ಬಾಲಿವುಡ್ನ ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ ಲವ್ ಬರ್ಡ್ಸ್ನಂತೆ ಗುರುತಿಸಿಕೊಂಡಿದ್ದರು. ಮೊದಲ ಪತಿಯಿಂದ ವಿಚ್ಛೇದನ ಪಡೆದಿರುವ ಮಲೈಕಾ ಅರೋರಾ ಅವರು ವಯಸ್ಸಿನಲ್ಲಿ ಅವಿವಾಹಿತ ಅರ್ಜುನ್ ಕಪೂರ್ ಅವರಿಗಿಂತ ವಯಸ್ಸಿನಲ್ಲಿ ಬಹಳ ದೊಡ್ಡವರು. ಈ ವಿಚಾರವಾಗಿ ನಟಿ ಈಗಾಗಲೇ ಸಾಕಷ್ಟು ಬಾರಿ ಟ್ರೋಲ್ಗೊಳಗಾಗಿದ್ದಾರೆ. ಸಾರ್ವಜನಿಕವಾಗಿ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡಾಗಲೆಲ್ಲಾ ನೆಟ್ಟಿಗರು ವಿಭಿನ್ನವಾಗಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಾರೆ.
ಬ್ರೇಕ್ ಅಪ್ ರೂಮರ್: ಕಳೆದ ಕೆಲ ಸಮಯದಿಂದ ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ ಡೇಟಿಂಗ್ನಲ್ಲಿದ್ದಾರೆ ಎಂದು ಹೇಳಲಾಗಿತ್ತು. ಡಿನ್ನರ್ ಡೇಟ್, ಸಿನಿಮಾ ಈವೆಂಟ್, ಫಾರಿನ್ ಟ್ರಿಪ್ ಎಂದು ಹಲವು ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಇವರ ಪ್ರತೀ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ವಿಭಿನ್ನ ಪ್ರತಿಕ್ರಿಯೆಗಳನ್ನು ಸ್ವೀಕರಿಸಿವೆ. ಇದೀಗ ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ ಬ್ರೇಕ್ ಅಪ್ ಮಾಡಿಕೊಳ್ಳಲಿದ್ದಾರೆ ಎಂಬ ವದಂತಿ ಹರಡಿದೆ.
ಈ ಜೋಡಿ ಈ ಬಗ್ಗೆ ಯಾವುದೇ ಹೇಳಿಕೆ ಕೊಟ್ಟಿಲ್ಲವಾದರೂ ಸಾಕಷ್ಟು ಅಂತೆ ಕಂತೆಗಳು ಕೇಳಿ ಬರುತ್ತಿವೆ. ನಟಿ, ಸೋಷಿಯಲ್ ಮೀಡಿಯಾ ಪರ್ಸನಾಲಿಟಿ ಕುಶಾ ಕಪಿಲಾ ಅವರೊಂದಿಗೆ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಊಹೆಯು ಇದೆ. ಜೊತೆಗೆ ಇಂದು ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ ಸೋಷಿಯಲ್ ಮೀಡಿಯಾಗಳಲ್ಲಿ ರಹಸ್ಯಕರ ಪೋಸ್ಟ್ ಶೇರ್ ಮಾಡಿದ್ದು, ಬೆಂಕಿಗೆ ತುಪ್ಪ ಸುರಿದಂತಿದೆ.
ಇಂದು ನಟ ಮತ್ತು ನಟಿ ಇಬ್ಬರೂ ಇನ್ಸ್ಟಾಗ್ರಾಮ್ ಸ್ಟೋರಿ ಶೇರ್ ಮಾಡಿದ್ದಾರೆ. ಕೋಟ್ಸ್ ಏನನ್ನೋ ತಿಳಿಸುವಂತಿದೆ. ಹಾಗಂತ ಇವರಿಬ್ಬರ ನಡುವೆ ಬಿರುಕು ಮೂಡಿದೆ ಎಂದು ಹೇಳಲು ಸಾಧ್ಯವಿಲ್ಲ. ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ ಅವರ ಇನ್ಸ್ಟಾಗ್ರಾಮ್ ಸ್ಟೋರಿ ನೋಡಿದ ಕೆಲ ನೆಟ್ಟಿಗರು ಏನೋ ಸಮಸ್ಯೆ ಆಗಿದೆ ಅಂದ್ರೆ, ಅಭಿಮಾನಿಗಳು ತಮ್ಮ ಮೆಚ್ಚಿನ ಜೋಡಿಯ ಪರ ನಿಂತಿದ್ದಾರೆ. ಮಿಶ್ರ ಪ್ರತಿಕ್ರಿಯೆ ಮುಂದುವರಿದಿದೆ. ಈ ಸ್ಟೋರಿ ಶೇರ್ ಮಾಡುವ ಮುನ್ನ ಮಲೈಕಾ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಅದಕ್ಕೆ ಅರ್ಜುನ್ ಕಪೂರ್ ಕಾಮೆಂಟ್ ಮಾಡಿದ್ದಾರೆ. ಈ ಹಿನ್ನೆಲೆ ರೂಮರ್ ಲವ್ ಬರ್ಡ್ಸ್ ನಡುವೆ ಎಲ್ಲವೂ ಸರಿ ಇದೇ ಎಂದೇ ಹೇಳಬಹುದು.
ಜೋಡಿ ನಡುವೆ ಎಲ್ಲವೂ ಓಕೆ?! ಅಂತಾರಾಷ್ಟ್ರೀಯ ಶ್ವಾನ ದಿನದ ಸಲುವಾಗಿ ಇಂದು ನಟಿ ಮಲೈಕಾ ಅರೋರಾ ಅವರು ವಿಶೇಷ ಪೋಸ್ಟ್ ಒಂದನ್ನು ಶೇರ್ ಮಾಡಿದ್ದಾರೆ. ಮುದ್ದಾದ ಶ್ವಾನದೊಂದಿಗೆ ನಟಿ ಕಾಣಿಸಿಕೊಂಡಿದ್ದಾರೆ. ಮಲೈಕಾರ ಈ ಪೋಸ್ಟ್ಗೆ ಅರ್ಜುನ್ ಕಪೂರ್ ಎರಡು ಬಾರಿ ಕಾಮೆಂಟ್ ಮಾಡಿದ್ದಾರೆ. ನಿಮ್ಮ ಜೀವನದ ರಿಯಲ್ ಸ್ಟಾರ್ ಎಂದು ಒಂದು ಕಾಮೆಂಟ್ ಇದ್ದರೆ, ಮತ್ತೊಂದು ಕಾಮೆಂಟ್ನಲ್ಲಿ ಹ್ಯಾಂಡ್ಸಂ ಬಾಯ್ ಎಂದು ತಿಳಿಸಿದ್ದಾರೆ. ಈ ರೀತಿಯ ಫನ್ನಿ ಕಾಮೆಂಟ್ ಗಮನಿಸಿದರೆ, ಜೋಡಿ ನಡುವೆ ಬಿರುಕು ಮೂಡಿಲ್ಲ ಅನ್ನೋದು ಖಚಿತ. ಅಲ್ಲದೇ, ಅರ್ಜುನ್ ಕಪೂರ್ ಅವರನ್ನು ಹೊರತುಪಡಿಸಿ ಅವರ ಕುಟುಂಬಸ್ಥರನ್ನು ನಟಿ ಸೋಷಿಯಲ್ ಮೀಡಿಯಾದಲ್ಲಿ ಅನ್ಫಾಲೋ ಮಾಡಿದ್ದಾರೆ ಎನ್ನಲಾಗಿದೆ. ಏನೇ ಇರಲಿ ಈ ಬಗ್ಗೆ ಅವರೇ ಸ್ಪಷ್ಟನೆ ಕೊಡಬೇಕಿದೆ.
ಇದನ್ನೂ ಓದಿ: Thalaivar 170: ಜೈಲರ್ ಸಕ್ಸಸ್ ಸೆಲೆಬ್ರೇಶನ್ - ರಜನಿಕಾಂತ್ ಮುಂದಿನ ಸಿನಿಮಾ ಶೂಟಿಂಗ್ ಶುರು
ರಹಸ್ಯಕರ ಇನ್ಸ್ಟಾ ಸ್ಟೋರಿ: ''ಬದಲಾವಣೆ ಜೀವನದ ನಿಯಮ. ಯಾರು ಹಿಂದಿನ ದಿನನ ದಿನಗಳು, ಪ್ರಸ್ತುತ ಸಮಯದ ಬಗ್ಗೆಯೆ ವಿಚಾರಿಸುತ್ತಾರೋ ಅವರು ಮುಂದಿನ ಸುಂದರ ದಿನಗಳನ್ನು ಕಳೆದುಕೊಳ್ಳುತ್ತಾರೆ'' ಎಂದು ನಟಿಯ ಇನ್ಸ್ಟಾ ಸ್ಟೋರಿಯಲ್ಲಿ ಬರೆದಿದೆ. ''ಕೊಳಚೆ, ಪ್ರಪಂಚದಲ್ಲಿ ನಾವು ಯಾವಾಗಲೂ ಗಮನ ಹರಿಸುವ ಒಂದು ವಿಚಾರ'' ಎಂದು ಅರ್ಜುನ್ ಕಪೂರ್ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಅಮೆರಿಕದಲ್ಲಿ ಕುಶಿ ಪ್ರಮೋಶನ್: ಸಮಂತಾ ಬಳಿ ಕುಳಿತುಕೊಳ್ಳಲು 2 ಲಕ್ಷ ರೂ. ಕೊಟ್ಟ ಅಭಿಮಾನಿಗಳು!