ETV Bharat / entertainment

ಎರಡನೇ ಮಗುವಿನ ನಿರೀಕ್ಷೆಯಲ್ಲಿ ವಿರಾಟ್​ ಕೊಹ್ಲಿ- ಅನುಷ್ಕಾ ಶರ್ಮಾ ದಂಪತಿ?

author img

By ETV Bharat Karnataka Team

Published : Sep 30, 2023, 4:27 PM IST

ಬಾಲಿವುಡ್​ ನಟಿ ಅನುಷ್ಕಾ ಶರ್ಮಾ ಮತ್ತು ಕ್ರಿಕೆಟಿಗ ವಿರಾಟ್​ ಕೊಹ್ಲಿ ಎರಡನೇ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ವರದಿಯಾಗಿದೆ.

Anushka Sharma, Virat Kohli expecting second child? Actor's absence from limelight adds to the chatter
ಎರಡನೇ ಮಗುವಿನ ನಿರೀಕ್ಷೆಯಲ್ಲಿ ವಿರಾಟ್​ ಕೊಹ್ಲಿ- ಅನುಷ್ಕಾ ಶರ್ಮಾ ದಂಪತಿ?

ಬಾಲಿವುಡ್​ ನಟಿ ಅನುಷ್ಕಾ ಶರ್ಮಾ ಮತ್ತು ಕ್ರಿಕೆಟಿಗ ವಿರಾಟ್​ ಕೊಹ್ಲಿ ಮಾದರಿ ದಂಪತಿಯಾಗಿ ಗುರುತಿಸಿಕೊಂಡಿದ್ದಾರೆ​​. ಇಬ್ಬರು ತಮ್ಮದೇ ಕ್ಷೇತ್ರದಲ್ಲಿ ಮಿಂಚಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಸದಾ ಒಬ್ಬರಿಗೊಬ್ಬರು ಪ್ರೋತ್ಸಾಹಿಸುತ್ತಾ, ಬೆಂಬಲಿಸುತ್ತಾ ಬಂದಿದ್ದಾರೆ. 'ವಿರುಷ್ಕಾ' ಎಂದೇ ಈ ಜೋಡಿಗೆ ಉಪನಾಮ ಕೂಡ ಹುಟ್ಟಿಕೊಂಡಿದೆ. ದಂಪತಿಗೆ ಮುದ್ದಾದ ಮಗಳೂ ಇದ್ದು, ವಮಿಕಾ ಎಂದು ಹೆಸರಿಟ್ಟಿದ್ದಾರೆ. ಇದೀಗ ಈ ಸ್ಟಾರ್​ ಕಪಲ್​ ಎರಡನೇ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ವರದಿಯಾಗಿದೆ.

ಮೂಲಗಳ ಪ್ರಕಾರ, ಶೀಘ್ರದಲ್ಲೇ ವಿರಾಟ್​ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಎರಡನೇ ಮಗುವಿನ ಪೋಷಕರಾಗಲಿದ್ದಾರೆ. ಕಳೆದ ಬಾರಿಯಂತೆ, ಮುಂದಿನ ದಿನಗಳಲ್ಲಿ ದಂಪತಿ ಈ ಸಿಹಿ ವಿಚಾರವನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಲಿದ್ದಾರೆ. ಹೀಗಾಗಿಯೇ ಅನುಷ್ಕಾ ಇತ್ತೀಚೆಗೆ ಯಾವುದೇ ಕಾರ್ಯಕ್ರಮಕ್ಕೂ ಹಾಜರಾಗಿಲ್ಲ. ಮುಂಬೈನಲ್ಲೂ ಕಾಣಿಸಿಕೊಂಡಿಲ್ಲ. ಅಲ್ಲದೇ ಕೆಲವು ಊಹಾಪೋಹಗಳನ್ನು ತಪ್ಪಿಸುವ ಸಲುವಾಗಿ ಅವರು ಸಾರ್ವಜನಿಕವಾಗಿಯೂ ಕಾಣಿಸಿಕೊಳ್ಳುತ್ತಿಲ್ಲ ಎನ್ನಲಾಗಿದೆ.

ಹೆರಿಗೆ ಆಸ್ಪತ್ರೆಯಲ್ಲಿ ಕಾಣಿಸಿಕೊಂಡಿದ್ದ ದಂಪತಿ: ಇತ್ತೀಚೆಗೆ ಅನುಷ್ಕಾ ಶರ್ಮಾ ಮತ್ತು ವಿರಾಟ್​ ಕೊಹ್ಲಿ ಮುಂಬೈನ ಹೆರಿಗೆ ಆಸ್ಪತ್ರೆಯಲ್ಲಿ ಕಾಣಿಸಿಕೊಂಡಿದ್ದರು. ಅಲ್ಲದೇ ತಮ್ಮ ಫೋಟೋಗಳನ್ನು ಎಲ್ಲಿಯೂ ಪ್ರಕಟಿಸದಂತೆ ಪಾಪರಾಜಿಗಳನ್ನು ವಿನಂತಿಸಿಕೊಂಡಿದ್ದರು ಎನ್ನಲಾಗಿದೆ. ಜೊತೆಗೆ ಶೀಘ್ರದಲ್ಲೇ ಈ ಸಿಹಿ ವಿಚಾರವನ್ನು ಬಹಿರಂಗಪಡಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: Virushka: ಪಾಪರಾಜಿಗಳ ಕ್ಯಾಮರಾ ಕಣ್ಣಲ್ಲಿ ಸೆರೆಯಾದ ಸುಂದರ ಜೋಡಿ ವಿರಾಟ್​ ಕೊಹ್ಲಿ- ಅನುಷ್ಕಾ ಶರ್ಮಾ

'ವಿರುಷ್ಕಾ' ದಂಪತಿ: ವಿರಾಟ್​ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ 2017ರ ಡಿಸೆಂಬರ್​ 11 ರಂದು ಇಟಲಿಯಲ್ಲಿ ಹಸೆಮಣೆ ಏರಿದ್ದರು. ಅತ್ಯಂತ ಜನಪ್ರಿಯ, ಅಭಿಮಾನಿಗಳಿಂದ ಪ್ರೀತಿಸಲ್ಪಡುವ ಸೆಲೆಬ್ರಿಟಿ ಜೋಡಿಗಳಲ್ಲಿ ಇವರಿದ್ದಾರೆ. 2021ರ ಜನವರಿ 11 ರಂದು ವಾಮಿಕಾ ಎಂಬ ಹೆಣ್ಣು ಮಗುವಿನ ಪೋಷಕರಾಗಿ ಬಡ್ತಿ ಪಡೆದರು. ಇಲ್ಲಿಯವರೆಗೂ ಮಗಳ ಮುಖವನ್ನು ಸಾರ್ವಜನಿಕವಾಗಿ ಕಾಣಿಸಿಕೊಳ್ಳದಂತೆ ನೋಡಿಕೊಳ್ಳಲು ಹೆಚ್ಚಿನ ಕಾಳಜಿ ವಹಿಸಿದ್ದಾರೆ.

ಇನ್ನೂ ನಟಿ ಅನುಷ್ಕಾ ಶರ್ಮಾ ತಾಯಿಯಾದ ಬಳಿಕ ಯಾವುದೇ ಸಿನಿಮಾಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಮಗಳ ಲಾಲನೆ, ಪೋಷಣೆಯಲ್ಲೇ ಬ್ಯುಸಿಯಾಗಿದ್ದ ತಾರೆಯ ಮುಂದಿನ ಸಿನಿಮಾ ಚಕ್ಡಾ ಎಕ್ಸ್​​ಪ್ರೆಸ್​. ಇದು ಭಾರತೀಯ ಮಾಜಿ ಮಹಿಳಾ ಕ್ರಿಕೆಟಿಗರಾದ ಜೂಲನ್​ ಗೋಸ್ವಾಮಿ ಅವರ ಜೀವನ ಆಧರಿಸಿದ ಮುಂಬರುವ ಕ್ರೀಡಾ ಬಯೋಪಿಕ್​ ಚಲನಚಿತ್ರ. ಚಿತ್ರವು ನೆಟ್​ಫ್ಲಿಕ್ಸ್​ನಲ್ಲಿ ಸ್ಟ್ರೀಮ್​ ಆಗಲಿದ್ದು, ಬಿಡುಗಡೆ ದಿನಾಂಕ ಇನ್ನೂ ಬಹಿರಂಗಗೊಂಡಿಲ್ಲ.

ಇನ್ನು ವಿರಾಟ್​ ಕೊಹ್ಲಿ ಏಕದಿನ ವಿಶ್ವಕಪ್​ 2023ಗಾಗಿ ಭಾರತ ತಂಡದ ಜೊತೆಯಿದ್ದಾರೆ. ಅವರು ಈ ವಿಶ್ವಕಪ್​ ಮುಗಿಯುವ ತನಕ ಟೀಂ ಇಂಡಿಯಾ ಜೊತೆಗಿರಲಿದ್ದು, ಬ್ಯುಸಿಯಾಗಿರಲಿದ್ದಾರೆ. ಬಹುಶಃ ವಿಶ್ವಕಪ್​ ಮುಗಿದ ಬಳಿಕ ಈ ಸ್ಟಾರ್​ ಜೋಡಿ ಈ ಖುಷಿಯ ವಿಚಾರವನ್ನು ಹಂಚಿಕೊಳ್ಳಬಹುದು.

ಇದನ್ನೂ ಓದಿ: ಬಾರ್ಬಡೋಸ್ ಟ್ರಿಪ್​ನಲ್ಲಿ 'ವಿರುಷ್ಕಾ' ಜೋಡಿ: ಪತ್ನಿಯೊಂದಿಗಿನ ಫೋಟೋ ಹಂಚಿಕೊಂಡ ಕೊಹ್ಲಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.