ETV Bharat / entertainment

ಮಗಳ ಚಿತ್ರಕ್ಕೆ ಅರ್ಜುನ್ ಸರ್ಜಾ ಆ್ಯಕ್ಷನ್-ಕಟ್.. ಕ್ಲಾಪ್​ ಮಾಡಿದ ಟಾಲಿವುಡ್​ ಪವರ್​ ಸ್ಟಾರ್​​.. - ತೆಲುಗು ನಟ ವಿಶ್ವಕ್ ಸೇನ್ ಜೊತೆ ಐಶ್ವರ್ಯ ಅರ್ಜುನ್ ಸಿನೆಮಾ

ಬಹುಭಾಷಾ ನಟ ಅರ್ಜುನ್ ಸರ್ಜಾ ಮತ್ತೆ ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ತಮ್ಮ ಮಗಳ ಸಿನಿಮಾಕ್ಕೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಐಶ್ವರ್ಯ ಅರ್ಜುನ್ ಜೊತೆ ತೆಲುಗಿನಲ್ಲಿ ಯುವ ನಾಯಕನನ್ನು ಪರಿಚಯಿಸುತ್ತಿದ್ದಾರೆ..

arjun-sarja-direction-for-daughter-aishwarya-movie
ಮಗಳ ಚಿತ್ರಕ್ಕೆ ಅರ್ಜುನ್ ಸರ್ಜಾ ಆ್ಯಕ್ಷನ್ ಕಟ್... ಕ್ಯಾಪ್​ ಮಾಡಿದ ಟಾಲಿವುಡ್​ ಪವರ್​ ಸ್ಟಾರ್​​
author img

By

Published : Jun 27, 2022, 5:37 PM IST

ಬಹುಭಾಷಾ ನಟ ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ಮತ್ತೆ ನಿರ್ದೇಶನದತ್ತ ಮುಖಮಾಡಿದ್ದಾರೆ. ಅರ್ಜುನ್ ಇದೀಗ ಮಗಳು ಐಶ್ವರ್ಯ ಸಿನಿಮಾಗೆ ಮತ್ತೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಅಲ್ಲದೆ, ಸರ್ಜಾ ಚಿತ್ರದ ನಿರ್ದೇಶನದ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತುಕೊಂಡಿದ್ದಾರೆ.

ಅರ್ಜುನ್ ಮಗಳು ಐಶ್ವರ್ಯ ಸರ್ಜಾ 'ಪ್ರೇಮ ಬರಹ' ಮೂಲಕ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಬಳಿಕ ಯಾವುದೇ ಚಿತ್ರದಲ್ಲಿ ನಟಿಸಿರಲಿಲ್ಲ. ಅರ್ಜುನ್ ತಮ್ಮದೇ ಶ್ರೀರಾಮ್ ಫಿಲ್ಮ್ಸ್ ಇಂಟರ್ನ್ಯಾಷನಲ್ ಬ್ಯಾನರ್​ನಡಿ ನಿರ್ಮಿಸಲಿರುವ 15ನೇ ಚಿತ್ರ ಇದಾಗಿದೆ. ಈ ಬಾರಿ ಐಶ್ವರ್ಯ ಅರ್ಜುನ್ ಜೊತೆ ತೆಲುಗು ಯುವ ನಾಯಕನನ್ನು ಪರಿಚಯಿಸುತ್ತಿದ್ದಾರೆ. ನಾಯಕನಾಗಿ ತೆಲುಗು ಚಿತ್ರರಂಗದ ಯುವ ನಟ ವಿಶ್ವಕ್ ಸೇನ್ ನಟಿಸಲಿದ್ದಾರೆ.

ಸಿನಿಮಾ ಮುಹೂರ್ತದ ವಿಡಿಯೋ..

ವಿಶ್ವಕ್ ಸೇನ್ ನಿರ್ದೇಶನದ 'ಫಲಕ್ನುಮಾ ದಾಸ್' ಸಿನಿಮಾ ಭರ್ಜರಿ ಯಶಸ್ಸು ಸಾಧಿಸಿದೆ. ಸದ್ಯ 'ದಾಸ್ ಕಾ ಧಮ್ಕಿ' ಎಂಬ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಅರ್ಜುನ್ ಸರ್ಜಾ ನಿರ್ದೇಶನದ ಇನ್ನೂ ಹೆಸರಿಡದ ಈ ಚಿತ್ರದಲ್ಲಿ ವಿಲನ್ ಗೆಟಪ್​ನಲ್ಲಿ ಜಗಪತಿ ಬಾಬು ನಟಿಸಲಿದ್ದಾರೆ.

ಇದೊಂದು ರೋಡ್ ಟ್ರಿಪ್ ಚಿತ್ರವಾಗಿದ್ದು, ಶೀರ್ಘದಲ್ಲೇ ಶೂಟಿಂಗ್ ಆರಂಭವಾಗಲಿದೆ. ಬಳಿಕ ಉಳಿದ ಪಾತ್ರ ವರ್ಗವನ್ನು ಚಿತ್ರತಂಡ ಪರಿಚಯಿಸಲಿದೆ. ಇತ್ತೀಚೆಗೆ ಮುಹೂರ್ತ ಸಮಾರಂಭ ಜರುಗಿದ್ದು, ಪವನ್ ಕಲ್ಯಾಣ್ ಚಿತ್ರಕ್ಕೆ ಕ್ಲಾಪ್ ಮಾಡಿ ಶುಭ ಹಾರೈಸಿದ್ದಾರೆ. ಈ ಸಂದರ್ಭದಲ್ಲಿ ನಿರ್ದೇಶಕ ರಾಘವೇಂದ್ರ ರಾವ್ ಉಪಸ್ಥಿತರಿದ್ದರು.

ಇದನ್ನೂ ಓದಿ: ಆಲಿಯಾ ಭಟ್​ ಪ್ರಗ್ನೆಂಟ್​.. ಮದುವೆಯಾದ ಎರಡೇ ತಿಂಗಳಲ್ಲಿ ಖುಷಿ ವಿಚಾರ ಹಂಚಿಕೊಂಡ ತಾರೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.