ETV Bharat / entertainment

ಭಾರಿ ಮೊತ್ತಕ್ಕೆ 'ಹೊಯ್ಸಳ' ಆಡಿಯೋ ಹಕ್ಕು ಪಡೆದ ಆನಂದ್ ಆಡಿಯೋ

ನಟ ಡಾಲಿ ಧನಂಜಯ್​ ಅಭಿನಯದ ಹೊಯ್ಸಳ ಸಿನಿಮಾ ಆಡಿಯೋ ಹಕ್ಕು ಭಾರಿ ಮೊತ್ತಕ್ಕೆ ಮಾರಾಟ ಆಗಿದೆ. ಪ್ರತಿಷ್ಠಿತ ಆನಂದ್ ಆಡಿಯೋ ಕಂಪನಿಯು ಆಡಿಯೋ ಹಕ್ಕು ಖರೀದಿಸಿದೆ

anand-audio-got-hoysala-movie-audio-rights
ಹೊಯ್ಸಳ ಆಡಿಯೋ ರೈಟ್ಸ್
author img

By

Published : Jan 27, 2023, 8:47 PM IST

ಸ್ಯಾಂಡಲ್​ವುಡ್​ ನಟ ಡಾಲಿ ಧನಂಜಯ್​​ ಕನ್ನಡ ಸಿನಿಮಾಗಳ ಜೊತೆಗೆ ಪರಭಾಷೆಯ ಸ್ಟಾರ್ ನಟರ ಚಿತ್ರಗಳಲ್ಲಿಯೂ ಅಬ್ಬರಿಸುತ್ತಿದ್ದಾರೆ. ಸದ್ಯ ಕನ್ನಡ ಚಿತ್ರರಂಗದಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡುತ್ತಿರುವ ಧನಂಜಯ್ 'ಸಲಗ' ಚಿತ್ರದ ಬಳಿಕ 'ಹೊಯ್ಸಳ' ಸಿನಿಮಾದಲ್ಲಿ ಮತ್ತೆ ಖಡಕ್ ಪೊಲೀಸ್ ಅಧಿಕಾರಿ ಪಾತ್ರದ ಮೂಲಕ ಅಭಿಮಾನಿಗಳನ್ನು ರಂಜಿಸಲು ಸಜ್ಜಾಗಿದ್ದಾರೆ. ಸದ್ಯ ಸಿನಿಮಾದ ಚಿತ್ರೀಕರಣ ಮುಗಿದಿದೆ. ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಹೊಯ್ಸಳ ಚಿತ್ರದ ಆಡಿಯೋ ಭಾರಿ ಮೊತ್ತಕ್ಕೆ ಮಾರಾಟ ಆಗಿದೆ.

anand-audio-got-hoysala-movie-audio-rights
ಡಾಲಿ ಧನಂಜಯ್​

ಹೌದು ಕನ್ನಡ ಚಿತ್ರರಂಗದ ಪ್ರತಿಷ್ಠಿತ ಆಡಿಯೋ ಕಂಪನಿಯಾಗಿರುವ ಆನಂದ್ ಆಡಿಯೋ ದಾಖಲೆಯ ಮೊತ್ತಕ್ಕೆ ಹೊಯ್ಸಳ ಆಡಿಯೋ ರೈಟ್ಸ್​​ ಕೊಂಡುಕೊಳ್ಳುವುದರ ಮೂಲಕ ಧನಂಜಯ್​​ ಟಾಪ್ ಸ್ಟಾರ್‌ಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದಾರೆ. ಹಾಗಾದರೆ ಎಷ್ಟು ಮೊತ್ತಕ್ಕೆ ಎಂಬುದರ ಬಗ್ಗೆ ತಿಳಿದುಕೊಳ್ಳುವುದಕ್ಕಿಂತ ಮುಂಚೆ ಹೊಯ್ಸಳ ಚಿತ್ರದ ಹೈಲೆಟ್ಸ್ ಬಗ್ಗೆ ತಿಳಿದುಕೊಳ್ಳೋಣ.

ಡಾಲಿ ಧನಂಜಯ್​​ ಅವರ 25ನೇ ಚಿತ್ರ ಎನ್ನುವುದು ಈ ಹೊಯ್ಸಳದ ಮತ್ತೊಂದು ವಿಶೇಷತೆಯಾಗಿದೆ. ಅದಕ್ಕೆ ತಕ್ಕ ನಿರೀಕ್ಷೆಯನ್ನು ಮೀರಿಸುವ ರೀತಿಯಲ್ಲಿ ಸಿನಿಮಾ ಮೂಡಿ ಬಂದಿದೆ ಎಂಬುದು ಚಿತ್ರತಂಡ ಹೇಳುತ್ತಿದೆ. ಧನಂಜಯ್​​​ ಸಿನಿಮಾ ಕೆರಿಯರ್‌ನಲ್ಲೇ ಅತಿ ಹೆಚ್ಚಿನ ಬೆಲೆಗೆ ಆಡಿಯೋ ಹಕ್ಕು ಖರೀದಿಯಾಗಿದೆ. ಡಾಲಿ ಆಪ್ತರ ಪ್ರಕಾರ 50 ಲಕ್ಷ ರೂಪಾಯಿಯಿಂದ 1 ಕೋಟಿ ರೂ.ಗೆ ಮಾರಾಟ ಆಗಿದೆ ಎನ್ನಲಾಗಿದೆ. ಇದರೊಂದಿಗೆ ಈ ವಿಚಾರದಲ್ಲಿ ಧನಂಜಯ್​ ಕನ್ನಡದ ಟಾಪ್ ಸ್ಟಾರ್‌ಗಳ ಪಟ್ಟಿಗೆ ಸೇರಿದ್ದಾರೆ. 'ಕಾಂತಾರ' ಮೂಲಕ ದೇಶಾದ್ಯಂತ ಹವಾ ಕ್ರಿಯೇಟ್ ಮಾಡಿರುವ ಅಜನೀಶ್ ಲೋಕನಾಥ್ ಅವರು 'ಹೊಯ್ಸಳ'ಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಹಾಡುಗಳು ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಮೂಡಿಸಿವೆ.

ಇದನ್ನೂ ಓದಿ: ರಾಜಸ್ಥಾನದ ಚಿತ್ರಮಂದಿರದಲ್ಲಿ ಪಠಾಣ್​​ ಸಿನಿಮಾ ನೋಡಲು ನೂಕು ನುಗ್ಗಲು!!

ಚಿತ್ರದಲ್ಲಿ ಧನಂಜಯ್​​ ಖಡಕ್ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಂಡಿದ್ದಾರೆ. ಚಿತ್ರವು ಸಾಮಾಜಿಕ ಸಮಸ್ಯೆಗಳ ಬಗ್ಗೆ ಕೂಡ ಮಾತನಾಡುತ್ತದೆ. ಬೆಳಗಾವಿ ಮತ್ತು ಅಲ್ಲಿನ ಸುತ್ತಮುತ್ತಲಿನ ಪ್ರದೇಶಗಳನ್ನು ಆಧರಿಸಿ ಹೊಯ್ಸಳ ಸಿನಿಮಾ ಕಥೆಯನ್ನ ಹೆಣೆಯಲಾಗಿದೆ. ಈ ಹಿಂದೆ ಗಣೇಶ್ ನಟನೆಯ 'ಗೀತಾ' ಸಿನಿಮಾ ನಿರ್ದೇಶನ ಮಾಡಿದ್ದ ವಿಜಯ್ ನಾಗೇಂದ್ರ ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. 'ಬಡವ ರಾಸ್ಕಲ್' ಚಿತ್ರದ ಬಳಿಕ‌ ಡಾಲಿ ಧನಂಜಯ್ ಜೊತೆ ಅಮೃತ ಅಯ್ಯಂಗಾರ್ ಮತ್ತೆ ಜೋಡಿಯಾಗಿದ್ದಾರೆ.‌ ಪ್ರಮುಖ ಪಾತ್ರದಲ್ಲಿ ಅಚ್ಯುತ್ ಕುಮಾರ್, ಪ್ರತಾಪ್ ನಾರಾಯಣ, ನವೀನ್ ಶಂಕರ್, ಅವಿನಾಶ್ ಕೆ.ಜಿ.ಎಫ್, ರಾಘು ಶಿವಮೊಗ್ಗ ಸೇರಿದಂತೆ ಸಾಕಷ್ಟು ಕಲಾವಿದರು ಈ‌ ಚಿತ್ರದಲ್ಲಿ ನಟಿಸಿದ್ದಾರೆ‌.

ಕೆಆರ್‌ಜಿ ಸ್ಟುಡಿಯೋಸ್‌ನ ಕಾರ್ತಿಕ್ ಮತ್ತು ಯೋಗಿ ಜಿ ರಾಜ್ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. 'ರತ್ನನ್ ಪ್ರಪಂಚ' ಯಶಸ್ಸಿನ ನಂತರ ಅವರ ಮತ್ತೊಂದು ಪ್ರಯತ್ನವಾಗಿ ಈ ಚಿತ್ರ ಮೂಡಿಬರುತ್ತಿದೆ. ಹೊಂಬಾಳೆ ಫಿಲ್ಮ್ಸ್ ಖ್ಯಾತಿಯ ವಿಜಯ್ ಕಿರಗಂದೂರು ಚಿತ್ರವನ್ನ ಪ್ರೆಸೆಂಟ್ ಮಾಡುತ್ತಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿದಿದ್ದು, ಮಾರ್ಚ್ 30ಕ್ಕೆ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಅದಾಗಲೇ ಘೋಷಣೆ ಮಾಡಿದೆ. ಬಿಡುಗಡೆಯ ಸಿದ್ಧತೆಗಳು ನಡೆಯುತ್ತಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಕೊನೆಯ ಹಂತ ತಲುಪಿವೆ. ಚಿತ್ರ ತಂಡವು ಸದ್ಯಕ್ಕೆ ಡಬ್ಬಿಂಗ್‍ನಲ್ಲಿ ಬ್ಯುಸಿಯಾಗಿದೆ.

ಇದನ್ನೂ ಓದಿ: 7 ವರ್ಷಗಳ ಬಳಿಕ‌ ನವರಸನಾಯಕ ಜಗ್ಗೇಶ್ ಜೊತೆ ಮೋಹಕ‌ ತಾರೆ ರಮ್ಯಾ ಮಾತು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.