ಮುಂಬೈ: ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಬಾಹ್ಯಾಕಾಶ ಪ್ರೇಮಿ ಕೂಡಾ. ಮಂಗಳವಾರ ತಡರಾತ್ರಿ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಬಾಹ್ಯಾಕಾಶದ ಸುಂದರ ದೃಶ್ಯವನ್ನೊಳಗೊಂಡ ವಿಡಿಯೋ ಹಂಚಿಕೊಂಡಿದ್ದರು. ಇದರಲ್ಲಿ ಐದು ಗ್ರಹಗಳು ಆಕಾಶದಲ್ಲಿ ನೇರ ರೇಖೆಯಲ್ಲಿ ಒಟ್ಟಿಗೆ ಗೋಚರಿದ್ದವು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆದ್ರೆ ಇದು ಜ.26ರ ಹಳೆಯ ವಿಡಿಯೋ ಆಗಿದ್ದು, ಈಗಾಗಲೇ ಯೂಟೂಬ್ನಲ್ಲಿದೆ ಎಂದು ವೀಕ್ಷಕರು ವಿಡಿಯೋ ಲಿಂಕ್ ಸಮೇತ ಕಮೆಂಟ್ ಮಾಡಿದ್ದಾರೆ. ಜೊತೆಗೆ ಈ ರೀತಿಯ ವಿಡಿಯೋ ಪೋಸ್ಟ್ ಮಾಡುವ ಮುನ್ನ ಒಮ್ಮೆ ಪರಿಶೀಲಿಸಿ ಅಂತಾ ಬಿಗ್ ಬಿಗೆ ಸಲಹೆ ನೀಡಿದ್ದಾರೆ.
- " class="align-text-top noRightClick twitterSection" data="
">
"ಎಂತಹ ಸುಂದರ ದೃಶ್ಯ.! ಇಂದು 5 ಗ್ರಹಗಳು ಒಟ್ಟಿಗೆ ಇವೆ. ಈ ಸುಂದರ ಮತ್ತು ಅಪರೂಪದ ದೃಶ್ಯವನ್ನು ನೀವು ನೋಡಿರುವಿರಿ" ಎಂದು ಬರೆದಿರುವ ಅಮಿತಾಭ್ ಬಚ್ಚನ್, ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ 45 ಸೆಕೆಂಡುಗಳ ವಿಡಿಯೋ ಪೋಸ್ಟ್ ಮಾಡಿದ್ದರು. ಅದರಲ್ಲಿ ಬುಧ, ಶುಕ್ರ, ಮಂಗಳ, ಗುರು ಮತ್ತು ಯುರೇನಸ್ ಗ್ರಹಗಳು ಸರಳ ರೇಖೆಯಲ್ಲಿ ಜೋಡಿಸಿದಂತೆ ಗೋಚರಿಸುತ್ತವೆ. ಆ ನಂತರ ಚಂದ್ರನ ಸುಂದರ ದೃಶ್ಯವೂ ಕ್ಯಾಮರಾದಲ್ಲಿ ಸೆರೆಯಾಗಿದೆ. ವಿಡಿಯೋ ಪೋಸ್ಟ್ ಮಾಡಿದ 50 ನಿಮಿಷಗಳಲ್ಲಿ ಗಂಟೆಗಳಲ್ಲಿ 2.3 ಮಿಲಿಯನ್ ಮಂದಿ ವೀಕ್ಷಿಸಿದ್ದು, ಇಲ್ಲಿಯವರೆಗೆ 1.1 ಮಿಲಿಯನ್ಗೂ ಹೆಚ್ಚು ಲೈಕ್ಸ್ ಪಡೆದುಕೊಂಡಿತ್ತು.
ಯುಟೂಬ್ ವಿಡಿಯೋ ಲಿಂಕ್ ಸಮೇತ ಪೋಸ್ಟ್ ಮಾಡಿದ ವೀಕ್ಷಕರು: ನೀವು ಸೂಪರ್ ಸ್ಟಾರ್. ನೀವು ವಿಡಿಯೋ ಪೋಸ್ಟ್ ಮಾಡುವ ಮುನ್ನ ಒಮ್ಮೆ ಪರಿಶೀಲಿಸಬೇಕು. ಇಲ್ಲದಿದ್ದರೆ ತಪ್ಪು ಮಾಹಿತಿ ರವಾನೆ ಆಗುತ್ತದೆ. ಏಕೆಂದ್ರೆ ಇದು ಹಳೆಯ ವಿಡಿಯೋ ಎಂದು ವೀಕ್ಷಕರು ಯುಟೂಬ್ ಲಿಂಕ್ ಸಮೇತ್ ಅಮಿತಾಭ್ ಬಚ್ಚನ್ ಅವರಿಗೆ ಸಲಹೆ ನೀಡಿ ಕಮೆಂಟ್ ಮಾಡಿದ್ದಾರೆ. ಯುಟೂಬ್ ಲಿಂಕ್ ಇಲ್ಲಿದೆ... https://www.youtube.com/shorts/gvJ3P1aRXZk
ಇದನ್ನೂ ಓದಿ : ಒಂದು ಕಾಲದಲ್ಲಿ ಖಂಡಿತವಾಗಿಯೂ ಮಂಗಳ ಗ್ರಹದಲ್ಲಿ ನೀರಿತ್ತು ಎಂದ ನಾಸಾ!
ಬಿಗ್ 'ಬಿ' ಅವರ ಈ ಪ್ಲಾನೆಟ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕುತೂಹಲ ಉಂಟುಮಾಡಿದ್ದು, ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ, ನಟ ಸಿದ್ಧಾರ್ಥ್ ಕಪೂರ್, ಮಾನ್ಯತಾ, ರಶ್ಮಿ ದೇಸಾಯಿ, ನಿಶಾ ರಾವಲ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ಕಾಮೆಂಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು.
ಇದನ್ನೂ ಓದಿ : ಎರಡು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಅಭಿಮಾನಿಗಳಿಗೆ ಸರ್ಪ್ರೈಸ್ ಕೊಟ್ಟ ಬಿಗ್ ಬಿ
"ವಾಹ್" ಎಂದು ನಟಿ ಶಿಲ್ಪಾ ಶೆಟ್ಟಿ ಕಾಮೆಂಟ್ ಮಾಡಿದ್ದಾರೆ. "ಈ ದೃಶ್ಯ ತುಂಬಾ ಸುಂದರವಾಗಿತ್ತು, ನಾನು ಕೂಡ ಈ ಕ್ಷಣವನ್ನು ಸ್ಟೆಲೇರಿಯಂನಲ್ಲಿ ಸೆರೆಹಿಡಿದು ಸ್ವಲ್ಪ ಸಮಯದ ಹಿಂದಷ್ಟೇ ಪೋಸ್ಟ್ ಮಾಡಿದ್ದೇನೆ" ಎಂದು 'ಹಸೀನಾ ಪಾರ್ಕರ್' ನಟ ಸಿದ್ದಾಂತ್ ಕಪೂರ್ ಹೇಳಿದ್ದರು. ಮತ್ತೋರ್ವ ಬಳಕೆದಾರರು 'ಅಪರೂಪದ ಖಗೋಳ ಕ್ಷಣ' ಎಂದು ಬರೆದಿದ್ದಾರೆ. ಇನ್ನೂ ಕೆಲವರು ಬುಧ, ಗುರು, ಶುಕ್ರ, ಯುರೇನಸ್, ಮಂಗಳ ಮತ್ತು ಚಂದ್ರ "ಗ್ರಹಗಳ ಮೆರವಣಿಗೆ" ಎಂದಿದ್ದರು.
ಇದನ್ನೂ ಓದಿ : ಚಂದ್ರ, ಶುಕ್ರ ಗ್ರಹಗಳ ಸಂಯೋಗ: ಅಪರೂಪದ ಖಗೋಳ ವಿದ್ಯಮಾನ
ಕಳೆದ ಎರಡು ದಿನಗಳ ಹಿಂದೆ ಖಗೋಳ ಭೌತಶಾಸ್ತ್ರಜ್ಞರು ಮತ್ತು ಹವ್ಯಾಸಿ ಗಗನವೀಕ್ಷಕರು ಚಂದ್ರ ಮತ್ತು ಶುಕ್ರ ಗ್ರಹವು ಅತ್ಯಂತ ಸಮೀಪದಲ್ಲಿ ಗೋಚರಿಸಿದ ಅಪರೂಪದ ದೃಶ್ಯವನ್ನು ಕಂಡು ಆನಂದಿಸಿದ್ದರು. ಇವೆರಡೂ ಗ್ರಹಗಳು ಮೈಲುಗಳಷ್ಟು ದೂರದಲ್ಲಿದ್ದರೂ ಸಹ ಅವು ಒಟ್ಟಿಗೆ ಜೋಡಿಸಲ್ಪಟ್ಟಂತೆ ಭಾಸವಾಗಿತ್ತು. ಬಳಿಕ ಕ್ರಮೇಣ ಶುಕ್ರವು ಚಂದ್ರನ ಹಿಂದೆ ಕಣ್ಮರೆಯಾಗಿತ್ತು. ಈ ಕುರಿತ ಫೋಟೋಗಳನ್ನು ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ತನ್ನ ಟ್ವಿಟರ್‌ನಲ್ಲಿ ಹಂಚಿಕೊಂಡಿತ್ತು.
ಇದನ್ನೂ ಓದಿ : ಆಲೂಗಡ್ಡೆಯಾಕಾರದ ಗ್ರಹವನ್ನು ಪತ್ತೆಹಚ್ಚಿದ ವಿಜ್ಞಾನಿಗಳು!