ETV Bharat / entertainment

ಅಮಿತಾಭ್​​ ಬಚ್ಚನ್ ಬರ್ತ್​​ಡೇ: ಕಲ್ಕಿ2898ಎಡಿ ಪೋಸ್ಟರ್ ರಿಲೀಸ್;​ ಪ್ರಭಾಸ್​ ಸ್ಪೆಷಲ್​ ವಿಶ್​ - Amitabh Bachchan movies

Amitabh Bachchan's first look: ಹಿರಿಯ ನಟ ಅಮಿತಾಭ್​​ ಬಚ್ಚನ್ ಜನ್ಮದಿನ ಹಿನ್ನೆಲೆಯಲ್ಲಿ 'ಕಲ್ಕಿ 2898 ಎಡಿ' ಸಿನಿಮಾದಿಂದ ನಟನ ಫಸ್ಟ್ ಲುಕ್ ಪೋಸ್ಟರ್ ರಿಲೀಸ್​ ಆಗಿದೆ.

Amitabh Bachchan's first look
ಕಲ್ಕಿ 2898 ಎಡಿ ಪೋಸ್ಟರ್ ರಿಲೀಸ್​
author img

By ETV Bharat Karnataka Team

Published : Oct 11, 2023, 5:05 PM IST

ಭಾರತೀಯ ಚಿತ್ರರಂಗದ ಪ್ರಸಿದ್ಧ, ಹಿರಿಯ ನಟ​ ಅಮಿತಾಭ್​​ ಬಚ್ಚನ್ ಇಂದು 81ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಎವರ್​ಗ್ರೀನ್​​ ಸ್ಟಾರ್​ಗೆ ಕುಟುಂಬಸ್ಥರು, ಆತ್ಮೀಯರು, ಚಿತ್ರರಂಗದವರೂ ಸೇರಿದಂತೆ ಕೋಟ್ಯಂತರ ಅಭಿಮಾನಿಗಳು ಶುಭಾಶಯ ಕೋರುತ್ತಿದ್ದಾರೆ. ಬಚ್ಚನ್​ ಅಭಿನಯದ ಮುಂದಿನ ಸಿನಿಮಾ 'ಕಲ್ಕಿ 2898 ಎಡಿ'ಯ ತಂಡ ಮತ್ತು ಸಹನಟ ಪ್ರಭಾಸ್​ ಕೂಡ ವಿಶೇಷವಾಗಿ ಶುಭ ಕೋರಿದ್ದಾರೆ.

Prabhas extends wishes to Amitabh Bachchan
ಅಮಿತಾಭ್​​ ಬಚ್ಚನ್ ಅವರಿಗೆ ಸಹನಟ ಪ್ರಭಾಸ್​ ಸ್ಪೆಷಲ್​ ವಿಶ್​

ಅಮಿತಾಭ್​​ ಬಚ್ಚನ್ ಫಸ್ಟ್ ಲುಕ್: ಅಮಿತಾಭ್ ಬಚ್ಚನ್ ಅವರ ಜನ್ಮದಿನವನ್ನು ವಿಶೇಷವಾಗಿಸಲು, ಕಲ್ಕಿ 2898 ಎಡಿ ಚಿತ್ರ ತಯಾರಕರು ಸಿನಿಮಾದಿಂದ ಅವರ ಫಸ್ಟ್ ಲುಕ್ ಪೋಸ್ಟರ್ ಅನಾವರಣಗೊಳಿಸಿದ್ದಾರೆ. ನಾಗ್ ಅಶ್ವಿನ್ ನಿರ್ದೇಶನ ಬಿಗ್​​ ಬಜೆಟ್ ಸಿನಿಮಾದಲ್ಲಿ ಪ್ರಭಾಸ್, ದೀಪಿಕಾ ಪಡುಕೋಣೆ, ಕಮಲ್​ ಹಾಸನ್​​, ದಿಶಾ ಪಟಾನಿ ಅವರೊಂದಿಗೆ ಬಿಗ್​ ಬಿ ಕಾಣಿಸಿಕೊಳ್ಳಲಿದ್ದಾರೆ.

ಕಲ್ಕಿ 2898 ಎಡಿ ಪೋಸ್ಟರ್ ಕುತೂಹಲ​: ಸೋಷಿಯಲ್​ ಮೀಡಿಯಾ ಪ್ಲಾಟ್​​ಫಾರ್ಮ್ ಎಕ್ಸ್​​ನಲ್ಲಿ ಕಲ್ಕಿ 2898 ಎಡಿ ಪೋಸ್ಟರ್​ ಹಂಚಿಕೊಂಡಿರುವ ಜನಪ್ರಿಯ ಚಲನಚಿತ್ರ ನಿರ್ಮಾಣ ಸಂಸ್ಥೆ ವೈಜಯಂತಿ ಮೂವೀಸ್​, ''ನಿಮ್ಮ ಪ್ರಯಾಣದ ಭಾಗವಾಗುವುದು ಮತ್ತು ನಿಮ್ಮ ಶ್ರೇಷ್ಠತೆಗೆ ಸಾಕ್ಷಿಯಾಗುವುದು ಗೌರವದ ವಿಷಯ. ಹ್ಯಾಪಿ ಬರ್ತ್ ಡೇ ಅಮಿತಾಭ್​​ ಬಚ್ಚನ್​ ಸರ್​​ - ಕಲ್ಕಿ 2898 ಎಡಿ ಟೀಮ್​​'' ಎಂದು ಬರೆದುಕೊಂಡಿದೆ. ಬಿಗ್ ಬಿ ಮುಖ ಬಹಿರಂಗಪಡಿಸಿಲ್ಲ, ಆದಾಗ್ಯೂ ಪೋಸ್ಟರ್ ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ.

ಪ್ರಭಾಸ್​ ಸ್ಪೆಷಲ್​ ವಿಶ್​: ಪ್ಯಾನ್​ ಇಂಡಿಯಾ ಸ್ಟಾರ್ ಪ್ರಭಾಸ್ ಕೂಡ ಸಹನಟನ ಜನ್ಮದಿನಕ್ಕೆ ಶುಭ ಕೋರಿದ್ದಾರೆ. ಬಾಹುಬಲಿ ನಟ ಪ್ರಭಾಸ್​​ ಇನ್​ಸ್ಟಾಗ್ರಾಮ್​ನಲ್ಲಿ ಕಲ್ಕಿ 2898 ಎಡಿ ಪೋಸ್ಟರ್ ಶೇರ್ ಮಾಡಿ, "ತಲೆಮಾರುಗಳಿಗೆ ಸ್ಫೂರ್ತಿ ನೀಡಿದ ದಂತಕಥೆಯೊಂದಿಗೆ ಕೆಲಸ ಮಾಡುತ್ತಿರುವುದು ನನಗೆ ಸಿಕ್ಕ ಆಶೀರ್ವಾದ. ನನ್ನ ಕನಸು ನನಸಾಗಿದೆ. ಜನ್ಮದಿನದ ಶುಭಾಶಯಗಳು ಸರ್" ಎಂದು ಬರೆದಿದ್ದಾರೆ.

ಇದನ್ನೂ ಓದಿ: 5 ದಶಕದಲ್ಲಿ 200ಕ್ಕೂ ಹೆಚ್ಚು ಚಿತ್ರ: ಎವರ್​ಗ್ರೀನ್​​​ ಸ್ಟಾರ್​ ಅಮಿತಾಭ್​​ ಬಚ್ಚನ್ ಮುಂದಿನ ಸಿನಿಮಾಗಳಿವು

ಕಲ್ಕಿ 2898 ಎಡಿ ಸಿನಿಮಾ ವೈಜಯಂತಿ ಮೂವೀಸ್ ಬ್ಯಾನರ್ ಅಡಿ ನಿರ್ಮಾಣಗೊಳ್ಳುತ್ತಿದೆ. ಸಿನಿಮಾ 2024ರ ಜನವರಿ 12ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಸದ್ಯ ಪೋಸ್ಟರ್ ಸಿನಿಪ್ರಿಯರ ಕುತೂಹಲ ಹೆಚ್ಚಿಸಿದ್ದು, ಟೀಸರ್, ಟ್ರೇಲರ್​ಗಾಗಿ ಕಾತರ ಹೆಚ್ಚಾಗಿದೆ.

ಇದನ್ನೂ ಓದಿ: 'ಹುವಾ ಮೈನ್'​ ರೊಮ್ಯಾಂಟಿಕ್​ ಸಾಂಗ್​: ರಣ್​​ಬೀರ್​-ರಶ್ಮಿಕಾ ಕೆಮಿಸ್ಟ್ರಿ ಮೆಚ್ಚಿದ ಫ್ಯಾನ್ಸ್

ಅಮಿತಾಭ್​​ ಬಚ್ಚನ್ ಜನ್ಮದಿನ ಹಿನ್ನೆಲೆಯಲ್ಲಿ ಮುಂಬೈನಲ್ಲಿರುವ 'ಜಲ್ಸಾ' ಮನೆ ಬಳಿ ಅಭಿಮಾನಿಗಳು ಜಮಾಯಿಸಿದ್ದರು. ಅಭಿಮಾನಿಗಳನ್ನು ನೋಡಲು ಮಧ್ಯರಾತ್ರಿ ಬಿಗ್​ ಬಿ ಸಹ ಹೊರಬಂದರು. ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ತಮ್ಮ ಮೆಚ್ಚಿನ ನಟನಿಗೆ ಶುಭಾಶಯ ಕೋರಿದರು. ಅಮಿತಾಭ್​ ಅಭಿಮಾನಿಗಳತ್ತ ಕೈ ಬೀಸಿ, ಬಳಿಕ ಕೃತಜ್ಞತೆ ಸಲ್ಲಿಸಿದರು. ಬಿಗ್​ ಬಿ ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.