ETV Bharat / entertainment

ಸೋಮವಾರವೂ ಭರ್ಜರಿ ಕಲೆಕ್ಷನ್​​: ಅನಿಮಲ್​​​​ ಬಾಕ್ಸ್ ಆಫೀಸ್​ ಪ್ರಯಾಣ ಅತ್ಯುತ್ತಮ - ರಣ್​​ಬೀರ್ ಕಪೂರ್

Animal collection: ಅನಿಮಲ್​​ ಸಿನಿಮಾ ಭಾರತೀಯ ಬಾಕ್ಸ್​ ಆಫೀಸ್​ನಲ್ಲಿ ಸರಿಸುಮಾರು 241.43 ಕೋಟಿ ರೂ. ಕಲೆಕ್ಷನ್​ ಮಾಡುವಲ್ಲಿ ಯಶಸ್ವಿ ಆಗಿದೆ.

Animal collection
ಅನಿಮಲ್ ಕಲೆಕ್ಷನ್
author img

By ETV Bharat Karnataka Team

Published : Dec 5, 2023, 12:23 PM IST

ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಅನಿಮಲ್​​ ಸಿನಿಮಾ ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿದ್ದು, ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ಸಿನಿಮಾ ತೆರೆಕಂಡ ಮೊದಲ ದಿನ, ಮೊದಲ ವಾರಾಂತ್ಯ ಭರ್ಜರಿ ಕಲೆಕ್ಷನ್​ ಮಾಡಿತ್ತು. ಮೊದಲ ಸೋಮವಾರ ಗಳಿಕೆ ಕೊಂಚ ಇಳಿಕೆಯಾಗಿದೆ.

ಬಿಡುಗಡೆಯಾದಾಗಿನಿಂದ ಬಾಕ್ಸ್​ ಆಫೀಸ್​ನಲ್ಲಿ​​​ ದಿನಕ್ಕೆ 60 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್​ ಮಾಡಿರುವ ಈ ಚಿತ್ರ ಸೋಮವಾರದಂದು ಶೇ. 44ರಷ್ಟು ಕುಸಿತ ಕಂಡಿದೆ ಎಂದು ಸ್ಯಾಕ್ನಿಲ್ಕ್ ಸಂಸ್ಥೆ ವರದಿ ಮಾಡಿದೆ. ಆದಾಗ್ಯೂ, ಸನ್ನಿ ಡಿಯೋಲ್‌ ಅಭಿನಯದ ಬ್ಲಾಕ್​​​ಬಸ್ಟರ್ ಗದರ್ 2ರ ದಾಖಲೆ ಪುಡಿಗಟ್ಟುವಲ್ಲಿ ಯಶಸ್ವಿಯಾಗಿದೆ. ಹೌದು, ವಾರದ ದಿನ ಅಂದರೆ ಸೋಮವಾರದಂದು ಬರೋಬ್ಬರಿ 39.9 ಕೋಟಿ ರೂಪಾಯಿ ಗಳಿಸಿ ದಾಖಲೆ ಬರೆದಿದೆ. ಅಲ್ಲದೇ ಮುಂದಿನ ಏಳೆಂಟು ದಿನಗಳಲ್ಲಿ ಭಾರತೀಯ ಬಾಕ್ಸ್​​ ಆಫೀಸ್​ನಲ್ಲಿ 300 ಕೋಟಿ ರೂ.ನ ಕ್ಲಬ್ ಸೇರುವ ಗುರಿ ಹೊಂದಿದೆ.

ಅನಿಮಲ್ ಬಾಕ್ಸ್ ಆಫೀಸ್ ಕಲೆಕ್ಷನ್: ರಣ್​​ಬೀರ್ ಕಪೂರ್ ಹಾಗೂ ರಶ್ಮಿಕಾ ಮಂದಣ್ಣ ಮುಖ್ಯಭೂಮಿಕೆಯ 'ಅನಿಮಲ್' ಸಿನಿಮಾ ವಿಕ್ಕಿ ಕೌಶಲ್ ನಟನೆಯ ಸ್ಯಾಮ್ ಬಹದ್ದೂರ್ ಜೊತೆಗೆ ಬಿಡುಗಡೆಗೊಂಡಿತು. ಬಾಕ್ಸ್ ಆಫೀಸ್ ಪೈಪೋಟಿ ನಡುವೆಯೂ ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ ಅಸಾಧಾರಣ ಅಂಕಿ - ಅಂಶಗಳ ಮೂಲಕ ಅನಿಮಲ್​ ಗಮನ ಸೆಳೆದಿದೆ. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಈ ಚಿತ್ರ ತನ್ನ ಮೊದಲ ವಾರಾಂತ್ಯ 169.50 ಕೋಟಿ ರೂಪಾಯಿ ಗಳಿಸಿತ್ತು. ಸೋಮವಾರದಂದು 39.9 ಕೋಟಿ ರೂ. ಕಲೆಕ್ಷನ್​ ಮಾಡಿದ್ದು, 4 ದಿನಗಳಲ್ಲಿ ಭಾರತದಲ್ಲಿ ಒಟ್ಟು ಸರಿಸುಮಾರು 241.43 ಕೋಟಿ ರೂ. ಗಳಿಸಿದೆ.

ಇದನ್ನೂ ಓದಿ: ಯಶ್‌ ಅಭಿಮಾನಿಗಳಿಗೆ ಗುಡ್ ನ್ಯೂಸ್! ಹೊಸ ಸಿನಿಮಾಗೆ ಮುಹೂರ್ತ ಫಿಕ್ಸ್​

ತೆರೆಕಂಡ ಮೊದಲ ದಿನ ಶುಕ್ರವಾರ - 63.8 ಕೋಟಿ ರೂ., ಶನಿವಾರ - 66.27 ಕೋಟಿ ರೂ., ಭಾನುವಾರ - 71.46 ಕೋಟಿ ರೂ.ಗಳ ವ್ಯವಹಾರ ನಡೆಸಿದೆ. ಐದನೇ ದಿನ ಅಂದರೆ ಇಂದಿನ (ಮಂಗಳವಾರ) ಕಲೆಕ್ಷನ್​​ 30 ರಿಂದ 35 ಕೋಟಿ ರೂ. ಆಗಬಹುದು ಎಂದು ಅಂದಾಜಿಸಲಾಗಿದೆ. ಇನ್ನೂ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಅನಿಮಲ್​ 356 ಕೋಟಿ ರೂಪಾಯಿ ಗಳಿಸಿದೆ ಎಂದು 'ಅನಿಮಲ್' ತಂಡ ಸೋಮವಾರದಂದು ತಿಳಿಸಿತ್ತು.

ಇದನ್ನೂ ಓದಿ: ಕೊರಗಜ್ಜನ ಪವಾಡದೊಂದಿಗೆ ಕನ್ನಡ ಸಿನಿಮಾ ಕ್ಲಾಂತ ಚಿತ್ರೀಕರಣ: ತುಳುವಿನಿಂದ ಸ್ಯಾಂಡಲ್ ವುಡ್​ಗೆ ಬಂದ ನಾಯಕ ನಟ

ಅನಿಲ್ ಕಪೂರ್, ಬಾಬಿ ಡಿಯೋಲ್, ತೃಪ್ತಿ ದಿಮ್ರಿ, ಸುರೇಶ್ ಒಬೆರಾಯ್, ಶಕ್ತಿ ಕಪೂರ್ ಮತ್ತು ಪ್ರೇಮ್ ಚೋಪ್ರಾ ಕೂಡ ಈ ಪ್ಯಾನ್ ಇಂಡಿಯಾ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ತಂದೆ ಮಗನ ಸಂಬಂಧ, ಹಿಂಸಾತ್ಮಕ ಜಗತ್ತನ್ನು ಚಿತ್ರಿಸಿದೆ. ಸಿಬಿಎಫ್​ಸಿ ಚಿತ್ರಕ್ಕೆ ಎ ಸರ್ಟಿಫಿಕೇಟ್​​ ನೀಡಿದೆ. ಪ್ರಣಯ್ ರೆಡ್ಡಿ ವಂಗಾ ಅವರ ಭದ್ರಕಾಳಿ ಪಿಕ್ಚರ್ಸ್, ಮುರಾದ್ ಖೇತಾನಿಯವರ ಸಿನಿ ಒನ್ ಸ್ಟುಡಿಯೋಸ್ ಮತ್ತು ಭೂಷಣ್ ಕುಮಾರ್ - ಕ್ರಿಶನ್ ಕುಮಾರ್ ಅವರ ಟಿ-ಸೀರೀಸ್ ಅಡಿ ಸಿನಿಮಾ ನಿರ್ಮಾಣಗೊಂಡಿದೆ. ಡಿಸೆಂಬರ್ 1 ರಂದು ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂನಲ್ಲಿ ಅನಿಮಲ್​​ ತೆರೆಗಪ್ಪಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.