ETV Bharat / entertainment

ಇಂದೋರ್‌ ಮನೆಗೆ ವಿರಾಟ್​ ಪತ್ನಿ ಭೇಟಿ: ಬಾಲ್ಯದ ದಿನಗಳನ್ನು ಮೆಲುಕು ಹಾಕಿದ ಅನುಷ್ಕಾ ಶರ್ಮಾ

ಇಂದೋರ್​ನಲ್ಲಿ ತಾವು ಕಳೆದ ಬಾಲ್ಯದ ಕ್ಷಣಗಳನ್ನು ಮೆಲುಕು ಹಾಕಿದ್ದಾರೆ ನಟಿ ಅನುಷ್ಕಾ ಶರ್ಮಾ.

Anushka Sharma visits old home in madhya pradesh
ಬಾಲ್ಯದ ದಿನಗಳನ್ನು ಮೆಲುಕು ಹಾಕಿದ ಅನುಷ್ಕಾ ಶರ್ಮಾ
author img

By

Published : Mar 7, 2023, 5:43 PM IST

ಇಂದೋರ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯವನ್ನು ಆಯೋಜಿಸಲಾಗಿತ್ತು. ಈ ಟೆಸ್ಟ್ ಪಂದ್ಯದ ಸಲುವಾಗಿ ವಿರಾಟ್ ಕೊಹ್ಲಿ ತಂಡದೊಂದಿಗೆ ಇಂದೋರ್​ಗೆ ಭೇಟಿ ಕೊಟ್ಟಿದ್ದರು. ವಿರಾಟ್ ಕೊಹ್ಲಿ ಜೊತೆಗೆ ಪತ್ನಿ, ಬಾಲಿವುಡ್​​ ನಟಿ ಅನುಷ್ಕಾ ಶರ್ಮಾ ಕೂಡ ಇಂದೋರ್​ಗೆ ಭೇಟಿ ಕೊಟ್ಟಿದ್ದರು. ವಿರುಷ್ಕಾ ದಂಪತಿ ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ಕೊಟ್ಟು ದೊಡ್ಡ ಸುದ್ದಿ ಮಾಡಿದ್ದರು. ಇದಾದ ನಂತರ ಅನುಷ್ಕಾ ಶರ್ಮಾ ಮೊವ್ (Mhow, ಅಂಬೇಡ್ಕರ್ ನಗರ್)ಗೆ ಭೇಟಿ ಕೊಟ್ಟು ತಮ್ಮ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

ಸೋಮವಾರ ನಟಿ ಅನುಷ್ಕಾ ಶರ್ಮಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ಶೇರ್ ಮಾಡಿಕೊಂಡ ಅನುಷ್ಕಾ ಶರ್ಮಾ, ತಾನು ಮೊವ್‌ ((Mhow)ನಲ್ಲಿ ಈಜುವುದನ್ನು ಕಲಿತಿದ್ದೇನೆ ಎಂದು ಹೇಳಿ ಬಾಲ್ಯದ ದಿನಗಳನ್ನು ನೆನಪಿಸಿಕೊಂಡರು. ಮೊವ್ ಕಂಟೋನ್ಮೆಂಟ್‌ನಲ್ಲಿ ತನ್ನ ಹಳೇ ದಿನಗಳನ್ನು ಮೆಲುಕು ಹಾಕುತ್ತಾ, ತನ್ನ ತಂದೆಯೊಂದಿಗೆ ಸ್ಕೂಟರ್ ಸವಾರಿಯನ್ನು ಆನಂದಿಸುತ್ತಿದ್ದೆ, ಆ ಸ್ಥಳವು ಯಾವಾಗಲೂ ತನ್ನ ಹೃದಯದಲ್ಲಿರುತ್ತದೆ ಎಂದು ತಿಳಿಸಿದ್ದಾರೆ.

ನಟಿ ಅನುಷ್ಕಾ ಶರ್ಮಾ ತಮ್ಮ ಕುಟುಂಬದೊಂದಿಗೆ ವಾಸಿಸುತ್ತಿದ್ದ ಮನೆಯಲ್ಲಿ ಫೋಟೋ ಸಹ ಕ್ಲಿಕ್ಕಿಸಿಕೊಂಡಿದ್ದಾರೆ. ಬಳಿಕ ಆರ್ಮಿ ಪಬ್ಲಿಕ್ ಸ್ಕೂಲ್, ಡಿಫೆನ್ಸ್ ಸರ್ವೀಸಸ್ ಆಫೀಸರ್ಸ್ ಇನ್ಸ್​ಟಿಟ್ಯೂಟ್ ಮತ್ತು ಈಜುಕೊಳಕ್ಕೆ ಭೇಟಿ ಕೊಟ್ಟರು. ಅಲ್ಲಿ ಅನುಷ್ಕಾ ಅವರು ಬಾಲ್ಯದಲ್ಲಿ ಈಜುವುದನ್ನು ಕಲಿತಿದ್ದಾರೆ. "ನನ್ನ ಹೃದಯ ತುಂಬಿದೆ" ಎಂದು ಬರೆಯುತ್ತಾ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಬರಹವನ್ನು ಮುಕ್ತಾಯಗೊಳಿಸಿದ್ದಾರೆ.

ಅನುಷ್ಕಾ ಶರ್ಮಾ ಅವರ ಈ ಪೋಸ್ಟ್ ಸಾಕಷ್ಟು ಮೆಚ್ಚುಗೆ ಗಳಿಸಿದೆ. ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗುತ್ತಿದ್ದು, ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆರ್ಮಿ ಹಿನ್ನೆಲೆಯಿಂದ ಬಂದ ರಾಕುಲ್ ಪ್ರೀತ್ ಸಿಂಗ್ ಸಹ ಅನುಷ್ಕಾರ ಪೋಸ್ಟ್​ಗೆ ತಮ್ಮ ಮೆಚ್ಚುಗೆ ಸೂಚಿಸಿದ್ದಾರೆ.

ನಟಿಯ ಕೆಲಸದ ವಿಚಾರ ಗಮನಿಸುವುದಾದರೆ, ನಾಲ್ಕು ವರ್ಷಗಳ ಬ್ರೇಕ್​ ನಂತರ ಚಲನಚಿತ್ರಕ್ಕೆ ಮರಳಲಿದ್ದಾರೆ. ಶಾರುಖ್ ಖಾನ್ ಅಭಿನಯದ ಝೀರೋ ಚಿತ್ರದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು. ಇನ್ನೂ ಕ್ರಿಕೆಟ್​ ಸ್ಟಾರ್ ಜೂಲನ್ ಗೋಸ್ವಾಮಿ ಅವರ ಜೀವನಚರಿತ್ರೆ ಚಕ್ಡಾ ಎಕ್ಸ್‌ಪ್ರೆಸ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: ಹೋಳಿ 2023: ಬಣ್ಣದ ಹಬ್ಬದಲ್ಲಿ ಬಾಲಿವುಡ್​ ತಾರೆಯರು

ಕಳೆದ ಶನಿವಾರ ವಿರುಷ್ಕಾ ದಂಪತಿ 12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ಕೊಟ್ಟು ಪೂಜೆ ಸಲ್ಲಿಸಿದ್ದರು. ಮುಂಜಾನೆ 3 ಗಂಟೆ ಹೊತ್ತಿಗೆ ಭಸ್ಮಾರತಿಯಲ್ಲಿ ಭಾಗಿಯಾದರು. ನಂತರ ನಂದಿ ಸಭಾಂಗಣದಲ್ಲಿ ಕುಳಿತು ತಮ್ಮ ಪ್ರಾರ್ಥನೆ ಸಲ್ಲಿಸಿದರು. ಗರ್ಭಗುಡಿಗೆ ತೆರಳಿ ದೇವರ ಆಶೀರ್ವಾದ ಕೂಡ ಪಡೆದರು. ಮಹಾಕಾಳೇಶ್ವರ ದೇವಸ್ಥಾನದಲ್ಲಿ ವಿರುಷ್ಕಾ ಕಳೆದ ಕ್ಷಣಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಅಗಿ ಸಖತ್​ ಸದ್ದು ಮಾಡಿತ್ತು. ಅಭಿಮಾನಿಗಳು ಮಾತ್ರವಲ್ಲದೇ ಬಾಲಿವುಡ್​ ಸೆಲೆಬ್ರಿಟಿಗಳು ಸಹ ಈ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: 'ವಿರುಷ್ಕಾ ಪವರ್​ಫುಲ್ ಕಪಲ್​': ಕಂಗನಾ ರಣಾವತ್ ಗುಣಗಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.