ETV Bharat / entertainment

ಮತ್ತೊಮ್ಮೆ ಜೊತೆಯಾಗಿ ಕಾಣಿಸಿಕೊಂಡ ಅನನ್ಯಾ- ಆದಿತ್ಯ.. ಡೇಟಿಂಗ್​ ವದಂತಿಗೆ ತುಪ್ಪ ಸುರಿದ ವಿಡಿಯೋ - etv bharat kannada

Aditya Ananya dating Rumors: ರೂಮರ್​ ಲವ್​ ಬರ್ಡ್ಸ್​ ಅನನ್ಯಾ ಪಾಂಡೆ ಮತ್ತು ಆದಿತ್ಯ ರಾಯ್​ ಕಪೂರ್​ ಮತ್ತೊಮ್ಮೆ ಜೊತೆಯಾಗಿ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ.

Ananya Panday and Aditya Roy Kapur
ಅನನ್ಯಾ- ಆದಿತ್ಯ
author img

By ETV Bharat Karnataka Team

Published : Aug 27, 2023, 6:47 PM IST

ಕಳೆದ ಕೆಲ ತಿಂಗಳಿನಿಂದ ಹಿಂದಿ ಚಿತ್ರರಂಗದಲ್ಲಿ ಮತ್ತೊಂದು ಜೋಡಿಯ ಪ್ರೇಮ ಪ್ರಣಯದ ಕುರಿತಾಗಿ ವದಂತಿಗಳು ಹರಡುತ್ತಿವೆ. ರೂಮರ್​ ಲವ್​ ಬರ್ಡ್ಸ್​ ಅನನ್ಯಾ ಪಾಂಡೆ ಮತ್ತು ಆದಿತ್ಯ ರಾಯ್​ ಕಪೂರ್​ ಮತ್ತೊಮ್ಮೆ ಜೊತೆಯಾಗಿ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ವಿಹಾರಕ್ಕೆಂದು ತೆರಳುತ್ತಿರುವಾಗ ಏರ್​ಪೋರ್ಟ್​ನ ನಿರ್ಗಮನದ ಸ್ಥಳದಲ್ಲಿ ಪಾಪರಾಜಿಗಳ ಕಣ್ಣಿಗೆ ಬಿದ್ದಿದ್ದಾರೆ. ಇದು ಇವರಿಬ್ಬರ ನಡುವಿನ ಸಂಬಂಧಕ್ಕೆ ತುಪ್ಪ ಸುರಿದಂತಿದೆ.

ಪಾಪರಾಜಿಗಳು ಹಂಚಿಕೊಂಡಿರುವ ವಿಡಿಯೋದಲ್ಲಿ ಅನನ್ಯಾ ಬಿಳಿ ಟ್ಯಾಂಕ್​ ಟಾಪ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಅದಕ್ಕೆ ಹಸಿರು ಕಾರ್ಗೋ ಪ್ಯಾಂಟ್​ ಮತ್ತು ಮ್ಯಾಚಿಂಗ್​ ವೈಟ್​ ಸ್ನೀಕರ್ಸ್​ನೊಂದಿಗೆ ತಮ್ಮ ನೋಟವನ್ನು ಸಂಪೂರ್ಣಗೊಳಿಸಿದ್ದಾರೆ. ಲೈಟ್​ ಮೇಕಪ್​ನೊಂದಿಗೆ, ಕೂದಲನ್ನು ಫ್ರೀ ಆಗಿ ಬಿಟ್ಟು ತುಂಬಾ ಮುದ್ದಾಗಿ ಕಂಡಿದ್ದಾರೆ. ಮತ್ತೊಂದೆಡೆ ಆದಿತ್ಯ ರಾಯ್​ ಕಪೂರ್​ ಗ್ರೀನ್​ ಮತ್ತು ಬ್ಲೂ ಕಾಂಬೋ ಡ್ರೆಸ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಅದಕ್ಕೆ ಹೊಂದುವಂತೆ ಬೂದು ಬಣ್ಣದ ಪ್ಯಾಂಟ್​ ಮತ್ತು ಬಿಳಿ ಸ್ನೀಕರ್ಸ್​ ಧರಿಸಿದ್ದರು.

ಇದನ್ನೂ ಓದಿ: ಅನನ್ಯಾ ಪಾಂಡೆ ಜೊತೆ ಫೋಟೋ ವೈರಲ್​​.. ಆದಿತ್ಯ ರಾಯ್ ಕಪೂರ್ ರಿಯಾಕ್ಷನ್​ ಹೀಗಿತ್ತು

ರೂಮರ್​ ಲವ್​ ಬರ್ಡ್ಸ್​: ಅನನ್ಯಾ ಮತ್ತು ಆದಿತ್ಯ ಅವರ ಇತ್ತೀಚಿನ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುವ ಮೂಲಕ ಸುದ್ದಿಯಲ್ಲಿದ್ದಾರೆ. ಆದ್ರೆ ರೂಮರ್​ ಲವ್​ ಬರ್ಡ್ಸ್​​ ಸಾರ್ವಜನಿಕವಾಗಿ ತಮ್ಮ ಸಂಬಂಧದ ಬಗ್ಗೆ ಯಾವುದೇ ಹೇಳಿಕೆ ಕೊಟ್ಟಿಲ್ಲ. ಇತ್ತೀಚೆಗೆ ಪ್ರವಾಸದಿಂದ ಹಿಂತಿರುಗುವ ವೇಳೆ, ವಿಮಾನ ನಿಲ್ದಾಣದಿಂದ ಪ್ರತ್ಯೇಕವಾಗಿ ನಿರ್ಗಮಿಸಿ ನೆಟ್ಟಿಗರಲ್ಲಿ ಹಲವು ಪ್ರಶ್ನೆ ಉದ್ಭವಿಸುವಂತೆ ಮಾಡಿದ್ದರು. ಕಳೆದ ವರ್ಷ ನಟಿ ಕೃತಿ ಸನೋನ್ ಅವರು ಆಯೋಜಿಸಿದ್ದ ದೀಪಾವಳಿ ಪಾರ್ಟಿಯಲ್ಲಿ ಒಟ್ಟಿಗೆ ಕಾಣಿಸಿಕೊಂಡ ಹಿನ್ನೆಲೆ ಅಂದಿನಿಂದ ಈ ಜೋಡಿ ಡೇಟಿಂಗ್​ನಲ್ಲಿದ್ದಾರೆ ಎಂಬ ಊಹಾಪೋಹಗಳು ಎದ್ದಿವೆ.

ಜೋಡಿಯ ಸಿನಿಮಾಗಳು.. ಈ ಜೋಡಿಯ ಸಿನಿಮಾ ವಿಚಾರ ಗಮನಿಸುವುದಾದರೆ ಅನನ್ಯಾ ಪಾಂಡೆ ಸದ್ಯ 'ಡ್ರೀಮ್ ಗರ್ಲ್ 2' ನಲ್ಲಿ ನಟಿಸಿದ್ದಾರೆ. ಆಯುಷ್ಮಾನ್ ಖುರಾನಾ ಅವರೊಂದಿಗೆ ನಟಿಸಿರುವ ಈ ಸಿನಿಮಾ ಆಗಸ್ಟ್​ 25ರಂದು ತೆರೆ ಕಂಡಿದೆ. ಉತ್ತಮ ಕಲೆಕ್ಷನ್​ನೊಂದಿಗೆ ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸುತ್ತಿದೆ. ಇದಲ್ಲದೇ, ಫರ್ಹಾನ್ ಅಖ್ತರ್ ಅವರ 'ಖೋ ಗಯೇ ಹಮ್ ಕಹಾನ್' ಮತ್ತು ವಿಕ್ರಮಾದಿತ್ಯ ಮೋಟ್ವಾನೆ ಅವರ ಸೈಬರ್ ಕ್ರೈಮ್ ಥ್ರಿಲ್ಲರ್ 'ಕಂಟ್ರೋಲ್' ಚಿತ್ರದಲ್ಲೂ ಕಾಣಿಸಿಕೊಳ್ಳಲಿದ್ದಾರೆ.

ಇನ್ನೂ ಆದಿತ್ಯ ರಾಯ್​ ಕಪೂರ್​​ ಅವರು ಸಾರಾ ಅಲಿ ಖಾನ್​ ಜೊತೆ 'ಮೆಟ್ರೋ ಇನ್​ ದಿನೋ' ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅನುರಾಗ್ ಬಸು ನಿರ್ದೇಶನದ ಈ ಚಿತ್ರದಲ್ಲಿ ಪಂಕಜ್ ತ್ರಿಪಾಠಿ, ನೀನಾ ಗುಪ್ತಾ, ಅನುಪಮ್ ಖೇರ್ ಮತ್ತು ಫಾತಿಮಾ ಸನಾ ಶೇಖ್ ಕೂಡ ನಟಿಸುತ್ತಿದ್ದಾರೆ.

ಇದನ್ನೂ ಓದಿ: 'ಡ್ರೀಮ್​ ಗರ್ಲ್​ 2'ಗೆ ಅದ್ಭುತ ರೆಸ್ಪಾನ್ಸ್​: ಮೊದಲ ದಿನದ ಕಲೆಕ್ಷನ್​ ಎಷ್ಟು ಗೊತ್ತಾ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.