ETV Bharat / entertainment

ಕ್ರಿಕೆಟ್​ ಆಟಗಾರ್ತಿಯಾಗುವ ಹಂಬಲ; ​ಅನಿಶಾಳ ರಿಯರ್​ ಹೀರೋ ಅರ್ಜುನ್​ ಕಪೂರ್​ - ಈಟಿವಿ ಭಾರತ ಕನ್ನಡ

ಪ್ರೊಫೆಶನಲ್​ ಕ್ರಿಕೆಟಿಗಳಾಗಲು ಕನಸು ಕಾಣುತ್ತಿರುವ ಅನಿಶಾ ರೌತ್​ ಬದುಕಿಗೆ ನಟ ಅರ್ಜುನ್​ ಕಪೂರ್ ದಾರಿದೀಪವಾಗಿದ್ದಾರೆ.

Arjun Kapoor
ಅನಿಶಾಳ ರಿಯರ್​ ಹೀರೋ ಆದ್ರು ಅರ್ಜುನ್​ ಕಪೂರ್​
author img

By

Published : Apr 11, 2023, 5:27 PM IST

ಬಾಲಿವುಡ್​ ನಟ ಅರ್ಜುನ್​ ಕಪೂರ್​ 11 ವರ್ಷದ ಬಾಲಕಿಯ ನಿಜ ಜೀವನದ ಹೀರೋ ಆಗಿದ್ದಾರೆ. ಅನಿಶಾ ರೌತ್​ ಎಂಬ ಹುಡುಗಿಯ ಸಂಪೂರ್ಣ ಖರ್ಚು ವೆಚ್ಚದ ಜವಾಬ್ದಾರಿಯನ್ನು ನಟ ತೆಗೆದುಕೊಂಡಿದ್ದಾರೆ. ​ಕ್ರಿಕೆಟಿಗಳಾಗಬೇಕೆಂದು ಕನಸು ಕಾಣುತ್ತಿರುವ ಈ ಪುಟ್ಟ ಹುಡುಗಿಯ ಬದುಕಿಗೆ ಅರ್ಜುನ್​ ಕಪೂರ್​ ದಾರಿ ದೀಪವಾಗಿದ್ದಾರೆ. ಅನಿಶಾ ರೌತ್​ ಎಂಟು ಗಂಟೆಯ ಕ್ರಿಕೆಟ್​ ಟ್ರೈನಿಂಗ್​ಗಾಗಿ ವಾರದ ಏಳು ದಿನವೂ 80 ಕಿ.ಮೀನಷ್ಟು ದೂರ ಪ್ರಯಾಣಿಸುತ್ತಾರೆ. ಕ್ರಿಕೆಟ್​ ದಂತಕಥೆ ಸಚಿನ್​ ತೆಂಡೂಲ್ಕರ್​ ಅವರಂತೆಯೇ ಪ್ರೊಫೆಶನಲ್​ ಕ್ರಿಕೆಟ್​ ಆಟಗಾರ್ತಿಯಾಗಬೇಕೆಂದು ಕನಸು ಕಾಣುತ್ತಿದ್ದಾರೆ. ಈ ಪುಟ್ಟ ಬಾಲಕಿಯ ಬಹುದೊಡ್ಡ ಕನಸನ್ನು ನನಸು ಮಾಡಲು ಅರ್ಜುನ್​ ಕಪೂರ್ ಇದೀಗ​ ಜೊತೆಯಾಗಿದ್ದಾರೆ.

ಮೇಲ್ವಿಚಾರಕಾಗಿ ಕೆಲಸ ಮಾಡುತ್ತಿರುವ ಅನಿಶಾ ರೌತ್​ ತಂದೆ ಪ್ರಭಾತ್​ ಮಗಳ ಕನಸೆಂಬ ರೆಕ್ಕೆಗೆ ಗಾಳಿಯಂತೆ ಪ್ರೋತ್ಸಾಹ ನೀಡಲು ಏನು ಬೇಕಾದರೂ ಮಾಡಲು ಸಜ್ಜಾಗಿದ್ದಾರೆ. ಆದರೂ ಸಹ ಅನಿಶಾಗೆ ಅತ್ಯುತ್ತಮ ಸೌಲಭ್ಯಗಳು ಮತ್ತು ಅಗತ್ಯವಿರುವ ಸಲಕರಣೆಗಳನ್ನು ಒದಗಿಸಲು ಮತ್ತೊಬ್ಬರ ಬೆಂಬಲದ ಅಗತ್ಯವಿದೆ. ಬಹುಶಃ ಇಂತಹದ್ದೊಂದು ದೊಡ್ಡ ಬೆಂಬಲ ಆಕೆಗೆ ಸಿಕ್ಕಿದ್ದಲ್ಲಿ ಮುಂದೊಂದು ದಿನ ಅನಿಶಾ ಭಾರತದ ಪರವಾಗಿ ಕ್ರಿಕೆಟ್​ ಆಡಲೂಬಹುದು. "ಪೋಷಕರಾದ ನಾವು ನಮ್ಮ ಮಗುವಿಗೆ ಓಳ್ಳೆಯದನ್ನೇ ಬಯಸುತ್ತೇವೆ. ಆದರೆ ವಿಶ್ವದರ್ಜೆಯ ಕ್ರಿಕೆಟ್​ ಆಟಗಾರ್ತಿಯಾಗಲು ತರಬೇತಿ ದುಬಾರಿಯಾಗಿದೆ" ಎಂದು ಅನಿಶಾ ತಂದೆ ಪ್ರಭಾಸ್ ಹೇಳುತ್ತಾರೆ​.

ಇದನ್ನೂ ಓದಿ: ವಿರಾಟ್ ಕೊಹ್ಲಿ ಶಕ್ತಿ ಅನುಷ್ಕಾ ಶರ್ಮಾ: ಕ್ರೀಡಾಂಗಣದಲ್ಲಿ ಪತಿ ಹುರಿದುಂಬಿಸಿದ ನಟಿ

ಮುಂದುವರೆದು, "ಒಬ್ಬ ತಂದೆಯಾಗಿ ನಾನು ಅವಳನ್ನು ಸಶಕ್ತಗೊಳಿಸಬೇಕಾಗಿದೆ. ಬಹುಶಃ ನಾನು ಮಾಡುವ ಪ್ರಯತ್ನ ಅವಳಿಗೆ ಒಳಿತನ್ನೇ ಮಾಡಬಹುದು. ಜೊತೆಗೆ ಅವಳು ಮುಂದಿನ ಪೀಳಿಗೆಗೆ ಅವಳಂತಹ ಇತರ ಮಕ್ಕಳಿಗೆ ಸ್ಫೂರ್ತಿಯಾಗಬಹುದು. ಅರ್ಜುನ್​ ಕಪೂರ್​ ಅವರು ನಮಗೆ ಮಾಡಿರುವ ಸಹಾಯ ದೇವರ ಕೊಡುಗೆಯಾಗಿದೆ. ಇದು ನನ್ನ ಭುಜದ ಮೇಲಿನ ಸಾಕಷ್ಟು ಹೊರೆಯನ್ನು ತೆಗೆದುಹಾಕಿದೆ. ಅದಕ್ಕಾಗಿ ನಾನು ಅರ್ಜುನ್​ ಅವರಿಗೆ ಎಷ್ಟು ಧನ್ಯವಾದ ಹೇಳಿದರೂ ಕಡಿಮೆಯೇ. ಕ್ರಿಕೆಟ್​ ಆಟಗಾರ್ತಿಯಾಗಿ ಅತ್ಯುತ್ತಮ ಸಾಧನೆ ಮಾಡುವುದು ಅನಿಶಾಗೆ ಮುಖ್ಯವಾಗಿದೆ. ಈಗ ಅವಳು ತನ್ನ 18 ವರ್ಷದವರೆಗೂ ಎಲ್ಲವನ್ನೂ ಹೊಂದಿದ್ದಾಳೆ" ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಮಹಾರಾಷ್ಟ್ರದ ಪನ್ವೇಲ್​ನಲ್ಲಿ ಅನಿಶಾ ರೌತ್​ ತಮ್ಮ ಕನಸಿನ ಗುರಿಯನ್ನು ಬೆನ್ನಟ್ಟಲು ದಿನದ ಎಂಟು ಗಂಟೆ ಕ್ರಿಕೆಟ್​ ತರಬೇತಿ ಪಡೆಯುತ್ತಿದ್ದಾರೆ. ಎಂಎಸ್​ ಧೋನಿ: ದ ಅನ್​ಟೋಲ್ಡ್​ ಸ್ಟೋರಿ ಸಿನಿಮಾ ನೋಡಿದ ನಂತರ ಅವರು ಕ್ರಿಕೆಟ್​ ಆಡಲು ಸ್ಫೂರ್ತಿ ಪಡೆದರು. ತಮ್ಮ10 ನೇ ವಯಸ್ಸಿನಲ್ಲಿ ಮಹಾರಾಷ್ಟ್ರದ ರಾಯಗಡ ಜಿಲ್ಲೆಗಾಗಿ ಅಂಡರ್-15 ಮಹಿಳಾ ಕ್ರಿಕೆಟ್ ಆಡಿದರು. ಅವರು ತಮ್ಮ ಹಿಂದಿನ ಪಂದ್ಯಗಳಲ್ಲಿ ಮೂರು ಅರ್ಧ ಶತಕಗಳನ್ನು ಗಳಿಸಿದ್ದಾರೆ. ಅನಿಶಾ ಪ್ರಸ್ತುತ 15 ವರ್ಷದೊಳಗಿನ ಎಂಐಜಿ ಕ್ಲಬ್‌ಗಾಗಿ ಆಡುತ್ತಿದ್ದಾರೆ. ಅವರು ತಮ್ಮ ತಂಡದ ಪರ ಆರಂಭಿಕ​ ಬ್ಯಾಟರ್​ ಆಗಿದ್ದಾರೆ.

ಇದನ್ನೂ ಓದಿ: ಹಾಲಿವುಡ್​ನಂತೆ ಸಿದ್ಧಗೊಳ್ಳುತ್ತಿದೆ ಪ್ರಭಾಸ್ 'ಪ್ರಾಜೆಕ್ಟ್​ ಕೆ' ಸಿನಿಮಾ: ಕುತೂಹಲ ಕೆರಳಿಸುವ ವಿಡಿಯೋ ಔಟ್​​​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.