ETV Bharat / entertainment

ಎರಡೇ ದಿನದಲ್ಲಿ 230 ಕೋಟಿ ಕಲೆಕ್ಷನ್​ ಮಾಡಿದ ಅನಿಮಲ್​: ಸ್ಯಾಮ್​ ಬಹದ್ದೂರ್​​ಗೆ ಪಾಸಿಟಿವ್​ ರೆಸ್ಪಾನ್ಸ್

author img

By ETV Bharat Karnataka Team

Published : Dec 3, 2023, 1:37 PM IST

ಅನಿಮಲ್​ ಮತ್ತು ಸ್ಯಾಮ್​ ಬಹದ್ದೂರ್​ ಸಿನಿಮಾಗಳ ಬಾಕ್ಸ್ ಆಫೀಸ್​ ಕಲೆಕ್ಷನ್​​​ ಅಂಕಿ - ಅಂಶ ಇಲ್ಲಿದೆ.

Animal and Sam Bahadur
ಅನಿಮಲ್​ ಮತ್ತು ಸ್ಯಾಮ್​ ಬಹದ್ದೂರ್

ಶುಕ್ರವಾರದಂದು ಭಾರತದ ಎರಡು ಬಹುನಿರೀಕ್ಷಿತ ಸಿನಿಮಾಗಳು ತೆರೆಕಂಡು ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ಉಣ ಬಡಿಸುತ್ತಿದೆ. ರಶ್ಮಿಕಾ ಮಂದಣ್ಣ - ರಣ್​ಬೀರ್​ ಕಪೂರ್​ ಅಭಿನಯದ ಅನಿಮಲ್​ ಮತ್ತು ವಿಕ್ಕಿ ಕೌಶಲ್​ ಮುಖ್ಯಭೂಮಿಕೆಯ ಸ್ಯಾಮ್​ ಬಹದ್ದೂರ್​ ಡಿಸೆಂಬರ್ -1 ರಂದು ತೆರೆಗಪ್ಪಳಸಿದೆ. ಎರಡೂ ಚಿತ್ರಗಳು ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿದೆ. ಪ್ರೇಕ್ಷಕರು ಹೆಚ್ಚಾಗಿ ಸಕಾರಾತ್ಮಕವಾಗೇ ಪ್ರತಿಕ್ರಿಯಿಸಿದ್ದು, ಬಾಕ್ಸ್ ಆಫೀಸ್​ ಪ್ರಯಾಣ ಕೂಡ ಅದ್ಭುತವಾಗಿದೆ.

  • " class="align-text-top noRightClick twitterSection" data="">

ಅನಿಮಲ್ ಒಟ್ಟು ಕಲೆಕ್ಷನ್​: ಅನಿಮಲ್ ಸಿನಿಮಾ ಭಾರತೀಯ ಬಾಕ್ಸ್​​ ಆಫೀಸ್​ನಲ್ಲಿ ಕೇವಲ ಎರಡು ದಿನಗಳಲ್ಲಿ 130 ಕೋಟಿ ರೂಪಾಯಿ ಗಳಿಸಿದೆ. ತೆರೆಕಂಡ ದಿನ 63.8 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿತ್ತು. ರಣ್​​ಬೀರ್ ಕಪೂರ್ ಅವರ ವೃತ್ತಿಜೀವನದಲ್ಲಿ 'ಅನಿಮಲ್​​' ಅತ್ಯುತ್ತಮ ಓಪನಿಂಗ್​ ಪಡೆದ ಸಿನಿಮಾವಾಗಿದೆ. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಈ ಸಿನಿಮಾದ ಕಲೆಕ್ಷನ್​​ ಎರಡನೇ ದಿನ ಶೇ. 4.37ರಷ್ಟು ಬೆಳವಣಿಗೆಯಾಗಿದೆ. ಮೂರನೇ ದಿನ ಈ ಸಂಖ್ಯೆಗಳು ಏರುವ ಸಾಧ್ಯತೆಗಳಿವೆ. ಸಿನಿಮಾ ಟ್ರೇಡ್ ವಿಶ್ಲೇಷಕ ರಮೇಶ್ ಬಾಲಾ ಮಾಹಿತಿ ಪ್ರಕಾರ ಸಿನಿಮಾ ಜಾಗತಿಕ ಗಲ್ಲಾಪೆಟ್ಟಿಗೆಯಲ್ಲಿ ಬರೋಬ್ಬರಿ 230 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ. ಮೂರನೇ ದಿನ 68 ಕೋಟಿ ರೂ. ಕಲೆಕ್ಷನ್​ ಮಾಡುವ ನಿರೀಕ್ಷೆಯಿದೆ ಎಂದು ಸ್ಯಾಕ್ನಿಲ್ಕ್ ವರದಿ ತಿಳಿಸಿದೆ.

#Animal is on a rampage, rewriting box office history! 🔥

This #BhushanKumar production and #SandeepReddyVanga directorial and #RanbirKapoor starrer rakes in a whopping *236 CR* in 2 days worldwide leaving the audience stunned by impactful performances by #RanbirKapoorpic.twitter.com/lGcN4iRLNu

— Ramesh Bala (@rameshlaus) December 3, 2023

ಸ್ಯಾಮ್​ ಬಹದ್ದೂರ್ ಒಟ್ಟು ಕಲೆಕ್ಷನ್​: ಇನ್ನೂ ಅಮೋಘ ಅಭಿನಯಕ್ಕೆ ಹೆಸರುವಾಸಿಯಾಗಿರುವ ವಿಕ್ಕಿ ಕೌಶಲ್​ ಅವರ ಸ್ಯಾಮ್​ ಬಹದ್ದೂರ್ ಸಹ ಶುಕ್ರವಾರ ತೆರೆಕಂಡು ಉತ್ತಮ ಪ್ರದರ್ಶನ ನೀಡುತ್ತಿದೆ. 55 ಕೋಟಿ ರೂಪಾಯಿಗಳಲ್ಲಿ ನಿರ್ಮಾಣಗೊಂಡಿರುವ ಈ ಸಿನಿಮಾ 50 ಕೋಟಿ ದಾಟಿದರೂ ಯಶಸ್ವಿಯಾದಂತೆ. ಕೇವಲ ಹಿಂದಿ ಆವೃತ್ತಿಯಲ್ಲಿ ಲಭ್ಯವಿರುವ ಸ್ಯಾಮ್​ ಬಹದ್ದೂರ್ ಮೊದಲ ದಿನ 6.25 ಕೋಟಿ ರೂಪಾಯಿ ಸಂಗ್ರಹಿಸಿದೆ. ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿ ಪ್ರಕಾರ, ಎರಡನೇ ದಿನ 9.5 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ.

ಇದನ್ನೂ ಓದಿ: ಅಧಿಪತ್ರ ಶೂಟಿಂಗ್​​: ಖಾಕಿ‌ ಖದರ್​​ನಲ್ಲಿ ರೂಪೇಶ್ ಶೆಟ್ಟಿ

ಡಿಸೆಂಬರ್ 1 ರಂದು ಅನಿಮಲ್​ ಜೊತೆ ತೆರೆಕಂಡ ಈ ಚಿತ್ರ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿ ಆಗಿದೆ. ಮೇಘನಾ ಗುಲ್ಜಾರ್​ ನಿರ್ದೇಶನದ ಈ ಸಿನಿಮಾ ಇಂದು ಕೂಡ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಗಳಿವೆ. ಸಾನ್ಯಾ ಮಲ್ಹೋತ್ರಾ ಮತ್ತು ಫಾತಿಮಾ ಸನಾ ಶೇಖ್ ಕೂಡ ಪ್ರಮುಖ ಪಾತ್ರಗಳನ್ನು ನಿರ್ವಹಿಸಿರುವ ಈ ಸಿನಿಮಾ ಈಗಾಗಲೇ 15 ಕೋಟಿ ರೂ. ದಾಟಿದ್ದು, ಭಾನುವಾರದ ಕಲೆಕ್ಷನ್​ನಲ್ಲಿ 20 ಕೋಟಿ ರೂ. ದಾಟುವ ನಿರೀಕ್ಷೆಗಳಿವೆ.

ಇದನ್ನೂ ಓದಿ: 'ಸಲಾರ್' ಟ್ರೇಲರ್ ದಾಖಲೆ: 24 ಗಂಟೆಯೊಳಗೆ 116 ಮಿಲಿಯನ್‌ಗೂ ಹೆಚ್ಚು ವೀಕ್ಷಣೆ!

ಶುಕ್ರವಾರದಂದು ಭಾರತದ ಎರಡು ಬಹುನಿರೀಕ್ಷಿತ ಸಿನಿಮಾಗಳು ತೆರೆಕಂಡು ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ಉಣ ಬಡಿಸುತ್ತಿದೆ. ರಶ್ಮಿಕಾ ಮಂದಣ್ಣ - ರಣ್​ಬೀರ್​ ಕಪೂರ್​ ಅಭಿನಯದ ಅನಿಮಲ್​ ಮತ್ತು ವಿಕ್ಕಿ ಕೌಶಲ್​ ಮುಖ್ಯಭೂಮಿಕೆಯ ಸ್ಯಾಮ್​ ಬಹದ್ದೂರ್​ ಡಿಸೆಂಬರ್ -1 ರಂದು ತೆರೆಗಪ್ಪಳಸಿದೆ. ಎರಡೂ ಚಿತ್ರಗಳು ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿದೆ. ಪ್ರೇಕ್ಷಕರು ಹೆಚ್ಚಾಗಿ ಸಕಾರಾತ್ಮಕವಾಗೇ ಪ್ರತಿಕ್ರಿಯಿಸಿದ್ದು, ಬಾಕ್ಸ್ ಆಫೀಸ್​ ಪ್ರಯಾಣ ಕೂಡ ಅದ್ಭುತವಾಗಿದೆ.

  • " class="align-text-top noRightClick twitterSection" data="">

ಅನಿಮಲ್ ಒಟ್ಟು ಕಲೆಕ್ಷನ್​: ಅನಿಮಲ್ ಸಿನಿಮಾ ಭಾರತೀಯ ಬಾಕ್ಸ್​​ ಆಫೀಸ್​ನಲ್ಲಿ ಕೇವಲ ಎರಡು ದಿನಗಳಲ್ಲಿ 130 ಕೋಟಿ ರೂಪಾಯಿ ಗಳಿಸಿದೆ. ತೆರೆಕಂಡ ದಿನ 63.8 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿತ್ತು. ರಣ್​​ಬೀರ್ ಕಪೂರ್ ಅವರ ವೃತ್ತಿಜೀವನದಲ್ಲಿ 'ಅನಿಮಲ್​​' ಅತ್ಯುತ್ತಮ ಓಪನಿಂಗ್​ ಪಡೆದ ಸಿನಿಮಾವಾಗಿದೆ. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಈ ಸಿನಿಮಾದ ಕಲೆಕ್ಷನ್​​ ಎರಡನೇ ದಿನ ಶೇ. 4.37ರಷ್ಟು ಬೆಳವಣಿಗೆಯಾಗಿದೆ. ಮೂರನೇ ದಿನ ಈ ಸಂಖ್ಯೆಗಳು ಏರುವ ಸಾಧ್ಯತೆಗಳಿವೆ. ಸಿನಿಮಾ ಟ್ರೇಡ್ ವಿಶ್ಲೇಷಕ ರಮೇಶ್ ಬಾಲಾ ಮಾಹಿತಿ ಪ್ರಕಾರ ಸಿನಿಮಾ ಜಾಗತಿಕ ಗಲ್ಲಾಪೆಟ್ಟಿಗೆಯಲ್ಲಿ ಬರೋಬ್ಬರಿ 230 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ. ಮೂರನೇ ದಿನ 68 ಕೋಟಿ ರೂ. ಕಲೆಕ್ಷನ್​ ಮಾಡುವ ನಿರೀಕ್ಷೆಯಿದೆ ಎಂದು ಸ್ಯಾಕ್ನಿಲ್ಕ್ ವರದಿ ತಿಳಿಸಿದೆ.

ಸ್ಯಾಮ್​ ಬಹದ್ದೂರ್ ಒಟ್ಟು ಕಲೆಕ್ಷನ್​: ಇನ್ನೂ ಅಮೋಘ ಅಭಿನಯಕ್ಕೆ ಹೆಸರುವಾಸಿಯಾಗಿರುವ ವಿಕ್ಕಿ ಕೌಶಲ್​ ಅವರ ಸ್ಯಾಮ್​ ಬಹದ್ದೂರ್ ಸಹ ಶುಕ್ರವಾರ ತೆರೆಕಂಡು ಉತ್ತಮ ಪ್ರದರ್ಶನ ನೀಡುತ್ತಿದೆ. 55 ಕೋಟಿ ರೂಪಾಯಿಗಳಲ್ಲಿ ನಿರ್ಮಾಣಗೊಂಡಿರುವ ಈ ಸಿನಿಮಾ 50 ಕೋಟಿ ದಾಟಿದರೂ ಯಶಸ್ವಿಯಾದಂತೆ. ಕೇವಲ ಹಿಂದಿ ಆವೃತ್ತಿಯಲ್ಲಿ ಲಭ್ಯವಿರುವ ಸ್ಯಾಮ್​ ಬಹದ್ದೂರ್ ಮೊದಲ ದಿನ 6.25 ಕೋಟಿ ರೂಪಾಯಿ ಸಂಗ್ರಹಿಸಿದೆ. ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿ ಪ್ರಕಾರ, ಎರಡನೇ ದಿನ 9.5 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ.

ಇದನ್ನೂ ಓದಿ: ಅಧಿಪತ್ರ ಶೂಟಿಂಗ್​​: ಖಾಕಿ‌ ಖದರ್​​ನಲ್ಲಿ ರೂಪೇಶ್ ಶೆಟ್ಟಿ

ಡಿಸೆಂಬರ್ 1 ರಂದು ಅನಿಮಲ್​ ಜೊತೆ ತೆರೆಕಂಡ ಈ ಚಿತ್ರ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿ ಆಗಿದೆ. ಮೇಘನಾ ಗುಲ್ಜಾರ್​ ನಿರ್ದೇಶನದ ಈ ಸಿನಿಮಾ ಇಂದು ಕೂಡ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಗಳಿವೆ. ಸಾನ್ಯಾ ಮಲ್ಹೋತ್ರಾ ಮತ್ತು ಫಾತಿಮಾ ಸನಾ ಶೇಖ್ ಕೂಡ ಪ್ರಮುಖ ಪಾತ್ರಗಳನ್ನು ನಿರ್ವಹಿಸಿರುವ ಈ ಸಿನಿಮಾ ಈಗಾಗಲೇ 15 ಕೋಟಿ ರೂ. ದಾಟಿದ್ದು, ಭಾನುವಾರದ ಕಲೆಕ್ಷನ್​ನಲ್ಲಿ 20 ಕೋಟಿ ರೂ. ದಾಟುವ ನಿರೀಕ್ಷೆಗಳಿವೆ.

ಇದನ್ನೂ ಓದಿ: 'ಸಲಾರ್' ಟ್ರೇಲರ್ ದಾಖಲೆ: 24 ಗಂಟೆಯೊಳಗೆ 116 ಮಿಲಿಯನ್‌ಗೂ ಹೆಚ್ಚು ವೀಕ್ಷಣೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.