರ್ಮಾನ್ ಮಲಿಕ್ ಅವರು 'ಎಂಟಿವಿ ಯುರೋಪ್ ಸಂಗೀತ ಪ್ರಶಸ್ತಿ 2022' ಗೆ ನಾಮಿನೇಟ್ ಆಗಿದ್ದಾರೆ.

Armaan Malik nominated at MTV EMAs
ಗಾಯಕ ಅರ್ಮಾನ್ ಮಲಿಕ್

ಭಾರತದ ಪ್ರಖ್ಯಾತ ಗಾಯಕ, ಗೀತ ರಚನೆಕಾರ ಅರ್ಮಾನ್ ಮಲಿಕ್ ಅವರ ಹೆಸರು 'ಎಂಟಿವಿ ಯುರೋಪ್ ಸಂಗೀತ ಪ್ರಶಸ್ತಿ' (EMAs)ಗೆ ನಾಮ ನಿರ್ದೇಶನಗೊಂಡಿದೆ. ಅವರ ಇತ್ತೀಚಿನ ಇಂಗ್ಲಿಷ್ ಸಿಂಗಲ್ ಯು ಹಾಡಿಗಾಗಿ ಈ ನಾಮ ನಿರ್ದೇಶನ ಗೌರವವನ್ನು ಸ್ವೀಕರಿಸಿದ್ದಾರೆ.

ವಾರ್ಷಿಕ ಸಂಗೀತ ಗಾಲಾದಲ್ಲಿ ಅತ್ಯುತ್ತಮ ಭಾರತೀಯ ಆ್ಯಕ್ಟ್ ವಿಭಾಗದಲ್ಲಿ ಅರ್ಮಾನ್​​ ಮಲಿಕ್‌ಗೆ ಇದು ಎರಡನೇ ಗೌರವವಾಗಿದೆ. 2020ರಲ್ಲಿ ಇದೇ ವಿಭಾಗದಲ್ಲಿ ನಾಮನಿರ್ದೇಶನಗೊಂಡು ಪ್ರಶಸ್ತಿ ಪಡೆದಿದ್ದರು.

MTV EMA (MTV Europe Music Awards) ಅಲ್ಲಿ ಮತ್ತೊಮ್ಮೆ ನಾಮ ನಿರ್ದೇಶನವಾಗಿದ್ದು, ಬಹಳ ಉತ್ಸಾಹಗೊಂಡಿದ್ದೇನೆ. ಕಳೆದ ಬಾರಿ ನಾನು ಪ್ರಶಸ್ತಿಯನ್ನು ಗೆದ್ದಿದ್ದು, ಇದು ನನ್ನ ವೃತ್ತಿಜೀವನದ ದೊಡ್ಡ ಮೈಲಿಗಲ್ಲು. ನನ್ನ ಅಭಿಮಾನಿಗಳು, ಕುಟುಂಬ ಮತ್ತು ದೇಶವನ್ನು ಮತ್ತೊಮ್ಮೆ ಹೆಮ್ಮೆಪಡುವಂತೆ ಮಾಡುತ್ತೇನೆಂದು ನಂಬಿದ್ದೇನೆ. ಇತರ ಪ್ರತಿಭಾವಂತ ನಾಮಿನಿಗಳಿಗೂ ಶುಭ ಹಾರೈಸುತ್ತೇನೆ. ಇದು ನಮಗೆಲ್ಲರಿಗೂ ಒಂದು ದೊಡ್ಡ ಕ್ಷಣವಾಗಲಿದೆ ಎಂದು ಗಾಯಕ ಅರ್ಮಾನ್ ಮಲಿಕ್ ತಿಳಿಸಿದ್ದಾರೆ.

ಇದನ್ನೂ ಓದಿ: ಪ್ರಹ್ಲಾದ್​​​ ಛಾಬ್ರಿಯಾರ ಪ್ರಯಾಣದ ಏಳು - ಬೀಳುಗಳನ್ನು ತೋರಿಸಿದ 'ಪ್ರಹ್ಲಾದ್​​​' ಕಿರುಚಿತ್ರ

ಪ್ರಶಸ್ತಿ ವಿಭಾಗಗಳಿಗೆ ಸಾರ್ವಜನಿಕ ವೋಟಿಂಗ್​ ನಡೆಯಲಿದ್ದು MTV EMAs ವೆಬ್‌ಸೈಟ್‌ನಲ್ಲಿ (https://armaan.lnk.to/voteAM4EMA) ನಿಮ್ಮ ಮೆಚ್ಚಿನ ಗಾಯಕರಿಗೆ ವೋಟ್ ಮಾಡಬಹುದಾಗಿದೆ. ಜಾಗತಿಕ ಕಲಾವಿದರನ್ನು ಗೌರವಿಸುವ ಈ ಕಾರ್ಯಕ್ರಮವು ನವೆಂಬರ್ 13ರಂದು ಜರ್ಮನಿಯ ಡಸೆಲ್ಡಾರ್ಫ್‌ನಲ್ಲಿ ನಡೆಯಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.