ETV Bharat / entertainment

ಹೈಕೋರ್ಟ್​ ಮೆಟ್ಟಿಲೇರಿದ ಬಿಗ್​ ಬಿ ಮೊಮ್ಮಗಳು.. ಕಾರಣವೇನು ಗೊತ್ತಾ? - etv bharat kannada

ನಟ ಅಮಿತಾಭ್​ ಬಚ್ಚನ್​ ಮೊಮ್ಮಗಳು ಆರಾಧ್ಯ ತಮ್ಮ ಆರೋಗ್ಯದ ಬಗ್ಗೆ ಸುಳ್ಳು ಮಾಹಿತಿ ಹರಡಿದ ಯೂಟ್ಯೂಬ್​ ಟ್ಯಾಬ್ಲಾಯ್ಡ್​ ವಿರುದ್ಧ ದೆಹಲಿ ಹೈಕೋರ್ಟ್​ಗೆ ದೂರು ಸಲ್ಲಿಸಿದ್ದಾರೆ.

Amitabh Bachchan
ಹೈಕೋರ್ಟ್​ ಮೆಟ್ಟಿಲೇರಿದ ಬಿಗ್​ ಬಿ ಮೊಮ್ಮಗಳು
author img

By

Published : Apr 20, 2023, 12:51 PM IST

ಬಾಲಿವುಡ್​ ಬಿಗ್​ ಬಿ ಅಮಿತಾಭ್​ ಬಚ್ಚನ್​ ಅವರ ಮೊಮ್ಮಗಳು ಆರಾಧ್ಯ ಬಚ್ಚನ್​ ಹೈಕೋರ್ಟ್​ ಮೆಟ್ಟಿಲೇರಿದ್ದಾರೆ. ತಮ್ಮ ಆರೋಗ್ಯದ ಬಗ್ಗೆ ಸುಳ್ಳು ಮಾಹಿತಿ ಹರಡಿದ ಯೂಟ್ಯೂಬ್​ ಟ್ಯಾಬ್ಲಾಯ್ಡ್​ ವಿರುದ್ಧ ದೆಹಲಿ ಹೈಕೋರ್ಟ್​ಗೆ ದೂರು ಸಲ್ಲಿಸಿದ್ದಾರೆ. ಅಭಿಷೇಕ್​ ಬಚ್ಚನ್​ ಮತ್ತು ಐಶ್ವರ್ಯಾ ರೈ ಬಚ್ಚನ್​ ಅವರ 11 ವರ್ಷದ ಮಗಳು ಆರಾಧ್ಯ, ತಾನು ಅಪ್ರಾಪ್ತೆಯಾಗಿದ್ದು, ತನ್ನ ಬಗ್ಗೆ ಮಾಧ್ಯಮಗಳು ಇಂತಹ ವರದಿಯನ್ನು ಹಬ್ಬುವುದು ಸರಿಯಲ್ಲ ಎಂದು ಅರ್ಜಿಯಲ್ಲಿ ತಿಳಿಸಿ ಈ ವಿಷಯಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ವಿರುದ್ಧ ತಡೆಯಾಜ್ಞೆ ಕೋರಿದ್ದಾರೆ.

ಈ ಕುರಿತ ಅರ್ಜಿ ವಿಚಾರಣೆ ಏಪ್ರಿಲ್​ 20 ಗುರುವಾರ (ಇಂದು) ನಡೆಯಲಿದೆ. ಬಿಗ್​ ಬಿ ಮೊಮ್ಮಗಳ ಕುರಿತಾದ ವಿಡಿಯೋಗಳನ್ನು ಡಿಲೀಟ್​ ಮಾಡುವಂತೆ ಅರ್ಜಿಯಲ್ಲಿ ಹತ್ತು ಸಂಸ್ಥೆಗಳನ್ನು ಒತ್ತಾಯಿಸಲಾಗಿದೆ. ಆರಾಧ್ಯ ಓರ್ವ ಸ್ಟಾರ್​ ಕಿಡ್​ ಆಗಿದ್ದು, ಸಾಮಾನ್ಯವಾಗಿ ಟ್ರೋಲ್​ಗೆ ಒಳಗಾಗುತ್ತಲೇ ಇರುತ್ತಾರೆ. ವಿವಿಧ ಕಾರಣಗಳಿಗಾಗಿ ಟ್ರೋಲಿಗರು ಆಗಾಗ ಆರಾಧ್ಯ ಬಚ್ಚನ್​ ಅವರನ್ನು ಗುರಿಯಾಗಿಸಿಕೊಂಡಿದ್ದಾರೆ.

ಬಾಬ್​ ಬಿಸ್ವಾಸ್​ ಪ್ರಚಾರದ ವೇಳೆ ನಟ ಅಭಿಷೇಕ್​ ಬಚ್ಚನ್​ ಟ್ರೋಲಿಗರ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಈ ಕುರಿತು ಮಾತನಾಡಿದ್ದ ಅವರು, "ಇದು ಖಂಡಿತವಾಗಿ ಸ್ವೀಕಾರ್ಹವಲ್ಲ. ಇದನ್ನು ನಾನು ಸಹಿಸಲು ಸಾಧ್ಯವಿಲ್ಲ. ನಾನು ಸಾರ್ವಜನಿಕ ವ್ಯಕ್ತಿಯಾಗಿದ್ದೇನೆ ಸರಿ. ಹಾಗಂತ ನನ್ನ ಮಗಳು ಅದೇ ವ್ಯಾಪ್ತಿಗೆ ಬರುವುದಿಲ್ಲ. ಹೀಗಾಗಿ ನನ್ನ ಮಗಳ ಮೇಲಿನ ಕಾಮೆಂಟ್​ಗಳಿಗೆ ನಾನು ಅನುಮತಿಸುವುದಿಲ್ಲ. ಪರದೆಯ ಹಿಂದೆ ಟ್ರೋಲ್​ ಮಾಡುವ ಬದಲು ನಿಮಗೆ ಏನಾದರೂ ಹೇಳಲು ಇದ್ದರೆ ನನ್ನೊಂದಿಗೆ ನೇರವಾಗಿ ಮಾತನಾಡಿ" ಎಂದು ಅಭೀಷೇಕ್​​ ವಾರ್ನಿಂಗ್​ ಮಾಡಿದ್ದರು.

ಇದನ್ನೂ ಓದಿ: ದಾದಾ ಸಾಹೇಬ್ ಫಾಲ್ಕೆ ಚಿತ್ರೋತ್ಸವಕ್ಕೆ ಅದ್ವಿತಿ 'ಬ್ರಹ್ಮ ಕಮಲ' ಆಯ್ಕೆ

ಇತ್ತೀಚೆಗೆ ಆರಾಧ್ಯ ಮತ್ತು ಐಶ್ವರ್ಯಾ ರೈ ಬಚ್ಚನ್​ ಅವರು ನೀತಾ ಮುಖೇಶ್​ ಅಂಬಾನಿ ಕಲ್ಚರಲ್​ ಸೆಂಟರ್​ (ಎನ್​ಎಂಎಸಿಸಿ) ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಐಶ್ವರ್ಯಾ ಕಪ್ಪು ಬಣ್ಣದ ಬಟ್ಟೆ ಧರಿಸಿದ್ದು, ಆರಾಧ್ಯ ಸಾಂಪ್ರದಾಯಿಕ ಬಿಳಿ ಬಟ್ಟೆಯನ್ನು ಆರಿಸಿದ್ದರು. ಆರಾಧ್ಯ ಬಚ್ಚನ್​ ಪ್ರಸ್ತುತ ಮುಂಬೈನ ಧೀರೂಭಾಯಿ ಅಂಬಾನಿ ಇಂಟರ್​ನ್ಯಾಷನಲ್​ ಸ್ಕೂಲ್​ನಲ್ಲಿ ಆರನೇ ತರಗತಿ ಓದುತ್ತಿದ್ದಾರೆ.

ಅನುಮತಿ ಇಲ್ಲದೇ ಬಿಗ್​ ಬಿ ಚಿತ್ರ, ಧ್ವನಿ ಬಳಸುವಂತಿಲ್ಲ: ಈ ಮೊದಲು ನಟ ಅಮಿತಾಭ್​ ಬಚ್ಚನ್​ ಅವರು ತಮ್ಮ ಫೋಟೋ ಮತ್ತು ಧ್ವನಿಯನ್ನು ದುರ್ಬಳಕೆ ಮಾಡಿಕೊಂಡು ನಕಲಿ ಕೌನ್​ ಬನೇಗಾ ಲಾಟರಿ ಹಗರಣ ಮತ್ತು ಇತರ ಆನ್​ಲೈನ್​ ವಂಚನೆಗಳ ಮೂಲಕ ಸಾರ್ವಜನಿಕರನ್ನು ವಂಚಿಸುವ ಪ್ರಕರಣಗಳಿಂದ ತಮ್ಮ ಪ್ರಚಾರದ ಹಕ್ಕುಗಳನ್ನು ಸಂರಕ್ಷಿಸುವಂತೆ ಕೋರಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯವು ನಟನ ಒಪ್ಪಿಗೆ ಅಥವಾ ಸಮ್ಮತಿ ಇಲ್ಲದೇ ಅವರ ಧ್ವನಿ, ಚಿತ್ರ ಮತ್ತು ಅವರೊಂದಿಗೆ ಪ್ರತ್ಯೇಕವಾಗಿ ಗುರುತಿಸಬಹುದಾದ ಯಾವುದೇ ಇತರ ಗುಣಲಕ್ಷಣ, ಯಾವುದೇ ವಾಣಿಜ್ಯ ಮತ್ತು ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಳ್ಳದಂತೆ ತಡೆಯಾಜ್ಞೆ ನೀಡಿತ್ತು.

ಇದನ್ನೂ ಓದಿ: ಹಿಂದಿ ಚಿತ್ರ ಬಾಲಿವುಡ್​ ಎಂದು ಕರೆದುಕೊಳ್ಳುವುದನ್ನು ನಿಲ್ಲಿಸಲಿ: ಸಂಚಲನ ಮೂಡಿಸಿದ ಮಣಿ ರತ್ನಂ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.