ETV Bharat / entertainment

ನೋವಿನಿಂದ ಚೇತರಿಸಿಕೊಳ್ಳುತ್ತಿರುವ ಅಮಿತಾಭ್​​​ ಬಚ್ಚನ್: ಮತ್ತೆ ಕೆಲಸ ಆರಂಭಿಸಿದ ಬಿಗ್​ ಬಿ - ಅಮಿತಾಭ್​​​ ಬಚ್ಚನ್ ಪ್ರಾಜೆಕ್ಟ್ ಕೆ

'ಮತ್ತೆ ಕೆಲಸ ಮಾಡಲು ಪ್ರಾರಂಭಿಸಿದ್ದೇನೆ' ಎಂದು ಅಮಿತಾಭ್​​​ ಬಚ್ಚನ್ ಮಾಹಿತಿ ಹಂಚಿಕೊಂಡಿದ್ದಾರೆ.

Amitabh Bachchan
ಅಮಿತಾಭ್​​​ ಬಚ್ಚನ್
author img

By

Published : Mar 24, 2023, 6:21 PM IST

ಈ ತಿಂಗಳ ಆರಂಭದಲ್ಲಿ ಬಾಲಿವುಡ್​​ ಖ್ಯಾತ, ಹಿರಿಯ ನಟ ಅಮಿತಾಭ್​​​ ಬಚ್ಚನ್ ( Amitabh Bachchan)​ ಅವರು ಶೂಟಿಂಗ್​ ಸೆಟ್​ನಲ್ಲಿ ಗಾಯಗೊಂಡಿದ್ದು ನಿಮಗೆಲ್ಲರಿಗೂ ತಿಳಿದಿರುವ ವಿಚಾರ. ನಾಗ್ ಅಶ್ವಿನ್ ನಿರ್ದೇಶನದಲ್ಲಿ ಮೂಡಿ ಬರಲಿರುವ 'ಪ್ರಾಜೆಕ್ಟ್​ ಕೆ' ಚಿತ್ರದ ಶೂಟಿಂಗ್​​ ಸೆಟ್​ನಲ್ಲಿ ಅಮಿತಾಭ್​​​ ಬಚ್ಚನ್ ಗಾಯಗೊಂಡಿದ್ದರು. ಅಂದು ನಟನನ್ನು ಕೂಡಲೇ ಹೈದರಾಬಾದ್​ನ ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ಕೊಡಿಸಲಾಗಿತ್ತು. ಬಳಿಕ ವೈದ್ಯತಂಡದ ಸಲಹೆ ಮೇರೆಗೆ ಚಿಕಿತ್ಸೆ, ವಿಶ್ರಾಂತಿ ಪಡೆದರು. ತಮ್ಮ ಅಭಿಮಾನಿಗಳಿಗಾಗಿ ಸೋಶಿಯಲ್​ ಮೀಡಿಯಾಗಳಲ್ಲಿ ಆರೋಗ್ಯದ ಮಾಹಿತಿಯನ್ನು ಹಂಚಿಕೊಳ್ಳುತ್ತಾ ಬಂದಿದ್ದಾರೆ.

80 ವರ್ಷದ ಹಿರಿಯ ನಟ ಗುರುವಾರ ರಾತ್ರಿ ತಮ್ಮ ಆರೋಗ್ಯದ ಮಾಹಿತಿಯನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈಗಾಗಲೇ ಮತ್ತೆ ಕೆಲಸ ಮಾಡಲು ಪ್ರಾರಂಭಿಸಿದ್ದೇನೆ ಎಂದು ತಿಳಿಸಿದ್ದಾರೆ. ಅನಾರೋಗ್ಯದ ಅನಾನುಕೂಲತೆಗಳ ಹೊರತಾಗಿಯೂ ಸರಿಪಡಿಸಲು ಬಯಕೆ ಮತ್ತು ಪ್ರಯತ್ನ ಇರಬೇಕು ಎಂದು ಹೇಳಿದ್ದಾರೆ. ಕುಟುಂಬ ಮತ್ತು ಹಿತೈಷಿಗಳ ಪ್ರೀತಿ, ಕಾಳಜಿಗೆ ಮೆಚ್ಚುಗೆ ಸಹ ವ್ಯಕ್ತಪಡಿಸಿದ್ದಾರೆ.

ಪಕ್ಕೆಲುಬಿನ ಗಾಯಕ್ಕೆ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದೇನೆ. ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ ಎಂದು ಮಾಹಿತಿ ನೀಡಿದ್ದಾರೆ. "ಕೆಲಸದ ವೇಳಾಪಟ್ಟಿಗಳನ್ನು ಮಾಡಲಾಗಿದೆ, ಚಾರ್ಟ್‌ಗಳು ಮತ್ತೆ ತುಂಬಲು ಪ್ರಾರಂಭಿಸುತ್ತವೆ. ಆರೋಗ್ಯದಲ್ಲಿ ಕೊಂಚ ಏರುಪೇರುಗಳಿವೆ. ಪರಿಹಾರವನ್ನು ಕಂಡುಹಿಡಿಯಬೇಕು, ನಾವು ಕಂಡುಕೊಳ್ಳಬೇಕು'' ಎಂದು ತಿಳಿಸಿದ್ದಾರೆ.

ತಮ್ಮ ಮುಂಬರುವ ಚಿತ್ರ 'ಪ್ರಾಜೆಕ್ಟ್ ಕೆ' ಶೂಟಿಂಗ್​ ವೇಳೆ ಹೈದರಾಬಾದ್‌ನಲ್ಲಿ ಗಾಯವಾಗಿದೆ ಎಂದು ಅಮಿತಾಭ್​​ ಬಚ್ಚನ್​ ಇತ್ತೀಚೆಗೆ ಮಾಹಿತಿ ಹಂಚಿಕೊಂಡಿದ್ದರು. ಪ್ರಸ್ತುತ ಮುಂಬೈನ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದೇನೆ ಎಂದು ತನ್ನ ಬ್ಲಾಗ್‌ನಲ್ಲಿ ತಿಳಿಸಿದ್ದರು. ಚಿತ್ರದ ಆ್ಯಕ್ಷನ್ ಸೀಕ್ವೆನ್ಸ್ ಶೂಟಿಂಗ್​​ ವೇಳೆ ಅವರು ಗಾಯಗೊಂಡಿದ್ದರು.

ನಾಗ್ ಅಶ್ವಿನ್ ನಿರ್ದೇಶನದ ಪ್ರಾಜೆಕ್ಟ್ ಕೆ ದ್ವಿಭಾಷಾ ಚಲನಚಿತ್ರ. ಹಲವಾರು ಸ್ಥಳಗಳಲ್ಲಿ ಏಕಕಾಲದಲ್ಲಿ ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ ಚಿತ್ರೀಕರಿಸಲಾಗಿದೆ. ಚಿತ್ರದಲ್ಲಿ ದೀಪಿಕಾ ಪಡುಕೋಣೆ ಮತ್ತು ಪ್ರಭಾಸ್ ಮುಖ್ಯಭೂಮಿಕೆಯಲ್ಲಿದ್ದಾರೆ. ಮೊದಲ ಬಾರಿಗೆ ಈ ಸ್ಟಾರ್ ಕಲಾವಿದರು ತೆರೆ ಹಂಚಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಇಂಡಿಯನ್ ಸ್ಪೋರ್ಟ್ಸ್ ಹಾನರ್ಸ್‌ ಸಮಾರಂಭ: ದೀಪ್​ವೀರ್​, ವಿರುಷ್ಕಾ ಭಾಗಿ

ರಾಷ್ಟ್ರೀಯ ಪ್ರಶಸ್ತಿ ವಿಜೇತ ನಾಗ್ ಅಶ್ವಿನ್ ಆ್ಯಕ್ಷನ್​ ಕಟ್​ ಹೇಳುತ್ತಿರುವ ಪ್ರಾಜೆಕ್ಟ್ ಕೆ ಸಿನಿಮಾ ಪೌರಾಣಿಕ ಹಾಗೂ ಫ್ಯಾಂಟಸಿ ಕಥೆಯನ್ನು ಒಳಗೊಂಡಿರಲಿದೆ ಎನ್ನಲಾಗಿದೆ. ಜನವರಿ 9ರಂದು ಚಿತ್ರದ ಪೋಸ್ಟರ್‌ಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಚಿತ್ರತಂಡ ಬಿಡುಗಡೆ ಮಾಡಿತ್ತು. ಒಂದಾದ ನಂತರ ಒಂದರಂತೆ ನಿಗೂಢ ಪೋಸ್ಟರ್​ಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಕುತೂಹಲ ಹೆಚ್ಚಿಸಿದ್ದರು.

ಇದನ್ನೂ ಓದಿ: 3 ಈಡಿಯಟ್ಸ್‌ ಸೀಕ್ವೆಲ್ ಸುಳಿವು ಕೊಟ್ಟ ಸ್ಟಾರ್ಸ್​... All is Well ಎಂದ ಫ್ಯಾನ್ಸ್

ದೀಪಿಕಾ ಪಡುಕೋಣೆ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಚಿತ್ರದ ಫಸ್ಟ್​ ಲುಕ್​ ಅನ್ನು ಬಿಡುಗಡೆ ಮಾಡಿದ್ದರು. 'ಎ ಹೋಪ್ ಇನ್ ದಿ ಡಾರ್ಕ್' ಎಂಬ ಟ್ಯಾಗ್‌ಲೈನ್‌ನೊಂದಿಗೆ ಬಂದ ದೀಪಿಕಾರ ಮೊದಲ ನೋಟ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿಸಿತ್ತು. ಪ್ರತೀ ಪೋಸ್ಟರ್​ಗಳು ತನ್ನದೇ ಕಥೆ ಹೇಳಿದೆ. ನಟ ಪ್ರಭಾಸ್ ಅವರ ಪೋಸ್ಟರ್, "ಹೀರೋಗಳು ಹುಟ್ಟುವುದಿಲ್ಲ, ಅವರು ಉದಯಿಸುತ್ತಾರೆ" ಎಂಬ ಕ್ಯಾಪ್ಷನ್​​ನೊಂದಿಗೆ ಬಂದಿತ್ತು. ಅಮಿತಾಭ್​​​ ಬಚ್ಚನ್​​ ಅವರ ಪೋಸ್ಟರ್‌ನಲ್ಲಿ "ಲೆಜೆಂಡ್ಸ್​​ಗಳು ಅಮರ'' ಎಂಬ ಟ್ಯಾಗ್​ಲೈನ್​ ಇತ್ತು. 12-1-24ರಂದು ಈ ಬಹುನಿರೀಕ್ಷಿತ ಚಿತ್ರ ತೆರೆ ಕಾಣಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.