ಕಳೆದ ಕೆಲ ದಿನಗಳಿಂದ ಹಿಂದಿ ಚಿತ್ರರಂಗದಲ್ಲಿ ಮತ್ತೊಂದು ಜೋಡಿಯ ಪ್ರೇಮ ಪ್ರಣಯದ ಕುರಿತಾಗಿ ವದಂತಿಗಳು ಹರಡುತ್ತಿವೆ. ರೂಮರ್ ಲವ್ ಬರ್ಡ್ಸ್ ಅನನ್ಯಾ ಪಾಂಡೆ ಮತ್ತು ಆದಿತ್ಯ ರಾಯ್ ಕಪೂರ್ ಶನಿವಾರ ರಾತ್ರಿ ಮುಂಬೈನಲ್ಲಿ ಕಾಣಿಸಿಕೊಂಡಿದ್ದಾರೆ. ಮಳೆ ಸರಿಯುತ್ತಿದ್ದ ವೇಳೆ ಕಾರಿನಲ್ಲಿ ಹೊರಟಿದ್ದು, ಪಾಪರಾಜಿಗಳ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದ್ದಾರೆ. ಈ ಕ್ಯೂಟ್ ಕಪಲ್ ಕಾರಿನಲ್ಲಿ ಕುಳಿತಿರುವ ಹಲವು ಫೋಟೋಗಳು ಮತ್ತು ವಿಡಿಯೋಗಳು ವೈರಲ್ ಆಗಿದೆ. ಇತ್ತೀಚೆಗಷ್ಟೇ ವಿದೇಶ ಪ್ರವಾಸದ ಮೂಲಕ ಸದ್ದು ಮಾಡಿದ್ದ ಈ ಜೋಡಿ, ಮತ್ತೊಮ್ಮೆ ಒಟ್ಟಿಗೆ ಕಾಣಿಸಿಕೊಂಡು, ಅಭಿಮಾನಿಗಳ ಖುಷಿಗೆ ಕಾರಣರಾಗಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಒಂದು ಫೋಟೋದಲ್ಲಿ, ನಟಿ ಅನನ್ಯಾ ಪಾಂಡೆ ತನ್ನ ಕೈಯಿಂದ ಮುಖವನ್ನು ಮರೆಮಾಚಿಕೊಳ್ಳಲು ಯತ್ನಿಸಿದ್ದಾರೆ. ಜೊತೆಗೆ ಆದಿತ್ಯ ರಾಯ್ ಕಪೂರ್ ಅವರೊಂದಿಗೆ ನಗುತ್ತಾ ಮಾತನಾಡಿದರು. ಆದಿತ್ಯ ಮುಗುಳ್ನಗೆ ಬೀರಿದಾಗ, ಅನನ್ಯಾ ತಮ್ಮ ಮುಖವನ್ನು ಮರೆಮಾಚಲು ಯತ್ನಿಸಿದ್ದಾರೆ.
ಅನನ್ಯಾ ಪಾಂಡೆ ಗುಲಾಬಿ ಬಣ್ಣದ ಡ್ರೆಸ್ ಧರಿಸಿದ್ದರೆ, ಆದಿತ್ಯ ರಾಯ್ ಕಪೂರ್ ಬಿಳಿ ಶರ್ಟ್ ಆರಿಸಿಕೊಂಡರು. ಮುಂಬೈ ಮೂಲದ ಪಾಪರಾಜಿಯೋರ್ವರು, ಆನ್‌ಲೈನ್‌ನಲ್ಲಿ ಫೋಟೋಗಳನ್ನು ಶೇರ್ ಮಾಡುತ್ತಿದ್ದಂತೆ ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ವಿಭಾಗದಲ್ಲಿ ಹಂಚಿಕೊಂಡಿದ್ದಾರೆ. ಅನೇಕ ಅಭಿಮಾನಿಗಳು ಈ ಜೋಡಿ ಒಟ್ಟಿಗೆ ಚೆನ್ನಾಗಿ ಕಾಣಿಸುತ್ತಾರೆ ಎಂದು ತಿಳಿಸಿದರು. ಆದರೆ ಅನೇಕರಿಗೆ ಆದಿತ್ಯ ರಾಯ್ ಕಪೂರ್ ಅನನ್ಯಾ ಜೊತೆ ಡೇಟಿಂಗ್ ನಡೆಸುತ್ತಿರುವುದನ್ನು ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿರುವ ಫೋಟೋಗೆ ಅಭಿಮಾನಿಯೊಬ್ಬರು ಪ್ರತಿಕ್ರಿಯಿಸಿ, "ಬಿ ಟೌನ್‌ನಲ್ಲಿ ಬೆಸ್ಟ್ ಕಪಲ್" ಎಂದು ತಿಳಿಸಿದ್ದಾರೆ. ಮತ್ತೊಬ್ಬರು ಪ್ರತಿಕ್ರಿಯಿಸಿ, "ಓ ಮೈ ಗಾಡ್, ಅನನ್ಯಾ ಪಾಂಡೆ - ಆದಿತ್ಯ ರಾಯ್ ಕಪೂರ್ ವೆರಿ ಗುಡ್ ವೈಬ್ಸ್, ದೇವರು ನಿಮ್ಮಿಬ್ಬರನ್ನು ಆಶೀರ್ವದಿಸಲಿ" ಎಂದು ಬರೆದಿದ್ದಾರೆ. ಟ್ರೋಲರ್ ಓರ್ವರು 13 ವರ್ಷ ವಯಸ್ಸಿನ ವ್ಯತ್ಯಾಸವನ್ನು ಉಲ್ಲೇಖಿಸಿದ್ದಾರೆ. ಇನ್ನೊಬ್ಬರು ಕಾಮೆಂಟ್ ಮಾಡಿ, "ನಿಜವಾಗಿಯೂ, ನಟನಿಗೆ ಬೆರೆ ಯಾರೂ ಸಿಗಲಿಲ್ಲವೇ" ಎಂದು ಬರೆದಿದ್ದಾರೆ.
ಇದನ್ನೂ ಓದಿ: ರಜನಿಕಾಂತ್ 'ಜೈಲರ್' ಆಡಿಯೋ ಲಾಂಚ್: ತಲೈವನ ಗ್ರ್ಯಾಂಡ್ ಈವೆಂಟ್ಗೆ ನೀವೂ ಹೋಗಬೇಕೇ? ಡೀಟೆಲ್ಸ್ ಇಲ್ಲಿದೆ
ಅನನ್ಯಾ ಮತ್ತು ಆದಿತ್ಯ ಅವರ ಇತ್ತೀಚಿನ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುವ ಮೂಲಕ ಸುದ್ದಿಯಲ್ಲಿದ್ದಾರೆ. ಆದ್ರೆ ರೂಮರ್ ಲವ್ ಬರ್ಡ್ಸ್ ಸಾರ್ವಜನಿಕವಾಗಿ ತಮ್ಮ ಸಂಬಂಧದ ಬಗ್ಗೆ ಯಾವುದೇ ಹೇಳಿಕೆ ಕೊಟ್ಟಿಲ್ಲ. ಇತ್ತೀಚೆಗೆ ಪ್ರವಾಸದಿಂದ ಹಿಂತಿರುಗುವ ವೇಳೆ, ವಿಮಾನ ನಿಲ್ದಾಣದಿಂದ ಪ್ರತ್ಯೇಕವಾಗಿ ನಿರ್ಗಮಿಸಿ ನೆಟ್ಟಿಗರಲ್ಲಿ ಹಲವು ಪ್ರಶ್ನೆ ಉದ್ಭವಿಸುವಂತೆ ಮಾಡಿದ್ದಾರೆ. ಕಳೆದ ವರ್ಷ ನಟಿ ಕೃತಿ ಸನೋನ್ ಅವರು ಆಯೋಜಿಸಿದ್ದ ದೀಪಾವಳಿ ಪಾರ್ಟಿಯಲ್ಲಿ ಒಟ್ಟಿಗೆ ಕಾಣಿಸಿಕೊಂಡ ಹಿನ್ನೆಲೆ ಅಂದಿನಿಂದ ಈ ಜೋಡಿ ಡೇಟಿಂಗ್ನಲ್ಲಿದ್ದಾರೆ ಎಂಬ ಊಹಾಪೋಹಗಳು ಎದ್ದಿವೆ.
ಇದನ್ನೂ ಓದಿ: ಮಹಿಳೆಯೊಂದಿಗೆ ನಟಿ ರೇಖಾ ಲಿವ್-ಇನ್ ರಿಲೇಶನ್ಶಿಪ್ ವದಂತಿ: ಬಯೋಗ್ರಫಿ ಲೇಖಕ ಯಾಸರ್ ಉಸ್ಮಾನ್ ಆಕ್ರೋಶ