ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಹೈವೋಲ್ಟೇಜ್ ವಿಶ್ವಕಪ್ ಪಂದ್ಯ ನಡೆಯುತ್ತಿದೆ. ಐಸಿಸಿ ವಿಶ್ವಕಪ್ ಕದನಕ್ಕೂ ಮುನ್ನ, ಖ್ಯಾತ ಗಾಯಕ ಅರಿಜಿತ್ ಸಿಂಗ್ ತಮ್ಮ ಕಂಠಸಿರಿಯಿಂದ ಮೈದಾನದಲ್ಲಿ ಮೋಡಿ ಮಾಡಿದ್ದಾರೆ. ವಿಶ್ವದ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಎಂದು ಕರೆಯಲ್ಪಡುವ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮೊಳಗಿದ ಗಾಯನದ ಕ್ಲಿಪ್ಗಳು ಆನ್ಲೈನ್ನಲ್ಲಿ ವೈರಲ್ ಆಗುತ್ತಿವೆ.
-
This is emotion for us 🇮🇳
— CHITTARANJAN (@i_CHITTARANJAN1) October 14, 2023 " class="align-text-top noRightClick twitterSection" data="
Vande Matram ❤️#INDvsPAK #ArijitSinghpic.twitter.com/ePEzrIJH2d
">This is emotion for us 🇮🇳
— CHITTARANJAN (@i_CHITTARANJAN1) October 14, 2023
Vande Matram ❤️#INDvsPAK #ArijitSinghpic.twitter.com/ePEzrIJH2dThis is emotion for us 🇮🇳
— CHITTARANJAN (@i_CHITTARANJAN1) October 14, 2023
Vande Matram ❤️#INDvsPAK #ArijitSinghpic.twitter.com/ePEzrIJH2d
ಇಂದು ಮಧ್ಯಾನ್ 2 ಗಂಟೆಗೆ ಐಸಿಸಿ ವಿಶ್ವಕಪ್ 2023ರ 12ನೇ ಪಂದ್ಯ ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆರಂಭಗೊಂಡಿದೆ. ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆರಿಸಿಕೊಂಡಿದೆ. ಹೈವೋಲ್ಟೇಜ್ ಪಂದ್ಯಕ್ಕೆ ವಿಶ್ವದ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಸಾಕ್ಷಿಯಾಗಿದ್ದು, ಭಾರತ ಗೆಲ್ಲಲು ಪ್ರಾರ್ಥನೆ ಮುಂದುವರಿದಿದೆ. ಪಂದ್ಯ ಆರಂಭಕ್ಕೂ ಮುನ್ನ ಖ್ಯಾತ ಗಾಯಕ ಅರಿಜಿತ್ ಸಿಂಗ್ ಭಾವಪೂರ್ಣ ಮಧುರ ಗೀತೆಗಳೊಂದಿಗೆ ಮೈದಾನದ ವೈಭವವನ್ನು ಹೆಚ್ಚಿಸಿದರು.
-
Arijit Singh Tum Kya Mile Live.#INDvsPAK #ArijitSinghpic.twitter.com/v8ZkgfpzFa
— CHITTARANJAN (@i_CHITTARANJAN1) October 14, 2023 " class="align-text-top noRightClick twitterSection" data="
">Arijit Singh Tum Kya Mile Live.#INDvsPAK #ArijitSinghpic.twitter.com/v8ZkgfpzFa
— CHITTARANJAN (@i_CHITTARANJAN1) October 14, 2023Arijit Singh Tum Kya Mile Live.#INDvsPAK #ArijitSinghpic.twitter.com/v8ZkgfpzFa
— CHITTARANJAN (@i_CHITTARANJAN1) October 14, 2023
ಅರಿಜಿತ್ ಸಿಂಗ್, ಸಂಗೀತ ಸಂಯೋಜಕ - ಗಾಯಕ ಶಂಕರ್ ಮಹಾದೇವನ್ ಮತ್ತು ಗಾಯಕರಾದ ಸುನಿಧಿ ಚೌಹಾಣ್ ಮತ್ತು ಸುಖ್ವಿಂದರ್ ಸಿಂಗ್ ಜೊತೆ ಸೇರಿ ಅದ್ಭುತ ಪ್ರದರ್ಶನ ನೀಡಿದರು. ಮನ ಸೆಳೆಯುವ ಗಾಯನ ಮೂಲಕ ಕಿಕ್ಕಿರಿದ ಕ್ರೀಡಾಂಗಣವನ್ನು ಮಂತ್ರಮುಗ್ಧಗೊಳಿಸಿದರು. ಬಹುನಿರೀಕ್ಷಿತ ಪಂದ್ಯ ಭಾರತೀಯ ಚಿತ್ರರಂಗದ ಖ್ಯಾತ ಗಾಯಕರಾದ ಅರಿಜಿತ್ ಸಿಂಗ್, ಶಂಕರ್ ಮಹಾದೇವನ್ ಮತ್ತು ಸುನಿಧಿಯವರ ಭಾವಪೂರ್ಣ 'ವಂದೇ ಮಾತರಂ' ಮೂಲಕ ಪ್ರಾರಂಭವಾಯಿತು.
-
All these small clips giving same energy,like his live concerts gives us . https://t.co/OlnP08Sykm
— Shreya (@ajeebdastanhye) October 14, 2023 " class="align-text-top noRightClick twitterSection" data="
">All these small clips giving same energy,like his live concerts gives us . https://t.co/OlnP08Sykm
— Shreya (@ajeebdastanhye) October 14, 2023All these small clips giving same energy,like his live concerts gives us . https://t.co/OlnP08Sykm
— Shreya (@ajeebdastanhye) October 14, 2023
ಅರಿಜಿತ್ ಸಿಂಗ್ ಮತ್ತು ತಂಡದ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಕಾಡ್ಗಿಚ್ಚಿನ ವೇಗದಲ್ಲಿ ಹರಡಿತು. ಈ ವೈರಲ್ ಕ್ಲಿಪ್‌ಗಳಲ್ಲಿ, ಅರಿಜಿತ್ ಬ್ರಹ್ಮಾಸ್ತ್ರ ಸಿನಿಮಾದ ದೇವಾ ದೇವಾ ಹಾಡನ್ನು ಹಾಡಿರೋದನ್ನು ಕಾಣಬಹುದು. ಸೂಪರ್ ಹಿಟ್ ಬ್ರಹ್ಮಾಸ್ತ್ರ ಸಿನಿಮಾದ ಈ ಹಾಡನ್ನು ಸ್ವತಃ ಅರಿಜಿತ್ ಸಿಂಗ್ ಅವರೇ ಹಾಡಿದ್ದಾರೆ. ಪ್ರದರ್ಶನದ ಸಮಯದಲ್ಲಿ, ಕ್ಯಾಮರಾ ಕ್ರಿಕೆಟ್ ದಂತಕಥೆ ಮಹೇಂದ್ರ ಸಿಂಗ್ ಧೋನಿ ಕಡೆ ತಿರುಗಿದ್ದು, ಎಂಎಸ್ಡಿ ಎಂಜಾಯ್ ಮಾಡುತ್ತಿರುವುದನ್ನು ಕಾಣಬಹುದು.
-
Arijit Singh has reached the Narendra Modi Stadium🏟️❤️#ArijitSingh #viratkohli pic.twitter.com/EVpIA0nJ0w
— 𝙒𝙧𝙤𝙜𝙣🥂 (@wrogn_edits) October 14, 2023 " class="align-text-top noRightClick twitterSection" data="
">Arijit Singh has reached the Narendra Modi Stadium🏟️❤️#ArijitSingh #viratkohli pic.twitter.com/EVpIA0nJ0w
— 𝙒𝙧𝙤𝙜𝙣🥂 (@wrogn_edits) October 14, 2023Arijit Singh has reached the Narendra Modi Stadium🏟️❤️#ArijitSingh #viratkohli pic.twitter.com/EVpIA0nJ0w
— 𝙒𝙧𝙤𝙜𝙣🥂 (@wrogn_edits) October 14, 2023
ಇದನ್ನೂ ಓದಿ: Cricket World Cup 2023: ಪಾಕ್ಗೆ ಬಾಬರ್, ರಿಜ್ವಾನ್ ಆಸರೆ.. 125/2
ಬಾಲಿವುಡ್, ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರ ಉಪಸ್ಥಿತಿ ಪಂದ್ಯದ ವೈಭವ ಜೊತೆಗೆ ಮಹತ್ವವನ್ನು ಹೆಚ್ಚಿಸಿದೆ. ಗೋಲ್ಡನ್ ಟಿಕೆಟ್ ಪಡೆದಿರುವ ಸ್ಕ್ರೀನ್ ಐಕಾನ್ಸ್ ಅಮಿತಾಭ್ ಬಚ್ಚನ್ ಹಾಗೂ ರಜನಿಕಾಂತ್ ಅವರು ಭಾರತ ಮತ್ತು ಪಾಕಿಸ್ತಾನ ಹಣಾಹಣಿಯನ್ನು ವೀಕ್ಷಿಸುತ್ತಿದ್ದಾರೆ. ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ ಪತ್ನಿ - ನಟಿ ಅನುಷ್ಕಾ ಶರ್ಮಾ, ಕೆಎಲ್ ರಾಹುಲ್ ಪತ್ನಿ - ನಟಿ ಅಥಿಯಾ ಶೆಟ್ಟಿ ಕೂಡ ಕ್ರಿಡಾಂಗಣದಲ್ಲಿ ಉಪಸ್ಥಿತರಿದ್ದಾರೆ.
-
It was planned by god. God planned it ONLY for MS Dhoni. #ArijitSingh #INDvsPAKpic.twitter.com/y4cjUA0HBe
— FAN🚩 (@KattarDhoni) October 14, 2023 " class="align-text-top noRightClick twitterSection" data="
">It was planned by god. God planned it ONLY for MS Dhoni. #ArijitSingh #INDvsPAKpic.twitter.com/y4cjUA0HBe
— FAN🚩 (@KattarDhoni) October 14, 2023It was planned by god. God planned it ONLY for MS Dhoni. #ArijitSingh #INDvsPAKpic.twitter.com/y4cjUA0HBe
— FAN🚩 (@KattarDhoni) October 14, 2023
ಇದನ್ನೂ ಓದಿ: ಭಾರತ ಪಾಕಿಸ್ತಾನ ಪಂದ್ಯ: ಅಹಮದಾಬಾದ್ ತಲುಪಿದ ಸಚಿನ್ ತೆಂಡೂಲ್ಕರ್, ಅನುಷ್ಕಾ ಶರ್ಮಾ, ಅರಿಜಿತ್ ಸಿಂಗ್ - ವಿಡಿಯೋ!