ವಿಶ್ವಕಪ್ 2023ರ ಮೊದಲ ಸೆಮಿಫೈನಲ್‌ನಲ್ಲಿ ಭಾರತ ನ್ಯೂಜಿಲೆಂಡ್ ನಡುವೆ ಹೈವೋಲ್ಟೇಜ್ ಪಂದ್ಯ ಏರ್ಪಟ್ಟಿದೆ. ಭಾರತ ಕ್ರಿಕೆಟ್ ತಂಡದ ಘರ್ಜನೆ ಮುಂದುವರಿದಿದೆ. ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಎರಡು ದಾಖಲೆಗಳನ್ನು ಪುಡಿಗಟ್ಟಿದ್ದಾರೆ. 50ನೇ ಶತಕ ಗಳಿಸಿ ರೆಕಾರ್ಡ್ ಬ್ರೇಕ್ ಮಾಡಿದ್ದಾರೆ.
ಬಾಲಿವುಡ್ ಅಭಿನೇತ್ರಿ ಅನುಷ್ಕಾ ಶರ್ಮಾ ಎಂದಿನಂತೆ ಪತಿ ವಿರಾಟ್ ಕೊಹ್ಲಿ ಅವರನ್ನು ಹುರಿದುಂಬಿಸಲು ಸ್ಟೇಡಿಯಂನಲ್ಲಿ ಹಾಜರಿದ್ದಾರೆ. ಭಾರತ ಮತ್ತು ನ್ಯೂಜಿಲೆಂಡ್ ಪಂದ್ಯದ ವಿಡಿಯೋಗಳು ವೈರಲ್ ಆಗುತ್ತಿದ್ದು, ವಿರುಷ್ಕಾ ವಿಡಿಯೋ ನೆಟ್ಟಿಗರ ಗಮನ ಸೆಳೆದಿದೆ. ಎರಡನೇ ಮಗುವಿಗೆ ತಾಯಿಯಾಗುತ್ತಿರುವ ನಟಿ ಅನುಷ್ಕಾ ಶರ್ಮಾ ಅವರ ಸಂತಸ ಕ್ಯಾಮರಾಗಳಲ್ಲಿ ಸೆರೆಯಾಗಿದೆ.
-
Them!! 🤌🥰
— Ankit Mandal (@_ankit_mandal_) November 15, 2023 " class="align-text-top noRightClick twitterSection" data="
VIRUSHKA MOMENTS 💕🫶✨#INDvsNZ #ViratKohli𓃵#anushkasharmapic.twitter.com/ITX4rGfbAj #
">Them!! 🤌🥰
— Ankit Mandal (@_ankit_mandal_) November 15, 2023
VIRUSHKA MOMENTS 💕🫶✨#INDvsNZ #ViratKohli𓃵#anushkasharmapic.twitter.com/ITX4rGfbAj #Them!! 🤌🥰
— Ankit Mandal (@_ankit_mandal_) November 15, 2023
VIRUSHKA MOMENTS 💕🫶✨#INDvsNZ #ViratKohli𓃵#anushkasharmapic.twitter.com/ITX4rGfbAj #
ವಿರುಷ್ಕಾ ಫ್ಲೈಯಿಂಗ್ ಕಿಸ್: ವಿಶ್ವಕಪ್ ಸೆಮಿಫೈನಲ್ ಪಂದ್ಯದ ಮತ್ತೊಂದು ಹೃದಯಸ್ಪರ್ಶಿ ವಿಡಿಯೋ ಅಭಿಮಾನಿಗಳ ಮನ ಕದ್ದಿದೆ. ಜನಪ್ರಿಯ ಜೋಡಿ ಫ್ಲೈಯಿಂಗ್ ಕಿಸ್ ಕೊಟ್ಟುಕೊಳ್ಳುತ್ತಿರುವ ದೃಶ್ಯ ಆನ್ಲೈನ್ನಲ್ಲಿ ವೈರಲ್ ಆಗಿದೆ.
-
भारत की आन हैं भारत की शान हैं…शतकों का अर्धशतक मुबारक़ हो #ViratKohli𓃵 #ViratKholi #IndiaVsNewZealand #INDvsNZ 🇮🇳🏏🔥🙌👏 pic.twitter.com/mhMMgMDc01
— Ashutosh Chaturvedi (@ashutoshjourno) November 15, 2023 " class="align-text-top noRightClick twitterSection" data="
">भारत की आन हैं भारत की शान हैं…शतकों का अर्धशतक मुबारक़ हो #ViratKohli𓃵 #ViratKholi #IndiaVsNewZealand #INDvsNZ 🇮🇳🏏🔥🙌👏 pic.twitter.com/mhMMgMDc01
— Ashutosh Chaturvedi (@ashutoshjourno) November 15, 2023भारत की आन हैं भारत की शान हैं…शतकों का अर्धशतक मुबारक़ हो #ViratKohli𓃵 #ViratKholi #IndiaVsNewZealand #INDvsNZ 🇮🇳🏏🔥🙌👏 pic.twitter.com/mhMMgMDc01
— Ashutosh Chaturvedi (@ashutoshjourno) November 15, 2023
ಇದನ್ನೂ ಓದಿ: ಕ್ರಿಕೆಟ್ ಟೀಮ್ ದೀಪಾವಳಿ ಸೆಲೆಬ್ರೇಶನ್: ಬೇಬಿ ಬಂಪ್ ಮರೆಮಾಡಲೆತ್ನಿಸಿದ ಅನುಷ್ಕಾ ಶರ್ಮಾ ವಿಡಿಯೋ ವೈರಲ್!
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡಿದೆ. ಇದೇ ವಿಶ್ವಕಪ್ನಲ್ಲಿ ಏಕದಿನ ಕ್ರಿಕೆಟ್ನ 49ನೇ ಶತಕ ಗಳಿಸಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ದಾಖಲೆ ಮುರಿದಿದ್ದ ವಿರಾಟ್ ಕೊಹ್ಲಿ ಇಂದು 50ನೇ ಶತಕ ಮಾಡಿ ರೆಕಾರ್ಡ್ ಬ್ರೇಕ್ ಮಾಡಿದ್ದಾರೆ. ವಾಂಖೆಡೆ ಸ್ಟೇಡಿಯಂನಿಂದ ಸಂಭ್ರಮಾಚರಣೆಯ ವಿಡಿಯೋ ವೈರಲ್ ಆಗಿದೆ. ವಿರಾಟ್ ಪತ್ನಿ ಅನುಷ್ಕಾ ಶರ್ಮಾ ಅವರ ವಿಡಿಯೋ ಕೂಡ ವೈರಲ್ ಆಗಿದೆ. ಪತಿಯ ಸಾಧನೆಗೆ ಹೆಮ್ಮೆ, ಸಂತಸ ವ್ಯಕ್ತಪಡಿಸಿದ ಕ್ಷಣ ಒಂದೆಡೆಯಾದರೆ, ಮುತ್ತಿನ ಮಳೆ ಹರಿಸಿರೋ ದೃಶ್ಯ ಮತ್ತೊಂದೆಡೆ. ವಿರಾಟ್ ಮತ್ತು ಅನುಷ್ಕಾ ಇಬ್ಬರೂ ಫ್ಲೈಯಿಂಗ್ ಕಿಸ್ ಕೊಟ್ಟುಕೊಂಡಿದ್ದು, ಈ ದೃಶ್ಯ ಅಭಿಮಾನಿಗಳ ಹೃದಯ ಕದ್ದಿದೆ. ಇದಕ್ಕೂ ಮುನ್ನ ಅನೇಕ ಪಂದ್ಯಗಳಲ್ಲಿ ನಟಿ ಅನುಷ್ಕಾ ಶರ್ಮಾ ಭಾಗಿಯಾಗಿದ್ದು, ಸ್ಟೇಡಿಯಂಗಳಲ್ಲಿ 'ವಿರುಷ್ಕಾ' ಜೋಡಿಯ ಪ್ರೀತಿ ವ್ಯಕ್ತವಾಗುತ್ತಲೇ ಬಂದಿದೆ. ಇಂದು ಕೂಡ ಮುತ್ತಿನ ಮಳೆ ಸುರಿದಿದ್ದು, ವೈರಲ್ ವಿಡಿಯೋಗಳು ನೆಟ್ಟಿಗರ ಗಮನ ಸೆಳೆದಿವೆ.
-
Same Anushka😭😭😭pic.twitter.com/MIM0J0uEhA
— Alaska • WC Era🏏 (@alaskawhines) November 15, 2023 " class="align-text-top noRightClick twitterSection" data="
">Same Anushka😭😭😭pic.twitter.com/MIM0J0uEhA
— Alaska • WC Era🏏 (@alaskawhines) November 15, 2023Same Anushka😭😭😭pic.twitter.com/MIM0J0uEhA
— Alaska • WC Era🏏 (@alaskawhines) November 15, 2023
ಇದನ್ನೂ ಓದಿ: Virat Kohli: ಶತಕಗಳ ಅರ್ಧಶತಕ ದಾಖಲಿಸಿದ ವಿರಾಟ್: ಸಚಿನ್ ದಾಖಲೆ ಉಡೀಸ್
ಅನುಷ್ಕಾ ಶರ್ಮಾ ಗರ್ಭಧಾರಣೆ ಸಂಬಂಧ ಊಹಾಪೋಹಗಳಿವೆ. ಜನಪ್ರಿಯ ಜೋಡಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಹೇಳಲಾಗಿದೆ. ಇತ್ತೀಚೆಗೆ ವೈರಲ್ ಆಗಿರುವ ವಿಡಿಯೋಗಳು ಅನುಷ್ಕಾ ಶರ್ಮಾರ ಬೇಬಿ ಬಂಪ್ ಪ್ರದರ್ಶಿಸಿದೆ. ಅದಾಗ್ಯೂ, ವಿರುಷ್ಕಾ ಜೋಡಿ ವಿಶೇಷವಾಗಿ ಅಧಿಕೃತ ಘೋಷಣೆ ಕೊಡಲಿದೆ ಎಂದು ಅಭಿಮಾನಿಗಳು ಕಾತರರಾಗಿದ್ದಾರೆ. 2017ರ ನವೆಂಬರ್ನಲ್ಲಿ ದಾಂಪತ್ಯ ಜೀವನ ಆರಂಭಿಸಿದ ಜನಪ್ರಿಯ ಜೋಡಿ 2021ರ ಜನವರಿ 11ರಂದು ಮೊದಲ ಮಗುವನ್ನು ಸ್ವಾಗತಿಸಿದ್ದರು. ಪ್ರಥಮ ಪುತ್ರಿಗೆ ವಾಮಿಕಾ ಎಂದು ಹೆಸರಿಡಲಾಗಿದೆ.