ETV Bharat / entertainment

'ದಿ ಕಾಶ್ಮೀರ್ ಫೈಲ್ಸ್' ನಟನೆಗೆ ಅತ್ಯುತ್ತಮ ನಟ ಪ್ರಶಸ್ತಿ ಪಡೆದ ಅನುಪಮ್ ಖೇರ್ - ಅನುಪಮ್ ಖೇರ್ ಅತ್ಯುತ್ತಮ ನಟ

ಐಕಾನಿಕ್ ಗೋಲ್ಡ್ ಅವಾರ್ಡ್ಸ್ 2023ರಲ್ಲಿ ಬಾಲಿವುಡ್​ ಹಿರಿಯ ನಟ ಅನುಪಮ್ ಖೇರ್ 'ದಿ ಕಾಶ್ಮೀರ್ ಫೈಲ್ಸ್' ಚಿತ್ರದ ನಟನೆಗಾಗಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದರು.

pam Kher wins Best Actor Award
ಅತ್ಯುತ್ತಮ ನಟ ಪ್ರಶಸ್ತಿ ಪಡೆದ ಅನುಪಮ್ ಖೇರ್
author img

By

Published : Mar 19, 2023, 7:58 PM IST

ಐಕಾನಿಕ್ ಗೋಲ್ಡ್ ಅವಾರ್ಡ್ಸ್ 2023 (The Iconic Gold Awards 2023) ಅನ್ನು ಶನಿವಾರ ಸಂಜೆ ಆಯೋಜಿಸಲಾಗಿತ್ತು. ಪ್ರಶಸ್ತಿ ಪ್ರದಾನ ಸಮಾರಂಭ ಬಹಳ ಅದ್ಧೂರಿಯಾಗಿ ನಡೆದಿದ್ದು, ಕಾರ್ಯಕ್ರಮದಲ್ಲಿ ಕಿರುತೆರೆಯಿಂದ ಹಿರಿತೆರೆವರೆಗಿನ ತಾರೆಯರು ಒಟ್ಟಿಗೆ ಕಾಣಿಸಿಕೊಂಡರು.

ಐಕಾನಿಕ್ ಗೋಲ್ಡ್ ಅವಾರ್ಡ್ಸ್ 2023: ಮುಂಬೈನಲ್ಲಿ ನಿನ್ನೆ ಸಂಜೆ ನಡೆದ ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಬಾಲಿವುಡ್ ತಾರೆಯರಾದ ಅನುಪಮ್ ಖೇರ್, ದಿಯಾ ಮಿರ್ಜಾ, ಕಪಿಲ್ ಶರ್ಮಾ, ಕರಣ್ ಕುಂದ್ರಾ ಸೇರಿದಂತೆ ಹಲವು ಕಲಾವಿದರು ಭಾಗವಹಿಸಿದ್ದರು. ಈ ಸಮಾರಂಭದಲ್ಲಿ, 'ದಿ ಕಾಶ್ಮೀರ್ ಫೈಲ್ಸ್' ಚಿತ್ರಕ್ಕಾಗಿ ಅನುಪಮ್ ಖೇರ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದರು.

'ಮತ್ತೊಂದು ಅತ್ಯುತ್ತಮ ನಟ ಪ್ರಶಸ್ತಿ': ಐಕಾನಿಕ್ ಗೋಲ್ಡ್ ಅವಾರ್ಡ್ಸ್ 2023ರಲ್ಲಿ ಪ್ರಶಸ್ತಿ ಸ್ವೀಕರಿಸಿರುವ ಚಿತ್ರವನ್ನು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಸೂಟು ಬೂಟು ಧರಿಸಿ 68ರ ಹರೆದಲ್ಲೂ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೋದಲ್ಲಿ, ಅವರು ಕೈಯಲ್ಲಿ ಐಕಾನಿಕ್ ಗೋಲ್ಡ್ ಪ್ರಶಸ್ತಿಯನ್ನು ಹಿಡಿದಿದ್ದಾರೆ. ತಮ್ಮ ಫೋಟೋ ಹಂಚಿಕೊಂಡಿರುವ ಅವರು, 'ಕಾಶ್ಮೀರ್ ಫೈಲ್ಸ್‌'ಗಾಗಿ ಮತ್ತೊಂದು 'ಅತ್ಯುತ್ತಮ ನಟ ಪ್ರಶಸ್ತಿ' ಎಂಬ ಶೀರ್ಷಿಕೆಯನ್ನು ನೀಡಿದ್ದಾರೆ. ನಾನು ಆಶೀರ್ವದಿಸಲ್ಪಟ್ಟಿದ್ದೇನೆ, ಜಯಶಾಲಿಯಾಗಿರಿ ಎಂದು ಬರೆದುಕೊಂಡಿದ್ದಾರೆ.

ಅಭಿನಂದನೆ ತಿಳಿಸಿದ ಅಭಿಮಾನಿಗಳು: ಈ ಗೌರವಕ್ಕೆ ಪಾತ್ರರಾಗಿರುವ ನಟ ಅನುಪಮ್ ಖೇರ್ ಅವರಿಗೆ ಅಭಿಮಾನಿಗಳು ಅಭಿನಂದನೆ ತಿಳಿಸಿದ್ದಾರೆ. ಜೊತೆಗೆ ತಮ್ಮ ಮೆಚ್ಚಿನ ನಟನ ಸಾಧನೆ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ. 'ಅತ್ಯುತ್ತಮ ನಟ ಪ್ರಶಸ್ತಿ ಗೆದ್ದಿದ್ದಕ್ಕಾಗಿ ನಮ್ಮಿಂದ ನಿಮಗೆ ಅನೇಕ ಅಭಿನಂದನೆಗಳು, ನಿಜವಾಗಿಯೂ ನೀವು ಉತ್ತಮರು ಸರ್, ನಿಮಗೆ ಹೃತ್ಪೂರ್ವಕವಾಗಿ ವಂದನೆ' ಎಂದು ಅಭಿಮಾನಿಯೋರ್ವರು ಕಾಮೆಂಟ್ ಮಾಡಿದ್ದಾರೆ. ಮತ್ತೋರ್ವ ಅಭಿಮಾನಿ ಪ್ರತಿಕ್ರಿಯಿಸಿ, 'ಅಭಿನಂದನೆಗಳು ಸರ್, ನಿಮಗೆ ಇಂತಹ ಹಲವಾರು ಪ್ರಶಸ್ತಿಗಳು ಬರುತ್ತಲೇ ಇವೆ, ಇನ್ನು ಮುಂದೆಯೂ ಬರಲಿ' ಎಂದು ತಿಳಿಸಿದ್ದಾರೆ.

'ದಿ ಕಾಶ್ಮೀರ್ ಫೈಲ್ಸ್' ಕಳೆದ ವರ್ಷ ಭಾರತೀಯ ಚಿತ್ರರಂಗದ ಅತಿ ದೊಡ್ಡ ಬ್ಲಾಕ್‌ಬಸ್ಟರ್ ಆಗಿ ಹೊರಹೊಮ್ಮಿದೆ. ಚಿತ್ರಕ್ಕೆ ಈಗಾಗಲೇ ಹಲವು ಪ್ರಶಸ್ತಿಗಳು ಬಂದಿವೆ. ಇದರ ಕಥೆಯು 90ರ ದಶಕದಲ್ಲಿ ಕಾಶ್ಮೀರಿ ಹಿಂದೂಗಳ ವಲಸೆಯ ಸಮಯದಲ್ಲಿ ಸಂಭವಿಸಿದ ಘಟನೆಗಳನ್ನು ಆಧರಿಸಿದೆ. ಈ ಚಿತ್ರದಲ್ಲಿ ಬಾಲಿವುಡ್ ನಟ ಅನುಪಮ್ ಖೇರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದಕ್ಕಾಗಿ ಅವರಿಗೆ ಝೀ ಸಿನಿ ಪ್ರಶಸ್ತಿಯಂತಹ ಪ್ರತಿಷ್ಟಿತ ಪ್ರಶಸ್ತಿಗಳೂ ಸಂದಿವೆ.

ಇದನ್ನೂ ಓದಿ: ಭಾರತೀಯ ಸಿನಿಮಾಗೆ ಆಸ್ಕರ್.. ಹೊಸ ತಲೆಮಾರಿಗೆ ಇದು ಸ್ಫೂರ್ತಿ: ನಟ ಅನುಪಮ್ ಖೇರ್ ಸಂತಸ

ವಿಶ್ವ ಪ್ರತಿಷ್ಟಿತ ಪ್ರಶಸ್ತಿ ಆಸ್ಕರ್​​ 2023ನಲ್ಲಿ ಭಾರತ ಎರಡು ವಿಭಾಗದಲ್ಲಿ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದು, ನಟ ಅನುಪಮ್ ಖೇರ್ ಇತ್ತೀಚೆಗೆ ಹರ್ಷ ವ್ಯಕ್ತಪಡಿಸಿದ್ದರು. ಇದೇ ಸೋಮವಾರ ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಗೆ ಭೇಟಿ ಕೊಟ್ಟಿದ್ದ ನಟ ಅನುಪಮ್​ ಖೇರ್​, ಆರ್​ಆರ್​ಆರ್​ ಮತ್ತು ದಿ ಎಲಿಫೆಂಟ್ ವಿಸ್ಪರರ್ಸ್ ತಂಡವನ್ನು ಅಭಿನಂದಿಸಿದ್ದರು. ಈ ಪ್ರತಿಷ್ಟಿತ ಪ್ರಶಸ್ತಿಯು ಹೊಸ ತಲೆಮಾರಿನ ಚಲನಚಿತ್ರ ನಿರ್ಮಾಪಕರಿಗೆ ಸ್ಫೂರ್ತಿ ನೀಡುತ್ತದೆ ಎಂದು ತಿಳಿಸಿದ್ದರು.

ಇದನ್ನೂ ಓದಿ: ಸೈಫ್​ ಯಾವಾಗಲೂ ಪಾಪರಾಜಿಗಳಿಂದ ಅಂತರ ಕಾಯ್ದುಕೊಳ್ಳಲು ಇಚ್ಛಿಸುತ್ತಾರೆ: ಕರೀನಾ ಕಪೂರ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.