ETV Bharat / entertainment

ಅಲನ್ನಾ ಮದುವೆ ಸಂಭ್ರಮ: ಶ್ವೇತ ವರ್ಣದ ಉಡುಗೆಯಲ್ಲಿ ಕಂಗೊಳಿಸಿದ ಸಂಬಂಧಿ ಅನನ್ಯಾ ಪಾಂಡೆ - ಅನನ್ಯಾ ಪಾಂಡೆ ಲೇಟೆಸ್ಟ್ ನ್ಯೂಸ್

ಇದೇ ಮಾರ್ಚ್ 16ರಂದು ಅಲನ್ನಾ ಪಾಂಡೆ ಮದುವೆಯಾಗಲಿದ್ದು, ವಿವಾಹ ಪೂರ್ವದ ಸಂಭ್ರಮಾಚರಣೆಗಳು ಶುರುವಾಗಿದೆ.

Alanna Panday bridal shower
ಅಲನ್ನಾ ಪಾಂಡೆ ವಿವಾಹ ಪೂರ್ವ ಸಂಭ್ರಮಾಚರಣೆಗಳು
author img

By

Published : Mar 11, 2023, 6:09 PM IST

ಬಾಲಿವುಡ್ ನಟಿ ಅನನ್ಯಾ ಪಾಂಡೆ ಅವರ ಸೋದರ ಸಂಬಂಧಿ ಅಲನ್ನಾ ಪಾಂಡೆ (Alanna Panday) ಮದುವೆಗೆ ಸಜ್ಜಾಗಿದ್ದು, ಕುಟುಂಬದಲ್ಲಿ ಸಂಭ್ರಮಾಚರಣೆ ಆರಂಭವಾಗಿದೆ. ಗೆಳೆಯ ಐವರ್ ಮೆಕ್‌ಕ್ರೇ (Ivor McCray) ಅವರೊಂದಿಗೆ ವೈವಾಹಿಕ ಬಂಧನಕ್ಕೆ ಒಳಗಾಗಲು ಅಲನ್ನಾ ಪಾಂಡೆ ಸಿದ್ಧರಾಗಿರುವ ಹಿನ್ನೆಲೆ, ಕುಟುಂಬಸ್ಥರಿಗಿದು ಸಂಭ್ರಮದ ಸಮಯವಾಗಿದೆ.

Alanna Panday bridal shower
ಅಲನ್ನಾ ಪಾಂಡೆ ವಿವಾಹ ಪೂರ್ವ ಸಂಭ್ರಮಾಚರಣೆಗಳು

ಶುಕ್ರವಾರ ಸಂಜೆ ನಟಿ ಅನನ್ಯಾ ಪಾಂಡೆ ಮುಂಬೈನ ಬಾಂದ್ರಾದಲ್ಲಿರುವ ತಮ್ಮ ಚಿಕ್ಕಪ್ಪ ಚಿಕ್ಕಿ ಪಾಂಡೆಯ ನಿವಾಸಕ್ಕೆ ಭೇಟಿ ನೀಡಿದರು. ಕುಟುಂಬಸ್ಥರು ಮತ್ತು ಆಪ್ತರು ಅಲನ್ನಾ ಪಾಂಡೆ ಅವರ ಬ್ರೈಡಲ್​​ ಪಾರ್ಟಿಗೆ (bridal shower) ಒಟ್ಟುಗೂಡಿದರು. ಎಲ್ಲರೂ ಶುಭ್ರ ಶ್ವೇತ ವರ್ಣದ ಉಡುಗೆಯಲ್ಲಿ ಮಿಂಚಿದ್ದಾರೆ.

Alanna Panday bridal shower
ಅಲನ್ನಾ ಪಾಂಡೆ ವಿವಾಹ ಪೂರ್ವ ಸಂಭ್ರಮಾಚರಣೆಗಳು

ಅಲನ್ನಾ ಪಾಂಡೆ ಅವರ ಬ್ರೈಡಲ್​​ ಪಾರ್ಟಿಗೆ ಸೇರಿದ್ದವರೆಲ್ಲರೂ ಬಿಳಿ ಬಣ್ಣದ ಉಡುಗೆ ಆಯ್ದುಕೊಂಡರು. ಅನನ್ಯಾ ಪಾಂಡೆ ತೊಟ್ಟ ಬಟ್ಟೆ ಡಿಸೈನರ್ ಸಾಕ್ಷಿ ಮತ್ತು ಕಿನ್ನಿ ಅವರ ಸ್ಪೆಕ್ಟ್ರಾ ಸಂಗ್ರಹದಿಂದ ಆಯ್ದುಕೊಳ್ಳಲಾಗಿದೆ. ಅಂದವನ್ನು ಮತ್ತಷ್ಟು ಹೆಚ್ಚಿಸಲು ಹೀಲ್ಸ್ ಮತ್ತು ಟ್ರೆಂಡಿ ಕಿವಿಯೋಲೆಗಳನ್ನು ಆಯ್ಕೆ ಮಾಡಿಕೊಂಡರು. ಸೆಲೆಬ್ರಿಟಿ ಸ್ಟೈಲಿಸ್ಟ್ ತಾನ್ಯಾ ಘವ್ರಿ ಅವರು ಅನನ್ಯಾ ಪಾಂಡೆ ಆಕರ್ಷಣೀಯವಾಗಿ ಕಾಣುವಂತೆ ಮಾಡಿದ್ದಾರೆ. ನಟ ವಿದ್ಯುತ್ ಜಮ್ವಾಲ್ ಅವರ ಗೆಳತಿ, ಫ್ಯಾಷನ್ ಡಿಸೈನರ್ ನಂದಿತಾ ಮಹತಾನಿ ಅವರು ಸಹ ಅಲನ್ನಾ ಪಾಂಡೆ ಅವರ ವಿವಾಹ ಪೂರ್ವ ಸಮಾರಂಭದಲ್ಲಿ ಭಾಗವಹಿಸಿದ್ದರು.

ಸೋಷಿಯಲ್​ ಮಿಡಿಯಾ ಸ್ಟಾರ್ ಅಲನ್ನಾ ಪಾಂಡೆ 2019ರಲ್ಲಿ ಪಾರ್ಟಿಯೊಂದರಲ್ಲಿ ಐವರ್ ಮೆಕ್‌ಕ್ರೇ ಅವರನ್ನು ಭೇಟಿಯಾದರು. ಮೂರು ತಿಂಗಳ ಸ್ನೇಹ ಪ್ರೀತಿಗೆ ತಿರುಗಿತು. 2021ರಲ್ಲಿ ಅಲನ್ನಾ ಪಾಂಡೆ ಅವರ ಮುಂಬೈ ನಿವಾಸದಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ಇದೇ ಮಾರ್ಚ್ 16ರಂದು ಈ ಜೋಡಿ ದಾಂಪತ್ಯ ಜೀವನ ಆರಂಭಿಸಲಿದ್ದಾರೆ.

ಮಾಡೆಲ್​​ ಮತ್ತು ನಟಿ ಅಲನ್ನಾ ಪಾಂಡೆ ಹಿಂದಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಖತ್ ಸಕ್ರಿಯರಾಗಿರುವ ತಾರೆ ಇವರು. ಆಗಾಗ್ಗೆ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಸದ್ದು ಮಾಡುತ್ತಿರುತ್ತಾರೆ. ಅದರಲ್ಲೂ ಹಾಟ್ ಫೋಟೋ ಹಂಚಿಕೊಳ್ಳುವುದೆಂದರೆ ಈ ಗ್ಲ್ಯಾಮರ್​ ಗೊಂಬೆಗೆ ಎಲ್ಲಿಲ್ಲದ ಆಸಕ್ತಿ. ಸದ್ಯ ಐವರ್ ಮೆಕ್‌ಕ್ರೇ ಜೊತೆ ಮದುವೆಗೆ ಸಜ್ಜಾಗಿದ್ದು, ವಿವಾಹ ಪೂರ್ವ ಕಾರ್ಯಕ್ರಮಗಳು ಅದ್ಧೂರಿಯಾಗಿಯೇ ನಡೆಯುತ್ತಿದೆ. ಈ ಸಮಾರಂಭಗಳ ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

ಇದನ್ನೂ ಓದಿ: ರಾಕಿಂಗ್​ ಸ್ಟಾರ್​ ಯಶ್ 19ನೇ​ ಸಿನಿಮಾ ಬಗ್ಗೆ ಸಿಕ್ಕೇ ಬಿಡ್ತು ಇಂಟ್ರೆಸ್ಟಿಂಗ್​ ಡೀಟೆಲ್ಸ್​​

ಇನ್ನೂ ನಟಿ ಅನನ್ಯಾ ಪಾಂಡೆ ನಟ ಆಯುಷ್ಮಾನ್​ ಖುರಾನ​ ಜೊತೆಗೆ 'ಡ್ರೀಮ್​ ಗರ್ಲ್​​ 2'ನಲ್ಲಿ ನಟಿಸಿದ್ದಾರೆ. ಈ ಚಿತ್ರ ಇದೇ ಜುಲೈ 7ಕ್ಕೆ ಬಿಡುಗಡೆ ಆಗಲಿದೆ. ಚಿತ್ರದಲ್ಲಿ ಪರೇಶ್ ರಾವಲ್, ರಾಜ್ಪಾಲ್ ಯಾದವ್, ಅಸ್ರಾನಿ, ವಿಜಯ್ ರಾಜ್, ಅನ್ನು ಕಪೂರ್, ಸೀಮಾ ಪಹ್ವಾ, ಮನೋಜ್ ಜೋಶಿ, ಅಭಿಷೇಕ್ ಬ್ಯಾನರ್ಜಿ ಮತ್ತು ಮಂಜೋತ್ ಸಿಂಗ್ ಕೂಡ ಇರಲಿದ್ದಾರೆ. ರಾಜ್ ಶಾಂಡಿಲ್ಯ ನಿರ್ದೇಶನದ ಈ ಚಿತ್ರವನ್ನು ಏಕ್ತಾ ಆರ್ ಕಪೂರ್ ನಿರ್ಮಿಸಿದ್ದಾರೆ.

ಇದನ್ನೂ ಓದಿ: ಕಬ್ಜ ರಿಯಲ್​​ ಹೀರೋ ಆರ್ ಚಂದ್ರು: ನಿರ್ದೇಶಕರ ಬಗ್ಗೆ ಉಪ್ಪಿ ಗುಣಗಾನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.